OTP ಮೆಸೇಜ್‌ಗಳು ಲಾಕ್ ಸ್ಕ್ರೀನ್‌ನಲ್ಲಿ ಕಾಣದಂತೆ ಮಾಡಲು ಈ ಸರಳ ಟ್ರಿಕ್ ಬಳಸಿ!

OTP ಮೆಸೇಜ್‌ಗಳು ಲಾಕ್ ಸ್ಕ್ರೀನ್‌ನಲ್ಲಿ ಕಾಣದಂತೆ ಮಾಡಲು ಈ ಸರಳ ಟ್ರಿಕ್ ಬಳಸಿ!

ಇಂದಿನ ಡಿಜಿಟಲ್ ಯುಗದಲ್ಲಿ ಬ್ಯಾಂಕಿಂಗ್, UPI ಪಾವತಿ, ಆನ್‌ಲೈನ್ ಶಾಪಿಂಗ್, ಸಾಮಾಜಿಕ ಜಾಲತಾಣಗಳ ಲಾಗಿನ್ ಸೇರಿದಂತೆ ಹಲವು ಕೆಲಸಗಳಿಗೆ OTP ಅಗತ್ಯವಾಗಿದೆ. ಸಾಮಾನ್ಯವಾಗಿ OTP ಮೆಸೆಜ್‌ಗಳು ಮೊಬೈಲ್‌ಗೆ ಬಂದ ತಕ್ಷಣ ಲಾಕ್ ಸ್ಕ್ರೀನ್‌ನಲ್ಲೇ ಕಾಣಿಸಿಕೊಳ್ಳುತ್ತವೆ. ಇದರಿಂದ ಫೋನ್ ಅನ್‌ಲಾಕ್ ಮಾಡದೆಯೇ ಸಂದೇಶವನ್ನು ಓದಲು ಅನುಕೂಲವಾಗುತ್ತದೆ. ಆದರೆ ಇದೇ ಸೌಲಭ್ಯ ಕೆಲವೊಮ್ಮೆ ನಿಮ್ಮ ವೈಯಕ್ತಿಕ ಮಾಹಿತಿಯ ಗೌಪ್ಯತೆಗೆ ಸಮಸ್ಯೆಯಾಗಬಹುದು. ನಿಮ್ಮ ಫೋನ್‌ ಬೇರೆಯವರ ಕೈಯಲ್ಲಿರುವಾಗ ಲಾಕ್ ಸ್ಕ್ರೀನ್‌ನಲ್ಲಿ OTP ಕಾಣಿಸಿದರೆ, ಅವರು ಆ ಕೋಡ್ ಅನ್ನು ನೋಡಬಹುದು. ಅದು ಭದ್ರತಾ ಅಪಾಯವನ್ನು ಹೆಚ್ಚಿಸಬಹುದು. ಹೀಗಾಗಿ ಸುರಕ್ಷತೆಯ ದೃಷ್ಠಿಯಿಂದ ಫೋನ್ ಲಾಕ್ ಸ್ಕ್ರೀನ್‌ನಲ್ಲಿ OTP ಮೆಸೆಜ್‌ಗಳು ಕಾಣಿಸದಂತೆ ಮಾಡುವುದು ಉತ್ತಮ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ಕಡಿಮೆ ಬೆಲೆಯಲ್ಲಿ ಲಭ್ಯವಿರುವ Airtel ಸಂಸ್ಥೆಯ ಈ ಯೋಜನೆಯಲ್ಲಿ 25GB ಡೇಟಾ ಸೌಲಭ್ಯ!

ಆಂಡ್ರಾಯ್ಡ್‌ ಫೋನ್‌ನಲ್ಲಿ OTP ಮೆಸೆಜ್‌ಗಳನ್ನು ಹೈಡ್‌ ಮಾಡುವುದು ಹೇಗೆ?

ಸ್ಯಾಮ್‌ಸಂಗ್, ವಿವೋ, ಒಪ್ಪೋ, ಒನ್‌ಪ್ಲಸ್‌, ಶಿಯೋಮಿ, ಮೊಟೊರೊಲಾ ಸೇರಿದಂತೆ ವಿವಿಧ ಕಂಪನಿಗಳ ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಸೆಟ್ಟಿಂಗ್‌ಗಳ ಹೆಸರು ಸ್ವಲ್ಪ ಬದಲಾಗಬಹುದು. ಆದರೂ ಸಾಮಾನ್ಯವಾಗಿ ಈ ಹಂತಗಳನ್ನು ಅನುಸರಿಸಬಹುದು.

ಹಂತ 1: ನಿಮ್ಮ ಫೋನ್‌ನ ಸೆಟ್ಟಿಂಗ್ಸ್‌ ತೆರೆಯಿರಿ.

ಹಂತ 2: Notifications ಅಥವಾ Notifications ಮತ್ತು Status Bar ಆಯ್ಕೆಯನ್ನು ಸರ್ಚ್ ಮಾಡಿ.

ಹಂತ 3: Lock screen notifications ಅಥವಾ ಅದಕ್ಕೆ ಸಮಾನವಾದ ಆಯ್ಕೆಯನ್ನು ತೆರೆಯಿರಿ.

ಹಂತ 4: ಇಲ್ಲಿ Hide content, Hide sensitive content ಅಥವಾ Don’t show sensitive notification content ಎಂಬ ಆಯ್ಕೆ ಇದ್ದರೆ ಅದನ್ನು ಸಕ್ರಿಯಗೊಳಿಸಿ.

How to Hide OTP Messages on Your Phone Lock Screen

ಈ ಸೆಟ್ಟಿಂಗ್ ಸಕ್ರಿಯವಾದ ಬಳಿಕ ಲಾಕ್ ಸ್ಕ್ರೀನ್‌ನಲ್ಲಿ ಸಂದೇಶದ ಸಂಪೂರ್ಣ ವಿವರಗಳ ಬದಲಿಗೆ, ಹೊಸ ಸಂದೇಶ ಬಂದಿದೆ ಎಂಬ ಮಾಹಿತಿ ಮಾತ್ರ ಕಾಣಿಸಬಹುದು. ಆದರೆ ಫೋನ್‌ನ ಮಾದರಿ ಮತ್ತು ಆವೃತ್ತಿಗೆ ಅನುಗುಣವಾಗಿ ಫಲಿತಾಂಶ ಬದಲಾಗಬಹುದು.

iPhone ಬಳಕೆದಾರರು ಹೀಗೆ ಮಾಡಿ

ಹಂತ 1: ಐಫೋನ್‌ನಲ್ಲಿ ಸೆಟ್ಟಿಂಗ್ಸ್ ತೆರೆಯಿರಿ.

ಹಂತ 2: ಬಳಿಕ Notifications ಆಯ್ಕೆಗೆ ಹೋಗಿ.

ಹಂತ 3: ನಂತರ ಪಟ್ಟಿಯಲ್ಲಿ Messages ಆಯ್ಕೆ ಮಾಡಿ.

ಹಂತ 4: ಆ ಬಳಿಕ Show Previews ಆಯ್ಕೆಯನ್ನು ತೆರೆಯಿರಿ.

ಹಂತ 5: When Unlocked ಆಯ್ಕೆಮಾಡಿ. ಇನ್ನಷ್ಟು ಗೌಪ್ಯತೆ ಬೇಕಿದ್ದರೆ Never ಆಯ್ಕೆಯನ್ನೂ ಬಳಸಬಹುದು.

When Unlocked: ಫೋನ್ ಅನ್‌ಲಾಕ್ ಮಾಡಿದಾಗ ಮಾತ್ರ ಸಂದೇಶದ ಪೂರ್ವವೀಕ್ಷಣೆ ಕಾಣಿಸುತ್ತದೆ.

Never: ನೋಟಿಫಿಕೇಶನ್‌ನಲ್ಲಿ ಸಂದೇಶದ ಪೂರ್ಣ ವಿಷಯ ತೋರಿಸುವುದನ್ನು ನಿರ್ಬಂಧಿಸುತ್ತದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile