Birth Certificate: ನಿಮ್ಮ ಜನನ ಪ್ರಮಾಣಪತ್ರವನ್ನು ಆನ್‌ಲೈನ್‌ನಲ್ಲಿ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ ತಿಳಿಯಿರಿ!

Updated on 21-Jul-2025
HIGHLIGHTS

ದೇಶದಲ್ಲಿ ನಿಮ್ಮ Birth Certificate ಪಡೆಯುವುದು ಆಫ್‌ಲೈನ್‌ನಲ್ಲಿ ಅಥವಾ ಆನ್‌ಲೈನ್‌ನಲ್ಲಿ ಕಠಿಣ ಕೆಲಸವಾಗಿದೆ

ಜನರು ತಮ್ಮ ಕೆಲಸ ಕಾರ್ಯವನ್ನು ಬಿಟ್ಟು ಅಲೆದಾಡಿ ಬೆವರು ಸುರಿಸುವುದನ್ನು ನೀವು ಕಂಡು ಕೇಳಿರಬಹುದು.

ಈಗ ಮನೆಯಲ್ಲೇ ಕುಳಿತು Birth Certificate ಪಡೆಯುವ ಹೊಸ ಮಾರ್ಗ ಯಾವುದು ಎಂಬುದನ್ನು ತಿಳಿಯಿರಿ.

Birth Certificate: ದೇಶದಲ್ಲಿ ನಿಮ್ಮ ಜನನ ಪ್ರಮಾಣಪತ್ರ ಪಡೆಯುವುದು ಆಫ್‌ಲೈನ್‌ನಲ್ಲಿ ಅಥವಾ ಆನ್‌ಲೈನ್‌ನಲ್ಲಿ ಕಠಿಣ ಕೆಲಸವಾಗಿದೆ. ಇದಕ್ಕಾಗಿ ಜನರು ತಮ್ಮ ಕೆಲಸ ಕಾರ್ಯವನ್ನು ಬಿಟ್ಟು ಅಲೆದಾಡಿ ಬೆವರು ಸುರಿಸುವುದನ್ನು ನೀವು ಕಂಡು ಕೇಳಿರಬಹುದು. ಅಲ್ಲದೆ ಈವರೆಗಿನ ಆಫ್‌ಲೈನ್‌ನಲ್ಲಿ ಜನನ ಪ್ರಮಾಣಪತ್ರ ಪಡೆಯಲು ಸರ್ಕಾರಿ ಕಚೇರಿಗಳನ್ನು ಸುತ್ತಾಡಬೇಕಾಗಿತ್ತು. ಅಲ್ಲದೆ ಎಲ್ಲ ದಾಖಲೆ ಇದ್ದರೂ ಸರ್ಕಾರಿ ವೆಬ್‌ಸೈಟ್ ಕಾರ್ಯನಿರ್ವಹಿಸದ ಕಾರಣ ಅಥವಾ ಕೆಲವು ದೋಷದಿಂದಾಗಿ ಆನ್‌ಲೈನ್‌ನಲ್ಲಿಯೂ ಪ್ರಮಾಣಪತ್ರವನ್ನು ಪಡೆಯಲು ಸಾಧ್ಯವಾಗುತಿರಲಿಲ್ಲ ಆದರೆ ಈಗ ಪರಿಸ್ಥಿತಿ ಬಹಳಷ್ಟು ಬದಲಾಗಿದೆ.

ಆನ್‌ಲೈನ್‌ನಲ್ಲಿ Birth Certificate ಪಡೆಯಬಹುದು!

ವಾಸ್ತವವಾಗಿ ಈಗ ಎಲ್ಲಾ ರಾಜ್ಯಗಳು ಮತ್ತು ಪುರಸಭೆಗಳು CRS ಪೋರ್ಟಲ್‌ನಲ್ಲಿಯೇ ಜನನ ಮತ್ತು ಮರಣದ ಡೇಟಾವನ್ನು ಅಪ್‌ಲೋಡ್ ಮಾಡಬೇಕಾಗುವ ಹೊಸ ನಿಯಮವನ್ನು ತಂದಿದೆ. ಇದರಿಂದ ನಕಲಿ ಪ್ರಮಾಣಪತ್ರಗಳನ್ನು ತಯಾರಿಸುವುದಕ್ಕೆ ಕಡಿವಾಣ ಹಾಕಬಹುದು. ಅಲ್ಲದೆ ಈ ಸೌಲಭ್ಯ ಅಸಲಿ ದಾಖಲೆಗಳನ್ನು ಸುಲಭವಾಗಿ ಪರಿಶೀಲಿಸಲಾಗುತ್ತದೆ. ಜನನ ಪ್ರಮಾಣಪತ್ರವನ್ನು ಪಡೆಯುವ ಹೊಸ ಮಾರ್ಗ ಯಾವುದು ಎಂಬುದನ್ನು ಈ ಕೆಳಗೆ ವಿವರಿಸಲಾಗಿದೆ.

ಆನ್‌ಲೈನ್‌ನಲ್ಲಿ Birth Certificate ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?

  • ಈಗ ಜನನ ಪ್ರಮಾಣಪತ್ರವನ್ನು ಪಡೆಯಲು ನೀವು ನಿಮ್ಮ ಪ್ರದೇಶದ ನಿಗಮ ಅಥವಾ ರಾಜ್ಯ ವೆಬ್‌ಸೈಟ್‌ಗೆ ಹೋಗಬೇಕಾಗಿಲ್ಲ. ಜನನ ಪ್ರಮಾಣಪತ್ರವನ್ನು ಪಡೆಯುವ ಕೆಲಸವನ್ನು ಈಗ CRS ಪೋರ್ಟಲ್‌ನಲ್ಲಿ ಸುಲಭವಾಗಿ ಮಾಡಬಹುದು.
  • ಇದಕ್ಕಾಗಿ ನೀವು ಮೊದಲನೆಯದಾಗಿ ನೀವು crsorgi.gov.in ನಲ್ಲಿ CSR ಪೋರ್ಟಲ್‌ಗೆ ಹೋಗಬೇಕು ಇದು ಭಾರತ ಸರ್ಕಾರದ ಅಧಿಕೃತ ನಾಗರಿಕ ನೋಂದಣಿ ವ್ಯವಸ್ಥೆಯ ಪೋರ್ಟಲ್ ಆಗಿದೆ.

ಇದನ್ನೂ ಓದಿ: Baby Grok AI App: ಮಕ್ಕಳಿಗಾಗಿ ವಿಶೇಷ AI ಚಾಟ್‌ಬಾಟ್ ವಿನ್ಯಾಸಗೊಳಿಸಲಿರುವ ಎಲಾನ್ ಮಸ್ಕ್!

  • ಇಲ್ಲಿ ನೀವು “ಜನರಲ್ ಪಬ್ಲಿಕ್” ಆಯ್ಕೆಯನ್ನು ಟ್ಯಾಪ್ ಮಾಡುವ ಮೂಲಕ ಸೈನ್ ಅಪ್ ಮಾಡಬೇಕು. ಹೀಗೆ ಮಾಡುವುದರಿಂದ ನೀವು ಈ ಸರ್ಕಾರಿ ಪೋರ್ಟಲ್‌ನಲ್ಲಿ ನಿಮ್ಮ ಖಾತೆಯನ್ನು ರಚಿಸುತ್ತೀರಿ.
  • ಖಾತೆಯನ್ನು ರಚಿಸಿ ಲಾಗಿನ್ ಆದ ನಂತರ ನೀವು “ಜನನ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿ” ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
  • ಇದರ ನಂತರ ನೀವು ಒಂದು ಫಾರ್ಮ್ ಅನ್ನು ಭರ್ತಿ ಮಾಡಬೇಕು. ಇದರಲ್ಲಿ ಮಗುವಿನ ಹೆಸರು (ನೀಡಿದ್ದರೆ) ಹುಟ್ಟಿದ ದಿನಾಂಕ ಮತ್ತು ಸಮಯ, ಹುಟ್ಟಿದ ಸ್ಥಳ (ಆಸ್ಪತ್ರೆ ಅಥವಾ ಮನೆ), ಹೆಸರು, ವಿಳಾಸ ಮತ್ತು ಪೋಷಕರ ಸಂಪರ್ಕದಂತಹ ವಿವರಗಳನ್ನು ನಮೂನೆಯಲ್ಲಿ ನೀಡಬೇಕಾಗುತ್ತದೆ.
  • ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ ನೀವು ಅಗತ್ಯವಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು. ಈ ದಾಖಲೆಗಳಲ್ಲಿ ನೀವು ಆಸ್ಪತ್ರೆಯಿಂದ ಪಡೆದ ಜನನ ವರದಿಯನ್ನು ಡಿಸ್ಚಾರ್ಜ್ ಸಾರಾಂಶ ಎಂದೂ ಕರೆಯುತ್ತಾರೆ.
  • ಆಧಾರ್ ಅಥವಾ ಪೋಷಕರ ಇತರ ಗುರುತಿನ ಚೀಟಿ ಮತ್ತು ಪಡಿತರ ಚೀಟಿ, ವಿದ್ಯುತ್ ಬಿಲ್‌ನಂತಹ ನಿವಾಸ ಪ್ರಮಾಣಪತ್ರವನ್ನು ಅಪ್‌ಲೋಡ್ ಮಾಡಬೇಕು.
  • ಇದರ ನಂತರ ನೀವು ನಿಮ್ಮ ಫಾರ್ಮ್ ಅನ್ನು ಸಲ್ಲಿಸಬೇಕು ಮತ್ತು ಪ್ರತಿಯಾಗಿ ನಿಮಗೆ ಉಲ್ಲೇಖ ಸಂಖ್ಯೆ ಸಿಗುತ್ತದೆ.
  • ಈ ಸಂಖ್ಯೆಯ ಸಹಾಯದಿಂದ ನೀವು CRS ಪೋರ್ಟಲ್‌ನಲ್ಲಿಯೇ ನಿಮ್ಮ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ.
  • ಎಲ್ಲವೂ ಸರಿಯಾಗಿದ್ದರೆ ಮುಂದಿನ 28 ದಿನಗಳಲ್ಲಿ ಜನನ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ನೀವು ಅದನ್ನು CRS ಪೋರ್ಟಲ್‌ನಿಂದ PDF ಆಗಿ ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ.

ಇದರಲ್ಲಿ ನೀವು ಗಮನಿಸಬೇಕಾದ ಕೆಲವು ವಿಷಯಗಳು:

ಜನನ ಪ್ರಮಾಣಪತ್ರವನ್ನು ಪಡೆಯುವಾಗ ಜನನದ 21 ದಿನಗಳ ಒಳಗೆ ಅರ್ಜಿ ಸಲ್ಲಿಸಬೇಕು ಎಂಬುದನ್ನು ನೆನಪಿನಲ್ಲಿಡಿ. ಇದನ್ನು ಮಾಡದಿದ್ದರೆ ಪ್ರಮಾಣಪತ್ರವನ್ನು ಪಡೆಯುವಾಗ ನೀವು ದಂಡವನ್ನು ಪಾವತಿಸಬೇಕಾಗಬಹುದು. ಇದರಲ್ಲಿ ಸಾಕಷ್ಟು ವಿಳಂಬವಾಗಿದ್ದರೆ ಬೇರೆ ಪ್ರಕ್ರಿಯೆ ಮತ್ತು ಅಫಿಡವಿಟ್ ಅಗತ್ಯವಿರಬಹುದು. ಈಗ ಪ್ರಮಾಣಪತ್ರವನ್ನು ಡಿಜಿಟಲ್ ಸಹಿ ಮಾಡಲಾಗಿರುವುದರಿಂದ ಅದು ಎಲ್ಲಾ ಸರ್ಕಾರಿ ಕೆಲಸಗಳಿಗೆ ಮಾನ್ಯವಾಗಿರುತ್ತದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :