ನಿಮ್ಮ Smartphone ಸ್ಲೋ ಆಗಿದೆಯೇ? ಹಾಗಾದ್ರೆ ಈ ಟ್ರಿಕ್ಸ್ ಪ್ರಯತ್ನಿಸಿ ನೋಡಿ

ನಿಮ್ಮ Smartphone ಸ್ಲೋ ಆಗಿದೆಯೇ? ಹಾಗಾದ್ರೆ ಈ ಟ್ರಿಕ್ಸ್ ಪ್ರಯತ್ನಿಸಿ ನೋಡಿ

ಪ್ರಸ್ತುತ Smartphone ಅತೀ ಅಗತ್ಯ ಸಾಧನವಾಗಿದೆ. ಫೋನ್‌ ಬಳಕೆ ಹೆಚ್ಚಾದಂತೆ ಸ್ಟೋರೇಜ್ ಫುಲ್ (Storage Full) ಎಂಬ ಸಮಸ್ಯೆ ಕೂಡ ಇದೀಗ ಸಾಮಾನ್ಯ ಎನಿಸಿಬಿಟ್ಟಿದೆ. ಸ್ಮಾರ್ಟ್‌ಫೋನಿನಲ್ಲಿ ಫೋಟೋಗಳು, ವಿಡಿಯೋಗಳು, ಆಪ್ಸ್ ಮತ್ತು ಪಿಡಿಎಫ್‌ ಫೈಲ್‌ಗಳು ದಿನದಿಂದ ದಿನಕ್ಕೆ ಸ್ಟೋರ್ ಆಗುತ್ತಾ ಹೋಗುತ್ತವೆ. ಇದರಿಂದ ಸ್ಮಾರ್ಟ್‌ಫೋನ್ ಮೆಮೊರಿ ಭರ್ತಿ ಆಗಿ ಮೊಬೈಲ್‌ ಸ್ಲೋ ಆಗುವುದು, ಹೊಸ ಆಪ್ಸ್ ಇನ್‌ಸ್ಟಾಲ್ ಆಗದೇ ಇರುವಂತಹ ಸಮಸ್ಯೆಗಳು ಬರುತ್ತವೆ. ಆದ್ದರಿಂದ ಸಮಯಕ್ಕೆ ಸರಿಯಾಗಿ ಸ್ಟೋರೇಜ್ ಕ್ಲೀನ್ ಮಾಡುವುದು ಬಹಳ ಮುಖ್ಯ. ಹಾಗಾದರೆ ಸ್ಮಾರ್ಟ್‌ಫೋನ್‌ ಸ್ಟೋರೇಜ್‌ ಭರ್ತಿ ಆದಾಗ ಏನು ಮಾಡಬೇಕು ಎನ್ನುವ ಕುರಿತು ಕೆಲವು ಉಪಯುಕ್ತ ಮಾಹಿತಿ ಈ ಲೇಖನದಲ್ಲಿ ತಿಳಿಯೋಣ.

Digit.in Survey
✅ Thank you for completing the survey!

Also Read : Xiaomi ಕಂಪನಿಯಿಂದ ಹೊಸ ಸ್ಮಾರ್ಟ್‌ಟಿವಿ ಸರಣಿ ಬಿಡುಗಡೆ; ಜಬರ್ದಸ್ತ್‌ ಸೌಂಡ್‌ ವ್ಯವಸ್ಥೆ

ನಿಮ್ಮ Smartphone ಸ್ಟೋರೇಜ್‌ ಚೆಕ್‌ ಮಾಡಿ

ನಿಮ್ಮ ಫೋನ್‌ನಲ್ಲಿ ಯಾವ ಫೈಲ್‌ಗಳು ಹೆಚ್ಚು ಸ್ಟೋರೇಜ್‌ ತೆಗೆದುಕೊಳ್ಳುತ್ತಿವೆ ಎಂಬುದನ್ನು ಚೆಕ್‌ ಮಾಡಿ. ಅದಕ್ಕಾಗಿ ನಿಮ್ಮ ಫೋನಿನಲ್ಲಿ Settings > Storage ನಲ್ಲಿ ಹೋಗಿ ಯಾವ ವಿಭಾಗ (Photos, Videos, Apps) ಹೆಚ್ಚು ಸ್ಟೋರೇಜ್‌ ತೆಗೆದುಕೊಳ್ಳುತ್ತಿದೆ ಎಂಬುದನ್ನು ನೋಡಬಹುದು. ಅನಗತ್ಯ ಫೈಲ್‌ಗಳನ್ನು ಡಿಲೀಟ್‌ ಮಾಡುವುದು ಸೂಕ್ತ.

smartphone

ಅನಗತ್ಯ ಫೋಟೋ/ವಿಡಿಯೋ ಡಿಲೀಟ್ ಮಾಡಿ

ಫೋನಿನಲ್ಲಿ ಇರುವ ಅನಗತ್ಯ ಫೋಟೋ ಮತ್ತು ವಿಡಿಯೋಗಳನ್ನು ಕ್ಲೀನ್ ಮಾಡುವುದು ಮುಖ್ಯ. WhatsApp ಅಥವಾ Camera ಮೂಲಕ ಬಂದಿರುವ ಡುಪ್ಲಿಕೇಟ್ ಫೋಟೋಗಳು ಮತ್ತು ಅನಗತ್ಯ ವಿಡಿಯೋಗಳನ್ನು ಡಿಲೀಟ್ ಮಾಡಿ. ಬೇಕಾದ ಫೋಟೋಗಳನ್ನು Google Photos ಅಥವಾ Cloud ಗೆ ಬ್ಯಾಕಪ್ ಮಾಡಬಹುದು. ಇದರಿಂದ ಫೋನ್ ಸ್ಟೋರೇಜ್ ಖಾಲಿಯಾಗುತ್ತದೆ.

ಬಳಕೆ ಇಲ್ಲದ ಆಪ್ಸ್‌ ಅನ್‌ಇನ್‌ಸ್ಟಾಲ್‌ ಮಾಡಿ

ಫೋನಿನಲ್ಲಿ ಬಳಕೆ ಮಾಡದ ಆಪ್ಸ್ ಅನ್ನು Uninstall ಮಾಡುವುದು ಉತ್ತಮ. ಕೆಲವೊಮ್ಮೆ ನಾವು ಹಲವಾರು ಆಪ್ಸ್ ಇನ್‌ಸ್ಟಾಲ್ ಮಾಡುತ್ತೇವೆ ಆದರೆ ಬಳಸುವುದಿಲ್ಲ. ಇವು ಸ್ಟೋರೇಜ್ ಮಾತ್ರವಲ್ಲದೆ RAM ಕೂಡ ಬಳಸುತ್ತವೆ. ಸೆಟ್ಟಿಂಗ್ಸ್ > Apps ನಲ್ಲಿ ಹೋಗಿ ನಂತರ ಬಳಕೆ ಮಾಡದ ಆಪ್ಸ್ ಅನ್ನು ಡಿಲೀಟ್ ಮಾಡಿ.

Cache ಫೈಲ್‌ ಕ್ಲಿನ್ ಮಾಡುವುದು

Cache ಫೈಲ್‌ಗಳನ್ನು ಕ್ಲೀನ್ ಮಾಡುವುದು. Apps ಗಳು ಬಳಸುವಾಗ cache data ಸಂಗ್ರಹವಾಗುತ್ತದೆ. ಇದು ಜಾಸ್ತಿ ಸ್ಟೋರೇಜ್‌ ತೆಗೆದುಕೊಳ್ಳಬಹುದು. ಸೆಟ್ಟಿಂಗ್ಸ್ > Apps > ಸ್ಟೋರೇಜ್‌ ನಲ್ಲಿ ಹೋಗಿ cache clear ಮಾಡಬಹುದು. ಇದರಿಂದ ಫೋನ್ ಸ್ವಲ್ಪ ವೇಗವಾಗಿ ಕೆಲಸ ಮಾಡುತ್ತದೆ.

ಡೌನ್‌ಲೋಡ್‌ ಫೋಲ್ಡರ್ ಚೆಕ್‌ ಮಾಡಿ

ನಿಮ್ಮ ಫೋನಿನಲ್ಲಿನ Downloads ಫೋಲ್ಡರ್ ಚೆಕ್‌ ಮಾಡಿ. ಡೌನ್‌ಲೋಡ್ ಮಾಡಿದ ಫೈಲ್‌ಗಳು ಬಹುಶಃ ಮರೆತು ಹೋಗುತ್ತವೆ. PDF, Images, APK ಫೈಲ್‌ಗಳು ಅನಗತ್ಯವಾಗಿ ಸ್ಟೋರ್ ಆಗಿರಬಹುದು. ಇವುಗಳನ್ನು ಪರಿಶೀಲಿಸಿ ಉಪಯೋಗ ಇರದ ಫೈಲ್‌ಗಳನ್ನು ಡಿಲೀಟ್ ಮಾಡಿಬಿಡಿ.

ವಾಟ್ಸಾಪ್‌ ಸ್ಟೋರೇಜ್‌ ಗಮನಿಸಿ

ವಾಟ್ಸಾಪ್‌ ಸ್ಟೋರೇಜ್‌ ಮ್ಯಾನೇಜರ್ ಬಳಸುವುದು ಬಹಳ ಮುಖ್ಯ. ವಾಟ್ಸಾಪ್‌ ಆಪ್‌ ತೆರೆಯಿರಿ ಅಲ್ಲಿ ಸೆಟ್ಟಿಂಗ್ಸ್ > ಸ್ಟೋರೇಜ್‌ ಮತ್ತು ಡೇಟಾ > ಮ್ಯಾನೇಜ್ ಸ್ಟೋರೇಜ್‌ ಗೆ ಹೋಗಿ, ಯಾವ ಚಾಟ್ ಹೆಚ್ಚು ಜಾಗ ತೆಗೆದುಕೊಳ್ಳುತ್ತಿದೆ ಎಂಬುದನ್ನು ನೋಡಬಹುದು. ದೊಡ್ಡ ವಿಡಿಯೋಗಳು, ಫಾರ್ವರ್ಡ್ ಫೈಲ್‌ಗಳು, ಅನಗತ್ಯ ಮೀಡಿಯಾವನ್ನು ಅಳಿಸಿದರೆ ಸಾಕಷ್ಟು ಸ್ಟೋರೇಜ್ ಖಾಲಿಯಾಗುತ್ತದೆ.

ಲೈಟ್‌ ಆಪ್ಸ್‌ ಬಳಕೆ ಸೂಕ್ತ

Lite Apps ಅಥವಾ Web Apps ಬಳಸುವುದು ಒಳ್ಳೆಯ ಆಯ್ಕೆ. ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್ ಮುಂತಾದ ಆಪ್ಸ್ ಹೆಚ್ಚು ಸ್ಟೋರೇಜ್ ಮತ್ತು ಡೇಟಾ ತೆಗೆದುಕೊಳ್ಳುತ್ತವೆ. ಇವುಗಳ ಬದಲು Lite version ಅಥವಾ ಬ್ರೌಸರ್‌ ಮೂಲಕ ಬಳಸಿದರೆ ಸ್ಟೋರೇಜ್ ಕೂಡ ಉಳಿಯುತ್ತದೆ ಮತ್ತು ಫೋನ್ ಕಾರ್ಯವೈಖರಿ ಸಹ ಉತ್ತಮವಾಗುತ್ತದೆ.

ಮೆಮೊರಿ ಕಾರ್ಡ್‌ ಬಳಕೆ ಮಾಡಬಹುದು

SD Card ಅಥವಾ External ಸ್ಟೋರೇಜ್‌ ಬಳಸುವುದು ಫೋನ್‌ ಸ್ಟೋರೇಜ್ ಭರ್ತಿ ತಪ್ಪಿಸಲು ನೆರವಾಗುತ್ತದೆ. ನಿಮ್ಮ ಫೋನ್‌ನಲ್ಲಿ ಎಸ್‌ಡಿ ಕಾರ್ಡ್‌ ಸ್ಲಾಟ್‌ ಇದ್ದರೆ, ಫೋಟೋ, ವಿಡಿಯೋ ಮತ್ತು ಬಿಗ್ ಫೈಲ್‌ಗಳನ್ನು ಎಸ್‌ಡಿ ಕಾರ್ಡ್‌ಗೆ move ಮಾಡಬಹುದು. ಇದರಿಂದ ಫೋನಿನ ಆಂತರೀಕ ಸ್ಟೋರೇಜ್‌ ಮೇಲೆ ಇರುವ ಒತ್ತಡ ಕಡಿಮೆಯಾಗುತ್ತದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo