Phone ಕಳೆದುಹೋದರೆ ಬ್ಯಾಂಕ್ ಖಾತೆಯಿಂದ ಹಣ ಹೋಗದಂತೆ ತಡೆಯಲು ಹೀಗೆ ಮಾಡಿ
ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಕಳೆದುಹೋಗುವುದು ಎಂದರೆ ಕೇವಲ ಫೋನ್‌ನ್ನೇ ಕಳೆದುಕೊಂಡಂತಲ್ಲ. ಅದರಲ್ಲಿರುವ ಬ್ಯಾಂಕಿಂಗ್ ಆಪ್‌ಗಳು, UPI ಆಪ್‌ಗಳು, ವೈಯಕ್ತಿಕ ಮಾಹಿತಿ ಹಾಗೂ ಇತರ ಪ್ರಮುಖ ಮಾಹಿತಿಯೂ ಅಪಾಯಕ್ಕೆ ಸಿಲುಕಬಹುದು. ವಿಶೇಷವಾಗಿ ಫೋನ್‌ನಲ್ಲ ಗೂಗಲ್ ಪೇ, ಫೋನ್ ಪೇ, ಪೇಟಿಎಮ್ ಸೇರಿದಂತೆ ಯುಪಿಐ ಆಪ್‌ಗಳನ್ನು ಬಳಸುತ್ತಿದ್ದರೆ, ಫೋನ್ ಕಳೆದುಹೋದ ತಕ್ಷಣವೇ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಬಹಳ ಮುಖ್ಯ. Phone ಕಳೆದುಹೋದ ಸಂದರ್ಭದಲ್ಲಿ ಯುಪಿಐ ಪಾವತಿಗಳನ್ನು ತಾತ್ಕಾಲಿಕವಾಗಿ ನಿಲ್ಲಿಸುವ ಮೂಲಕ ನಿಮ್ಮ ಬ್ಯಾಂಕ್ ಖಾತೆಯಿಂದ ಅನಧಿಕೃತ ವಹಿವಾಟು ನಡೆಯುವ ಅಪಾಯವನ್ನು ಕಡಿಮೆ ಮಾಡಬಹುದು.
Surveyಮೊದಲು Phone ನ SIM ಅನ್ನು ಬ್ಲಾಕ್ ಮಾಡಿ
ಫೋನ್ ಕಳೆದುಹೋದ ತಕ್ಷಣ ನಿಮ್ಮ ಮೊಬೈಲ್ ನೆಟ್‌ವರ್ಕ್ ಕಂಪನಿಯ ಗ್ರಾಹಕ ಸೇವೆಯನ್ನು ಸಂಪರ್ಕಿಸಿ SIM ಕಾರ್ಡ್ ಅನ್ನು ಬ್ಲಾಕ್ ಮಾಡಿಸಿ. ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ ಓಟಿಪಿ ಅಥವಾ ಇತರ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳುವುದನ್ನು ಇದು ತಡೆಯಲು ಸಹಾಯ ಮಾಡುತ್ತದೆ. ನಂತರ ಅದೇ ಸಂಖ್ಯೆಗೆ ಹೊಸ SIM ಕಾರ್ಡ್ ಪಡೆಯಬಹುದು. ಬ್ಯಾಂಕ್‌ಗೆ ತಕ್ಷಣ ಮಾಹಿತಿ ನೀಡಿ
ನಿಮ್ಮ ಫೋನ್‌ನಲ್ಲಿ ಬ್ಯಾಂಕಿಂಗ್ ಆಪ್ ಅಥವಾ ಯುಪಿಐ ಸೇವೆ ಸಕ್ರಿಯವಾಗಿದ್ದರೆ, ಬ್ಯಾಂಕ್‌ನ ಗ್ರಾಹಕ ಸೇವೆಯನ್ನು ಸಂಪರ್ಕಿಸಿ. ಫೋನ್ ಕಳೆದುಹೋಗಿರುವ ಬಗ್ಗೆ ತಿಳಿಸಿ ಮತ್ತು ಮೊಬೈಲ್ ಬ್ಯಾಂಕಿಂಗ್ ಹಾಗೂ ಯುಪಿಐ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಕೇಳಬಹುದು. ನಿಮ್ಮ ಬ್ಯಾಂಕ್ ಖಾತೆಯಿಂದ ಯಾವುದೇ ಅನುಮಾನಾಸ್ಪದ ವಹಿವಾಟು ನಡೆದಿದೆಯೇ ಎಂಬುದನ್ನೂ ಪರಿಶೀಲಿಸಿ.
UPI ಆಪ್‌ಗಳನ್ನು ಸುರಕ್ಷಿತಗೊಳಿಸಿ
Google Pay, PhonePe, Paytm ಅಥವಾ ನೀವು ಬಳಸುತ್ತಿರುವ ಇತರ UPI ಸೇವೆಗಳ ಗ್ರಾಹಕ ಸೇವೆಯನ್ನು ಸಂಪರ್ಕಿಸಿ. ಫೋನ್ ಕಳೆದುಹೋಗಿರುವುದನ್ನು ತಿಳಿಸಿ, ನಿಮ್ಮ ಖಾತೆಯನ್ನು ಸುರಕ್ಷಿತಗೊಳಿಸಲು ಅಥವಾ UPI ಸೇವೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಿ. ಹೊಸ SIM ಪಡೆದು ಹೊಸ ಫೋನ್‌ನಲ್ಲಿ ನಿಮ್ಮ UPI ಆಪ್‌ಗಳನ್ನು ಮರುನೋಂದಣಿ ಮಾಡಿಕೊಂಡ ನಂತರ ಅಗತ್ಯವಿರುವ ಸೇವೆಗಳನ್ನು ಮತ್ತೆ ಬಳಸಬಹುದು. ಸ್ಮಾರ್ಟ್‌ಫೋನ್‌ನ್ನು ರಿಮೋಟ್ ಆಗಿ ಲಾಕ್ ಮಾಡಿ
Android ಫೋನ್ ಆಗಿದ್ದರೆ Googleನ Find My Device ಸೇವೆಯ ಮೂಲಕ ಫೋನ್‌ನ್ನು ರಿಮೋಟ್ ಆಗಿ ಲಾಕ್ ಮಾಡಬಹುದು. iPhone ಬಳಕೆದಾರರು Appleನ Find My ಸೇವೆಯ ಮೂಲಕ ಸಾಧನವನ್ನು Lost Modeಗೆ ಹಾಕಬಹುದು. ಇದರಿಂದ ಫೋನ್ ಕೈಗೆ ಸಿಕ್ಕ ವ್ಯಕ್ತಿಯು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸುಲಭವಾಗಿ ಪ್ರವೇಶಿಸುವ ಸಾಧ್ಯತೆ ಕಡಿಮೆಯಾಗುತ್ತದೆ.
ಅನುಮಾನಾಸ್ಪದ UPI ನಡೆದರೆ?
ಸ್ಮಾರ್ಟ್‌ಫೋನ್ ಕಳೆದುಹೋದ ನಂತರ ನಿಮ್ಮ ಖಾತೆಯಿಂದ ಯಾವುದೇ ಅನಧಿಕೃತ UPI ವಹಿವಾಟು ನಡೆದಿರುವುದು ಕಂಡುಬಂದರೆ, ತಕ್ಷಣ ನಿಮ್ಮ ಬ್ಯಾಂಕ್‌ಗೆ ದೂರು ನೀಡಿ. ಜೊತೆಗೆ ಸೈಬರ್ ವಂಚನೆಗೆ ಸಂಬಂಧಿಸಿದ ಪ್ರಕರಣವಾಗಿದ್ದರೆ ಭಾರತದಲ್ಲಿ 1930 ಸೈಬರ್ ಕ್ರೈಂ ಸಹಾಯವಾಣಿ ಮೂಲಕ ವರದಿ ಮಾಡಬಹುದು. ಸಾಧ್ಯವಾದಷ್ಟು ಬೇಗ ದೂರು ನೀಡುವುದು ಮುಖ್ಯ. ವಹಿವಾಟಿನ ದಿನಾಂಕ, ಸಮಯ, ಮೊತ್ತ ಮತ್ತು Transaction ID ಸೇರಿದಂತೆ ಲಭ್ಯವಿರುವ ಮಾಹಿತಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile
