ಪಾಸ್‌ವರ್ಡ್ ಇಲ್ಲದೇ ಗೂಗಲ್‌ ಖಾತೆ ತೆರೆಯಿರಿ! ಹೊಸ Selfie Sign-in ಫೀಚರ್ ಬಂದಿದೆ

ಗೂಗಲ್ ತನ್ನ ಬಳಕೆದಾರರಿಗೆ ಮತ್ತಷ್ಟು ಸುರಕ್ಷಿತ ಮತ್ತು ಸುಲಭವಾದ ಲಾಗಿನ್ ಅನುಭವ ನೀಡುವ ಉದ್ದೇಶದಿಂದ Selfie for Sign-in ಎಂಬ ಹೊಸ ಫೀಚರ್ಸ್‌ ಅನ್ನು ಪರಿಚಯಿಸಲು ಸಿದ್ಧವಾಗಿದೆ. ಈ ಹೊಸ ಫೀಚರ್ ಮೂಲಕ ಪಾಸ್‌ವರ್ಡ್ ಅಥವಾ OTP ಬಳಸುವ ಬದಲು, ಬಳಕೆದಾರರು ತಮ್ಮ ಮುಖದ ಸೆಲ್ಫಿ ತೆಗೆದು ಗೂಗಲ್‌ ಅಕೌಂಟ್‌ ಗೆ ಲಾಗಿನ್ ಆಗುವ ಅವಕಾಶ ದೊರೆಯಲಿದೆ. ಈ ಹೊಸ ಆಯ್ಕೆಯು ನಿಜವಾದ ಬಳಕೆದಾರರ ಖಾತೆಯನ್ನು ಬಳಸುತ್ತಿದ್ದಾರೆ ಎಂದು ದೃಢೀಕರಿಸುವ ಮೂಲಕ ಕೆಲವು ಗೂಗಲ್‌ ವೈಶಿಷ್ಟ್ಯಗಳು ಮತ್ತು ಸೇವೆಗಳಿಗೆ ಪ್ರವೇಶವನ್ನು ಅನ್‌ಲಾಕ್ ಮಾಡಲು ಸಹ ಇದನ್ನು ಬಳಸಬಹುದು.

Also Read : OnePlus N6x ಮೊಬೈಲ್‌ ಲಾಂಚ್‌ಗೆ ಡೇಟ್‌ ಫಿಕ್ಸ್‌! ಬಜೆಟ್‌ ಬೆಲೆಯಲ್ಲಿ ಎಂಟ್ರಿ ಕೊಡುವ ನಿರೀಕ್ಷೆ!

Selfie for Sign-in ಆಯ್ಕೆ

ವರದಿಗಳ ಪ್ರಕಾರ ಈ ವ್ಯವಸ್ಥೆ ಮುಖ ಗುರುತಿಸುವ (Face Verification) ತಂತ್ರಜ್ಞಾನವನ್ನು ಬಳಸಲಿದ್ದು, ಬಳಕೆದಾರರ ನೈಜ ಗುರುತನ್ನು ಪರಿಶೀಲಿಸಿದ ನಂತರವೇ ಖಾತೆಗೆ ಪ್ರವೇಶ ನೀಡುತ್ತದೆ. ಇದರಿಂದ ಪಾಸ್‌ವರ್ಡ್‌ಗಳನ್ನು ನೆನಪಿಟ್ಟುಕೊಳ್ಳುವ ಅಗತ್ಯ ಕಡಿಮೆಯಾಗುವುದರ ಜೊತೆಗೆ, ಖಾತೆಯ ಭದ್ರತೆಯೂ ಮತ್ತಷ್ಟು ಬಲವಾಗಲಿದೆ. ಈ ಆಯ್ಕೆಯು ವಿಶೇಷವಾಗಿ ಹೊಸ ಡಿವೈಸ್‌ನಲ್ಲಿ ಲಾಗಿನ್ ಮಾಡುವಾಗ ಅಥವಾ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಾಗ ಹೆಚ್ಚುವರಿ ಭದ್ರತಾ ಪರಿಶೀಲನೆಯಾಗಿ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ. ಸೆಲ್ಫಿ ಪರಿಶೀಲನೆಯ ವೇಳೆ ಬಳಕೆದಾರರ ಗೌಪ್ಯತೆಗೆ ಆದ್ಯತೆ ನೀಡಲಾಗುತ್ತದೆ ಎಂದು ಗೂಗಲ್ ತಿಳಿಸಿದೆ. ಸದ್ಯ ಸೆಲ್ಫಿ ಫಾರ್ ಸೈನ್‌ ಇನ್‌ ಫೀಚರ್ ಅನ್ನು ಆಯ್ದ ಬಳಕೆದಾರರಿಗೆ ಪರೀಕ್ಷಾ ಹಂತದಲ್ಲಿ ನೀಡಲಾಗುತ್ತಿದೆ.

ಈ ಕ್ರಮಗಳನ್ನು ಫಾಲೋ ಮಾಡಿ

ಗೂಗಲ್‌ ಖಾತೆಯಲ್ಲಿ ಸೆಲ್ಫಿ ಫಾರ್ ಸೈನ್‌ ಇನ್‌ ಬಳಸಲು ಮೊದಲು ನಿಮ್ಮ ಗೂಗಲ್‌ ಅಕೌಂಟ್‌ ತೆರೆಯಿರಿ. ಬಳಿಕ Security ವಿಭಾಗಕ್ಕೆ ಹೋಗಿ ಸೈನ್‌-ಇನ್ ಟು ಗೂಗಲ್‌ ಆಯ್ಕೆಯನ್ನು ತೆರೆಯಿರಿ. ಅಲ್ಲಿ ‘ಸೆಲ್ಫಿ ವಿಡಿಯೋ’ ಎಂಬ ಆಯ್ಕೆ ಕಾಣಿಸಿದರೆ ಅದನ್ನು ಆಯ್ಕೆ ಮಾಡಿ. ಆ ಬಳಿಕ ‘ಆಡ್‌ ಎ ಸೆಲ್ಫಿ ಫಾರ್‌ ಸೈನ್-ಇನ್‌’ ಎಂಬ ಆಯ್ಕೆಯ ಮೇಲೆ ಕಂಟಿನ್ಯೂ ಆಯ್ಕೆ ಕ್ಲಿಕ್ ಮಾಡಿ

ಆ ನಂತರ ಸ್ಕ್ರೀನ್‌ ಮೇಲೆ ಕಾಣಿಸುವ ಸೂಚನೆಗಳನ್ನು ಅನುಸರಿಸಿ ನಿಮ್ಮ ಮುಖದ ಸೆಲ್ಫಿ ವೀಡಿಯೊವನ್ನು ರೆಕಾರ್ಡ್ ಮಾಡಿ. ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಆ ಸೆಲ್ಫಿ ವೀಡಿಯೊ ನಿಮ್ಮ ಗೂಗಲ್‌ ಖಾತೆಯೊಂದಿಗೆ ಸುರಕ್ಷಿತವಾಗಿ ಲಿಂಕ್ ಆಗುತ್ತದೆ. ಒಂದು ವೇಳೆ ನೀವು ವೆಬ್‌ಕ್ಯಾಮ್ ಇಲ್ಲದ ಕಂಪ್ಯೂಟರ್ ಬಳಸುತ್ತಿದ್ದರೆ, ಗೂಗಲ್‌ ಒಂದು QR ಕೋಡ್ ಪ್ರದರ್ಶಿಸುತ್ತದೆ. ಆ QR ಕೋಡ್ ಅನ್ನು ಕ್ಯಾಮೆರಾ ಇರುವ ನಿಮ್ಮ ಮೊಬೈಲ್ ಅಥವಾ ಇನ್ನೊಂದು ಡಿವೈಸ್‌ನಿಂದ ಸ್ಕ್ಯಾನ್ ಮಾಡಿ ಅಲ್ಲಿಯೇ ಸೆಲ್ಫಿ ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :