ಇತ್ತೀಚಿನ ದಿನಗಳಲ್ಲಿ ಮೊಬೈಲ್ Data ಎಷ್ಟು ಬೇಗ ಖಾಲಿಯಾಗುತ್ತದೆ ಎಂಬುದು ಹಲವರ ಸಾಮಾನ್ಯ ಸಮಸ್ಯೆಯಾಗಿದೆ. ಪ್ರಮುಖವಾಗಿ ದಿನಕ್ಕೆ 1GB ಅಥವಾ 1.5GB ಡೇಟಾ ಇರುವ ಪ್ಲಾನ್ ಬಳಸುತ್ತಿದ್ದರೆ ಅವಧಿಗೂ ಮುನ್ನವೇ ಡೇಟಾ ಮುಗಿದುಹೋಗುವುದು ಕಿರಿಕಿರಿ ಉಂಟುಮಾಡಬಹುದು. ಆದರೆ ನಿಮ್ಮ ಮೊಬೈಲ್ ಡೇಟಾವನ್ನು ಯಾವ ಆಪ್ ಹೆಚ್ಚು ಕಬಳಿಸುತ್ತಿದೆ ಎಂಬುದನ್ನು ಚೆಕ್ ಮಾಡಿದರೆ ಸಮಸ್ಯೆಯ ಮೂಲವನ್ನು ಸುಲಭವಾಗಿ ಕಂಡುಹಿಡಿಯಬಹುದು. ಯೂಟ್ಯೂಬ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್, ವಾಟ್ಸಾಪ್ ಅಥವಾ ಯಾವುದೇ ಬೇರೆ ಆಪ್ ಹಿನ್ನೆಲೆಯಲ್ಲಿ ಹೆಚ್ಚು ಡೇಟಾ ಬಳಸುತ್ತಿದೆಯೇ ಎಂಬುದನ್ನು ಫೋನ್‌ನ ಸೆಟ್ಟಿಂಗ್ಸ್‌ನಲ್ಲೇ ನೋಡಬಹುದು. ಹಾಗಾದರೆ ಯಾವ ಆಪ್ ಎಷ್ಟು ಮೊಬೈಲ್ ಡೇಟಾ ಬಳಸುತ್ತಿದೆ ಎಂಬುದನ್ನು ಹೇಗೆ ಚೆಕ್ ಮಾಡುವುದು? ಇಲ್ಲಿದೆ ಮಾಹಿತಿ.
Also Read : iPhone 18 Pro ಬಿಡುಗಡೆಗೂ ಮುನ್ನವೇ ಭರ್ಜರಿ ಅಪ್‌ಡೇಟ್: ಈ ದಿನದಂದು ಪ್ರೀ-ಆರ್ಡರ್ ಸಾಧ್ಯತೆ!
ಹಂತ 1: ಮೊದಲು ನಿಮ್ಮ ಫೋನ್‌ನ ಸೆಟ್ಟಿಂಗ್ಸ್ ತೆರೆಯಿರಿ.
ಹಂತ 2: ಇಲ್ಲಿ ನೆಟ್‌ವರ್ಕ್ ಮತ್ತು ಇಂಟರ್ನೆಟ್, ಕನೆಕ್ಷನ್ ಅಥವಾ ಮೊಬೈಲ್ ನೆಟ್‌ವರ್ಕ್ ಎಂಬ ಆಯ್ಕೆಯನ್ನು ಸರ್ಚ್ ಮಾಡಿ.
ಹಂತ 3: ನಂತರ ಡೇಟಾ ಯೂಸೆಜ್ ಅಥವಾ ಮೊಬೈಲ್ ಡೇಟಾ ಯೂಸೆಜ್ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ 4: ಈಗ ಆಯ್ಕೆ ಮಾಡಿರುವ ಅವಧಿಯಲ್ಲಿ ನಿಮ್ಮ ಫೋನ್‌ನಲ್ಲಿ ಬಳಸಲಾದ ಒಟ್ಟು ಮೊಬೈಲ್ ಡೇಟಾದ ವಿವರ ಕಾಣಿಸುತ್ತದೆ.
ಹಂತ 5: ಕೆಳಗೆ ಸ್ಕ್ರೋಲ್ ಮಾಡಿದರೆ ಪ್ರತಿ ಆಪ್ ಎಷ್ಟು ಡೇಟಾ ಬಳಸಿದೆ ಎಂಬ ಲಿಸ್ಟ್ ಅನ್ನು ನೋಡಬಹುದು.
ಸಾಮಾನ್ಯವಾಗಿ ಹೆಚ್ಚು ಡೇಟಾ ಬಳಸುತ್ತಿರುವ ಆಪ್‌ಗಳು ಲಿಸ್ಟ್‌ನ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ: ಇನ್‌ಸ್ಟಾಗ್ರಾಮ್ ಅಥವಾ ಯೂಟ್ಯೂಬ್ ಹೆಚ್ಚು ಡೇಟಾ ಬಳಸುತ್ತಿದ್ದರೆ ಅವುಗಳ ಬಳಕೆ ಪ್ರಮಾಣವನ್ನು ಇಲ್ಲಿ ಸ್ಪಷ್ಟವಾಗಿ ನೋಡಬಹುದು.
ಹಂತ 1: ಐಫೋನ್‌ನಲ್ಲಿ ಸೆಟ್ಟಿಂಗ್ಸ್ ತೆರೆಯಿರಿ.
ಹಂತ 2: ಮೊಬೈಲ್ ಸರ್ವೀಸ್ ಅಥವಾ ಸೆಲ್ಯೂಲರ್ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ 3: ಕೆಳಗೆ ಸ್ಕ್ರೋಲ್ ಮಾಡಿದಾಗ ನಿಮ್ಮ ಫೋನ್‌ನಲ್ಲಿರುವ ಆ್ಯಪ್‌ಗಳ ಪಟ್ಟಿ ಕಾಣಿಸುತ್ತದೆ.
ಹಂತ 4: ಪ್ರತಿ ಆಪ್‌ನ ಹೆಸರಿನ ಪಕ್ಕದಲ್ಲಿ ಅದು ಬಳಸಿರುವ ಮೊಬೈಲ್ ಡೇಟಾದ ಪ್ರಮಾಣವನ್ನು ನೋಡಬಹುದು.
ವೀಡಿಯೊ ಸ್ಟ್ರೀಮಿಂಗ್ ಆಪ್‌ಗಳು ಸಾಮಾನ್ಯವಾಗಿ ಹೆಚ್ಚಿನ ಮೊಬೈಲ್ ಡೇಟಾ ಬಳಸುತ್ತವೆ. YouTube, Instagram, Facebook ಮತ್ತು ಇತರ ಸಾಮಾಜಿಕ ಮಾಧ್ಯಮ ಆಪ್‌ಗಳಲ್ಲಿ ವೀಡಿಯೊಗಳ ಗುಣಮಟ್ಟವನ್ನು ಕಡಿಮೆ ಮಾಡಿದರೆ ಡೇಟಾ ಬಳಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ಅದೇ ರೀತಿ, ಮೊಬೈಲ್ ಡೇಟಾದಲ್ಲಿ ದೊಡ್ಡ ಫೈಲ್‌ಗಳು, ಫೋಟೋಗಳು ಅಥವಾ ವೀಡಿಯೊಗಳನ್ನು ಸ್ವಯಂಚಾಲಿತವಾಗಿ ಡೌನ್‌ಲೋಡ್ ಆಗದಂತೆ ಮಾಡುವುದು ಕೂಡ ಸಹಾಯ ಮಾಡುತ್ತದೆ.