iPhone 18 Pro ಬಿಡುಗಡೆಗೂ ಮುನ್ನವೇ ಭರ್ಜರಿ ಅಪ್‌ಡೇಟ್‌: ಈ ದಿನದಂದು ಪ್ರೀ-ಆರ್ಡರ್‌ ಸಾಧ್ಯತೆ!

iPhone 18 Pro ಬಿಡುಗಡೆಗೂ ಮುನ್ನವೇ ಭರ್ಜರಿ ಅಪ್‌ಡೇಟ್‌: ಈ ದಿನದಂದು ಪ್ರೀ-ಆರ್ಡರ್‌ ಸಾಧ್ಯತೆ!

ಆಪಲ್‌ ಕಂಪನಿಯ ಮುಂದಿನ ಫ್ಲ್ಯಾಗ್‌ಶಿಪ್‌ ಸರಣಿ iPhone 18 Pro ಕುರಿತು ಈಗಾಗಲೇ ಸಾಕಷ್ಟು ಚರ್ಚೆಗಳು ಆರಂಭವಾಗಿವೆ. ಎಂದಿನಂತೆ ಆಪಲ್ ತನ್ನ ಹೊಸ ಐಫೋನ್‌ಗಳ ವಿವರಗಳನ್ನು ಅಧಿಕೃತವಾಗಿ ಬಹಿರಂಗಪಡಿಸುವವರೆಗೆ ಮೌನ ಕಾಯ್ದುಕೊಂಡಿದ್ದರೂ, ಲೀಕ್‌ ಮಾಹಿತಿಗಳು ಮಾತ್ರ ಒಂದರ ಹಿಂದೆ ಒಂದರಂತೆ ಹೊರಬರುತ್ತಿವೆ. ಕೆಲವು ಮಾಹಿತಿಗಳು ಪರಸ್ಪರ ಹೊಂದಿಕೆಯಾಗದಿದ್ದರೂ ಇತ್ತೀಚಿನ ವರದಿಗಳು ಮತ್ತು ಲೀಕ್‌ ಮಾಹಿತಿ ಗಮನಿಸಿದರೆ ಐಫೋನ್‌ 18 ಪ್ರೊ ಹೇಗಿರಬಹುದು ಎಂಬುದರ ಬಗ್ಗೆ ಒಂದು ಚಿತ್ರಣ ರೂಪುಗೊಳ್ಳುತ್ತಿದೆ. ಹಾಗಾದರೇ ಐಫೋನ್‌ 18 ಪ್ರೊ ಬೆಲೆ, ಬಿಡುಗಡೆ ದಿನಾಂಕ, ಪ್ರೀ-ಆರ್ಡರ್ ಹಾಗೂ ಚಿಪ್ ಮಾಹಿತಿಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : Jio vs Airtel 899 ರೂ.ಗಳ ರೀಚಾರ್ಜ್‌ ಪ್ಲಾನ್: ಯಾವ ಪ್ಲಾನ್‌ನಲ್ಲಿ ಹೆಚ್ಚು ಪ್ರಯೋಜನ ಸಿಗುತ್ತೆ?

iPhone 18 Pro ಬಿಡುಗಡೆ ದಿನಾಂಕ

ಆಪಲ್ ತನ್ನ Surprise and Shine ವಿಶೇಷ ಕಾರ್ಯಕ್ರಮವನ್ನು ಸೆಪ್ಟೆಂಬರ್ 9, 2026 ರಂದು ಆಯೋಜಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಕಾರ್ಯಕ್ರಮವು ಭಾರತದಲ್ಲಿ ರಾತ್ರಿ ಸುಮಾರು 10:30ಕ್ಕೆ ಆರಂಭವಾಗಬಹುದು. ಈ ಸಮಾರಂಭದಲ್ಲಿ ಐಫೋನ್‌ 18 ಪ್ರೊ ಜೊತೆಗೆ ಐಫೋನ್‌ 18 ಪ್ರೊ ಮ್ಯಾಕ್ಸ್‌ ಮತ್ತು ಆಪಲ್‌ನ ಬಹುನಿರೀಕ್ಷಿತ ಫೋಲ್ಡಬಲ್ ಐಫೋನ್ ಕೂಡ ಪರಿಚಯವಾಗುವ ಸಾಧ್ಯತೆ ಇದೆ. ಇವುಗಳ ಜೊತೆಗೆ ಇನ್ನೂ ಕೆಲವು ಹೊಸ ಸಾಧನಗಳನ್ನು ಆಪಲ್ ಘೋಷಿಸಬಹುದು ಎನ್ನಲಾಗಿದೆ.

Apple iPhone 18 Pro
iPhone 18 Pro

ಐಫೋನ್‌ 18 ಪ್ರೊ ಪ್ರೀ-ಆರ್ಡರ್ ಮಾಹಿತಿ

ಐಫೋನ್‌ 18 ಪ್ರೊ ಪ್ರೀ-ಆರ್ಡರ್‌ಗಳ ಅಧಿಕೃತ ದಿನಾಂಕವನ್ನು ಆಪಲ್ ಇನ್ನೂ ಖಚಿತಪಡಿಸಿಲ್ಲ. ಆದರೆ ಲೀಕ್‌ ಮಾಹಿತಿಗಳ ಪ್ರಕಾರ ಸೆಪ್ಟೆಂಬರ್ 12 ರಿಂದ ಪ್ರೀ-ಆರ್ಡರ್‌ಗಳು ಆರಂಭವಾಗಬಹುದು. ನಂತರ ಸೆಪ್ಟೆಂಬರ್ 18 ರ ಆಸುಪಾಸಿನಲ್ಲಿ ಹೊಸ ಐಫೋನ್‌ಗಳು ಮಾರಾಟಕ್ಕೆ ಬರಬಹುದು ಎಂದು ಹೇಳಲಾಗುತ್ತಿದೆ. ಈ ಬಾರಿ ಆಪಲ್ ತನ್ನ ಬಿಡುಗಡೆ ಟೈಮ್‌ಲೈನ್‌ನಲ್ಲಿ ಬದಲಾವಣೆ ಮಾಡಲಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಐಫೋನ್‌ 18 ಪ್ರೊ ಸರಣಿ ಮತ್ತು ಫೋಲ್ಡಬಲ್ ಐಫೋನ್‌ಗಳು ಸೆಪ್ಟೆಂಬರ್‌ನಲ್ಲೇ ಬಿಡುಗಡೆಯಾಗಲಿದ್ದು, ಸ್ಟ್ಯಾಂಡರ್ಡ್ ಐಫೋನ್‌ 18 ಮತ್ತು ಐಫೋನ್‌ 18e ಮಾದರಿಗಳ ಬಿಡುಗಡೆ 2027ಕ್ಕೆ ಮುಂದೂಡಬಹುದು ಎನ್ನಲಾಗಿದೆ.

ಐಫೋನ್‌ 18 ಪ್ರೊ ಬ್ಯಾಟರಿ ಹಾಗೂ ಚಿಪ್‌ ಮಾಹಿತಿ

ಐಫೋನ್‌ 18 ಪ್ರೊ ಬ್ಯಾಟರಿ ಸಾಮರ್ಥ್ಯದಲ್ಲಿ ಹೆಚ್ಚಿನ ಬದಲಾವಣೆ ನಿರೀಕ್ಷಿಸಲಾಗುತ್ತಿಲ್ಲ. ಸದ್ಯದ ಲೀಕ್‌ ಪ್ರಕಾರ ಈ ಫೋನ್‌ನಲ್ಲಿ ಸುಮಾರು 4,056 mAh ಬ್ಯಾಟರಿ ಇರಬಹುದು. ಕಳೆದ ವರ್ಷದ ಮಾಡೆಲ್‌ಗೆ ಹೋಲಿಸಿದರೆ ಇದು ದೊಡ್ಡ ಹೆಚ್ಚಳವಲ್ಲ. ಆದರೆ ಬ್ಯಾಟರಿ ಬ್ಯಾಕಪ್ ವಿಚಾರದಲ್ಲಿ ಐಫೋನ್‌ 18 ಪ್ರೊ ಉತ್ತಮ ಸುಧಾರಣೆ ನೀಡಬಹುದು ಎಂದು ನಿರೀಕ್ಷಿಸಲಾಗಿದೆ. ಐಫೋನ್‌ 18 ಪ್ರೊ ಪ್ರಮುಖ ಅಪ್‌ಗ್ರೇಡ್‌ಗಳಲ್ಲಿ ಹೊಸ A20 Pro ಚಿಪ್ ಒಂದಾಗಿರಲಿದೆ. ಲೀಕ್‌ ಮಾಹಿತಿ ಪ್ರಕಾರ, ಇದು TSMC ಯ 2nm ಪ್ರೊಸೆಸಿಂಗ್ ತಂತ್ರಜ್ಞಾನ ಆಧರಿಸಿದ ಆಪಲ್‌ನ ಮೊದಲ ಚಿಪ್ ಆಗಿರಬಹುದು.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile