Vivo T5 vs Realme P4s: ಈ ಎರಡು ಫೋನ್‌ಗಳ ಪ್ರಮುಖ ಭಿನ್ನತೆಗಳೇನು? ಖರೀದಿಗೆ ಯಾವ ಮೊಬೈಲ್‌ ಬೆಸ್ಟ್‌?

Vivo T5 vs Realme P4s: ಈ ಎರಡು ಫೋನ್‌ಗಳ ಪ್ರಮುಖ ಭಿನ್ನತೆಗಳೇನು? ಖರೀದಿಗೆ ಯಾವ ಮೊಬೈಲ್‌ ಬೆಸ್ಟ್‌?

ವಿವೋ ಸಂಸ್ಥೆಯು ಇತ್ತೀಚಿಗೆ ಮೀಡ್‌ರೇಂಜ್‌ ಬೆಲೆಯ ವಿಭಾಗದಲ್ಲಿ ಹೊಸದಾಗಿ Vivo T5 ಸ್ಮಾರ್ಟ್‌ಫೋನ್‌ ಅನ್ನು ಪರಿಚಯಿಸಿದೆ. ಇದು 7,050mAh ಸಾಮರ್ಥ್ಯದ ದೊಡ್ಡ ಬ್ಯಾಟರಿ, ಹೊಸ ಮೀಡಿಯಾಟೆಕ್‌ ಚಿಪ್‌ಸೆಟ್, AMOLED ಡಿಸ್ಪ್ಲೇ ಸೇರಿದಂತೆ ಹಲವು ಗಮನಾರ್ಹ ಆಯ್ಕೆಗಳನ್ನು ಹೊಂದಿದೆ. ಇನ್ನು ಇದೇ ವಿಭಾಗದಲ್ಲಿ ಈಗಾಗಲೇ ಹಲವು ಪ್ರಬಲ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಆ ಪೈಕಿ Realme P4s ಫೋನ್‌ ಕೂಡ ಗಮನ ಸೆಳೆಯುವಂತಿದೆ. ರಿಯಲ್‌ಮಿಯ ಈ ಫೋನ್‌ ಸಹ 8,000mAh ಬ್ಯಾಟರಿ, ಅತ್ಯುತ್ತಕ ಡಿಸ್‌ಪ್ಲೇ ಗಳಂತಹ ಆಕರ್ಷಕ ಫೀಚರ್ಸ್‌ಗಳ ಮೂಲಕ ಸದ್ದು ಮಾಡಿದೆ. ಹಾಗಾದರೇ ವಿವೋ T5 ಹಾಗೂ ರಿಯಲ್‌ಮಿ P4s ನಡುವಿನ ಪ್ರಮುಖ ವಿಶೇಷಣಗಳು ಹಾಗೂ ಫೀಚರ್ಸ್‌ಗಳ ವ್ಯತ್ಯಾಸ ನೋಡೋಣ.

Digit.in Survey
✅ Thank you for completing the survey!

Also Read : Jio ಕಂಪನಿಯ 859 ರೂ.ಗಳ ಪ್ಲಾನ್‌ನಲ್ಲಿ ಅಧಿಕ ಡೇಟಾ ಜೊತೆಗೆ ಜಿಯೋ ಹಾಟ್‌ಸ್ಟಾರ್‌ ಸೌಲಭ್ಯ

Vivo T5 vs Realme P4s: ಡಿಸ್‌ಪ್ಲೇ ವ್ಯತ್ಯಾಸವೇನು

ವಿವೋ T5 ಫೋನ್‌ 6.83 ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದೆ. ಇದು 2800×1260 ಪಿಕ್ಸೆಲ್ ರೆಸಲ್ಯೂಶನ್, ಉತ್ತಮ ರಿಫ್ರೆಶ್ ರೇಟ್ ಮತ್ತು 2,000 ನಿಟ್ಸ್ ಹೈ-ಬ್ರೈಟ್‌ನೆಸ್ ಮೋಡ್‌ ಹೊಂದಿದೆ. ಇನ್ನೊಂದೆಡೆ, ರಿಯಲ್‌ಮಿ P4s ಫೋನ್‌ 6.78 ಇಂಚಿನ Samsung M14 AMOLED ಡಿಸ್ಪ್ಲೇಯನ್ನು ಹೊಂದಿದೆ. ಇದು ಕೂಡ 144Hz ರಿಫ್ರೆಶ್ ರೇಟ್ ನೀಡುತ್ತದೆ. ಇದು 1272 × 2772 ಪಿಕ್ಸೆಲ್ ರೆಸಲ್ಯೂಶನ್ ಜೊತೆಗೆ 1,400 nits ಬ್ರೈಟ್‌ನೆಸ್ ಪಡೆದುಕೊಂಡಿದೆ.

Vivo T5

ಪ್ರೊಸೆಸರ್ ಮತ್ತು ಕಾರ್ಯಕ್ಷಮತೆ ಹೇಗೆ?

ವಿವೋ T5 ಫೋನ್‌ ಮೀಡಿಯಾಟೆಕ್ ಡೈಮೆನ್ಸಿಟಿ 7500 ಚಿಪ್‌ಸೆಟ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ. ಹಾಗೆಯೇ ಈ ಫೋನ್‌ ಭೀನ್ನ ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದೆ. ಇನ್ನು ರಿಯಲ್‌ಮಿ P4s ಮೊಬೈಲ್‌ ಮೀಡಿಯಾಟೆಕ್ ಡೈಮೆನ್ಸಿಟಿ 7400 ಅಲ್ಟ್ರಾ ಚಿಪ್‌ಸೆಟ್ ಪ್ರೊಸೆಸರ್‌ ಸೌಲಭ್ಯ ಪಡೆದುಕೊಂಡಿದೆ. ದೈನಂದಿನ ಬಳಕೆ, ಮಲ್ಟಿಟಾಸ್ಕಿಂಗ್ ಅಥವಾ ಗೇಮಿಂಗ್‌ನಲ್ಲಿ ಎರಡೂ ಫೋನ್‌ಗಳು ಉತ್ತಮ ಕಾರ್ಯಕ್ಷಮತೆ ನೀಡುವ ನಿರೀಕ್ಷೆಯಿದೆ.

ಬ್ಯಾಟರಿ ಪವರ್‌ ಮತ್ತು ಚಾರ್ಜಿಂಗ್ ಸಪೋರ್ಟ್‌

ಬ್ಯಾಟರಿ ವಿಭಾಗದಲ್ಲಿ ವಿವೋ T5 ಮೊಬೈಲ್‌ 7,050mAh ಬ್ಯಾಟರಿ ಬ್ಯಾಕ್‌ಅಪ್‌ ಬ್ಯಾಕ್‌ಅಪ್‌ ಸಪೋರ್ಟ್‌ನೊಂದಿಗೆ ಬರುತ್ತದೆ. ಅಲ್ಲದೇ 44W ಫಾಸ್ಟ್ ಚಾರ್ಜಿಂಗ್ ಸಪೋರ್ಟ್‌ ಮಾಡುತ್ತದೆ. ಇನ್ನು ರಿಯಲ್‌ಮಿ P4s ಮೊಬೈಲ್‌ 8,000mAh ಬ್ಯಾಟರಿ ಸೌಲಭ್ಯವನ್ನು ಹೊಂದಿದೆ. ಇದರ ಜೊತೆಗೆ 80W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ. ಈ ಎರಡು ಫೋನ್‌ಗಳ ಬ್ಯಾಟರಿಗಳು ಅಧಿಕ ಬ್ಯಾಟರಿ ಬ್ಯಾಕ್‌ಅಪ್‌ ಬಯಸುವ ಗ್ರಾಹಕರ ಗಮನ ಸೆಳೆಯುವಂತಿವೆ.

ಕ್ಯಾಮೆರಾ ಸೆನ್ಸಾರ್‌ ವ್ಯತ್ಯಾಸ

ಕ್ಯಾಮೆರಾ ವಿಭಾಗದಲ್ಲಿ ವಿವೋ T5 ಮೊಬೈಲ್‌ ಹಿಂಭಾಗದಲ್ಲಿ 50MP ಪ್ರಾಥಮಿಕ ಕ್ಯಾಮೆರಾ + 8MP ಅಲ್ಟ್ರಾ ವೈಡ್ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವೀಡಿಯೊ ಕಾಲ್‌ಗಳಿಗಾಗಿ ಮುಂಭಾಗದಲ್ಲಿ 32MP ಕ್ಯಾಮೆರಾ ನೀಡಲಾಗಿದೆ. ರಿಯಲ್‌ಮಿ P4s ಫೋನ್‌ ಸಹ 50MP ಪ್ರಾಥಮಿಕ ಕ್ಯಾಮೆರಾ + 8MP ಅಲ್ಟ್ರಾ ವೈಡ್ ಕ್ಯಾಮೆರಾ ಹೊಂದಿದೆ. ಆದರೆ ಮುಂಭಾಗದಲ್ಲಿ 16MP ಸೆಲ್ಫಿ ಕ್ಯಾಮೆರಾ ಲಭ್ಯವಿದೆ.

ಕೊನೆಯ ಮಾತು

ಒಟ್ಟಾರೇ, ವಿವೋ T5 ಮತ್ತು ರಿಯಲ್‌ಮಿ P4s ಈ ಎರಡೂ ಫೋನ್‌ಗಳು ತಮ್ಮದೇ ಆದ ಆಕರ್ಷಕ ಫೀಚರ್ಸ್‌ಗಳ ಮೂಲಕ ಗಮನ ಸೆಳೆದಿವೆ. ಅದಾಗ್ಯೂ, ವಿವೋ T5 AMOLED ಡಿಸ್‌ಪ್ಲೇ, ಸೆಲ್ಫಿ ಕ್ಯಾಮೆರಾ, 7,050mAh ಬ್ಯಾಟರಿ ಮತ್ತು ಅಲ್ಟ್ರಾ-ವೈಡ್ ಕ್ಯಾಮೆರಾದಂತಹ ಆಯ್ಕೆಗಳೊಂದಿಗೆ ಗಮನ ಸೆಳೆಯುತ್ತದೆ. ಮತ್ತೊಂದೆಡೆ, ರಿಯಲ್‌ಮಿ P4s ಫೋನ್‌ 8,000mAh ಬಿಗ್ ಬ್ಯಾಟರಿ, 80W ವೇಗದ ಚಾರ್ಜಿಂಗ್ ಮೂಲಕ ತನ್ನದೇ ಆದ ಮುನ್ನಡೆ ಹೊಂದಿದೆ. ಸೆಲ್ಫಿ ಕ್ಯಾಮೆರಾ, ಡಿಸ್ಪ್ಲೇ ಮತ್ತು ಅಲ್ಟ್ರಾ-ವೈಡ್ ಕ್ಯಾಮೆರಾ ಮುಖ್ಯವಾಗಿದ್ದರೆ ವಿವೋ T5 ಪರಿಗಣಿಸಬಹುದು. ಬಿಗ್ ಬ್ಯಾಟರಿ, ವೇಗದ ಚಾರ್ಜಿಂಗ್‌ಗೆ ಆದ್ಯತೆ ನೀಡುವವರಿಗೆ ರಿಯಲ್‌ಮಿ P4s ಹೆಚ್ಚು ಸೂಕ್ತ ಆಯ್ಕೆಯಾಗಬಹುದು.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile