Motorola Edge 70 Pro 5G ಮತ್ತು OnePlus Nord 6: ಖರೀದಿಗೆ ಯಾವುದು ಅತ್ಯುತ್ತಮ?

Motorola Edge 70 Pro 5G ಮತ್ತು OnePlus Nord 6: ಖರೀದಿಗೆ ಯಾವುದು ಅತ್ಯುತ್ತಮ?

ಜನಪ್ರಿಯ ಒನ್‌ಪ್ಲಸ್‌ ಕಂಪನಿಯು ಇತ್ತೀಚಿಗಷ್ಟೆ ಮಾರುಕಟ್ಟೆಗೆ ಹೊಸದಾಗಿ OnePlus Nord 6 ಮೊಬೈಲ್‌ ಬಿಡುಗಡೆ ಮಾಡಿದ್ದು, ಈ ಫೋನ್ ಗ್ರಾಹಕರ ಗಮನ ಸೆಳೆಯುತ್ತಿದೆ. ಹಾಗೆಯೇ ಮೊಟೊರೊಲಾ ಕಂಪನಿಯು ನೂತನವಾಗಿ ಲಾಂಚ್ ಮಾಡಿರುವ Motorola Edge 70 Pro 5G ಮೊಬೈಲ್‌ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಈ ಎರಡು ಮೀಡ್‌ರೇಂಜ್‌ ಸ್ಮಾರ್ಟ್‌ಫೋನ್‌ಗಳು ಆಕರ್ಷಕ ಫೀಚರ್ಸ್‌ ಒಳಗೊಂಡಿದ್ದು, ಉತ್ತಮ ಕಾರ್ಯವೈಖರಿ ಮತ್ತು ಅತ್ಯುತ್ತಮ ಡಿಸೈನ್‌ ಮೂಲಕ ಹೆಚ್ಚಿನ ಗಮನ ಸೆಳೆಯುತ್ತಿವೆ. ಅದಾಗ್ಯೂ, ಈ ಎರಡು ಸ್ಮಾರ್ಟ್‌ಫೋನ್‌ಗಳ ನಡುವೆ ಕೆಲವು ಭಿನ್ನತೆಗಳು ಇವೆ. ಹಾಗಾದರೆ ಒನ್‌ಪ್ಲಸ್‌ ನಾರ್ಡ್‌ 6 vs ಮೊಟೊರೊಲಾ ಎಡ್ಜ್ 70 ಪ್ರೊ 5G ಇವೆರಡರಲ್ಲಿ ಖರೀದಿಗೆ ಯಾವ ಫೋನ್‌ ಉತ್ತಮ? ಫೀಚರ್ಸ್‌ ಹೇಗಿವೆ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ನಾಳೆ ಹೊಸ ಲುಕ್‌ನಲ್ಲಿ ಎಂಟ್ರಿ ಕೊಡಲಿದೆ iQOO Neo 10 ಸ್ಮಾರ್ಟ್‌ಫೋನ್‌! ಇಲ್ಲಿದೆ ಮಾಹಿತಿ

ಡಿಸ್‌ಪ್ಲೇ ಮತ್ತು ಡಿಸೈನ್‌ ಮಾಹಿತಿ

OnePlus Nord 6 ಮತ್ತು Motorola Edge 70 Pro 5G ಫೋನ್‌ಗಳು ಡಿಸ್‌ಪ್ಲೇ ನೋಡುವುದಾರೆ ಒನ್‌ಪ್ಲಸ್‌ ನಾರ್ಡ್‌ 6 ಫೋನ್‌ 6.7 ಇಂಚಿನ AMOLED ಡಿಸ್‌ಪ್ಲೇ ಪಡೆದಿದೆ. ಹಾಗೆಯೇ 165 Hz ರಿಫ್ರೆಶ್ ರೇಟ್‌ ಜೊತೆಗೆ 1272 x 2772 ಪಿಕ್ಸಲ್‌ ರೆಸಲ್ಯೂಶನ್‌ ಹೊಂದಿದೆ. ಅದೇ ರೀತಿ ಮೊಟೊರೊಲಾ ಎಡ್ಜ್ 70 ಪ್ರೊ 5G ಫೋನ್ 6.8 ಇಂಚಿನ ಎಕ್ಸ್ಟ್ರಿಮ್‌ AMOLED ಡಿಸ್‌ಪ್ಲೇ ಹೊಂದಿದೆ. 144 Hz ರಿಫ್ರೆಶ್ ರೇಟ್‌ ಜೊತೆಗೆ 1272 x 2772 ಪಿಕ್ಸಲ್‌ ರೆಸಲ್ಯೂಶನ್‌ ಒಳಗೊಂಡಿದೆ.

OnePlus Nord 6

ಪ್ರೊಸೆಸರ್‌ ಪವರ್‌ ಹೇಗಿದೆ

ಒನ್‌ಪ್ಲಸ್‌ ನಾರ್ಡ್‌ 6 ಮೊಬೈಲ್‌ ಸ್ನಾಪ್‌ಡ್ರಾಗನ್ 8s ಜನ್ 4 ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯ ಹೊಂದಿದೆ. ಇನ್ನು ಮೊಟೊರೊಲಾ ಎಡ್ಜ್ 70 ಪ್ರೊ 5G ಮೀಡಿಯಾ ಟೆಕ್ ಡೈಮೆನ್ಸಿಟಿ 8500 ಎಕ್ಸ್‌ಟ್ರೀಮ್ ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡುತ್ತದೆ. ಇನ್ನು ಒನ್‌ಪ್ಲಸ್‌ ನಾರ್ಡ್‌ 6 ಫೋನ್‌ 8GB RAM ಸ್ಟೋರೇಜ್‌ ಹಾಗೂ ಮೊಟೊರೊಲಾ ಎಡ್ಜ್ 70 ಪ್ರೊ 5G ಮೊಬೈಲ್‌ 8 GB / 12 GB RAM ವೇರಿಯಂಟ್‌ ಆಯ್ಕೆಗಳನ್ನು ಫೋನ್‌ಗಳು ಪಡೆದುಕೊಂಡಿವೆ.

ಕ್ಯಾಮೆರಾ ಸೆನ್ಸಾರ್‌ ಯಾವುದು

ಒನ್‌ಪ್ಲಸ್‌ ನಾರ್ಡ್‌ 6 ಮೊಬೈಲ್‌ ಹಿಂಭಾಗದಲ್ಲಿ 50MP + 8MP ಕ್ಯಾಮೆರಾ ಸೆನ್ಸಾರ್‌ ರಚನೆ ಪಡೆದಿದೆ. ಹಾಗೆಯೇ ಮುಂಭಾಗದಲ್ಲಿ 32MP ಸೆನ್ಸಾರ್‌ ಕ್ಯಾಮೆರಾ ಪಡೆದುಕೊಂಡಿದೆ. ಇನ್ನು ಮೊಟೊರೊಲಾ ಎಡ್ಜ್ 70 ಪ್ರೊ 5G ಫೋನ್‌ ಹಿಂಬದಿಯಲ್ಲಿ 50MP + 50MP ಕ್ಯಾಮೆರಾ ಸೆನ್ಸಾರ್‌ ಸೆಟ್‌ಅಪ್‌ ಒಳಗೊಂಡಿದೆ. ಹಾಗೆಯೇ ಮುಂಭಾಗದಲ್ಲಿ 50MP ಸೆನ್ಸಾರ್‌ ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಬ್ಯಾಕ್‌ಅಪ್‌ ಮಾಹಿತಿ

ಒನ್‌ಪ್ಲಸ್‌ ನಾರ್ಡ್‌ 6 ಫೋನ್‌ 9,000mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದುಕೊಂಡಿದೆ. ಇದರೊಂದಿಗೆ 80W ವೈರ್ಡ್ ಚಾರ್ಜಿಂಗ್ ಜೊತೆಗೆ ರಿವರ್ಸ್‌ ಚಾರ್ಜಿಂಗ್ ಸಪೋರ್ಟ್‌ ಸಹ ಪಡೆದುಕೊಂಡಿದೆ. ಇನ್ನು ಮೊಟೊರೊಲಾ ಎಡ್ಜ್ 70 ಪ್ರೊ 5G ಮೊಬೈಲ್‌ 6,500mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದುಕೊಂಡಿದೆ. ಇದರೊಂದಿಗೆ 90W ವೈರ್ಡ್ ಚಾರ್ಜಿಂಗ್ ಜೊತೆಗೆ ರಿವರ್ಸ್‌ ಚಾರ್ಜಿಂಗ್ ಸಪೋರ್ಟ್‌ ಸಹ ಒಳಗೊಂಡಿದೆ.

ಕೊನೆಯ ಮಾತು

ಒನ್‌ಪ್ಲಸ್‌ ನಾರ್ಡ್‌ 6 ಹಾಗೂ ಮೊಟೊರೊಲಾ ಎಡ್ಜ್ 70 ಪ್ರೊ 5G ಈ ಎರಡು ಮೊಬೈಲ್‌ಗಳು ಆಕರ್ಷಕ ಫೀಚರ್ಸ್‌ ಮೂಲಕ ಟ್ರೆಂಡ್‌ನಲ್ಲಿ ಕಾಣಿಸಿಕೊಂಡಿವೆ. ಅದಾಗ್ಯೂ, ಒನ್‌ಪ್ಲಸ್‌ ನಾರ್ಡ್‌ 6 ಫೋನ್‌ ಬಿಗ್ ಬ್ಯಾಟರಿ ಬ್ಯಾಕ್‌ಅಪ್‌, ಅತ್ಯುತ್ತಮ ಗೇಮಿಂಗ್ ಕಾರ್ಯವೈಖರಿ ಹಾಗೂ ಉತ್ತಮ ಕ್ಯಾಮೆರಾ ಸೆಟ್‌ಅಪ್‌ ಮೂಲಕ ಹೆಚ್ಚಿನ ಆಕರ್ಷಣೆ ಮಾಡುತ್ತದೆ. ಹಾಗೆಯೇ ಮೊಟೊರೊಲಾ ಎಡ್ಜ್ 70 ಪ್ರೊ 5G ಫೋನ್‌ ಸಹ ಸ್ಲಿಮ್‌ ಡಿಸೈನ್‌, ಅತ್ಯುತ್ತಮ ಡಿಸ್‌ಪ್ಲೇ ಹಾಗೂ ಉತ್ತಮ ಕಾರ್ಯವೈಖರಿಯ ಫೀಚರ್ಸ್‌ ಪಡೆದಿದೆ. ಮೊಟೊದ ಬ್ಯಾಟರಿ ನಾರ್ಡ್‌ 6 ಗಿಂತ ಕಡಿಮೆ ಆಗಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile