iQOO Z11 vs OnePlus Nord CE6: ಮೀಡ್‌ರೇಂಜ್‌ ಬೆಲೆಯಲ್ಲಿ ಯಾವ ಫೋನ್‌ ಬೆಸ್ಟ್‌?

iQOO Z11 vs OnePlus Nord CE6: ಮೀಡ್‌ರೇಂಜ್‌ ಬೆಲೆಯಲ್ಲಿ ಯಾವ ಫೋನ್‌ ಬೆಸ್ಟ್‌?

ಮೀಡ್‌ರೇಂಜ್‌ ಬೆಲೆಯ ವಿಭಾಗದಲ್ಲಿ ಐಕ್ಯೂ ತನ್ನ ಹೊಸ iQOO Z11 ಸ್ಮಾರ್ಟ್‌ಫೋನ್‌ ಅನ್ನು ಪರಿಚಯಿಸಿದೆ. ಇದು 7,050mAh ಸಾಮರ್ಥ್ಯದ ದೊಡ್ಡ ಬ್ಯಾಟರಿ, ಹೊಸ ಮೀಡಿಯಾಟೆಕ್‌ ಚಿಪ್‌ಸೆಟ್, 3D ಕರ್ವ್ಡ್ AMOLED ಡಿಸ್ಪ್ಲೇ ಸೇರಿದಂತೆ ಹಲವು ಗಮನಾರ್ಹ ಆಯ್ಕೆಗಳನ್ನು ಹೊಂದಿದೆ. ಈ ವಿಭಾಗದಲ್ಲಿ ಈಗಾಗಲೇ ಹಲವು ಪ್ರಬಲ ಸ್ಮಾರ್ಟ್‌ಫೋನ್‌ಗಳು ಲಭ್ಯವಿದ್ದು ಆ ಪೈಕಿ OnePlus Nord CE6 ಕೂಡ ಪ್ರಮುಖ ಸ್ಪರ್ಧಿಯಾಗಿದೆ. ನಾರ್ಡ್‌ CE6 ಫೋನ್‌ ಸಹ ಆಕರ್ಷಕ ಫೀಚರ್ಸ್‌ಗಳ ಮೂಲಕ ಸದ್ದು ಮಾಡಿದೆ. ಹಾಗಾದರೇ ಐಕ್ಯೂ Z11 ಮತ್ತು ಒನ್‌ಪ್ಲಸ್‌ ನಾರ್ಡ್‌ CE6 ನಡುವಿನ ಪ್ರಮುಖ ವಿಶೇಷಣಗಳು ಹಾಗೂ ಫೀಚರ್ಸ್‌ಗಳ ವ್ಯತ್ಯಾಸ ನೋಡೋಣ.

Digit.in Survey
✅ Thank you for completing the survey!

Also Read : ಪ್ರತಿದಿನ ಅಧಿಕ Data ನೀಡುವ ಅತ್ಯುತ್ತಮ ರೀಚಾರ್ಜ್‌ ಯೋಜನೆಗಳ ಮಾಹಿತಿ ಇಲ್ಲಿದೆ

iQOO Z11 vs OnePlus Nord CE6: ಡಿಸ್‌ಪ್ಲೇ ಭಿನ್ನತೆ

ಐಕ್ಯೂ Z11 ಫೋನ್‌ 6.83 ಇಂಚಿನ 1.5K AMOLED ಡಿಸ್ಪ್ಲೇಯನ್ನು ಹೊಂದಿದೆ. ಇದು 2800×1260 ಪಿಕ್ಸೆಲ್ ರೆಸಲ್ಯೂಶನ್, 144Hz ರಿಫ್ರೆಶ್ ರೇಟ್ ಮತ್ತು 2,000 ನಿಟ್ಸ್ ಹೈ-ಬ್ರೈಟ್‌ನೆಸ್ ಮೋಡ್‌ ಹೊಂದಿದೆ. ಇನ್ನೊಂದೆಡೆ, ಒನ್‌ಪ್ಲಸ್‌ ನಾರ್ಡ್‌ CE6 ಫೋನ್‌ 6.78 ಇಂಚಿನ 1.5K AMOLED ಫ್ಲಾಟ್ ಡಿಸ್ಪ್ಲೇಯನ್ನು ಹೊಂದಿದೆ. ಇದು ಕೂಡ 144Hz ರಿಫ್ರೆಶ್ ರೇಟ್ ನೀಡುತ್ತದೆ. ಇದರ ಗರಿಷ್ಠ ಬ್ರೈಟ್‌ನೆಸ್ 3,600 ನಿಟ್ಸ್ ಆಗಿದ್ದು, ಹೈ-ಬ್ರೈಟ್‌ನೆಸ್ ಮೋಡ್‌ನಲ್ಲಿ 1,800 ನಿಟ್ಸ್‌ವರೆಗೆ ಬ್ರೈಟ್‌ನೆಸ್ ನೀಡುತ್ತದೆ.

iQOO Z11 vs OnePlus Nord CE6 Compared Display Camera Battery and More

ಪ್ರೊಸೆಸರ್ ಮತ್ತು ಕಾರ್ಯಕ್ಷಮತೆ ಹೇಗೆ?

ಐಕ್ಯೂ Z11 ಫೋನ್‌ ಹೊಸ MediaTek Dimensity 7500 Turbo ಚಿಪ್‌ಸೆಟ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ. ಭಾರತದಲ್ಲಿ ಈ ಚಿಪ್‌ಸೆಟ್‌ನೊಂದಿಗೆ ಬಿಡುಗಡೆಯಾದ ಮೊದಲ ಸ್ಮಾರ್ಟ್‌ಫೋನ್ ಇದಾಗಿದೆ. ಒನ್‌ಪ್ಲಸ್‌ ನಾರ್ಡ್‌ CE6 ನಲ್ಲಿ Qualcomm Snapdragon 7s Gen 4 ಚಿಪ್‌ಸೆಟ್ ಪ್ರೊಸೆಸರ್‌ ಸೌಲಭ್ಯ ಪಡೆದುಕೊಂಡಿದೆ. ದೈನಂದಿನ ಬಳಕೆ, ಮಲ್ಟಿಟಾಸ್ಕಿಂಗ್ ಅಥವಾ ಗೇಮಿಂಗ್‌ನಲ್ಲಿ ಎರಡೂ ಫೋನ್‌ಗಳು ಉತ್ತಮ ಕಾರ್ಯಕ್ಷಮತೆ ನೀಡುವ ನಿರೀಕ್ಷೆಯಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್ ವ್ಯವಸ್ಥೆ

ಬ್ಯಾಟರಿ ವಿಚಾರದಲ್ಲಿ ಐಕ್ಯೂ Z11 ಮೊಬೈಲ್‌ 7,050mAh ಬ್ಯಾಟರಿ ಬ್ಯಾಕ್‌ಅಪ್‌ ಪವರ್ನೊಂದಿಗೆ ಬರುತ್ತದೆ. ಅಲ್ಲದೇ 44W ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತದೆ. ಬಿಗ್ ಬ್ಯಾಟರಿಯ ಕಾರಣದಿಂದ ಸಾಮಾನ್ಯ ಬಳಕೆದಾರರು ಮಾತ್ರವಲ್ಲದೆ ಹೆಚ್ಚು ಸಮಯ ಫೋನ್ ಬಳಸುವವರಿಗೂ ಇದು ಅನುಕೂಲಕರವಾಗಿರಬಹುದು. ಒನ್‌ಪ್ಲಸ್‌ ನಾರ್ಡ್‌ CE6 ಮೊಬೈಲ್‌ 8,000mAh ಬ್ಯಾಟರಿ ಸೌಲಭ್ಯವನ್ನು ಹೊಂದಿದೆ. ಇದರ ಜೊತೆಗೆ 80W SuperVOOC ಫಾಸ್ಟ್ ಚಾರ್ಜಿಂಗ್ ನೀಡಲಾಗಿದೆ. 27W ರಿವರ್ಸ್ ಚಾರ್ಜಿಂಗ್ ಮತ್ತು ಬೈಪಾಸ್ ಚಾರ್ಜಿಂಗ್‌ಗೂ ಬೆಂಬಲವಿದೆ.

ಕ್ಯಾಮೆರಾ ಸೆನ್ಸಾರ್‌ ಕಥೆ ಏನು?

ಕ್ಯಾಮೆರಾ ವಿಭಾಗದಲ್ಲಿ ಐಕ್ಯೂ Z11 ಮೊಬೈಲ್‌ ಹಿಂಭಾಗದಲ್ಲಿ 50MP ಪ್ರಾಥಮಿಕ ಕ್ಯಾಮೆರಾ + 8MP ಅಲ್ಟ್ರಾ-ವೈಡ್ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವೀಡಿಯೊ ಕಾಲ್‌ಗಳಿಗಾಗಿ ಮುಂಭಾಗದಲ್ಲಿ 32MP ಕ್ಯಾಮೆರಾ ನೀಡಲಾಗಿದೆ. ಒನ್‌ಪ್ಲಸ್‌ ನಾರ್ಡ್‌ CE6 ಫೋನ್‌ ಕೂಡ 50MP ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ. ಆದರೆ ಎರಡನೇ ಕ್ಯಾಮೆರಾ 2MP ಸೆಕೆಂಡರಿ ಲೆನ್ಸ್ ಆಗಿದ್ದು, ಐಕ್ಯೂ Z11 ಫೋನಿನಂತೆ ಅಲ್ಟ್ರಾ-ವೈಡ್ ಕ್ಯಾಮೆರಾ ಇಲ್ಲ. ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾ ಲಭ್ಯವಿದೆ.

ಕೊನೆಯ ಮಾತು

ಒಟ್ಟಾರೇ, ಐಕ್ಯೂ Z11 ಮತ್ತು ಒನ್‌ಪ್ಲಸ್‌ ನಾರ್ಡ್‌ CE6 ಎರಡೂ ತಮ್ಮದೇ ಆದ ವಿಶೇಷತೆಗಳನ್ನು ಹೊಂದಿವೆ. ಐಕ್ಯೂ Z11 ದೊಡ್ಡ 3D ಕರ್ವ್ಡ್ AMOLED ಡಿಸ್ಪ್ಲೇ, 7,050mAh ಬ್ಯಾಟರಿ ಮತ್ತು ಅಲ್ಟ್ರಾ-ವೈಡ್ ಕ್ಯಾಮೆರಾದಂತಹ ಆಯ್ಕೆಗಳೊಂದಿಗೆ ಗಮನ ಸೆಳೆಯುತ್ತದೆ. ಮತ್ತೊಂದೆಡೆ, ಒನ್‌ಪ್ಲಸ್‌ ನಾರ್ಡ್‌ CE6 ಫೋನ್‌ 8,000mAh ಬಿಗ್ ಬ್ಯಾಟರಿ, 80W ವೇಗದ ಚಾರ್ಜಿಂಗ್ ಮೂಲಕ ತನ್ನದೇ ಆದ ಮುನ್ನಡೆ ಹೊಂದಿದೆ. ಕರ್ವ್ಡ್ ಡಿಸ್ಪ್ಲೇ ಮತ್ತು ಅಲ್ಟ್ರಾ-ವೈಡ್ ಕ್ಯಾಮೆರಾ ಮುಖ್ಯವಾಗಿದ್ದರೆ ಐಕ್ಯೂ Z11 ಪರಿಗಣಿಸಬಹುದು. ಬಿಗ್ ಬ್ಯಾಟರಿ, ವೇಗದ ಚಾರ್ಜಿಂಗ್‌ಗೆ ಆದ್ಯತೆ ನೀಡುವವರಿಗೆ ಒನ್‌ಪ್ಲಸ್‌ ನಾರ್ಡ್‌ CE6 ಹೆಚ್ಚು ಸೂಕ್ತ ಆಯ್ಕೆಯಾಗಬಹುದು.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile