iPhone Duo vs Samsung Galaxy Z Fold 8
ಆಪಲ್ ಸಂಸ್ಥೆಯು ಹೊಸದಾಗಿ ಬಿಡುಗಡೆ ಮಾಡಿರುವ iPhone Duo ಫೋಲ್ಡಬಲ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯ ಗಮನ ಸೆಳೆಯುತ್ತಿದೆ. ಇದು ಆಪಲ್‌ನ ಹೊಸ A20 Pro ಚಿಪ್‌ಸೆಟ್ ಪವರ್, MagSafe ವೈರ್‌ಲೆಸ್ ಚಾರ್ಜಿಂಗ್, ಅತ್ಯುತ್ತಮ ಕ್ಯಾಮೆರಾ ಸೇರಿದಂತೆ ಹಲವು ಗಮನಾರ್ಹ ಆಯ್ಕೆಗಳನ್ನು ಹೊಂದಿದೆ. ಇನ್ನು ಫೋಲ್ಡಬಲ್ ವಿಭಾಗದಲ್ಲಿ ಈಗಾಗಲೇ ಹಲವು ಪ್ರಬಲ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಆ ಪೈಕಿ Samsung Galaxy Z Fold 8 ಫೋನ್ ಕೂಡ ಗಮನ ಸೆಳೆಯುವಂತಿದೆ. ಸ್ಯಾಮ್‌ಸಂಗ್‌ನ ಈ ಫೋನ್ ಸ್ನಾಪ್‌ಡ್ರಾಗನ್ 8 ಎಲೈಟ್ ಜನ್ 5, ಅತ್ಯುತ್ತಕ ಡಿಸ್‌ಪ್ಲೇ ಗಳಂತಹ ಆಕರ್ಷಕ ಫೀಚರ್ಸ್‌ಗಳ ಮೂಲಕ ಸದ್ದು ಮಾಡಿದೆ. ಹಾಗಾದರೇ ಐಫೋನ್ ಡ್ಯುಯೊ ಹಾಗೂ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 8 ನಡುವಿನ ಪ್ರಮುಖ ವಿಶೇಷಣಗಳು ಹಾಗೂ ಫೀಚರ್ಸ್‌ಗಳ ವ್ಯತ್ಯಾಸ ನೋಡೋಣ.
Also Read : Apple iPhone 18 Pro ಸರಣಿ ಲಾಂಚ್: ಹೊಸ ಐಫೋನ್‌ಗಳ ಬೆಲೆ ಮತ್ತು ಫೀಚರ್ಸ್ ಮಾಹಿತಿ ಇಲ್ಲಿದೆ
ಐಫೋನ್ ಡ್ಯುಯೊ ಈ ಫೋಲ್ಡೆಬಲ್ ಫೋನ್ Super Retina XDR ಡಿಸ್‌ಪ್ಲೇ 7.76 ಇಂಚಿನ ಗಾತ್ರದಲ್ಲಿ ಇದೆ. ಇದು 2713×1920 ಪಿಕ್ಸೆಲ್ ರೆಸಲ್ಯೂಶನ್ ಬೆಂಬಲ ಹೊಂದಿದೆ. ಹಾಗೆಯೇ ಇದರ ಕವರ್ ಡಿಸ್‌ಪ್ಲೇ 5.49 ಇಂಚಿನ ಗಾತ್ರದಲ್ಲಿ ಇದ್ದು, ಇದರ ಸ್ಕ್ರೀನ್ 1422 x 2088 ಪಿಕ್ಸೆಲ್ ರೆಸಲ್ಯೂಶನ್ ಸಪೋರ್ಟ್ ಪಡೆದಿದೆ. ಹಾಗೆಯೇ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 8 ಮೊಬೈಲ್ 7.6 ಇಂಚಿನ QXGA+ ಡೈನಾಮಿಕ್ AMOLED 2X ಡಿಸ್‌ಪ್ಲೇ ಅನ್ನು ಹೊಂದಿರುವ ಜೊತೆಗೆ ಈ ಸ್ಕ್ರೀನ್ 120Hz ರಿಫ್ರೆಶ್ ರೇಟ್ ಪಡೆದಿದೆ. ಹಾಗೆಯೇ ಇದರ ಕವರ್ ಸ್ಕ್ರೀನ್ 5.5 ಇಂಚಿನ WUXGA+ ಡೈನಾಮಿಕ್ AMOLED 2X ಡಿಸ್‌ಪ್ಲೇ ಒಳಗೊಂಡಿದೆ.
ಐಫೋನ್ ಡ್ಯುಯೊ ಫೋನ್ ಆಪಲ್‌ನ ಹೊಸ A20 Pro ಚಿಪ್‌ಸೆಟ್ ಪವರ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ. ಹಾಗೆಯೇ ಈ ಫೋನ್ ಭಿನ್ನ ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಒಳಗೊಂಡಿದೆ. ಇನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 8 ಮೊಬೈಲ್ ಸ್ನಾಪ್‌ಡ್ರಾಗನ್ 8 ಎಲೈಟ್ ಜನ್ 5 ಚಿಪ್‌ಸೆಟ್ ಪ್ರೊಸೆಸರ್ ಸೌಲಭ್ಯ ಪಡೆದುಕೊಂಡಿದೆ. ದೈನಂದಿನ ಬಳಕೆ, ಹೈ ಎಂಡ್ ಮಲ್ಟಿಟಾಸ್ಕಿಂಗ್ ಹಾಗೂ ಗೇಮಿಂಗ್‌ನಲ್ಲಿ ಎರಡೂ ಫೋನ್‌ಗಳು ಉತ್ತಮ ಕಾರ್ಯಕ್ಷಮತೆ ನೀಡುವ ಸಾಮರ್ಥ್ಯ ಪಡೆದಿವೆ.
ಬ್ಯಾಟರಿ ವಿಭಾಗದಲ್ಲಿ ಐಫೋನ್ ಡ್ಯುಯೊ ಮೊಬೈಲ್ 5800mAh ಬ್ಯಾಟರಿ ಬ್ಯಾಕ್‌ಅಪ್ ಬ್ಯಾಕ್‌ಅಪ್ ಸಪೋರ್ಟ್‌ನೊಂದಿಗೆ ಬರುತ್ತದೆ. ಇದು ಅತ್ಯುತ್ತಮ ಬ್ಯಾಟರಿ ಬ್ಯಾಕ್‌ಅಪ್ ಆಯ್ಕೆ ಎನ್ನಬಹುದಾಗಿದೆ. ಇನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 8 ಮೊಬೈಲ್ 4,800mAh ಡ್ಯುಯಲ್ ಬ್ಯಾಟರಿ ಸಪೋರ್ಟ್ ಜೊತೆಗೆ 45W ವೈರ್ಡ್ ಹಾಗೂ 20W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಒಳಗೊಂಡಿದೆ. ಈ ಎರಡು ಫೋನ್‌ಗಳ ಬ್ಯಾಟರಿಗಳು ಅಧಿಕ ಬ್ಯಾಟರಿ ಬ್ಯಾಕ್‌ಅಪ್ ಬಯಸುವ ಗ್ರಾಹಕರ ಗಮನ ಸೆಳೆಯುವಂತಿವೆ.
ಐಫೋನ್ ಡ್ಯುಯೊ ಮೊಬೈಲ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ರಚನೆ ಇದೆ. ಅವುಗಳು ಕ್ರಮವಾಗಿ 48MP ಮೇನ ಕ್ಯಾಮೆರಾ + 48MP ಅಲ್ಟ್ರಾ ವೈಡ್ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವೀಡಿಯೊ ಕಾಲ್‌ಗಳಿಗಾಗಿ ಮುಂಭಾಗದಲ್ಲಿ 12MP ಕ್ಯಾಮೆರಾ ನೀಡಲಾಗಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 8 ಫೋನ್ ಸಹ ಡ್ಯುಯಲ್ ಕ್ಯಾಮೆರಾ ರಚನೆ ಪಡೆದಿದೆ. ಇದರ ಪ್ರಾಥಮಿಕ ಕ್ಯಾಮೆರಾ 50MP ಸೆನ್ಸಾರ್ ಆಗಿದೆ. ಹಾಗೆಯೇ 50MP ಅಲ್ಟ್ರಾ ವೈಡ್ ಕ್ಯಾಮೆರಾ ಹೊಂದಿದೆ. ಆದರೆ ಮುಂಭಾಗದಲ್ಲಿ 10MP + 10MP ಸೆಲ್ಫಿ ಕ್ಯಾಮೆರಾ ಲಭ್ಯವಿದೆ.
ಒಟ್ಟಾರೇ, ಐಫೋನ್ ಡ್ಯುಯೊ ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 8 ಈ ಎರಡೂ ಫೋನ್‌ಗಳು ತಮ್ಮದೇ ಆದ ಆಕರ್ಷಕ ಫೀಚರ್ಸ್‌ಗಳ ಮೂಲಕ ಗಮನ ಸೆಳೆದಿವೆ. ಅದಾಗ್ಯೂ, ಐಫೋನ್ ಡ್ಯುಯೊ ಫೋನ್ Super Retina XDR ಡಿಸ್‌ಪ್ಲೇ, ಪವರ್‌ಫುಲ್ ಕ್ಯಾಮೆರಾ, ಬಿಗ್ ಬ್ಯಾಟರಿ ಮತ್ತು ವೇಗದ ಪ್ರೊಸೆಸರ್ ನಂತಹ ಆಯ್ಕೆಗಳೊಂದಿಗೆ ಗಮನ ಸೆಳೆಯುತ್ತದೆ. ಮತ್ತೊಂದೆಡೆ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 8 ಫೋನ್ ಸ್ನಾಪ್‌ಡ್ರಾಗನ್ ಪ್ರೊಸೆಸರ್, ಹೈ ಎಂಡ್ ಕ್ಯಾಮೆರಾಗಳಂತಹ ಆಯ್ಕೆಗಳ ಮೂಲಕ ತನ್ನದೇ ಆದ ಮುನ್ನಡೆ ಹೊಂದಿದೆ. ಅತ್ಯುತ್ತಮ ಕ್ಯಾಮೆರಾ, ಆಪಲ್‌ನ ಹೊಸ A20 ಪ್ರೊ ಚಿಪ್‌ಸೆಟ್‌ನ ಡಿವೈಸ್ ಬಳಕೆ ಮಾಡುವುದಾದರೆ ಐಫೋನ್ ಡ್ಯುಯೊ ಪರಿಗಣಿಸಬಹುದು. ವೇಗದ ಸ್ನಾಪ್‌ಡ್ರಾಗನ್ ಪ್ರೊಸೆಸರ್, ಬೆಸ್ಟ್ ಕ್ಯಾಮೆರಾ ಫೀಚರ್ಸ್‌ಗೆ ಆದ್ಯತೆ ನೀಡುವವರಿಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 8 ಹೆಚ್ಚು ಸೂಕ್ತ ಆಯ್ಕೆಯಾಗಬಹುದು.