Apple iPhone 18 Pro ಸರಣಿ ಲಾಂಚ್: ಹೊಸ ಐಫೋನ್‌ಗಳ ಬೆಲೆ ಮತ್ತು ಫೀಚರ್ಸ್ ಮಾಹಿತಿ ಇಲ್ಲಿದೆ
Apple Event 2026: ಆಪಲ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದ iPhone 18 Pro ಸರಣಿ ಇದೀಗ ಅಧಿಕೃತವಾಗಿ ಬಿಡುಗಡೆಯಾಗಿದೆ. ಆಪಲ್ ‘Surprise and Shine’ ಹೆಸರಿನಲ್ಲಿ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ನೂತನ ಐಫೋನ್ ಮಾಡೆಲ್‌ಗಳನ್ನು ಪರಿಚಯಿಸಿದೆ. ಈ ನೂತನ ಸರಣಿಯು iPhone 18 Pro ಹಾಗೂ iPhone 18 Pro Max ಎಂಬ ಎರಡು ಮಾಡೆಲ್‌ಗಳನ್ನು ಒಳಗೊಂಡಿದೆ. ಹೊಸ ಐಫೋನ್ 18 ಪ್ರೊ ಫೋನ್ ಡಿಸ್‌ಪ್ಲೇ, ಕ್ಯಾಮೆರಾ, ಎಐ ಸಿರಿ, ಬ್ಯಾಟರಿ ಹಾಗೂ ಪ್ರೊಸೆಸರ್ ಸೇರಿದಂತೆ ಹಲವು ವಿಭಾಗಗಳಲ್ಲಿ ಅಪ್‌ಗ್ರೇಡ್‌ಗಳನ್ನು ನೀಡಲಾಗಿದೆ. ವಿಭಿನ್ನ ಸ್ಟೋರೇಜ್ ವೇರಿಯಂಟ್‌ಗಳು ಹಾಗೂ ಆಕರ್ಷಕ ಬಣ್ಣಗಳ ಆಯ್ಕೆಯಲ್ಲೂ ಈ ಫೋನ್‌ಗಳು ಲಭ್ಯವಿವೆ. ಹಾಗಾದರೆ ಆಪಲ್ ಕಂಪನಿಯ ಐಫೋನ್ 18 ಪ್ರೊ ಹಾಗೂ ಐಫೋನ್ 18 ಪ್ರೊ ಮ್ಯಾಕ್ಸ್ ಫೋನ್‌ಗಳ ಬೆಲೆ ಎಷ್ಟು? ಈ ಹೊಸ ಐಫೋನ್‌ಗಳ ಫೀಚರ್ಸ್‌ಗಳೇನು? ಅಲ್ಲದೇ ಬೆಲೆಯ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyiPhone 18 Pro ಸರಣಿಯ ಫೀಚರ್ಸ್
ಆಪಲ್ ಕಂಪನಿಯ ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ ಫೋನ್‌ಗಳು iOS 27 ನೊಂದಿಗೆ ಎಂಟ್ರಿ ಕೊಟ್ಟಿವೆ. ಐಫೋನ್ 18 ಪ್ರೊ ಮಾಡೆಲ್ 6.3 ಇಂಚಿನ ಡಿಸ್‌ಪ್ಲೇ ಅನ್ನು ಹೊಂದಿದೆ. ಹಾಗೆಯೇ ಐಫೋನ್ 18 ಪ್ರೊ ಮ್ಯಾಕ್ಸ್ ಫೋನ್ ದೊಡ್ಡದಾದ 6.9 ಇಂಚಿನ ಡಿಸ್‌ಪ್ಲೇ ಅನ್ನು ಒಳಗೊಂಡಿದೆ. ಆಪಲ್‌ನ ಈ ಫೋನ್‌ಗಳು ಹೊಸ A20 ಪ್ರೊ ಪ್ರೊಸೆಸರ್ ನಲ್ಲಿ ಕೆಲಸ ಮಾಡಲಿವೆ. ಇದು 2nm-ಪೀಳಿಗೆಯ ಚಿಪ್ ಆರು-ಕೋರ್ CPU ಮತ್ತು ಏಳು-ಕೋರ್ GPU ಅನ್ನು ಹೊಂದಿದ್ದು, ಹೊಸ ಇನ್-ಹೌಸ್ C2 ಮೋಡೆಮ್ ಅನ್ನು ಒಳಗೊಂಡಿವೆ.

ಪವರ್‌ಫುಲ್ ಕ್ಯಾಮೆರಾ
ಐಫೋನ್ 18 ಪ್ರೊ ಹಾಗೂ ಐಫೋನ್ 18 ಪ್ರೊ ಮ್ಯಾಕ್ಸ್ ಮೊಬೈಲ್‌ಗಳು ಕ್ಯಾಮೆರಾ ವಿಭಾಗದಲ್ಲೂ ಗಮನಾರ್ಹ ಅಪ್‌ಗ್ರೇಡ್ ಪಡೆದುಕೊಂಡಿವೆ. ಈ ಫೋನ್‌ಗಳು ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿವೆ. ಇವುಗಳ ಪ್ರಾಥಮಿಕ ಕ್ಯಾಮೆರಾವು ವೇರಿಯಬಲ್ ಅಪರ್ಚರ್ ಒಳಗೊಂಡ 48MP ಸೆನ್ಸಾರ್ ಅನ್ನು ಹೊಂದಿವೆ. ಕಡಿಮೆ ಬೆಳಕಿನಲ್ಲಿ ಅತ್ಯುತ್ತಮ ಗುಣಮಟ್ಟದ ಫೋಟೋಗ್ರಫಿಗೆ ಪೂರಕವಾಗಿ ಕೆಲಸ ಮಾಡಲಿವೆ.
ಬಿಗ್ ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್
ಐಫೋನ್ 18 ಪ್ರೊ ಹಾಗೂ ಐಫೋನ್ 18 ಪ್ರೊ ಮ್ಯಾಕ್ಸ್ ಮಾಡೆಲ್‌ಗಳು ಹೊಸ ಬ್ಯಾಟರಿ ಸೆಟ್‌ಅಪ್‌ನೊಂದಿಗೆ ಲಗ್ಗೆ ಇಟ್ಟಿವೆ. eSIM-ಮಾತ್ರ ಮಾಡೆಲ್‌ಗಳು ಐಫೋನ್ 18 ಪ್ರೊ ನಲ್ಲಿ 36 ಗಂಟೆಗಳ ವರೆಗೆ ವೀಡಿಯೊ ಪ್ಲೇಬ್ಯಾಕ್ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ ನಲ್ಲಿ 45 ಗಂಟೆಗಳ ವರೆಗೆ ವೀಡಿಯೊ ಪ್ಲೇಬ್ಯಾಕ್ ಅನ್ನು ನೀಡುತ್ತವೆ. ಐಫೋನ್ 18 ಪ್ರೊ ಸುಮಾರು 15 ನಿಮಿಷಗಳಲ್ಲಿ 50% ವರೆಗೆ ಚಾರ್ಜ್ ಮಾಡಬಹುದು ಅಥವಾ 30 ನಿಮಿಷಗಳಲ್ಲಿ ವೈರ್‌ಲೆಸ್ ಆಗಿ 50% ವರೆಗೆ ಚಾರ್ಜ್ ಮಾಡಬಹುದು. ಐಫೋನ್ 18 ಪ್ರೊ ಮ್ಯಾಕ್ಸ್ ನಲ್ಲಿ, ಐದು ನಿಮಿಷಗಳ ವೈರ್ಡ್ ಚಾರ್ಜಿಂಗ್ ಸುಮಾರು ಏಳು ಗಂಟೆಗಳ ವೀಡಿಯೊ ಪ್ಲೇಬ್ಯಾಕ್ ಅನ್ನು ಒದಗಿಸುತ್ತದೆ. ಇನ್ನು ಇದು ಪೂರ್ಣ ಚಾರ್ಜ್‌ನಲ್ಲಿ 30 ಗಂಟೆಗಳ ವರೆಗೆ ಬಳಕೆಯನ್ನು ಒದಗಿಸುತ್ತದೆ.
ಸಿರಿ ಮತ್ತು Apple Intelligence
ಅಪ್‌ಗ್ರೇಡ್ ಸಿರಿ ವೈಯಕ್ತಿಕ ಸಂದರ್ಭವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯದೊಂದಿಗೆ ಮತ್ತಷ್ಟು ಸುಧಾರಿತ ಅನುಭವ ನೀಡಲಿದೆ. ಸಿರಿ ಆಧಾರಿತ AI ಆಯ್ಕೆಗಳನ್ನು ಪ್ರಸ್ತುತ ಬೀಟಾ ಹಂತದಲ್ಲಿದ್ದು, ಇಂಗ್ಲಿಷ್ ಭಾಷೆಯಲ್ಲಿ ಲಭ್ಯವಿರಲಿವೆ. ಇದರೊಂದಿಗೆ Apple Intelligence ಬೆಂಬಲವೂ ವಿಸ್ತರಿಸಲಾಗಿದ್ದು, ಇದೀಗ ಒಟ್ಟು 16 ಭಾಷೆಗಳಲ್ಲಿ ಲಭ್ಯವಾಗಲಿದೆ.
ಐಫೋನ್ 18 ಪ್ರೊ ಸರಣಿಯ ಬೆಲೆ ಹಾಗೂ ಲಭ್ಯತೆ
ಭಾರತದಲ್ಲಿ ಆಪಲ್ ಐಫೋನ್ 18 ಪ್ರೊ ಮಾಡೆಲ್ 1,64,900 ರೂ.ಗಳ ಬೆಲೆಯಿಂದ ಪ್ರಾರಂಭವಾಗುತ್ತದೆ. ಹಾಗೆಯೇ ಐಫೋನ್ 18 ಪ್ರೊ ಮ್ಯಾಕ್ಸ್ ಮಾಡೆಲ್ 1,79,900 ರೂ.ಗಳ ಬೆಲೆಯಿಂದ ಪ್ರಾರಂಭವಾಗುತ್ತದೆ. ಈ ಎರಡೂ ಮಾದರಿಗಳು 256GB, 512GB, 1TB ಮತ್ತು 2TB ಸ್ಟೋರೇಜ್ ಆಯ್ಕೆಗಳೊಂದಿಗೆ ಲಭ್ಯವಿರುತ್ತವೆ. ಇನ್ನು ಈ ಫೋನ್‌ಗಳು ಬರ್ಗಂಡಿ, ಗ್ಲೇಸಿಯರ್, ಸಿಲ್ವರ್ ಮತ್ತು ಬ್ಕ್ಯಾಕ್ ಕಲರ್ ಆಯ್ಕೆಗಳಲ್ಲಿ ಲಭ್ಯವಾಗಲಿವೆ. ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್‌ಗಾಗಿ ಪೂರ್ವ-ಆರ್ಡರ್‌ಗಳು ಭಾರತದಲ್ಲಿ ಸೆಪ್ಟೆಂಬರ್ 12 ರಂದು ಶುರುವಾಗಲಿದ್ದು, ಇದೇ ಸೆಪ್ಟೆಂಬರ್ 18 ರಿಂದ ಮಾರಾಟ ಪ್ರಾರಂಭವಾಗಲಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile
