ಪ್ರಸ್ತುತ ನೀವೊಂದು ಹೊಸ ಸಿಮ್ ಕಾರ್ಡ್ ಪಡೆಯಲು ಬಯಸಿದರೆ ಸಾಮಾನ್ಯ ಸಿಮ್ ಕಾರ್ಡ್ ಮತ್ತು ಹೊಸ ತಂತ್ರಜ್ಞಾನವಾದ ಇ-ಸಿಮ್ (eSIM) ಮೊಬೈಲ್ ಫೋನ್‌ಗಳನ್ನು ನೆಟ್‌ವರ್ಕ್‌ಗೆ ಸಂಪರ್ಕಿಸುವ ಎರಡು ಮುಖ್ಯ ವಿಧಾನಗಳಾಗಿವೆ. ಸಾಮಾನ್ಯ ಸಿಮ್ ಒಂದು ಚಿಕ್ಕ, ಪ್ಲಾಸ್ಟಿಕ್ ಕಾರ್ಡ್ ಆಗಿದ್ದು ನಿಮ್ಮ ಮೊಬೈಲ್ ಸಂಖ್ಯೆ ಮತ್ತು ನೆಟ್‌ವರ್ಕ್ ಮಾಹಿತಿಯನ್ನು ಹೊಂದಿರುತ್ತದೆ ಮತ್ತು ಇದನ್ನು ಫೋನ್‌ಗೆ ಹಾಕಲು ಪ್ರತ್ಯೇಕ ಸ್ಲಾಟ್ ಬೇಕಾಗುತ್ತದೆ. ಆದರೆ ಇ-ಸಿಮ್ ಎಂದರೆ ‘ಎಂಬೆಡೆಡ್ ಸಿಮ್’ (Embedded SIM) ಅಂದರೆ ಇದು ಫೋನ್‌ನ ಒಳಗೆ ಮದರ್‌ಬೋರ್ಡ್‌ಗೆ ಶಾಶ್ವತವಾಗಿ ಜೋಡಿಸಲಾದ ಒಂದು ಚಿಕ್ಕ ಚಿಪ್ ಆಗಿದೆ. ಹಾಗಾದ್ರೆ ಸಾಮಾನ್ಯ ಸಿಮ್ ಮತ್ತು ಇ-ಸಿಮ್ ನಡುವಿನ ವ್ಯತ್ಯಾಸಗಳೊಂದಿಗೆ ಅನುಕೂಲ ಮತ್ತು ಅನಾನುಕುಲಗಳೇನು ತಿಳಿಯಿರಿ.
ಇವುಗಳ ನಡುವಿನ ಮುಖ್ಯ ವ್ಯತ್ಯಾಸವೆಂದರೆ ಅವುಗಳ ರೂಪ ಮತ್ತು ಸ್ವರೂಪದಲ್ಲಿ. ಸಾಮಾನ್ಯ ಸಿಮ್ ಕಾರ್ಡ್ ಒಂದು ಭೌತಿಕ ವಸ್ತು ಅಂದರೆ ಅದನ್ನು ನಿಮ್ಮ ಕೈಯಲ್ಲಿ ಹಿಡಿದು ಫೋನ್‌ಗೆ ಹಾಕಿ ಅಥವಾ ತೆಗೆಯಬಹುದು. ಇದು ನಿಮ್ಮ ಫೋನ್‌ನಿಂದ ನಿಮ್ಮ ಸಂಪರ್ಕದ ಮಾಹಿತಿಯನ್ನು ಬೇರ್ಪಡಿಸುತ್ತದೆ. ಆದರೆ ಇ-ಸಿಮ್ ಸಂಪೂರ್ಣವಾಗಿ ಡಿಜಿಟಲ್ ಆಗಿದೆ ಮತ್ತು ಫೋನ್‌ನ ಒಳಗೆ ಶಾಶ್ವತವಾಗಿ ಅಳವಡಿಸಲಾಗಿರುತ್ತದೆ. ನೆಟ್‌ವರ್ಕ್ ಬದಲಾಯಿಸಲು ನೀವು ಹೊಸ ಸಿಮ್ ಕಾರ್ಡ್ ಕೊಳ್ಳುವ ಬದಲು ನಿಮ್ಮ ಫೋನ್‌ನ ಸೆಟ್ಟಿಂಗ್ಸ್‌ನಲ್ಲಿಯೇ ನೆಟ್‌ವರ್ಕ್ ಪ್ರೊಫೈಲ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಲ್ಲದೆ ಇ-ಸಿಮ್ ಸಾಮಾನ್ಯ ಸಿಮ್‌ಗಿಂತ ತುಂಬಾ ಚಿಕ್ಕದಾಗಿದೆ. ಇದು ಫೋನ್ ತಯಾರಕರಿಗೆ ಸಾಧನದೊಳಗೆ ಹೆಚ್ಚಿನ ಸ್ಥಳಾವಕಾಶ ನೀಡುತ್ತದೆ.
Also Read: JBL 2.1ch Dolby Soundbar ಇಂದು ಅಮೆಜಾನ್‌ನಲ್ಲಿ ಭರ್ಜರಿ ಡಿಸ್ಕೌಂಟ್ಗಳೊಂದಿಗೆ ಲಭ್ಯ!
Also Read: Jio Family Plan: ಕೇವಲ 449 ರೂಗಳ ಒಂದೇ ರಿಚಾರ್ಜ್‌ನಲ್ಲಿ 3 ನಂಬರ್ ಬಳಸಬಹುದು!
ನೀವು ಮೊಬೈಲ್ ಫೋನ್ ಕೊಳ್ಳಲು ಬಯಸಿದರೆ, ಸಾಧ್ಯವಾದರೆ ಇ-ಸಿಮ್ ಸೌಲಭ್ಯ ಇರುವ ಫೋನ್ ಅನ್ನು ಆರಿಸುವುದು ಉತ್ತಮ. ಇ-ಸಿಮ್ ಭವಿಷ್ಯದ ತಂತ್ರಜ್ಞಾನವಾಗಿದೆ. ನೀವು ಹೆಚ್ಚು ಪ್ರಯಾಣಿಸುವವರಾಗಿದ್ದರೆ, ನಿಮ್ಮ ಫೋನ್‌ನಲ್ಲಿ ಹೆಚ್ಚಿನ ಭದ್ರತೆ ಬಯಸಿದರೆ, ಒಂದೇ ಫೋನ್‌ನಲ್ಲಿ ಎರಡು ಸಂಖ್ಯೆಗಳನ್ನು ಸುಲಭವಾಗಿ ಬಳಸಲು ಬಯಸಿದರೆ ಖಂಡಿತವಾಗಿಯೂ ಇ-ಸಿಮ್ ಅನ್ನು ಆರಿಸಿಕೊಳ್ಳಿ.
ಆದರೆ ನಿಮ್ಮ ನೆಟ್‌ವರ್ಕ್ ಕಂಪನಿ ಇ-ಸಿಮ್ ಸೌಲಭ್ಯ ನೀಡದಿದ್ದರೆ ಅಥವಾ ನೀವು ಹಳೆಯ ಮಾದರಿಯ ಫೋನ್ ಬಳಸಲು ಬಯಸಿದರೆ, ಆಗಲೂ ಸಾಮಾನ್ಯ ಸಿಮ್ ಕಾರ್ಡ್ ನಿಮಗೆ ಉತ್ತಮ ಆಯ್ಕೆಯಾಗಿದೆ. ಅಂತಿಮವಾಗಿ ನಿಮ್ಮ ಅಗತ್ಯತೆಗಳು ಮತ್ತು ನಿಮ್ಮ ಫೋನ್‌ನಲ್ಲಿ ಯಾವ ಸೌಲಭ್ಯ ಇದೆ ಎಂಬುದರ ಮೇಲೆ ನಿಮ್ಮ ಆಯ್ಕೆ ನಿರ್ಧಾರವಾಗುತ್ತದೆ. ಹೆಚ್ಚಿನ ಹೊಸ ಫೋನ್‌ಗಳು ನಿಮಗೆ ಸಾಮಾನ್ಯ ಸಿಮ್ ಮತ್ತು ಇ-ಸಿಮ್ ಎರಡನ್ನೂ ಏಕಕಾಲದಲ್ಲಿ ಬಳಸಲು ಅವಕಾಶ ನೀಡುತ್ತವೆ.