Chatgpt Car Photo Editing Prompts: ಕಾರ್ ಫೋಟೋ ಎಡಿಟಿಂಗ್ ಮಾಡಲು ಇಲ್ಲಿವೆ ಬೆಸ್ಟ್‌ 10+ ಪ್ರಾಂಪ್ಟ್‌

Chatgpt Car Photo Editing Prompts: ಕಾರ್ ಫೋಟೋ ಎಡಿಟಿಂಗ್ ಮಾಡಲು ಇಲ್ಲಿವೆ ಬೆಸ್ಟ್‌ 10+ ಪ್ರಾಂಪ್ಟ್‌

ಪ್ರಸ್ತುತ ಇಂದಿನ ದಿನಗಳಲ್ಲಿ ಎಲ್ಲವೂ ಡಿಜಿಟಲ್‌ ರೂಪ ಪಡೆದಿವೆ. ಹಾಗೆಯೇ ಇದೀಗ ಎಐ ಮೂಲಕ ಕಾರ್ ಫೋಟೋಗಳನ್ನು ಆಕರ್ಷಕವಾಗಿ ಎಡಿಟ್ ಮಾಡುವುದು ಬಹಳ ಸುಲಭವಾಗಿದೆ. ಅದರಲ್ಲಿಯೂ ಮುಖ್ಯವಾಗಿ ChatGPT ಹಾಗೂ ಇತರ AI ಟೂಲ್‌ಗಳ ನೆರವಿನಿಂದ ಸಾಮಾನ್ಯ ಕಾರ್ ಫೋಟೋವನ್ನೇ ಪ್ರೊಫೆಷನಲ್ ಲೆವೆಲ್‌ಗೆ ತರುವುದು ಸಾಧ್ಯ. ಸೋಷಿಯಲ್ ಮೀಡಿಯಾ ಪೋಸ್ಟ್, ಯೂಟ್ಯೂಬ್ ಥಂಬ್ನೇಲ್ ಅಥವಾ ಟೆಕ್ ಬ್ಲಾಗ್‌ಗಾಗಿ ಗಮನ ಸೆಳೆಯುವ ಕಾರ್ ಇಮೇಜ್ ಬೇಕಾದರೆ, ಸರಿಯಾದ ಪ್ರಾಂಪ್ಟ್ ಬಳಸುವುದು ಮುಖ್ಯ. ಲೈಟಿಂಗ್, ಬ್ಯಾಕ್‌ಗ್ರೌಂಡ್ ಮತ್ತು ಸ್ಟೈಲ್ ಸರಿಯಾಗಿ ಆಯ್ಕೆ ಮಾಡಿದರೆ, ನಿಮ್ಮ ಫೋಟೋ ಇನ್ನಷ್ಟು ರಿಯಲಿಸ್ಟಿಕ್ ಮತ್ತು ಸ್ಟೈಲಿಷ್ ಆಗುತ್ತದೆ. ಹಾಗಾದರೆ Chatgpt ಟೂಲ್‌ ಮೂಲಕ ಕಾರ್ ಫೋಟೋ ಎಡಿಟಿಂಗ್ ಪ್ರಾಂಪ್ಟ್‌ಗಳ ಬಳಕೆ ಹೇಗೆ ಎಂಬುದನ್ನು ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ನಾಳೆ Realme Narzo 100 Lite 5G ಮೊಬೈಲ್‌ ಲಾಂಚ್‌! 7,000mAh ಬ್ಯಾಟರಿ ಖಚಿತ

ChatGPT: ಸರಿಯಾಗಿ ಪ್ರಾಂಪ್ಟ್ ಬರೆಯಿರಿ

ನಿಮ್ಮ ಕಲ್ಪನೆಗೆ ಸರಿಹೊಂದುವ ಫಲಿತಾಂಶ ಬರಬೇಕಿದ್ದರೆ ಸೂಕ್ತ/ಸರಿಯಾದ ಪ್ರಾಂಪ್ಟ್ ಅಗತ್ಯ. ಪ್ರಾಂಪ್ಟ್‌ ಎನ್ನುವುದು ChatGPTಗೆ ನೀಡುವ ಸೂಚನೆಯಾಗಿರುತ್ತದೆ. ಹೀಗಾಗಿ ಸರಿಯಾದ ಪ್ರಾಂಪ್ಟ್ ನೀಡಿದರೆ, ಅದು ನಿಮಗೆ ಬೇಕಾದ ರೀತಿಯ ಮಾಹಿತಿ ನೀಡುತ್ತದೆ. ಇನ್ನು ಚಾಟ್‌ಜಿಪಿಟಿ ಟೂಲ್‌ ಮೂಲಕ ನಿಮಗೆ ಬೇಕೆನಿಸಿದ ಮಾದರಿಯಲ್ಲಿ ಕಾರ್‌ನ ಎಡಿಟಿಂಗ್‌ ಫೋಟೋ ಪಡೆಯಲು ಸರಿಯಾದ ಪ್ರಾಂಪ್ಟ್ ನೀಡುವುದು ಅಗತ್ಯ. ಈ ಲೇಖನದಲ್ಲಿ ಕಾರ್ ಫೋಟೋ ಎಡಿಟಿಂಗ್ ಗೆ ಸಂಬಂಧಿಸಿದ ಕೆಲವು ಅತ್ಯುತ್ತಮ ಪ್ರಾಂಪ್ಟ್‌ ನೀಡಲಾಗಿದೆ ಗಮನಿಸಿ.

Chatgpt

ಜನಪ್ರಿಯ ಕಾರ್ ಫೋಟೋ ಎಡಿಟಿಂಗ್ ಪ್ರಾಂಪ್ಟ್‌ಗಳು

ಪ್ರಾಂಪ್ಟ್‌ – Cinematic Sunset Look

Luxury car on a highway during sunset, cinematic lighting, ultra realistic, 4K

ಸೂರ್ಯಾಸ್ತ ಸಮಯದಲ್ಲಿ ಹೆದ್ದಾರಿಯಲ್ಲಿ ನಿಂತಿರುವ ಲಕ್ಸುರಿ ಕಾರ್, ಸಿನೆಮಾಟಿಕ್ ಲೈಟಿಂಗ್, ಅಲ್ಟ್ರಾ ರಿಯಲಿಸ್ಟಿಕ್, 4K

ಪ್ರಾಂಪ್ಟ್‌- Night Neon Style

Sports car under neon lights in city, wet road reflections, cyberpunk style

ನಗರದಲ್ಲಿ ನಿಯಾನ್ ಲೈಟ್ಸ್ ಕೆಳಗೆ ಸ್ಪೋರ್ಟ್ಸ್ ಕಾರ್, ಒದ್ದೆಯಾದ ರಸ್ತೆ ಪ್ರತಿಬಿಂಬ, ಸೈಬರ್‌ಪಂಕ್ ಸ್ಟೈಲ್

ಪ್ರಾಂಪ್ಟ್‌ – Racing Action Shot

Supercar drifting on race track, motion blur, smoke effect, high speed

ರೇಸ್ ಟ್ರ್ಯಾಕ್‌ನಲ್ಲಿ ಡ್ರಿಫ್ಟ್ ಆಗುತ್ತಿರುವ ಸೂಪರ್ ಕಾರ್, ಮೋಶನ್ ಬ್ಲರ್, ಸ್ಮೋಕ್ ಎಫೆಕ್ಟ್, ವೇಗದ ದೃಶ್ಯ

ಪ್ರಾಂಪ್ಟ್‌ – Luxury Showroom

Premium car in modern showroom, glossy floor, soft lighting

ಆಧುನಿಕ ಶೋರೂಮ್‌ನಲ್ಲಿ ಪ್ರೀಮಿಯಂ ಕಾರ್, ಹೊಳೆಯುವ ನೆಲ, ಸಾಫ್ಟ್ ಲೈಟಿಂಗ್

ಪ್ರಾಂಪ್ಟ್‌ – Off-Road Adventure

SUV on mountain road with fog, sunrise lighting, natural background

ಮಂಜಿನ ನಡುವೆ ಪರ್ವತ ರಸ್ತೆಯಲ್ಲಿ SUV, ಸೂರ್ಯೋದಯ ಲೈಟಿಂಗ್, ನೈಸರ್ಗಿಕ ಬ್ಯಾಕ್‌ಗ್ರೌಂಡ್

Chatgpt

ಪ್ರಾಂಪ್ಟ್‌ – Rain Effect Mood

Car in rain with water droplets, reflections, moody cinematic lighting

ಮಳೆಯಲ್ಲಿರುವ ಕಾರ್, ನೀರಿನ ಹನಿಗಳು, ಪ್ರತಿಬಿಂಬಗಳು, ಮೂಡಿ ಸಿನೆಮಾಟಿಕ್ ಲೈಟಿಂಗ್

ಪ್ರಾಂಪ್ಟ್‌ – Minimal Studio Shot

Car in white background, soft shadows, studio lighting, clean look

ಬಿಳಿ ಬ್ಯಾಕ್‌ಗ್ರೌಂಡ್‌ನಲ್ಲಿ ಕಾರ್, ಸಾಫ್ಟ್ ಶ್ಯಾಡೋಸ್, ಸ್ಟುಡಿಯೋ ಲೈಟಿಂಗ್, ಕ್ಲೀನ್ ಲುಕ್

ಪ್ರಾಂಪ್ಟ್‌ – Futuristic Electric Theme

Electric car in sci-fi city, glowing lights, ultra modern design

ಸೈ-ಫೈ ನಗರದಲ್ಲಿ ಎಲೆಕ್ಟ್ರಿಕ್ ಕಾರ್, ಹೊಳೆಯುವ ಲೈಟ್ಸ್, ಅಲ್ಟ್ರಾ ಮಾಡರ್ನ್ ಡಿಸೈನ್

ಪ್ರಾಂಪ್ಟ್‌ – Vintage Classic Look

Classic car on countryside road, retro film tone, warm sunlight

ಗ್ರಾಮೀಣ ರಸ್ತೆಯಲ್ಲಿ ಕ್ಲಾಸಿಕ್ ಕಾರ್, ರೆಟ್ರೋ ಫಿಲ್ಮ್ ಟೋನ್, ಸೂರ್ಯನ ಬಿಸಿಲು

Chatgpt

ಪ್ರಾಂಪ್ಟ್‌ – Urban Street Style

Car on city street with graffiti walls, dramatic shadows, street photography

ನಗರ ರಸ್ತೆಯಲ್ಲಿ ಗ್ರಾಫಿಟಿ ಗೋಡೆಗಳ ಬಳಿ ಕಾರ್, ಡ್ರಾಮಾಟಿಕ್ ಶ್ಯಾಡೋಸ್, ಸ್ಟ್ರೀಟ್ ಫೋಟೋಗ್ರಫಿ

Disclosure: Images In this article are generated using AI

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo