ಆನ್ಲೈನ್ನಲ್ಲಿ ಹೊಸ Smartphone ಖರೀದಿಸುತ್ತಿದ್ದೀರಾ? ಹಾಗಿದ್ರೆ, ಒಮ್ಮೆ ಇಲ್ಲಿ ಗಮನಿಸಿ
ಪ್ರಸ್ತುತ ದಿನಗಳಲ್ಲಿ ಹೊಸ Smartphone ಖರೀದಿಸಲು ಮೊಬೈಲ್ ಅಂಗಡಿಗಳಿಗೆ ಹೋಗಲೇಬೇಕೆಂದಿಲ್ಲ. ಇ-ಕಾಮರ್ಸ್ ವೆಬ್ಸೈಟ್ಗಳಲ್ಲೇ ವಿವಿಧ ಕಂಪನಿಗಳ ಫೋನ್ಗಳನ್ನು ಹೋಲಿಕೆ ಮಾಡಿ, ಆಕರ್ಷಕ ಆಫರ್ಗಳೊಂದಿಗೆ ಖರೀದಿಸಬಹುದು. ಹಬ್ಬದ ಸೇಲ್, ಬ್ಯಾಂಕ್ ಡಿಸ್ಕೌಂಟ್, ಎಕ್ಸ್ಚೇಂಜ್ ಆಫರ್ ಮತ್ತು ಕ್ಯಾಶ್ಬ್ಯಾಕ್ ಸೌಲಭ್ಯಗಳು ಗ್ರಾಹಕರನ್ನು ಇನ್ನಷ್ಟು ಆಕರ್ಷಿಸುತ್ತವೆ. ಆದರೆ ಆನ್ಲೈನ್ನಲ್ಲಿ ಮೊಬೈಲ್ ಖರೀದಿಸುವಾಗ ಕೇವಲ ಕಡಿಮೆ ಬೆಲೆ ನೋಡಿ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ. ಫೋನ್ನ ನಿಜವಾದ ಬೆಲೆ, ಅದರ ಫೀಚರ್ಸ್ಗಳು, ವಾರಂಟಿ ಸೇರಿದಂತೆ ಹಲವು ವಿಷಯಗಳನ್ನು ಪರಿಶೀಲಿಸಬೇಕು. ಹಾಗಾದರೆ, ಆನ್ಲೈನ್ನಲ್ಲಿ ಹೊಸ ಸ್ಮಾರ್ಟ್ಫೋನ್ ಖರೀದಿಸುವ ಮೊದಲು ಯಾವೆಲ್ಲ ವಿಷಯಗಳನ್ನು ಗಮನಿಸಬೇಕು? ಇಲ್ಲಿವೆ ಪ್ರಮುಖ ಸಲಹೆಗಳು.
SurveyAlso Read : Jio ಟೆಲಿಕಾಂನ 198 ರೂ.ಗಳ ಪ್ಲಾನಿನಲ್ಲಿ ಏನುಂಟು ಏನಿಲ್ಲ! ಈ ಯೋಜನೆ ರೀಚಾರ್ಜ್ಗೆ ಉತ್ತಮವೇ?
Smartphone ನಿಜವಾದ ಬೆಲೆಯನ್ನು ಚೆಕ್ ಮಾಡಿ
ಆನ್ಲೈನ್ನಲ್ಲಿ ಫೋನ್ ಖರೀದಿಸುವಾಗ ಮೊದಲು ಅದರ ಬೆಲೆಯನ್ನು ಸರಿಯಾಗಿ ಪರಿಶೀಲಿಸಿ. ಕೆಲವು ಸಂದರ್ಭಗಳಲ್ಲಿ ಮೂಲ ಬೆಲೆಯನ್ನು ಹೆಚ್ಚಾಗಿ ತೋರಿಸಿ, ಬಿಗ್ ಡಿಸ್ಕೌಂಟ್ ನೀಡಿರುವಂತೆ ಕಾಣಿಸಬಹುದು. ಹೀಗಾಗಿ, ಡಿಸ್ಕೌಂಟ್ ನೋಡಿ ಮಾತ್ರ ಖರೀದಿ ನಿರ್ಧಾರ ಮಾಡಬೇಡಿ. ಅದೇ ಫೋನ್ Amazon, Flipkart ಮತ್ತು ಕಂಪನಿಯ ಅಧಿಕೃತ ವೆಬ್ಸೈಟ್ನಲ್ಲಿ ಎಷ್ಟು ಬೆಲೆಗೆ ಲಭ್ಯವಿದೆ ಎಂಬುದನ್ನು ಹೋಲಿಕೆ ಮಾಡಿ.

ನಿಮ್ಮ ಅಗತ್ಯಕ್ಕೆ ತಕ್ಕ ಫೋನ್ ಆಯ್ಕೆ ಮಾಡಿ
ಹೊಸ ಫೋನ್ ಖರೀದಿಸುವ ಮೊದಲು ಅದನ್ನು ಯಾವ ಉದ್ದೇಶಕ್ಕೆ ಬಳಸುತ್ತೀರಿ ಎಂಬುದನ್ನು ನಿರ್ಧರಿಸಿಕೊಳ್ಳಿ. ಕೆಲವರಿಗೆ ಉತ್ತಮ ಕ್ಯಾಮೆರಾ ಮುಖ್ಯವಾಗಿದ್ದರೆ, ಇನ್ನು ಕೆಲವರಿಗೆ ಬ್ಯಾಟರಿ, ಗೇಮಿಂಗ್ ಅಥವಾ ದೀರ್ಘಕಾಲದ ಸಾಫ್ಟ್ವೇರ್ ಅಪ್ಡೇಟ್ಗಳು ಮುಖ್ಯವಾಗಿರುತ್ತವೆ. ಹಾಗೆಯೇ ಕ್ಯಾಮೆರಾ ಹಾಗೂ ಬ್ಯಾಟರಿ ಕಾರ್ಯಕ್ಷಮತೆ ಗಮನಿಸಿ. ಇದರೊಂದಿಗೆ ದೀರ್ಘಕಾಲ ಬಳಸಲು ಸಾಫ್ಟ್ವೇರ್ ಅಪ್ಡೇಟ್ ಅವಧಿ ನೋಡಿ.
RAM ಮತ್ತು ಸ್ಟೋರೇಜ್ ವಿವರಗಳನ್ನು ಗಮನಿಸಿ
ಫೋನ್ನ RAM ಮತ್ತು ಸ್ಟೋರೇಜ್ ಸಾಮರ್ಥ್ಯ ಅದರ ಬಳಕೆಯ ಅನುಭವದ ಮೇಲೆ ಪರಿಣಾಮ ಬೀರುತ್ತವೆ. ಆನ್ಲೈನ್ನಲ್ಲಿ ಒಂದೇ ಮಾದರಿಯ ಫೋನ್ ಬೇರೆ ಬೇರೆ RAM ಮತ್ತು ಸ್ಟೋರೇಜ್ ಆಯ್ಕೆಗಳಲ್ಲಿ ಲಭ್ಯವಿರಬಹುದು. ಬೆಲೆ ಕಡಿಮೆ ಇದೆ ಎಂದು ತಪ್ಪಾದ ವೇರಿಯಂಟ್ ಆಯ್ಕೆ ಮಾಡಬೇಡಿ. ಸಾಮಾನ್ಯ ಬಳಕೆಗೆ 8GB RAM ಮತ್ತು 128GB ಸ್ಟೋರೇಜ್ ಅನೇಕ ಬಳಕೆದಾರರಿಗೆ ಸಾಕಾಗಬಹುದು. ಹೆಚ್ಚು ಫೋಟೋ, ವೀಡಿಯೊ, ಗೇಮ್ ಮತ್ತು ಆಪ್ ಸಂಗ್ರಹಿಸುವವರಾದರೆ 256GB ಸ್ಟೋರೇಜ್ ಆಯ್ಕೆ ಅನುಕೂಲಕರವಾಗಿರಬಹುದು.
ಕ್ಯಾಮೆರಾದ ಮೆಗಾಪಿಕ್ಸೆಲ್ ಗಮನಿಸಿ
50MP ಅಥವಾ 200MP ಕ್ಯಾಮೆರಾ ಎಂಬ ಮಾಹಿತಿ ಜಾಹೀರಾತಿನಲ್ಲಿ ಗಮನ ಸೆಳೆಯಬಹುದು. ಆದರೆ, ಹೆಚ್ಚಿನ ಮೆಗಾಪಿಕ್ಸೆಲ್ಗಳಿವೆ ಎಂದ ಮಾತ್ರಕ್ಕೆ ಫೋಟೋ ಗುಣಮಟ್ಟ ಅತ್ಯುತ್ತಮವಾಗಿರುತ್ತದೆ ಎಂದರ್ಥವಲ್ಲ. ಕ್ಯಾಮೆರಾ ಸೆನ್ಸಾರ್, ಲೆನ್ಸ್, OIS ಸೌಲಭ್ಯ, ಇಮೇಜ್ ಪ್ರೊಸೆಸಿಂಗ್ ಮತ್ತು ಸಾಫ್ಟ್ವೇರ್ಗಳೂ ಫೋಟೋ ಗುಣಮಟ್ಟದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ, ಖರೀದಿಸುವ ಮೊದಲು ಆ ಫೋನ್ನ ನೈಜ ಕ್ಯಾಮೆರಾ ಮಾದರಿಗಳನ್ನು ಪರಿಶೀಲಿಸಿ.
ಬ್ಯಾಟರಿ ಸಾಮರ್ಥ್ಯ ಮತ್ತು ಚಾರ್ಜಿಂಗ್ ವೇಗ ಪರಿಶೀಲಿಸಿ
ಬಿಗ್ ಬ್ಯಾಟರಿ ಹೊಂದಿರುವ ಫೋನ್ಗಳು ಹೆಚ್ಚು ಸಮಯ ಬಳಕೆಗೆ ಸಹಾಯ ಮಾಡಬಹುದು. ಆದರೆ, ಬ್ಯಾಟರಿ ಬ್ಯಾಕಪ್ ಕೇವಲ mAh ಸಂಖ್ಯೆಯನ್ನು ಅವಲಂಬಿಸಿರುವುದಿಲ್ಲ. ಪ್ರೊಸೆಸರ್, ಡಿಸ್ಪ್ಲೇ, ನೆಟ್ವರ್ಕ್ ಬಳಕೆ ಮತ್ತು ಸಾಫ್ಟ್ವೇರ್ ಆಪ್ಟಿಮೈಸೇಶನ್ ಕೂಡ ಪರಿಣಾಮ ಬೀರುತ್ತವೆ. ಫಾಸ್ಟ್ ಚಾರ್ಜಿಂಗ್ ಸೌಲಭ್ಯದ ಬಗ್ಗೆಯೂ ಗಮನಿಸಿ.
ವಾರಂಟಿ ಮತ್ತು ಸರ್ವಿಸ್ ಸೌಲಭ್ಯ ಪರಿಶೀಲಿಸಿ
ಹೊಸ ಫೋನ್ ಖರೀದಿಸಿದ ನಂತರ ಸಮಸ್ಯೆ ಎದುರಾದರೆ ವಾರಂಟಿ ಮತ್ತು ಸರ್ವಿಸ್ ಸೌಲಭ್ಯ ಬಹಳ ಮುಖ್ಯವಾಗುತ್ತವೆ. ಫೋನ್ಗೆ ತಯಾರಕರ ವಾರಂಟಿ ಎಷ್ಟು ಅವಧಿಗೆ ಇದೆ ಎಂಬುದನ್ನು ಪರಿಶೀಲಿಸಿ. ಭಾರತದಲ್ಲಿ ಮಾರಾಟವಾಗುವ ಆ ಮಾದರಿಗೆ ಅಧಿಕೃತ ವಾರಂಟಿ ಅನ್ವಯಿಸುತ್ತದೆಯೇ ಎಂಬುದನ್ನೂ ಖಚಿತಪಡಿಸಿಕೊಳ್ಳಿ. ಅಲ್ಲದೇ ನಿಮ್ಮ ಊರು ಅಥವಾ ಸಮೀಪದ ಪ್ರದೇಶದಲ್ಲಿ ಅಧಿಕೃತ ಸರ್ವಿಸ್ ಸೆಂಟರ್ ಇದೆಯೇ ಎಂಬುದನ್ನೂ ಪರಿಶೀಲಿಸುವುದು ಒಳ್ಳೆಯದು.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್ಇಂಡಿಯಾ ಸಂಸ್ಥೆಯ ಗಿಜ್ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile
