Lava Storm Play or Itel Zeno: ಸುಮಾರು 10,000 ರೂಗಳಿಗೆ ಈ 5G ಸ್ಮಾರ್ಟ್ಫೋನ್ಗಳಲ್ಲಿ ಯಾವುದು ಬೆಸ್ಟ್?
ಭಾರತದಲ್ಲಿ ಇಂದು Lava Storm Play 5G ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ.
Lava Storm Play 5G ಸ್ಮಾರ್ಟ್ಫೋನ್ Itel Zeno 5G ಸ್ಮಾರ್ಟ್ಫೋನ್ ಜೊತೆಗೆ ನೇರವಾಗಿ ಪ್ರತಿಸ್ಪರ್ಧಿಸಲಿದೆ.
ಸುಮಾರು 10,000 ರೂಗಳಿಗೆ ಈ 5G ಸ್ಮಾರ್ಟ್ಫೋನ್ಗಳಲ್ಲಿ ಯಾವುದು ಬೆಸ್ಟ್ ಎನ್ನುವುದಕ್ಕೆ ವಿವರವಾದ ಹೋಲಿಕೆ ನೀಡಲಾಗಿದೆ.
Itel Zeno 5G vs Lava Storm Play 5G: ಭಾರತದಲ್ಲಿ ಸ್ವದೇಶಿ ಬ್ರಾಂಡ್ ಲಾವಾ (Lava) ಇಂದು ತನ್ನ ಹೊಸ Lava Storm Play 5G ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಈ ಸ್ಮಾರ್ಟ್ಫೋನ್ ಇತ್ತೀಚೆಗೆ ಬಿಡುಗಡೆಯಾದ Itel Zeno 5G ಸ್ಮಾರ್ಟ್ಫೋನ್ ಜೊತೆಗೆ ನೇರವಾಗಿ ಪ್ರತಿಸ್ಪರ್ಧಿಸಲಿದೆ. ಯಾಕೆಂದರೆ ಈ ಎರಡು ಸ್ಮಾರ್ಟ್ಫೋನ್ಗಳು ಸುಮಾರು 10,000 ರೂಗಳೊಳಗೆ ಬರುವುದರೊಂದಿಗೆ ಸರಿಸುಮಾರು ಒಂದೇ ರೀತಿಯ ಫೀಚರ್ ಮತ್ತು ವಿಶೇಷತೆಗಳನ್ನು ಹೊಂದಿದೆ. ಒಂದೇ ರೀತಿಯ RAM ಮತ್ತು ಸ್ಟೋರೇಜ್, ಬ್ಯಾಟರಿ ಮತ್ತು MediaTek Dimensity ಪ್ರೊಸೆಸರ್ ಹೊಂದಿವೆ. ಹಾಗಾದ್ರೆ ಸುಮಾರು 10,000 ರೂಗಳಿಗೆ ಈ 5G ಸ್ಮಾರ್ಟ್ಫೋನ್ಗಳಲ್ಲಿ ಯಾವುದು ಬೆಸ್ಟ್ ಎನ್ನುವುದನ್ನು ಈ ಕೆಳಗೆ ವಿವರವಾದ ಹೋಲಿಕೆಯನ್ನು ನೀಡಲಾಗಿದೆ.
SurveyItel Zeno 5G vs Lava Storm Play 5G ಡಿಸ್ಪ್ಲೇಯ ವ್ಯತ್ಯಾಸ:
ಮೊದಲಿಗೆ ಈ ಐಟೆಲ್ ಸ್ಮಾರ್ಟ್ಫೋನ್ ಬಗ್ಗೆ ನೋಡುವುದದಾದ್ರೆ Itel ZENO 5G ಸ್ಮಾರ್ಟ್ಫೋನ್ 6.67 ಇಂಚಿನ HD+ ಪಂಚ್-ಹೋಲ್ ಡಿಸ್ಪ್ಲೇಯನ್ನು ಹೊಂದಿದ್ದು 120Hz ರಿಫ್ರೆಶ್ ದರ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ದರವನ್ನು ಹೊಂದಿದೆ. ಮತ್ತೊಂಡೆಯಲ್ಲಿ ಲಾವಾ ಸ್ಮಾರ್ಟ್ಫೋನ್ 6.75 ಇಂಚಿನ HD+ LCD ಸ್ಕ್ರೀಡಿಸ್ಪ್ಲೇಯನ್ನು ಹೊಂದಿದೆ. ಇದು ವರ್ಧಿತ ವೀಕ್ಷಣೆಯ ಅನುಭವಕ್ಕಾಗಿ ಸುಗಮವಾದ 120Hz ರಿಫ್ರೆಶ್ ದರವನ್ನು ಹೊಂದಿದೆ. ಆದರೆ ಇದು ಐಟೆಲ್ಗಿಂತ ಕಡಿಮೆ ಬ್ರೈಟ್ ಮತ್ತು ಕಲರ್ ನೀಡುತ್ತದೆ ಎನ್ನುದನ್ನು ಗಮನಿಸಬೇಕಿದೆ.

Itel Zeno 5G vs Lava Storm Play 5G ಕ್ಯಾಮೆರಾದ ವ್ಯತ್ಯಾಸ:
Itel ZENO 5G ಸ್ಮಾರ್ಟ್ಫೋನ್ 50MP ಮೆಗಾಪಿಕ್ಸೆಲ್ AI-ಸಕ್ರಿಯಗೊಳಿಸಿದ ಸೂಪರ್ HDR ಹಿಂಭಾಗದ ಕ್ಯಾಮೆರಾವನ್ನು ಒಳಗೊಂಡಿದೆ. ಮುಂಭಾಗದಲ್ಲಿ 8MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಇದೆ. ಲಾವಾ ಸ್ಮಾರ್ಟ್ಫೋನ್ ಸೋನಿಯ IMX752 ಸೆನ್ಸರ್ನೊಂದಿಗೆ 50MP ಪ್ರೈಮರಿ ಕ್ಯಾಮೆರಾದ ಜೊತೆಗೆ 2MP ಸೆಕೆಂಡರಿ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೆ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 8MP ಮುಂಭಾಗದ ಕ್ಯಾಮೆರಾ ಇದೆ.
Itel Zeno 5G vs Lava Storm Play 5G ಹಾರ್ಡ್ವೇರ್ ವ್ಯತ್ಯಾಸ:
Itel ZENO 5G ಸ್ಮಾರ್ಟ್ಫೋನ್ MediaTek Dimensity 6300 ಚಿಪ್ಸೆಟ್ನಲ್ಲಿ ಕಾರ್ಯನಿರ್ವಹಿಸುತ್ತದೆ. ಮತ್ತು 8GB RAM (4GB + 4GB ವರ್ಚುವಲ್) ಜೊತೆಗೆ 128GB ಇಂಟರ್ನಲ್ ಸ್ಟೋರೇಜ್ ಅನ್ನು ನೀಡುತ್ತದೆ. ಇದರ ಕ್ರಮವಾಗಿ ಲಾವಾ ಸ್ಮಾರ್ಟ್ಫೋನ್ MediaTek Dimensity 7060 ಚಿಪ್ಸೆಟ್ನಲ್ಲಿ ಕಾರ್ಯನಿರ್ವಹಿಸುತ್ತದೆ. ಎರಡು ಸ್ಮಾರ್ಟ್ಫೋನ್ ಅನ್ಡ್ರಾಯ್ಡ್ 14 ಜೊತೆಗೆ ಬರುತ್ತವೆ.
ಇದನ್ನೂ ಓದಿ: Lava Storm Play: ಕೈಗೆಟಕುವ ಬೆಲೆಗೆ ಹೊಸ 5G ಫೋನ್ ಬಿಡುಗಡೆಗೊಳಿಸಿದ ಲಾವಾ! ಆಫರ್ ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ!
Itel Zeno 5G vs Lava Storm Play 5G ಬ್ಯಾಟರಿ ವ್ಯತ್ಯಾಸ:
ಇದರಲ್ಲಿ Itel Zeno 5G ಸ್ಮಾರ್ಟ್ಫೋನ್ 5000mAh ಬ್ಯಾಟರಿಯನ್ನು 10W ಚಾರ್ಜರ್ನೊಂದಿಗೆ ಜೋಡಿಸಲಾಗಿದೆ. ಮತ್ತೊಂಡೆಯದಲ್ಲಿ ಅದೇ 5000mAh ಬ್ಯಾಟರಿಯೊಂದಿಗೆ ಬರುವ ಈ ಲಾವಾ ಸ್ಮಾರ್ಟ್ಫೋನ್ ಟೈಪ್-ಸಿ ಪೋರ್ಟ್ ಮೂಲಕ 18W ಫಾಸ್ಟ್ ಚಾರ್ಜಿಂಗ್ನಿಂದ ಬೆಂಬಲಿತವಾಗಿದೆ. ಈ ಮೂಲಕ ಬ್ಯಾಟರಿ ವಿಷಯದಲ್ಲಿ ಲಾವಾ ಗೆಲ್ಲುತ್ತದೆ.
Itel Zeno 5G vs Lava Storm Play 5G ಬೆಲೆ ಮತ್ತು ಲಭ್ಯತೆ:
ಕೊನೆಯದಾಗಿ ಈ ಎರಡು ಸ್ಮಾರ್ಟ್ಫೋನ್ಗಳ ಬೆಲೆ ಮತ್ತು ಲಭ್ಯತೆಯನ್ನು ನೋಡುವುದಾದರೆ ಮೊದಲಿಗೆ Itel ZENO 5G ಸ್ಮಾರ್ಟ್ಫೋನ್ ಬೆಲೆ ರೂ. 9,299 (ರೂ. 1,000 ಅಮೆಜಾನ್ ಕೂಪನ್ ಸೇರಿದಂತೆ) ಮತ್ತು ಈಗಾಗಲೇ ಅಮೆಜಾನ್ನಲ್ಲಿ ಪ್ರತ್ಯೇಕವಾಗಿ ಮಾರಾಟವಾಗಲಿದೆ. ಮತ್ತೊಂಡೆಯಲ್ಲಿ ಲಾವಾ ಸ್ಮಾರ್ಟ್ಫೋನ್ 6GB + 128GB ಮಾದರಿಯ ಆಕರ್ಷಕ ₹9,999 ಬೆಲೆಗೆ ಲಭ್ಯವಿದೆ. ಇದು 24ನೇ ಜೂನ್ 2025 ರಿಂದ ಅಮೆಜಾನ್ನಲ್ಲಿ ಪ್ರತ್ಯೇಕವಾಗಿ ಖರೀದಿಗೆ ಲಭ್ಯವಿರುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile