Dimensity 9300+ ಚಿಪ್ ಮತ್ತು Sony IMX 921 ಕ್ಯಾಮೆರಾದೊಂದಿಗೆ Vivo T4 Ultra ಬಿಡುಗಡೆ ಕಂಫಾರ್ಮ್ ಆಗೋಯ್ತು!
Vivo T4 Ultra ಸ್ಮಾರ್ಟ್ಫೋನ್ 11ನೇ ಜೂನ್ 2025 ರಂದು ಬಿಡುಗಡೆಗೆ ಸಜ್ಜಾಗಿದೆ.
Vivo T4 Ultra ಸ್ಮಾರ್ಟ್ಫೋನ್ Dimensity 9300+ ಪ್ರೊಸೆಸರ್ ಮತ್ತು Sony IMX 921 ಕ್ಯಾಮೆರಾದೊಂದಿಗೆ ಬರಲಿದೆ.
Vivo T4 Ultra ಸ್ಮಾರ್ಟ್ಫೋನ್ ಆರಂಭಿಕ 8GB RAM ಮತ್ತು 256GB ಸ್ಟೋರೇಜ್ ಸುಮಾರು 35,000 ರೂಗಳಿಗೆ ನಿರೀಕ್ಷಿಸಲಾಗಿದೆ.
Vivo T4 Ultra Launch Confirmed: ವಿವೋ ಸ್ಮಾರ್ಟ್ಫೋನ್ ಬ್ರಾಂಡ್ ಭಾರತದಲ್ಲಿ ತನ್ನ ಮುಂಬರಲಿರುವ Vivo T4 Ultra ಬಿಡುಗಡೆಗೆ ಈಗಾಗಲೇ ಡೇಟ್ ಕಂಫಾರ್ಮ್ ಮಾಡಿದ್ದೂ ಈ ಸ್ಮಾರ್ಟ್ಫೋನ್ ಬಿಡುಗಡೆಗೂ ಮುಂಚೆ ಇದರ ಅನೇಕ ಇಂಟ್ರೆಸ್ಟಿಂಗ್ ಮತ್ತು ಆಕರ್ಷಕ ಫೀಚರ್ಗಳನ್ನು ಬಹಿರಂಗಪಡಿಸಿದೆ. ಪ್ರಸ್ತುತ ವಿವೋ ಈ ಬಾರಿ ಮುಖ್ಯವಾಗಿ ಕ್ಯಾಮೆರಾ ವಿಭಾಗದಲ್ಲಿ ಇದನ್ನು ಪರಿಚಯಿಸಲಿದ್ದು ಸೋನಿ ಕ್ಯಾಮೆರಾ ಸೆನ್ಸರ್ ಮತ್ತು ಪವರ್ಫುಲ್ ಫೀಚರ್ಗಳೊಂದಿಗೆ ಪ್ಯಾಕ್ ಮಾಡಿದೆ.
Surveyಸ್ಮಾರ್ಟ್ಫೋನ್ ಪ್ರತ್ಯೇಕವಾಗಿ Flipkart ಮೂಲಕ ಬಿಡುಗಡೆಯಾಗಿ ಮಾರಾಟವಾಗಲಿದೆ. ಈ ಮುಂಬರಲಿರುವ Vivo T4 Ultra ಸ್ಮಾರ್ಟ್ಫೋನ್ Dimensity 9300+ ಪ್ರೊಸೆಸರ್ ಮತ್ತು Sony IMX 921 ಕ್ಯಾಮೆರಾದೊಂದಿಗೆ ಸುಮಾರು 35,000 ರೂಗಳಿಗೆ ಬಿಡುಗಡೆಯಾಗುವುದಾಗಿ ನಿರೀಕ್ಷಿಸಲಾಗಿದೆ.
Vivo T4 Ultra ಬಿಡುಗಡೆಗೆ ಡೇಟ್ ಕಂಫಾರ್ಮ್ ಮತ್ತು ಬೆಲೆ ಎಷ್ಟು?
ಪ್ರಸ್ತುತ ಈ ಸ್ಮಾರ್ಟ್ಫೋನ್ ಬಗ್ಗೆ ಕಂಪನಿ ಬೆಲೆಯನ್ನು ಹೊರತುಪಡಿಸಿ ಸರಿ ಸುಮಾರು ಅಲ್ಲ ಫೀಚರ್ಗಳನ್ನು ಬಹಿರಂಗಪಡಿಸಿದೆ. ಈ ಫೀಚರ್ಗಳ ಆಧಾರದ ಮೇರೆಗೆ Vivo T4 Ultra ಸ್ಮಾರ್ಟ್ಫೋನ್ ಆರಂಭಿಕ 8GB RAM ಮತ್ತು 256GB ಸ್ಟೋರೇಜ್ 34,999 ರೂಗಳಿಗೆ ಮತ್ತೊಂದು 12GB RAM ಮತ್ತು 256GB ಸ್ಟೋರೇಜ್ 37,999 ರೂಗಳಿಗೆ ಮತ್ತು ಕೊನೆಯದಾಗಿ ಇದರ 12GB RAM ಮತ್ತು 512GB ಸ್ಟೋರೇಜ್ ಸುಮಾರು 39,999 ರೂಗಳಿಗೆ ಬರುವ ನಿರೀಕ್ಷೆಗಳಿವೆ.
Vivo T4 Ultra ನಿರೀಕ್ಷಿತ ಫೀಚರ್ಗಳೇನು?
ಈ ಫೋನ್ ಲಿಮಿಟೆಡ್ ಸಮಯಕ್ಕೆ ಬ್ಯಾಂಕ್ ಆಫರ್ ಮತ್ತು ವಿನಿಮಯ ಬೋನಸ್ ಸಹ ನೀಡುವುದಾಗಿ ನಿರೀಕ್ಷಿಸಲಾಗಿದೆ. ವಿವೋ ಇನ್ನೂ ಪೂರ್ಣ ವಿಶೇಷಣಗಳನ್ನು ಅಧಿಕೃತವಾಗಿ ಬಹಿರಂಗಪಡಿಸದಿದ್ದರೂ ಹಲವಾರು ಸೋರಿಕೆಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. Vivo T4 Ultra ಸ್ಮಾರ್ಟ್ಫೋನ್ 120Hz ರಿಫ್ರೆಶ್ ದರದೊಂದಿಗೆ 6.67 ಇಂಚಿನ ಡಿಸ್ಪ್ಲೇಯನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಇದು ಸುಗಮ ದೃಶ್ಯಗಳು ಮತ್ತು ತಲ್ಲೀನಗೊಳಿಸುವ ವೀಕ್ಷಣಾ ಅನುಭವವನ್ನು ನೀಡುತ್ತದೆ.
ಇದನ್ನೂ ಓದಿ: Motorola Edge 60 ಭಾರತದಲ್ಲಿ ಅತಿ ಶೀಘ್ರದಲ್ಲೇ ಬಿಡುಗಡೆ! ಇದರ ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ!
ಹ್ಯಾಂಡ್‌ಸೆಟ್ MediaTek Dimensity 9300+ ಸರಣಿಯ ಚಿಪ್‌ಸೆಟ್‌ನಿಂದ ಚಾಲಿತವಾಗಲಿದೆ ಎಂದು ಸೂಚಿಸಲಾಗಿದೆ. ಇದು ಗೇಮಿಂಗ್ ಮತ್ತು ಬಹುಕಾರ್ಯಕಕ್ಕೆ ಅನುಗುಣವಾಗಿ ಬಲವಾದ ಸಂಸ್ಕರಣಾ ಸಾಮರ್ಥ್ಯಗಳನ್ನು ಸೂಚಿಸುತ್ತದೆ.ಕ್ಯಾಮೆರಾ ವಿಭಾಗದಲ್ಲಿ Vivo T4 Ultra ಸ್ಮಾಟ್ಫೋನ್ 50MP ಪ್ರೈಮರಿ ಸೋನಿ IMX921 ಸೆನ್ಸರ್ ಹೊಂದಿದ್ದು ಮತ್ತೊಂದು 50MP ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್‌ನೊಂದಿಗೆ ಹೊಂದಬಹುದು.
ಅಲ್ಲದೆ ಸ್ಮಾರ್ಟ್ಫೋನ್ ಪ್ರೀಮಿಯಂ ಫ್ಲ್ಯಾಗ್‌ಶಿಪ್‌ಗಳನ್ನು ಅತಿಯಾಗಿ ಬಳಸದೆ ಬಹುಮುಖ ಕ್ಯಾಮೆರಾ ಕಾರ್ಯಕ್ಷಮತೆಯನ್ನು ಬಯಸುವ ಬಳಕೆದಾರರಿಗೆ ಸುಧಾರಿತ ಜೂಮ್ ಮತ್ತು ಸೆನ್ಸರ್ ಸಂಯೋಜನೆಯು ಇಷ್ಟವಾಗುತ್ತದೆ. ಕೊನೆಯದಾಗಿ ಫೋನ್ ಮುಂಭಾಗದಲ್ಲಿ ಸೆಲ್ಫಿ ಕ್ಯಾಮೆರಾಕ್ಕಾಗಿ 50MP ಕ್ಯಾಮೆರಾವನ್ನು ನಿರೀಕ್ಷಿಸಲಾಗಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile