ಮುಂಬರಲಿರುವ Samsung Galaxy S25 Edge ಬಿಡುಗಡೆಗೆ ಡೇಟ್ ಫಿಕ್ಸ್ ಆಯ್ತು! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ
ಮುಂಬರಲಿರುವ Samsung Galaxy S25 Edge ಬಿಡುಗಡೆಗೆ ಡೇಟ್ ಫಿಕ್ಸ್ ಆಯ್ತು!
Samsung Galaxy S25 Edge ಸ್ಮಾರ್ಟ್ಫೋನ್ ಇದೆ 13ನೇ ಮೇ 2025 ರಂದು ಬಿಡುಗಡೆಯಾಗಲು ಸಜ್ಜಾಗಿದೆ.
Samsung Galaxy S25 Edge ಬರೋಬ್ಬರಿ 200MP ಪ್ರೈಮರಿ ಕ್ಯಾಮೆರಾ ಮತ್ತು ಅನೇಕ ಇಂಟ್ರೆಸ್ಟಿಂಗ್ ಫೀಚರ್ಗಳೊಂದಿಗೆ ನಿರೀಕ್ಷೆ.
Samsung Galaxy S25 Edge Launch Date: ದಕ್ಷಿಣ ಕೊರಿಯಾದ ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ಸ್ಯಾಮ್‌ಸಂಗ್ ತನ್ನ ಮುಂಬರಲಿರುವ Samsung Galaxy S25 Series ಅನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಲು ಸಜ್ಜಾಗಿದೆ. ಪ್ರಸ್ತುತ ಈ ಸರಣಿಯಲ್ಲಿ ಬರುವ Samsung Galaxy S25 Edge ಬಗ್ಗೆ ಲಾಂಚ್ ಡೇಟ್ ಕಂಫಾರ್ಮ್ ಮಾಡಿದ್ದು ಈ ಪ್ರೀಮಿಯಂ ಫೋನ್ ಬರೋಬ್ಬರಿ 200MP ಪ್ರೈಮರಿ ಕ್ಯಾಮೆರಾ ಮತ್ತು ಅತಿ ಸ್ಲಿಮ್ ಡಿಸೈನಿಂಗ್ ಜೊತೆಗೆ ಇಂಟ್ರೆಸ್ಟಿಂಗ್ ಫೀಚರ್ಗಗಳನ್ನು ಹೊಂದಿದೆ.
Surveyಈ Samsung Galaxy S25 Edge ಸ್ಮಾರ್ಟ್ಫೋನ್ 13ನೇ ಮೇ 2025 ರಂದು ಬೆಳಿಗ್ಗೆ 9:00am ಗಂಟೆಗೆ (ಭಾರತದಲ್ಲಿ ಬೆಳಿಗ್ಗೆ 5.30am) ಸಮಯಕ್ಕೆ ಬಿಡುಗಡೆಯಾಗಲಿದೆ. ಪ್ರಸ್ತುತ Samsung Galaxy S25 Edge ಸ್ಮಾರ್ಟ್ಫೋನ್ ಬಗ್ಗೆ ಈವರೆಗೆ ಸಿಕ್ಕಿರೋ ಮಾಹಿತಿಗಳೇನು ತಿಳಿಯಿರಿ.
Samsung Galaxy S25 Edge ನಿರೀಕ್ಷಿತ ಫೀಚರ್ಗಳೇನು?
Samsung Galaxy S25 Edge ಸ್ಮಾರ್ಟ್ಫೋನ್ ನಿರೀಕ್ಷಿತ ಫೀಚರ್ಗಳೇನು ಎಂದು ನೋಡುವುದಾದರೆ ಫೋನ್ 6.65 ಇಂಚಿನ AMOLED ಡಿಕ್ಷೆಯನ್ನು 120Hz ರಿಫ್ರೆಶ್ ದರ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಸನ್ 2 ಪ್ರೊಟೆಕ್ಷನ್ 5 ಅನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಈ Samsung Galaxy S25 Edge ಅಲಾ-ಸ್ಲಿಮ್ ವಿನ್ಯಾಸವನ್ನು ಹೊಂದಿದ್ದು ಕೇವಲ 5.84 ಮಿಮೀ ದಪ್ಪವನ್ನು ಹೊಂದಿದೆ ಎಂದು ಹೇಳಲಾಗುತ್ತದೆ.

ಇದು ಸ್ಯಾಮ್‌ಸಂಗ್ ಇದುವರೆಗೆ ಬಿಡುಗಡೆ ಮಾಡಿದ ಅತ್ಯಂತ ತೆಳುವಾದ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. ಇದರ ಸ್ಲಿಮ್ ಪ್ರೊಫೈಲ್ ಹೊರತಾಗಿಯೂ ಫೋನ್ ಸುಮಾರು 162 ಗ್ರಾಂ ತೂಗುತ್ತದೆ ಎಂದು ವದಂತಿಗಳಿವೆ. Samsung Galaxy S25 Edge ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನಿಂದ ಚಾಲಿತವಾಗಲಿದೆ ಎಂದು ಸೂಚಿಸಲಾಗಿದೆ. ಇದು ಆರಂಭಿಕ 12GB RAM ಮತ್ತು 256GB ಸ್ಟೋರೇಜ್ನೊಂದಿಗೆ ಜೋಡಿಸಲ್ಪಟ್ಟಿದೆ.
ಇದನ್ನೂ ಓದಿ: Best Refrigerators: ಅಮೆಜಾನ್ ಸೇಲ್‌ನಲ್ಲಿ ಸುಮಾರು 20,000 ರೂಗಳಿಗೆ ಮಾರಾಟವಾಗುತ್ತಿರುವ ಬೆಸ್ಟ್ ಫ್ರಿಡ್ಜ್ ಲಭ್ಯ!
ಈ ಸ್ಮಾರ್ಟ್ಫೋನ್ ಆಂಡ್ರಾಯ್ಡ್ 15 ಆಧಾರಿತ ಸ್ಯಾಮ್‌ಸಂಗ್‌ನ ಒನ್ UI 7 ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗುತ್ತದೆ. ಫೋನ್ 3,900mAh ಬ್ಯಾಟರಿಯನ್ನು ಹೊಂದಿದ್ದು ಇದು 25W ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದರಲ್ಲಿ 200MP ಪ್ರೈಮರಿ ಸೆನ್ಸರ್ ಮತ್ತು 50MP ಅಲ್ವಾ-ವೈಡ್ ಲೆನ್ಸ್ ನಿರೀಕ್ಷಿಸಲಾಗಿದೆ. ಮತ್ತು ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾವನ್ನು ನಿರೀಕ್ಷಿಸಲಾಗಿದೆ.
Samsung Galaxy S25 Edge ನಿರೀಕ್ಷಿತ ಬೆಲೆಗಳೇನು?
ಈ ಸ್ಮಾರ್ಟ್ಫೋನ್ ಆರಂಭಿಕ 12GB RAM ಮತ್ತು 256GB ಸ್ಟೋರೇಜ್ನೊಂದಿಗೆ ಜೋಡಿಸಲ್ಪಟ್ಟಿದ್ದು ಇದರ ಬೆಲೆಯನ್ನು ಸುಮಾರು 1,19,999 ರೂಗಳಿಗೆ ನಿರೀಕ್ಷಿಸಲಾಗಿದ್ದು ಇದರ ಮತ್ತೊಂದು 12GB RAM ಮತ್ತು 512GB ಸ್ಟೋರೇಜ್ ಅನ್ನು ಸುಮಾರು 1,29,999 ರೂಗಳಿಗೆ ನಿರೀಕ್ಷಿಸಲಾಗಿದೆ. ಆದರೆ ಈ ಪ್ರೀಮಿಯಂ ಸ್ಮಾರ್ಟ್ಫೋನ್ ಬೆಲೆ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿಗಳಿಲ್ಲ. ಈ ಸ್ಮಾರ್ಟ್ಫೋನ್ ಹೊಂದಿರುವ ಫೀಚರ್ ಮತ್ತು ಕಂಪನಿ ಈ S ಸರಣಿಯಲ್ಲಿನ ಫೋನ್ ಬೆಲೆಯನ್ನು ನಿಗದಿಪಡಿಸುವ ಇತಿಹಾಸದ ಮೇರೆಗೆ ಇಂಟರ್ನೆಟ್ನಲ್ಲಿ ಈ ಬೆಲೆಯನ್ನು ನಿರೀಕ್ಷಿಸಲಾಗಿದೆ ಅಷ್ಟೇ.
ಇದನ್ನೂ ಓದಿ: Operation Sindoor 2025: ಆಪರೇಷನ್ ಸಿಂಧೂರ್‌ನಲ್ಲಿ ಪ್ರಿಸಿಶನ್ ಸ್ಟ್ರಿಕ್ ವೆಪನ್ ಸಿಸ್ಟಮ್ (PSWS) ಎಂದರೇನು?
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile