Mock Drill 2025: ಆಕಸ್ಮಿಕವಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸೈರನ್ ಸೌಂಡ್ ಬಂದ್ರೆ ಭಯ ಪಡುವ ಅಗತ್ಯಯವಿಲ್ಲ!

HIGHLIGHTS

ನಿಮ್ಮ ಸ್ಮಾರ್ಟ್ಫೋನ್ ನಾಳೆ 7ನೇ ಮೇ 2025 ರಂದು ಆಕಸ್ಮಿಕವಾಗಿ ಸೈರನ್ ಸೌಂಡ್ ಬಂದ್ರೆ ಭಯ ಪಡುವ ಅಗತ್ಯವಿಲ್ಲ!

ಪ್ರಸ್ತುತ ಈ ಸೈರನ್ ಕೇಂದ್ರ ಸರ್ಕಾರದಿಂದ ನಡೆಸಲ್ಪಡುವ ಎಚ್ಚರಿಕೆಯ ಘಂಟಿಯಾಗಿರುತ್ತದೆ ಎನ್ನುವುದನ್ನು ಗಮನಿಸಬೇಕಿದೆ.

ಅಪ್ಪಿತಪ್ಪಿ ದಾಳಿಯಾದರೆ ತುರ್ತು ಪರಿಸ್ಥಿತಿಯ ಎಚ್ಚರಿಕೆ ಸೈರನ್ (Emergency Siren Alarm) ಸಕ್ರಿಯಗೊಳಿಸಲು ಸಜ್ಜಾಗಿದೆ.

Mock Drill 2025: ಆಕಸ್ಮಿಕವಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸೈರನ್ ಸೌಂಡ್ ಬಂದ್ರೆ ಭಯ ಪಡುವ ಅಗತ್ಯಯವಿಲ್ಲ!

Mock Drill 2025: ಭಾರತದ ಕಾಶ್ಮೀರದಲ್ಲಿ ಕಳೆದ ತಿಂಗಳು ಅಂದರೆ 22ನೇ ಏಪ್ರಿಲ್ 2025 ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ (Pahalgam Terror Attack) ಸುಮಾರು 28 ಕ್ಕೂ ಅಧಿಕ ಭಾರತೀಯ ಪ್ರವಾಸಿಗರನ್ನು ಬಲಿ ತೆಗೆದುಕೊಂಡ ಘಟನೆಗೆ ಉತ್ತರವನ್ನು ನೀಡಲು ಭಾರತ ಸರ್ಕಾರ ಅನೇಕ ಯೋಜನೆಗಳನ್ನು ತಯಾರಿಸುತ್ತಿದೆ. ಇದರೊಂದಿಗೆ ಪಾಕಿಸ್ತಾನದ ವಿರುದ್ದ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜನಸಾಮನ್ಯರ ಉದ್ವಿಗ್ನತೆಯ ಮಧ್ಯೆ ಭಾರತ ಸರ್ಕಾರ ನಾಳೆ ಅಂದರೆ 7ನೇ ಮೇ 2025 ರಂದು ರಾಷ್ಟ್ರವ್ಯಾಪಿ ನಾಗರಿಕ ರಕ್ಷಣಾ ಅಣಕು ಕವಾಯತನ್ನು (Nationwide Civil Defence Mock Drill) ಘೋಷಿಸಿದೆ.

Digit.in Survey
✅ Thank you for completing the survey!

ಇದನ್ನೂ ಓದಿ: Lava Yuva Star 2 ಸದ್ದಿಲ್ಲದೇ ಕೇವಲ ₹6499 ರೂಗಳಿಗೆ ಬಿಡುಗಡೆ! ಆಫರ್ ಬೆಲೆ ಮತ್ತು ಟಾಪ್ ಫೀಚರ್ಗಳೇನು?

ಈ ಸಮಯದಲ್ಲಿ ತುರ್ತು ಪರಿಸ್ಥಿತಿಗಳನ್ನು ಅನುಕರಿಸಲು ಜನಸಾಮನ್ಯರಿಗೆ ಯಾವುದೇ ರೀತಿಯ ದಾಳಿಯಾದರೆ ತುರ್ತು ಪರಿಸ್ಥಿತಿಯ ಎಚ್ಚರಿಕೆ ಸೈರನ್ (Emergency Siren Alarm) ಅನ್ನು ಸಕ್ರಿಯಗೊಳಿಸಲು ಸಜ್ಜಾಗಿದೆ. ನಾಳೆ ನಿಮ್ಮ ಸ್ಮಾರ್ಟ್ ಫೋನ್ ಆಕಸ್ಮಿಕವಾಗಿ ಸೈರನ್ ಸೌಂಡ್ ಬಂದ್ರೆ ಭಯ ಪಡುವ ಅಗತ್ಯಯವಿಲ್ಲ ಇದನ್ನು ಕೇಂದ್ರ ಸರ್ಕಾರದಿಂದ ನಡೆಸಲ್ಪಡುವ ಎಚ್ಚರಿಕೆಯ ಘಂಟಿ ಎನ್ನುವುದನ್ನು ಗಮನಿಸಬೇಕಿದೆ.

Mock Drill 2025 ಫೋನ್‌ನಲ್ಲಿ ಸೈರನ್ ಸೌಂಡ್ ಬಂದ್ರೆ ಭಯ ಪಡುವ ಅಗತ್ಯಯವಿಲ್ಲ!

ಈ ವ್ಯಾಯಾಮದ ಭಾಗವಾಗಿ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ನಾಗರಿಕರು ತಮ್ಮ ಸನ್ನದ್ಧತೆ ಮತ್ತು ಪ್ರತಿಕೂಲ ದಾಳಿಯ ಸಮಯದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಸಾಮರ್ಥ್ಯವನ್ನು ಸುಧಾರಿಸಲು ವಿನ್ಯಾಸಗೊಳಿಸಲಾದ ತರಬೇತಿ ಅವಧಿಗಳಲ್ಲಿ ಭಾಗವಹಿಸುತ್ತಾರೆ. ಉದ್ಭವಿಸುವ ಒಂದು ಸಾಮಾನ್ಯ ಪ್ರಶ್ನೆಯೆಂದರೆ ಈ ವಾಯುದಾಳಿ ಸೈರನ್ ಎಂದರೇನು? ಅದು ಹೇಗೆ ಕೆಲಸ ಮಾಡುತ್ತದೆ ಮತ್ತು ನಮ್ಮ ಸ್ಮಾರ್ಟ್‌ಫೋನ್‌ಗಳು ಅದಕ್ಕೆ ಪ್ರತಿಕ್ರಿಯಿಸುತ್ತವೆಯೇ? ಈ ಲೇಖನದಲ್ಲಿ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ನಾವು ಪ್ರಯತ್ನಿಸುತ್ತೇವೆ.

Mock Drill 2025 - Kannada News
Mock Drill 2025 – Kannada News

ಏರ್ ರೈಡ್ ಸೈರನ್ ಎಂದರೇನು?

ವಾಯುದಾಳಿ ಸೈರನ್ ಎನ್ನುವುದು ಸಾರ್ವಜನಿಕರಿಗೆ ವೈಮಾನಿಕ ದಾಳಿಗಳು ಅಥವಾ ಕ್ಷಿಪಣಿ ದಾಳಿಗಳಂತಹ ಸನ್ನಿಹಿತ ಬೆದರಿಕೆಗಳ ಬಗ್ಗೆ ಎಚ್ಚರಿಕೆ ನೀಡಲು ಬಳಸುವ ಜೋರಾದ ವಿಶಿಷ್ಟವಾದ ಎಚ್ಚರಿಕೆಯಾಗಿದೆ. ಕೆಲವು ಸಂದರ್ಭಗಳಲ್ಲಿ ಈ ಸೈರನ್‌ಗಳನ್ನು ನೈಸರ್ಗಿಕ ವಿಕೋಪಗಳ ಸಮಯದಲ್ಲಿಯೂ ಸಕ್ರಿಯಗೊಳಿಸಲಾಗುತ್ತದೆ. ಸಾಮಾನ್ಯವಾಗಿ ಸೈರನ್ ಸುಮಾರು 60 ಸೆಕೆಂಡುಗಳ ಕಾಲ ಸದ್ದು ಮಾಡುತ್ತದೆ. ಜನರು ತಕ್ಷಣ ಆಶ್ರಯ ಪಡೆಯುವಂತೆ ಸೂಚಿಸುತ್ತದೆ. ವಾಯುದಾಳಿ ಸೈರನ್ ನಿಂತ ನಂತರ ಜನರು ತಮ್ಮ ಆಶ್ರಯಗಳನ್ನು ತೊರೆದು ಸಾಮಾನ್ಯ ಚಟುವಟಿಕೆಗಳನ್ನು ಪುನರಾರಂಭಿಸುವುದು ಸುರಕ್ಷಿತವಾಗಿದೆ ಎಂದು ಅದು ಸಾಮಾನ್ಯವಾಗಿ ಸೂಚಿಸುತ್ತದೆ.

ಏರ್ ರೈಡ್ ಸೈರನ್ ಪ್ರದರ್ಶನದ ಸಮಯದಲ್ಲಿ ಸ್ಮಾರ್ಟ್‌ಫೋನ್‌ಗಳು ಎಚ್ಚರಿಕೆ ನೀಡುತ್ತದೆ

Mock Drill 2025 - Kannada News
Mock Drill 2025 – Kannada News

ಅಣಕು ಪ್ರದರ್ಶನದ ಸಮಯದಲ್ಲಿ ಸ್ಮಾರ್ಟ್‌ಫೋನ್‌ಗಳು ಎಚ್ಚರಿಕೆಗಳನ್ನು ಹೊರಸೂಸಬಹುದು ಎಂಬ ಊಹಾಪೋಹಗಳಿವೆ. ಈ ಸಾಧ್ಯತೆಯನ್ನು ಅರ್ಥಮಾಡಿಕೊಳ್ಳಲು ನಾವು ಇತರ ದೇಶಗಳಲ್ಲಿ ಪರೀಕ್ಷಿಸಲಾದ ಇದೇ ರೀತಿಯ ವ್ಯವಸ್ಥೆಗಳನ್ನು ನೋಡಿದ್ದೇವೆ. ಉದಾಹರಣೆಗೆ ಯುಕೆ ಎರಡು ವರ್ಷಗಳ ಹಿಂದೆ 2023 ರಲ್ಲಿ ತುರ್ತು ಮೊಬೈಲ್ ಎಚ್ಚರಿಕೆ ವ್ಯವಸ್ಥೆಯನ್ನು ಪರೀಕ್ಷಿಸಿತು.

ಪರೀಕ್ಷೆಯ ಸಮಯದಲ್ಲಿ ಎಲ್ಲಾ 4G ಮತ್ತು 5G ಸ್ಮಾರ್ಟ್‌ಫೋನ್‌ಗಳು ಜೋರಾಗಿ ಬೀಪ್ ಮತ್ತು ಕಂಪನದೊಂದಿಗೆ ತುರ್ತು ಸಂದೇಶವನ್ನು ಸ್ವೀಕರಿಸಿದವು – ಫೋನ್ ಸೈಲೆಂಟ್ ಮೋಡ್‌ನಲ್ಲಿದೆಯೇ ಎಂಬುದನ್ನು ಲೆಕ್ಕಿಸದೆ. ಎಚ್ಚರಿಕೆಯು ಸುಮಾರು 10 ಸೆಕೆಂಡುಗಳ ಕಾಲ ನಡೆಯಿತು. ಇದಲ್ಲದೆ ನಿಮ್ಮ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದರೆ ನೀವು ಎಚ್ಚರಿಕೆ ಸಂದೇಶವನ್ನು ಸ್ವೀಕರಿಸುವುದಿಲ್ಲ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo