iQOO Z10 Turbo Series ಬಿಡುಗಡೆಗೆ ಡೇಟ್ ಕಂಫಾರ್ಮ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?

HIGHLIGHTS

iQOO Z10 Turbo Series ತನ್ನ ತಾಯ್ನಾಡಾದ ಚೀನಾದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ.

iQOO Z10 Turbo Series ಇದೆ 28ನೇ ಏಪ್ರಿಲ್ 2025 ರಂದು ಅಧಿಕೃತವಾಗಿ ಬಿಡುಗಡೆಯಲಿವೆ.

ಈ ಸರಣಿಯಲ್ಲಿ iQOO Z10 Turbo ಮತ್ತು iQOO Z10 Turbo Pro ಎಂಬ ಎರಡು ಫೋನ್ ನಿರೀಕ್ಷಿಸಬಹುದು.

iQOO Z10 Turbo Series ಬಿಡುಗಡೆಗೆ ಡೇಟ್ ಕಂಫಾರ್ಮ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?

iQOO Z10 Turbo Series Launch: ಚೀನಾದ ಸ್ಮಾರ್ಟ್ಫೋನ್ ಬ್ರಾಂಡ್ ಐಕ್ಯೂ (iQOO) ತನ್ನ ಮುಂಬರಲಿರುವ ಹೊಸ iQOO Z10 Turbo Series ಸ್ಮಾರ್ಟ್ ಫೋನ್ಗಳನ್ನು ಅತಿ ಶೀಘ್ರದಲ್ಲೇ ಪರಿಚಯಿಸಲಿದೆ. ಕಂಪನಿ ಈ iQOO Z10 Turbo ಸರಣಿಯನ್ನು ಏಪ್ರಿಲ್ 2025 ರಂದು ಅಧಿಕೃತವಾಗಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಸರಣಿಯಲ್ಲಿ iQOO Z10 Turbo ಮತ್ತು iQOO Z10 Turbo Pro ಎಂಬ ಎರಡು ಸ್ಮಾರ್ಟ್ಫೋನ್ಗಳನ್ನು ನಿರೀಕ್ಷಿಸಬಹುದು. ಈಗಾಗಲೇ ಚೀನಾದ ಐಕ್ಯೂ ಟ್ವಿಟ್ಟರ್ ಖಾತೆಯಲ್ಲಿ ಈ ಸ್ಮಾರ್ಟ್ಫೋನ್ ಟೀಸರ್ ಮತ್ತು ಒಂದಿಷ್ಟು ಮಾಹಿತಿಗಳು ಪೋಸ್ಟ್ ಆಗಿದ್ದು ನಮಗೆ ಈವರಗೆ ತಿಳಿದಿರುವ ಮಾಹಿತಿ ಇಲ್ಲಿದೆ.

Digit.in Survey
✅ Thank you for completing the survey!

ಇದನ್ನೂ ಓದಿ: Tips And Trick: ನಿಮ್ಮ ಸ್ಮಾರ್ಟ್ ಫೋನ್ ಸ್ಲೋ ಅಥವಾ ಹ್ಯಾಂಗ್ ಆಗ್ತಾ ಇದ್ರೆ ಈ ಸೆಟ್ಟಿಂಗ್ ಬದಲಾಯಿಸಿಕೊಳ್ಳಿ ಸಾಕು!

iQOO Z10 Turbo Series ಬಿಡುಗಡೆಗೆ ಸಜ್ಜಾಗಿದೆ

iQOO Z10 Turbo ಸರಣಿಯನ್ನು 28ನೇ ಏಪ್ರಿಲ್ 2025 ರಂದು ಅಧಿಕೃತವಾಗಿ ತನ್ನ ತಾಯ್ನಾಡಾದ ಚೀನಾದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಸರಣಿಯಲ್ಲಿ iQOO Z10 Turbo ಮತ್ತು iQOO Z10 Turbo Pro ಎಂಬ ಎರಡು ಸ್ಮಾರ್ಟ್ಫೋನ್ಗಳನ್ನು ನಿರೀಕ್ಷಿಸಬಹುದು. ಹೆಚ್ಚುವರಿಯಾಗಿ ಈ ಎರಡು ಸ್ಮಾರ್ಟ್ ಫೋನ್ಗಳು ಪವರ್ಫುಲ್ ಫೀಚರ್ಗಳೊಂದಿಗೆ ಬರಲಿದೆ.

iQOO Z10 Turbo Series Launch
iQOO Z10 Turbo Series Launch

ಮೊದಲಿಗೆ iQOO Z10 Turbo ಬರೋಬ್ಬರಿ 7620mAh ಬ್ಯಾಟರಿಯೊಂದಿಗೆ MediaTek Dimensity 8400 ಚಿಪ್‌ಸೆಟ್‌ನೊಂದಿಗೆ ಬರುತ್ತದೆ. ಮತ್ತೊಂಡೆ iQOO Z10 Turbo Pro ಸ್ಮಾರ್ಟ್ಫೋನ್ ಬರೋಬ್ಬರಿ 7000mAh ಬ್ಯಾಟರಿಯೊಂದಿಗೆ Qualcomm Snapdragon 8s Gen 4 ಚಿಪ್‌ಸೆಟ್‌ನೊಂದಿಗೆ ಬರುತ್ತದೆ.

iQOO Z10 Turbo Details

ಮೊದಲಿಗೆ ಈಗಾಗಲೇ ಮೇಲೆ ತಿಳಿಸಿರುವಂತೆ ಪವರ್ಫುಲ್ ಫೀಚರ್ಗಳೊಂದಿಗೆ ಬರುವ ಈ iQOO Z10 Turbo 7620mAh ಬ್ಯಾಟರಿಯೊಂದಿಗೆ 90w ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ. ಅಲ್ಲದೆ ಈ ಸ್ಮಾರ್ಟ್ ಫೋನ್ MediaTek Dimensity 8400 ಚಿಪ್‌ಸೆಟ್‌ನೊಂದಿಗೆ ಬರುತ್ತದೆ. ಇದರಲ್ಲಿ ಗೇಮಿಂಗ್‌ಗಾಗಿ ಸ್ವಯಂ-ಅಭಿವೃದ್ಧಿಪಡಿಸಿದ Q1 ಚಿಪ್ ಸಹ ಅನ್ನು ಒಳಗೊಂಡಿವೆ. ಹೆಚ್ಚುವರಿಯಾಗಿ iQOO, Vivo ಅಧಿಕೃತ ವೆಬ್‌ಸೈಟ್, JD.com, Tmall ಮತ್ತು ಚೀನಾದಲ್ಲಿನ ಇತರ ಇ-ಕಾಮರ್ಸ್ ವೆಬ್‌ಸೈಟ್‌ಗಳ ಮೂಲಕ iQOO Z10 ಟರ್ಬೊ ಸರಣಿಗಾಗಿ ಪೂರ್ವ-ಬುಕಿಂಗ್‌ಗಳನ್ನು ಸ್ವೀಕರಿಸಲು ಪ್ರಾರಂಭಿಸಿದೆ .

iQOO Z10 Turbo Pro Details

ಈ ಸ್ಮಾರ್ಟ್ ಫೋನ್ 144Hz ರಿಫ್ರೆಶ್ ದರದೊಂದಿಗೆ 6.78 ಇಂಚಿನ 1.5K OLED ಡಿಸ್ಪ್ಲೇಯನ್ನು ಪಡೆಯಲಿದೆ ಎಂದು ವದಂತಿಗಳಿವೆ . ಇದು 50MP ಮೆಗಾಪಿಕ್ಸೆಲ್ ಮುಖ್ಯ ಸಂವೇದಕ ಮತ್ತು 8MP ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾವನ್ನು ಒಳಗೊಂಡಿರುವ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಘಟಕವನ್ನು ಪ್ಯಾಕ್ ಮಾಡಬಹುದು. ಇದು 16MP ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo