Moto Edge 60 Stylus ಸದ್ದಿಲ್ಲದೇ Sketch Pen ಜೊತೆಗೆ ಲಾಂಚ್ ಡೇಟ್ ಫಿಕ್ಸ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?
Moto Edge 60 Stylus ಸ್ಮಾರ್ಟ್ಫೋನ್ Sketch Pen ಜೊತೆಗೆ ಲಾಂಚ್ ಡೇಟ್ ಫಿಕ್ಸ್ ಆಗಿದೆ.
Moto Edge 60 Stylus ಫೋನ್ Qualcomm Snapdragon 7s Gen 2 ನಿಂದ ನಡೆಯಬಹುದು.
Moto Edge 60 Stylus ಭಾರತದಲ್ಲಿ ಇದೆ 15ನೇ ಏಪ್ರಿಲ್ 2025 ರಂದು ಅಧಿಕೃತವಾಗಿ ಬಿಡುಗಡೆಯಾಗಲಿದೆ.
Moto Edge 60 Stylus In India: ಭಾರತದಲ್ಲಿ ಮುಂಬರಲಿರುವ ಮೊಟೊರೊಲಾ ಕಂಪನಿಯ ಜಬರ್ದಸ್ತ್ ಸ್ಟೈಲಿಶ್ ಲುಕ್ ಮತ್ತು ವಿನ್ಯಾಸದೊಂದಿಗೆ ಬರಲಿರುವ ಈ Moto Edge 60 Stylus ಸ್ಮಾರ್ಟ್ಫೋನ್ ಹೊಸ Sketch Pen ಜೊತೆಗೆ ಸುಮಾರು 25,000 ರೂಗಳೊಳಗೆ ಇದೆ 15ನೇ ಏಪ್ರಿಲ್ 2025 ರಂದು ಅಧಿಕೃತವಾಗಿ ಬಿಡುಗಡೆಯಾಗಲು ಸಿದ್ದವಾಗಿದೆ.
Surveyಮೊಟೊರೊಲಾ ಈ ಸ್ಮಾರ್ಟ್ಫೋನ್ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಒಂದಿಷ್ಟು ಮಾಹಿತಿಯನ್ನು ಪೋಸ್ಟ್ ಮಾಡಿದ್ದೂ ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ (Flipkart) ಮೂಲಕ ಮಾರಾಟ ಮಾಡುವುದನ್ನು ಖಚಿತಪಡಿಸಿದೆ. ಅಲ್ಲದೆ ಈಗಾಗಲೇ ಫ್ಲಿಪ್ಕಾರ್ಟ್ನಲ್ಲಿ ಈ ಮುಂಬರಲಿರುವ Moto Edge 60 Stylus ಸ್ಮಾರ್ಟ್ಫೋನ್ ಫೋನ್ನ ನಿರೀಕ್ಷಿತ ವಿಶೇಷಣ ಮತ್ತು ಫೀಚರ್ಗಳನ್ನು ಸಹ ಬಹಿರಂಗಪಡಿಸಿದೆ.
Moto Edge 60 Stylus ಜೊತೆಗೆ Sketch Pen ಲಭ್ಯ:
ಭಾರತದಲ್ಲಿ ಬಿಡುಗಡೆಗೆ ಸಜ್ಜಾಗಿರುವ ಈ ಸ್ಮಾರ್ಟ್ಫೋನ್ ಮೊದಲ ಬಾರಿಗೆ ಸ್ಯಾಮ್ಸಂಗ್ ಫೋನ್ಗಳಂತೆ Sketch Pen ಜೊತೆಗೆ ಬಿಡುಗಡೆಯಾಗಲು ಸಿದ್ದವಾಗಿದೆ. ಪ್ರಸ್ತುತ ಈ ಸ್ಮಾರ್ಟ್ಫೋನ್ ಪೋಸ್ಟ್ ಬಂದ ನಂತರ ಅನೇಕ ಬಳಕೆದಾರರು ಸಂತೋಷದಲ್ಲಿ ತೆಳಾಡುತ್ತಿದ್ದಾರೆ ಇದಕ್ಕೆ ಕಾರಣ ಇದರ ಬೆಲೆಯಾಗಿದೆ. ಲಕ್ಷಾಂತರ ರೂಪಾಯಿಗಳಲ್ಲಿ ಬರುವ ಸ್ಯಾಮ್ಸಂಗ್ ಎಸ್ ಪೆನ್ ಮಾದರಿಯನ್ನು ಈಗ ಡಿಸೆಂಟ್ ಬೆಲೆಯಲ್ಲಿ ಪಡೆಯುವ ಅವಕಾಶವನ್ನು ಮೋಟೋರೋಲ ನೀಡುತ್ತಿದೆ.
Also Read: UPI ಪೇಮೆಂಟ್ನಿಂದ Aadhaar ವೆರಿಫಿಕೇಷನ್ಗಾಗಿ ಬಳಸುವ QR Code ಕಂಡುಹಿಡಿದವರು ಯಾರು ಗೊತ್ತಾ?
ಪ್ರಸ್ತುತ ಈ Moto Edge 60 Stylus ಫೋನ್ ಫೀಚರ್ ಮತ್ತು ಸರಣಿಯನ್ನು ನೋಡುವುದಾದರೆ ಈಗಸ್ಟೇ ಬಿಡುಗಡೆಯಾದ Moto Edge 60 Fusion ಫೋನ್ ಹೊಂದಿರುವ ಫೀಚರ್ ಮಾದರಿಯನ್ನೇ ಅನುಸಾರಿಸುತ್ತಿರುವ ಈ ಫೋನ್ ಅದೇ ಬೆಲೆಯ ಸುತ್ತಮುತ್ತ ಬರುವುದಾಗಿ ಯೋಚಿಸುತ್ತಿದ್ದರೆ. ಅಂದರೆ ಇದರ ಆರಂಭಿ 8GB RAM ಮತ್ತು 256GB ಸ್ಟೋರೇಜ್ ಸುಮಾರು 24,999 ರೂಗಳಿಂದ ಪ್ರತ್ಯೇಕವಾಗಿ Flipakrt ಮೂಲಕ ಬಿಡುಗಡೆಯಾಗಲು ನಿರೀಕ್ಷಿಸಲಾಗಿದೆ.
Introducing the Motorola edge 60 STYLUS
— Motorola India (@motorolaindia) April 10, 2025
– flex your creativity and flaunt your stylus!Effortlessly creative and precise, just like you!
#motoedge60STYLUS #motorola
Moto Edge 60 Stylus ನಿರೀಕ್ಷಿತ ಫೀಚರ್ ಮತ್ತು ವಿಶೇಷಣಗಳೇನು?
- ಮುಂಭಾಗದಲ್ಲಿ 120Hz ರಿಫ್ರೆಶ್ ದರದೊಂದಿಗೆ 6.7 ಇಂಚಿನ pOLED ಪ್ಯಾನಲ್ ಇರಬಹುದು.
- Moto Edge 60 Stylus ಫೋನ್ Qualcomm Snapdragon 7s Gen 2 ಚಿಪ್ಸೆಟ್ ಅನ್ನು ಹೊಂದಿರಬಹುದು.
- Moto Edge 60 Stylus ಫೋನ್ ಆಂಡ್ರಾಯ್ಡ್ 15 ಆಧಾರಿತ ಕ್ಲೋಸ್-ಟು-ಸ್ಟಾಕ್ ಹಲೋ UI ಇರಬಹುದು.
- ಈಗ ಕ್ಯಾಮೆರಾಗಳ ವಿಷಯಕ್ಕೆ ಬಂದರೆ ಹಿಂಭಾಗದಲ್ಲಿ 50MP ಮುಖ್ಯ ಕ್ಯಾಮೆರಾ ಮತ್ತು 13MP ಅಲ್ಟ್ರಾವೈಡ್ ಕ್ಯಾಮೆರಾ ಇರಬಹುದು.
- Moto Edge 60 Stylus ಸ್ಮಾರ್ಟ್ಫೋನ್ ಮುಂಭಾಗದಲ್ಲಿ ಸೇಲ್ಫಿಗಾಗಿ 32MP ಕ್ಯಾಮೆರಾವನ್ನು ನೀಡುವ ನಿರೀಕ್ಷೆಗಳಿವೆ.
- ಫೋನ್ ಅನ್ನು ಆನ್ನಲ್ಲಿ ಇಡುವುದು 68W ವೈರ್ಡ್ ಚಾರ್ಜಿಂಗ್ ಮತ್ತು 15W ವೈರ್ಲೆಸ್ ಚಾರ್ಜಿಂಗ್ ಹೊಂದಿರುವ 5000mAh ಸೆಲ್ ಆಗಿರಬಹುದು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile