New Aadhaar App: ಹೊಸ ಆಧಾರ್ ಅಪ್ಲಿಕೇಶನ್‌ನಲ್ಲಿ Face ID ಮತ್ತು QR ಕೋಡ್‌ನಂತಹ ಹೊಸ ಫೀಚರ್ ಪರಿಚಯ!

HIGHLIGHTS

ಭಾರತ ಸರ್ಕಾರ ಪ್ರಸ್ತುತ ಹೊಸ New Aadhaar App ಅನ್ನು ಬಿಡುಗಡೆಗೊಳಿಸಿದೆ.

New Aadhaar App ಅಡಿಯಲ್ಲಿ Face ID ಮತ್ತು QR ಕೋಡ್‌ನಂತಹ ಹೊಸ ಫೀಚರ್ ಪರಿಚಯಿಸಿದೆ.

ಈ ಹೊಸ ಅಪ್ಲಿಕೇಶನ್ ಬಂದ ನಂತರ ಇನ್ಮೇಲೆ ಆಧಾರ್ ಫೋಟೋಕಾಪಿ ಅಥವಾ ಕಾರ್ಡ್ ಬಳಸುವ ಅಗತ್ಯವಿಲ್ಲ.

New Aadhaar App: ಹೊಸ ಆಧಾರ್ ಅಪ್ಲಿಕೇಶನ್‌ನಲ್ಲಿ Face ID ಮತ್ತು QR ಕೋಡ್‌ನಂತಹ ಹೊಸ ಫೀಚರ್ ಪರಿಚಯ!

New Aadhaar App 2025: ಭಾರತದಲ್ಲಿ ಪ್ರಸ್ತುತ ಆಧಾರ್ ಬಳಕೆಯನ್ನು ಮತ್ತಷ್ಟು ಹೆಚ್ಚು ಸುಲಭವಾಗಿ ಮತ್ತು ಸುರಕ್ಷಿತವಾಗಿಸುವ ಕ್ರಮವಾಗಿ ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ (Ashwini Vaishnaw) ಹೊಸ ಬಹುನಿರೀಕ್ಷಿತ ಆಧಾರ್ ಅಪ್ಲಿಕೇಶನ್ (New Aadhaar App) ಅನ್ನು ಬಿಡುಗಡೆ ಮಾಡಿದರು. ಕೇಂದ್ರ ಸಚಿವರು ಟ್ವಿಟ್ಟರ್ ಮೂಲಕ ಘೋಷಿಸಿದ ಹೊಸ ಅಪ್ಲಿಕೇಶನ್, ಫೇಸ್ ಐಡಿ ದೃಢೀಕರಣ ಮತ್ತು ಆರ್ಟಿಫಿಸಿಷಿಯಲ್ ಇಂಟೆಲಿಜೆನ್ಸಿ (AI) ಅನ್ನು ಸಂಯೋಜಿಸಿ ಮೊಬೈಲ್ ಅಪ್ಲಿಕೇಶನ್ ಮೂಲಕ ಭಾರತೀಯ ನಾಗರಿಕರಿಗೆ ಡಿಜಿಟಲ್ ಆಧಾರ್ ಸೇವೆಯನ್ನು ತರುತ್ತದೆ.

Digit.in Survey
✅ Thank you for completing the survey!

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಸಹಯೋಗದೊಂದಿಗೆ ನಿರ್ಮಿಸಲಾದ ಈ ಅಪ್ಲಿಕೇಶನ್, ದೃಢೀಕರಣಕ್ಕಾಗಿ QR ಕೋಡ್ ಆಧಾರಿತ ತ್ವರಿತ ಪರಿಶೀಲನೆ ಮತ್ತು ನೈಜ-ಸಮಯದ ಮುಖ ID ಯನ್ನು ಒಳಗೊಂಡಿದೆ. ಇದು ಜನರು ಭೌತಿಕ ಫೋಟೊಗಳನ್ನು ಅಥವಾ ಕಾರ್ಡ್‌ಗಳನ್ನು ಕೊಂಡೊಯ್ಯುವ ಅಗತ್ಯವನ್ನು ನಿವಾರಿಸುತ್ತದೆ. ಆಧಾರ್ ಪರಿಶೀಲನೆಯು UPI ಪಾವತಿ ಮಾಡಿದಷ್ಟು ಸರಳವಾಗುತ್ತದೆ ಎಂದು ವೈಷ್ಣವ್ X ನಲ್ಲಿ ಪೋಸ್ಟ್ ಮಾಡಿದ್ದಾರೆ.

ಅಪ್ಲಿಕೇಶನ್‌ನಲ್ಲಿ Face ID ಮತ್ತು QR ಕೋಡ್‌ನಂತಹ ಹೊಸ ಫೀಚರ್

ಹೊಸ ಆಧಾರ್ ಅಪ್ಲಿಕೇಶನ್ (New Aadhaar App) ಹೇಗೆ ಪ್ರಯೋಜನಕಾರಿ?

ಪ್ರಸ್ತುತ ಕೇಂದ್ರ ಸರ್ಕಾರ ಆಧಾರ್ ಅಪ್ಲಿಕೇಶನ್‌ನ ಆಗಮನದೊಂದಿಗೆ ಬಳಕೆದಾರರು ಇನ್ನು ಮುಂದೆ ಪ್ರಯಾಣ, ಹೋಟೆಲ್ ಚೆಕ್-ಇನ್ ಅಥವಾ ಶಾಪಿಂಗ್ ಸಮಯದಲ್ಲಿ ಭೌತಿಕ ಆಧಾರ್ ಕಾರ್ಡ್ ಅನ್ನು ಕೊಂಡೊಯ್ಯುವ ಅಥವಾ ಅದರ ನಕಲು ಪ್ರತಿಗಳನ್ನು ಹಸ್ತಾಂತರಿಸುವ ಅಗತ್ಯವಿಲ್ಲ. ಈ ಅಪ್ಲಿಕೇಶನ್ ಶೀಘ್ರದಲ್ಲೇ ಬೀಟಾ ಪರೀಕ್ಷಾ ಹಂತದಿಂದ ಹೊರಬರಲಿದ್ದು ರಾಷ್ಟ್ರವ್ಯಾಪಿ ವ್ಯಾಪಕವಾಗಿ ಜಾರಿಗೆ ಬರಲಿದೆ.

Also Read: 32MP ಸೆಲ್ಫಿ ಕ್ಯಾಮೆರಾದ Moto Edge 60 Fusion 5G ಫೋನ್ ಭಾರಿ ಡಿಸ್ಕೌಂಟ್‌ನೊಂದಿಗೆ ಮಾರಾಟ ಶುರು!

ತಮ್ಮ ಆಧಾರ್‌ನ ಭೌತಿಕ ನಕಲು ಪ್ರತಿಗಳನ್ನು ತೋರಿಸುವ ಬದಲು ಹೊಸ ಅಪ್ಲಿಕೇಶನ್ QR ಕೋಡ್ ಸ್ಕ್ಯಾನ್ ನಂತರ ವ್ಯಕ್ತಿಗಳು ತಮ್ಮ ಗುರುತನ್ನು ಪರಿಶೀಲಿಸಲು ಅನುವು ಮಾಡಿಕೊಡುತ್ತದೆ. ಹೊಸ ಆಧಾರ್ ಅಪ್ಲಿಕೇಶನ್‌ನೊಂದಿಗೆ ಬಳಕೆದಾರರಿಗೆ ಅಗತ್ಯ ಡೇಟಾವನ್ನು ಮಾತ್ರ ಹಂಚಿಕೊಳ್ಳಲು ಅವಕಾಶ ನೀಡಲಾಗುವುದು ಇದು ಅವರ ವೈಯಕ್ತಿಕ ಮಾಹಿತಿಯ ಮೇಲೆ ಸಂಪೂರ್ಣ ನಿಯಂತ್ರಣವನ್ನು ನೀಡುತ್ತದೆ. ಫೇಸ್ ಐಡಿ ಆಧಾರಿತ ದೃಢೀಕರಣದ ಜೊತೆಗೆ ಹೊಸ ಆಧಾರ್ ಅಪ್ಲಿಕೇಶನ್ QR ಕೋಡ್ ಪರಿಶೀಲನೆ ವೈಶಿಷ್ಟ್ಯವನ್ನು ಸಹ ನೀಡುತ್ತದೆ. ಆಧಾರ್ ಪರಿಶೀಲನೆಯನ್ನು ತ್ವರಿತ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo