Aadhaar By ChatGPT: ಚಾಟ್‌ಜಿಪಿಟಿಯ ನಕಲಿ ಮತ್ತು ಅಸಲಿ ಆಧಾರ್‌ಗಳ ನಡುವಿನ ವ್ಯತ್ಯಾಸ ಕಂಡುಹಿಡಿಯುವುದು ಹೇಗೆ?

HIGHLIGHTS

ಪ್ರಸ್ತುತ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ನಿಮ್ಮ ನಕಲಿ ಆಧಾರ್ ಕಾರ್ಡ್ (Aadhaar Card) ಅನ್ನು ರಚಿಸಬಹುದು.

ಬಳಕೆದಾರರು ಚಾಟ್‌ಜಿಪಿಟಿಯಲ್ಲಿ ಆಧಾರ್ (Aadhaar By ChatGPT) ಅನ್ನು ರಚಿಸಬಹುದೇ ಎಂದು ಪರೀಕ್ಷಿಸಿದರು.

ಇದಕ್ಕೆ ಉತ್ತರವಾಗಿ ಆಘಾತಕಾರಿ ಫಲಿತಾಂಶಗಳಲ್ಲಿ ಚಾಟ್‌ಜಿಪಿಟಿ ನಕಲಿ ಐಡಿಗಳನ್ನು ರಚಿಸಬಹುದೆಂದು ಕಂಡು ಬಂದಿದೆ.

Aadhaar By ChatGPT: ಚಾಟ್‌ಜಿಪಿಟಿಯ ನಕಲಿ ಮತ್ತು ಅಸಲಿ ಆಧಾರ್‌ಗಳ ನಡುವಿನ ವ್ಯತ್ಯಾಸ ಕಂಡುಹಿಡಿಯುವುದು ಹೇಗೆ?

Aadhaar By ChatGPT: ಪ್ರಸ್ತುತ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ನಿಮ್ಮ ನಕಲಿ ಆಧಾರ್ ಕಾರ್ಡ್ (Aadhaar Card) ಅನ್ನು ರಚಿಸಬಹುದು ಎಂದು ನಿಮಗೆ ತಿಳಿದಿರುವಂತೆ ಈ ಇದು ನಿಮ್ಮ ಗುರುತು ಮತ್ತು ಭಾರತ ಸರ್ಕಾರವು ನೀಡಿದ ವಿಳಾಸದ ಪುರಾವೆಯಾಗಿದೆ. ಆದರೆ ಈಗ ಕೆಲ ಸೋಶಿಯಲ್ ಮೀಡಿಯಾದ ಬಳಕೆದಾರರು ಚಾಟ್‌ಜಿಪಿಟಿಯಲ್ಲಿ ಆಧಾರ್ (Aadhaar By ChatGPT) ಅನ್ನು ರಚಿಸಬಹುದೇ ಎಂದು ಪರೀಕ್ಷಿಸಿದರು ಇದಕ್ಕೆ ಉತ್ತರವಾಗಿ ಆಘಾತಕಾರಿ ಫಲಿತಾಂಶಗಳನ್ನು ಪಡೆದರು.

Digit.in Survey
✅ Thank you for completing the survey!

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (Aadhaar By ChatGPT)

ಅಂದರೆ ಈ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಸರಿಯಾದ ಪ್ರಾಂಪ್ಟ್ ನೀಡಿ ಚಾಟ್‌ಜಿಪಿಟಿ ಮೂಲಕ ನಕಲಿ ಐಡಿಗಳನ್ನು ರಚಿಸಲು ಸಿದ್ದವಾಗಿರುವುದು ಕಂಡು ಬಂದಿದೆ. ಆದರೆ ಇದರ ಪ್ರಯೋಜನಗಳನ್ನು ಹೆಚ್ಚು ವಂಚಕರು ಬಳಸಲು ಸಾಧ್ಯವಾಗುವ ನಿರೀಕ್ಷೆಗಳಿವೆ. ಇದರಿಂದ ಟೆಕ್ನಾಲಜಿಯ ದುರುಪಯೋಗವಾಗಬಹುದು ಎನ್ನುವುದು ಬಳಕೆದಾರರ ಅನಿಸಿಕೆಯಾಗಿದೆ. ಅಲ್ಲದೆ ಹಾಗಾದರೆ ನಿಮ್ಮ ಆಧಾರ್ ಕಾರ್ಡ್ ನಕಲಿಯೇ ಅಥವಾ ಅಸಲಿಯೇ ಎಂದು ಪರಿಶೀಲಿಸಲು ನಿಮ್ಮ ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ.

ಅಸಲಿ ಮತ್ತು ನಕಲಿ ಆಧಾರ್ ಕಾರ್ಡ್ ನಡುವಿನ ವ್ಯತ್ಯಾಸ

ಅಸಲಿ ಮತ್ತು ನಕಲಿ ಆಧಾರ್ ಕಾರ್ಡ್ ನಡುವಿನ ವ್ಯತ್ಯಾಸವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಕೆಳಗಿನ ಚಿತ್ರಗಳನ್ನು ಪರಿಶೀಲಿಸಬಹುದು. ಬಲಭಾಗದಲ್ಲಿರುವ ಚಿತ್ರವು ಚಾಟ್‌ಜಿಪಿಟಿಯಲ್ಲಿ ಬಳಸಿ ರಚಿಸಲಾಗಿದೆ ಮತ್ತು ಬಲಭಾಗದಲ್ಲಿರುವ ಎರಡು ಚಿತ್ರಗಳು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಹಂಚಿಕೊಂಡ ನಿಜವಾದ ಆಧಾರ್ ಕಾರ್ಡ್ನ ಮಾದರಿಯಾಗಿದೆ.

Aadhaar By ChatGPT
Aadhaar By ChatGPT

ವ್ಯತ್ಯಾಸ 1: ಐಡಿಯಲ್ಲಿ ಪಾಸ್ಪೋರ್ಟ್ ಗಾತ್ರದ ಚಿತ್ರವನ್ನು ಪರಿಶೀಲಿಸಿ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮೂಲಕ ರಚಿಸಿದ ಇಮೇಜ್ ಅಪ್ಲೋಡ್ ಮಾಡಿದ / ರಿಯಲ್ ಇಮೇಜ್ಗಳಿಂದ ತುಂಬ ವ್ಯತ್ಸಾಸದಲ್ಲಿ ಕಾಣಬಹುದು.

ವ್ಯತ್ಯಾಸ 2: ಅಸಲಿ ಮತ್ತು ನಕಲಿ ಆಧಾರ್ ಕಾರ್ಡ್ ನಿಮ್ಮ ಮಾಹಿತಿಯನ್ನು ಹಿಂದಿ/ಇಂಗ್ಲಿಷ್ ಫಾಂಟ್ ಅನ್ನು ಹೋಲಿಸಬಹುದು.

ವ್ಯತ್ಯಾಸ 3: ಕೊಲೊನ್ಗಳ ಸ್ಥಾನ, ಸ್ಲ್ಯಾಶ್ ಮತ್ತು ಕಮಾಸ್ ಸೇರಿದಂತೆ ಆಧಾರ್ ನ ರಚನೆಯನ್ನು ಪರಿಶೀಲಿಸಿ.

ವ್ಯತ್ಯಾಸ 4: ಆಧಾರ್ ಮತ್ತು ಭಾರತ ಸರ್ಕಾರದ ಲೋಗೊಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ.

ವ್ಯತ್ಯಾಸ 5: ಆಧಾರ್ ಕಾರ್ಡ್ ನಲ್ಲಿ ಕ್ಯೂಆರ್ ಕೋಡ್ ಇದೆಯೇ ಎಂದು ನೋಡಿ. ಅದು ಇದ್ದರೆ ಅದು ನೈಜವಾಗಿದೆಯೇ ಎಂದು ಪರಿಶೀಲಿಸಲು ಸ್ಕ್ಯಾನ್ ಮಾಡಿ.

UIDAI ವೆಬ್‌ಸೈಟ್‌ನಲ್ಲಿ ಅಸಲಿ Aadhaar ಪರಿಶೀಲಿಸುವುದು ಹೇಗೆ?

ಇದಕ್ಕಾಗಿ ಮೊದಲಿಗೆ ನೀವು UIDAI ವೆಬ್‌ಸೈಟ್‌ಗೆ (https://myaadhaar.uidai.gov.in/verifyAadhaar) ಭೇಟಿ ನೀಡಿ.

ಇದರ ನಂತರ “ಚೆಕ್ ಆಧಾರ್ ವ್ಯಾಲಿಡಿಟಿ” ಮೇಲೆ ಕ್ಲಿಕ್ ಮಾಡಿ.

12-ಅಂಕಿಈಗ ಇಲ್ಲಿ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.

ಇಲ್ಲಿ ನಿಮ್ಮ ಆಧಾರ್ ಸಂಖ್ಯೆ ನಕಲಿಯಾಗಿದ್ದರೆ, ನೀವು ಮುಂದುವರಿಯಲು ಸಾಧ್ಯವಾಗುವುದಿಲ್ಲ ಮತ್ತು ವೆಬ್ಸೈಟ್ ಮಾನ್ಯ ಆಧಾರ್ ಸಂಖ್ಯೆಯನ್ನು ನಮೂದಿಸಲು ನಿಮ್ಮನ್ನು ಕೇಳುತ್ತದೆ. ನೀವು ಮಾನ್ಯ ಸಂಖ್ಯೆಯನ್ನು ಸೇರಿಸಿದರೆ ಮಾತ್ರ ನೀವು ಮುಂದುವರಿಯಬಹುದು. ನೀವು ಈ ಹಂತವನ್ನು ದಾಟಿದರೆ ಹೊಸ ಪುಟವು ಕಾಣಿಸಿಕೊಳ್ಳುತ್ತದೆ ಇದರಲ್ಲಿ ನಿಮ್ಮ ಮಾಹಿತಿ ಕಾಣಿಸಿಕೊಳ್ಳುತ್ತದೆ ನಕಲಿಯಾಗಿದ್ದಾರೆ ಮುಂದಿನ ಹಂತಕ್ಕೆ ಹೋಗೋಲ್ಲ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo