ವ್ಯವಹಾರ, ಶಿಕ್ಷಣ ಅಥವಾ ಇನ್ನಾವುದೇ ಕಾರ್ಯಗಳಿಗೆ ಸರ್ಕಾರದಿಂದಲೇ ಸಾಲವನ್ನು ಪಡೆಯಬಹುದು.
ಜನ್ ಸಮರ್ಥ್ ಪೋರ್ಟಲ್‌ಗೆ (JanSamarth Portal) ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಸಾಲವನ್ನು ಪಡೆಯಲು ನೀವು JanSamarth Portal ನಿಯಮ ಮತ್ತು ಷರತ್ತುಗಳೊಂದಿಗೆ ಅರ್ಹತೆಯನ್ನು ಪರಿಶೀಲಿಸಬಹುದು.
JanSamarth Portal: ಪ್ರತಿದಿನ ಬಹಳಷ್ಟು ಜನರು ತಮ್ಮ ಸಾಲವನ್ನು ಅನುಮೋದಿಸಲು ಸರ್ಕಾರಿ ಕಚೇರಿಗಳು ಮತ್ತು ಬ್ಯಾಂಕುಗಳಿಗೆ ಸುತ್ತಾಡುವುದನ್ನು ನೀವು ಕಂಡು ಕೇಳಿರಬಹುದು. ಇದನ್ನು ಗಮನದಲ್ಲಿರಿಸಿಕೊಂಡು ಸರ್ಕಾರ ಹೊಸ ಯೋಜನೆಯೊಂದನ್ನು ಪರಿಚಯಿಸಿ ಮಹತ್ತರ ಹೆಜ್ಜೆಯನ್ನು ಇಟ್ಟಿದೆ. ಈ ಮೂಲಕ ಜನ ಸಾಮಾನ್ಯರು ತಮ್ಮ ವ್ಯವಹಾರ, ಶಿಕ್ಷಣ ಅಥವಾ ಇನ್ನಾವುದೇ ಕಾರ್ಯಗಳಿಗೆ ನೇರವಾಗಿ ಸರ್ಕಾರದಿಂದಲೇ ಸಾಲವನ್ನು ಪಡೆಯಲು ಬಯಸುವವರು ಈ ಜನ್ ಸಮರ್ಥ್ ಪೋರ್ಟಲ್‌ಗೆ (JanSamarth Portal) ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
Surveyಜನ ಸಮರ್ಥ ಪೋರ್ಟಲ್ (JanSamarth Portal) ಬಗ್ಗೆ ಸಮೂರ್ನಾ ಮಾಹಿತಿ
ನೀವು ಈ ಸಾಲವನ್ನು ಪಡೆಯಲು ನಿಆಯಾಮ ಷರತ್ತುಗಳಡಿಯಲ್ಲಿ ಅರ್ಹತೆಯನ್ನು ಪೋರ್ಟಲ್‌ನಲ್ಲಿ ಪರಿಶೀಲಿಸುವುದರೊಂದಿಗೆ ಎಷ್ಟು ಸಾಲ ಮಂಜೂರಾಗುತ್ತದೆ ಎಂಬುದರ ಬಗ್ಗೆಯೂ ತಿಳಿಯಬಹುದು. ಒಂದು ವೇಳೆ ನೀವು ಅರ್ಹರಾಗಿದ್ದರೆ ಸಿಗುವ ಸಾಲವನ್ನು ಮರು ಪಾವತಿಸಬೇಕಾದ ಇಎಂಐ ಮೊತ್ತದ ಸಂಪೂರ್ಣ ವಿವರಗಳನ್ನು ಸಹ ಮೊದಲೇ ನೀಡುತ್ತದೆ. ನೀವು ಯಾವ ಯೋಜನೆಯಡಿಯಲ್ಲಿ ಸಾಲ ಪಡೆಯಬಹುದು ಮತ್ತು ಎಷ್ಟು ವರ್ಷಗಳವರೆಗೆ ನೀವು ಮಾಸಿಕ ಕಂತುಗಳನ್ನು ಪಾವತಿಸಬೇಕಾಗುತ್ತದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಜನ ಸಮರ್ಥ ಪೋರ್ಟಲ್ (JanSamarth Portal) ವಿವರಿಸುತ್ತದೆ.

ಬರೋಬ್ಬರಿ 15 ಯೋಜನೆಗಳು ಮತ್ತು 7 ವಿಭಾಗಗಳಲ್ಲಿ ಸಾಲ:
ಜನ ಸಮರ್ಥ ಪೋರ್ಟಲ್ ಮೂಲಕ 15 ಸರ್ಕಾರಿ ಯೋಜನೆಗಳ ಅಡಿಯಲ್ಲಿ 7 ಸಾಲ ವಿಭಾಗಗಳಲ್ಲಿ ಸಾಲಗಳನ್ನು ನೀಡಲಾಗುತ್ತಿದೆ. ನೀವು ಅರ್ಜಿ ಸಲ್ಲಿಸಲು ಬಯಸಿದರೆ ಮೊದಲು ವೆಬ್‌ಸೈಟ್‌ನಲ್ಲಿ ನೋಂದಾಯಿಸಿ. ಇದಕ್ಕಾಗಿ ನಿಮ್ಮ ಬಳಿ ಮೊಬೈಲ್ ಸಂಖ್ಯೆ ಇರಬೇಕು. ಅದರ ಮೇಲೆ OTP ಬರುತ್ತದೆ. ಅದರ ನಂತರ ನೀವು ನೋಂದಾಯಿಸಲು ಸಾಧ್ಯವಾಗುತ್ತದೆ. ವೆಬ್‌ಸೈಟ್‌ನ ಬಳಕೆದಾರ ಇಂಟರ್ಫೇಸ್ ಸ್ವಚ್ಛವಾಗಿದ್ದು ಒಂದು ಯೋಜನೆಯನ್ನು ವಿವರವಾಗಿ ವಿವರಿಸಲಾಗಿದೆ. ಇದು ಬಳಕೆದಾರರಿಗೆ ಸ್ಪಷ್ಟ ಮಾಹಿತಿಯನ್ನು ನೀಡುತ್ತದೆ.
Also Read: APAAR ID Card: ವಿದ್ಯಾರ್ಥಿಗಳು ಹೊಸ ಅಪಾರ್ ಐಡಿ ಕಾರ್ಡ್ ಪಡೆಯುವುದು ಹೇಗೆ? ಇದರ ಪ್ರಯೋಜನಗಳೇನು?
ಈ ವೆಬ್‌ಸೈಟ್‌ನಲ್ಲಿ (https://www.jansamarth.in/home) ನಾವು ಅರ್ಹತೆಯನ್ನು ಪರಿಶೀಲಿಸಿದಾಗ ಬಳಕೆದಾರರ ಅನುಭವದಲ್ಲಿ ಯಾವುದೇ ಅಡಚಣೆ ಉಂಟಾಗಲಿಲ್ಲ. ಈ ಪ್ರಕ್ರಿಯೆಯು ಸಹ ಸುಗಮವಾಗಿ ಕಾಣುತ್ತಿತ್ತು. ಎಲ್ಲಾ ರೀತಿಯ ಸಾಲಗಳು ಜನ ಸಮರ್ಥ ಪೋರ್ಟಲ್‌ನಲ್ಲಿ ಲಭ್ಯವಿದೆ. ರೈತರಿಗೆ ಕೃಷಿ ಸಾಲ, ಮಕ್ಕಳಿಗೆ ಶಿಕ್ಷಣ ಸಾಲ, ಮತ್ತು ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಬಯಸುವವರಿಗೆ ಸಾಲ ಸೌಲಭ್ಯವೂ ಇದೆ. ಮೊದಲನೆಯದಾಗಿ ಅರ್ಜಿದಾರರು ಸಾಲಕ್ಕೆ ಅರ್ಹರೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು. ಅರ್ಹತೆ ಪಡೆದ ನಂತರ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ ಮುಂತಾದ ಕೆಲವು ದಾಖಲೆಗಳು ಬೇಕಾಗುತ್ತವೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile