FREE YouTube Premium: ರಿಲಯನ್ಸ್ ಜಿಯೋ ತನ್ನ ಬ್ರಾಡ್ಬ್ಯಾಂಡ್ ಬಳಕೆದಾರರಿಗೆ ಹೊಸ ವರ್ಷದ ಕೊಡುಗೆಯಾಗಿ ಬಿಡುಗಡೆ ಮಾಡಿದೆ. ಆಯ್ದ JioFiber ಮತ್ತು Jio AirFiber ಪೋಸ್ಟ್ಪೇಯ್ಡ್ ಯೋಜನೆಗಳೊಂದಿಗೆ ಎರಡು ವರ್ಷಗಳವರೆಗೆ ಉಚಿತ ಯೂಟ್ಯೂಬ್ ಪ್ರೀಮಿಯಂ (FREE YouTube Premium) ಅನ್ನು ಉಚಿತವಾಗಿ ಮಾಡುತ್ತದೆ.
Survey
✅ Thank you for completing the survey!
YouTube ನಿರಂತರ ಜಾಹೀರಾತುಗಳಿಂದ ಬೇಸರಗೊಂಡಿರುವ ಜಿಯೋ ಬ್ರಾಡ್ಬ್ಯಾಂಡ್ ಯೋಜನೆಗಳನ್ನು ಬಳಸುವವರು ನೀವಾಗಿದ್ದರೆ ನಿಮಗೆ ಅತ್ಯುತ್ತಮ ಆಫರ್ ಜಿಯೋ ನೀಡುತ್ತಿದೆ. ಪ್ರಪಂಚದ ಅತ್ಯಂತ ಜನಪ್ರಿಯ ವೀಡಿಯೊ ಪ್ಲಾಟ್ಫಾರ್ಮ್ಗಳಲ್ಲಿ ಒಂದಾಗಿರುವ ಯೂಟ್ಯೂಬ್ (YouTube ) ಯಾವುದೇ ಜಾಹೀರಾತುಗಳಿಲ್ಲದೆ ಹೆಚ್ಚಿನ ಫೀಚರ್ಗಳೊಂದಿಗೆ ಉಚಿತವಾಗಿ ಬರೋಬ್ಬರಿ 2 ವರ್ಷಕ್ಕೆ ಪಡೆಯಬಹುದು.
ಸಾಮಾನ್ಯವಾಗಿ ನೀವು YouTube Premium ಚಂದಾದಾರಿಕೆ ಪಡೆಯಲು ತಿಂಗಳಿಗೆ 159 ರೂಗಳು ಮತ್ತು ವರ್ಷಕ್ಕೆ 1490 ರೂಗಳಾಗಿವೆ. ಆದರೆ ಜಿಯೋ ಇದನ್ನು 2 ವರ್ಷಕ್ಕೆ ಉಚಿತವಾಗಿ ನೀಡಲು ಮುಂದಾಗಿದೆ. ಪ್ರಸ್ತುತ ರಿಲಯನ್ಸ್ ಜಿಯೋದ ಈ ಕೆಳಗಿನ ಯೋಜನೆಗಳಿಗೆ ಚಂದಾದಾರರಾಗಿರುವ JioFiber /AirFiber ಪೋಸ್ಟ್ಪೇಯ್ಡ್ ಗ್ರಾಹಕರು ಈ ಆಫರ್ಗೆ ಅರ್ಹರಾಗುತ್ತಾರೆ. ಇದರಲ್ಲಿ ನಿಮಗೆ ರೂ 888, ರೂ 1199, ರೂ 1499, ರೂ 2499, ಮತ್ತು ರೂ 3499 ಯೋಜನೆಗಳಿಗೆ ಜಿಯೋ ಈ ಹೊಸ ಆಫರ್ ಅನ್ವಯಿಸುತ್ತದೆ.
ಈ YouTube Premium ಆಫರ್ ಆಕ್ಟಿವೇಟ್ ಮಾಡಿಕೊಳ್ಳುವುದು ಹೇಗೆ?
ಮೊದಲನೆಯದಾಗಿ ನೀವು JioFiber ಅಥವಾ AirFiber ನಿಂದ ಅರ್ಹವಾದ ಪೋಸ್ಟ್ಪೇಯ್ಡ್ ಬ್ರಾಡ್ಬ್ಯಾಂಡ್ ಯೋಜನೆಯನ್ನು ಖರೀದಿಸಬೇಕು ಅಥವಾ ಚಂದಾದಾರರಾಗಬೇಕು. ಅದರ ನಂತರ ನಿಮ್ಮ MyJio ಖಾತೆಗೆ ಲಾಗಿನ್ ಮಾಡಿ ಮತ್ತು ಅಪ್ಲಿಕೇಶನ್/ವೆಬ್ಸೈಟ್ನಲ್ಲಿ ಪ್ರದರ್ಶಿಸಲಾದ YouTube ಪ್ರೀಮಿಯಂ ಬ್ಯಾನರ್ ಅನ್ನು ಟ್ಯಾಪ್ ಮಾಡಿ. ನಂತರ ನಿಮ್ಮ ಯೌಟ್ಯೂಬ್ ಖಾತೆಗೆ ಸೈನ್-ಇನ್ ಮಾಡಿ ಮತ್ತು ನೀವು ಈಗಾಗಲೇ ಒಂದನ್ನು ಹೊಂದಿಲ್ಲದಿದ್ದರೆ ಹೊಸದನ್ನು ರಚಿಸಬೇಕಾಗುತ್ತದೆ.
ಇದರ ನಂತರ ನೀವು 2 ವರ್ಷಗಳ ಕಾಲ JioFiber/AirFiber ಸೇವೆಯೊಂದಿಗೆ YouTube Premium ಅನ್ನು ಆರಾಮವಾಗಿ ಆನಂದಿಸಲು ಸಾಧ್ಯವಾಗುತ್ತದೆ. ನೀವು ಜಿಯೋದ ಪೋಸ್ಟ್ಪೇಯ್ಡ್ ಬ್ರಾಡ್ಬ್ಯಾಂಡ್ ಚಂದಾದಾರರಾಗಿದ್ದರೆ ನಿಮಗೆ ಉಚಿತ ಜಿಯೋ ಸೆಟ್-ಟಾಪ್ ಬಾಕ್ಸ್ ಒದಗಿಸಲು ಕಂಪನಿಗೆ ನೀವು ವಿನಂತಿಸಬಹುದು ಮತ್ತು ಅದನ್ನು ಬಳಸಿಕೊಂಡು ನಿಮ್ಮ ಹಳೆಯ ಟಿವಿಯನ್ನು ಸ್ಮಾರ್ಟ್ ಟಿವಿಯಾಗಿ ಪರಿವರ್ತಿಸಿ ಒಟಿಟಿಯನ್ನು ವೀಕ್ಷಿಸಬಹುದು.
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile