Xiaomi’s Redmi Note 14 Series: ಬರೋಬ್ಬರಿ 6200mAh ಬ್ಯಾಟರಿಯೊಂದಿಗೆ ಜಬರ್ದಸ್ತ್ 5G ಫೋನ್‌ಗಳು ಬಿಡುಗಡೆ

HIGHLIGHTS

Redmi Note 14 ಸ್ಮಾರ್ಟ್ಫೋನ್ 6.67 ಇಂಚಿನ AMOLED ಡಿಸ್ಪ್ಲೇಯ ಕೇವಲ 17,999 ರೂಗಳಿಂದ ಆರಂಭ.

Redmi Note 14 Pro ಸ್ಮಾರ್ಟ್ಫೋನ್ MediaTek Dimensity 7300 Ultra ಚಿಪ್‌ಸೆಟ್ ಅನ್ನು ಹೊಂದಿದೆ.

Redmi Note 14 Pro+ ಸ್ಮಾರ್ಟ್ಫೋನ್ Qualcomm Snapdragon 7s Gen 3 ಪ್ರೊಸೆಸರ್ನಿಂದ ಚಾಲಿತವಾಗಿದೆ.

Xiaomi’s Redmi Note 14 Series: ಬರೋಬ್ಬರಿ 6200mAh ಬ್ಯಾಟರಿಯೊಂದಿಗೆ ಜಬರ್ದಸ್ತ್ 5G ಫೋನ್‌ಗಳು ಬಿಡುಗಡೆ

ಭಾರತದಲ್ಲಿ Xiaomi’s Redmi Note 14 Series ಅಡಿಯಲ್ಲಿ ಕಂಪನಿ Redmi Note 14 ಮತ್ತು Redmi Note 14 Pro ಮತ್ತು Redmi Note 14 Pro+ ಸ್ಮಾರ್ಟ್ಫೋನ್‌ಗಳನ್ನು 6200mAh ಬ್ಯಾಟರಿ ಮತ್ತಷ್ಟು ಆಸಕ್ತಿದಾಯಕ ಫೀಚರ್ಗಳೊಂದಿಗೆ ಬಿಡುಗಡೆಯಾಗಿವೆ. ಇವುಗಳ ಆಫರ್ ಬೆಲೆ ಮತ್ತು ಲೇಟೆಸ್ಟ್ ಫೀಚರ್ಗಳೊಂದಿಗೆ ಇತ್ತೀಚಿನ ಅನೇಕ ಸ್ಮಾರ್ಟ್ಫೋನ್ಗಳಿಗೆ ಪ್ರತಿಸ್ಪರ್ಧಿಯಾಗಿ ಮಾರುಕಟ್ಟೆಗೆ ಕಾಲಿಟ್ಟಿದೆ. ಈ Xiaomi’s Redmi Note 14 Series ಸ್ಮಾರ್ಟ್ಫೋನ್‌ಗಳ ಬೆಲೆ ಮತ್ತು ಫೀಚರ್ಗಳೊಂದಿಗೆ ಒಂದಿಷ್ಟು ಹೈಲೈಟ್ ಮಾಹಿತಿ ಈ ಕೆಳಗೆ ನೀಡಲಾಗಿದೆ.

Digit.in Survey
✅ Thank you for completing the survey!

Also Read: ಈ 3 ಸೀಕ್ರೆಟ್ ಫೀಚರ್ಗಳನ್ನು ಬಳಸಿ ನಿಮ್ಮ WhatsApp Chatting ಅನುಭವ ಮತ್ತಷ್ಟುಇಂಟ್ರೆಸ್ಟಿಂಗ್ ಮಾಡಬಹುದು!

Xiaomi’s Redmi Note 14 Series ಬೆಲೆ ಮತ್ತು ಫೀಚರ್ಗಳೇನು?

Redmi Note 14

Redmi Note 14 ಸ್ಮಾರ್ಟ್ಫೋನ್ 6.67 ಇಂಚಿನ AMOLED ಡಿಸ್ಪ್ಲೇಯನ್ನು 120Hz ವರೆಗೆ ರಿಫ್ರೆಶ್ ದರ ಮತ್ತು 2,100 nits ನ ಗರಿಷ್ಠ ಹೊಳಪನ್ನು ಹೊಂದಿದೆ. ಇದು MediaTek Dimensity 7025 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಕ್ಯಾಮೆರಾ ಮುಂಭಾಗದಲ್ಲಿ ಸರಣಿಯ ಮೂಲ ರೂಪಾಂತರವು 50MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಮತ್ತು ಇನ್ನೊಂದು 2MP ಮೆಗಾಪಿಕ್ಸೆಲ್ ಲೆನ್ಸ್‌ನೊಂದಿಗೆ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಪ್ಯಾಕ್ ಮಾಡುತ್ತದೆ.

Redmi Note 14 ಸ್ಮಾರ್ಟ್ಫೋನ್ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 16MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಸಹ ಹೊಂದಿದೆ. ಕೊನೆಯದಾಗಿ ಇದು 45W ಚಾರ್ಜಿಂಗ್ ಬೆಂಬಲದೊಂದಿಗೆ 5,110mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. Redmi Note 14 ಸ್ಮಾರ್ಟ್ಫೋನ್ 8GB RAM ಮತ್ತು 128GB ಸ್ಟೋರೇಜ್ ಕೇವಲ 23,999 ರೂಗಳಿಂದ ಶುರುವಾಗುತ್ತದೆ.

Xiaomi Redmi Note 14 Series Launched in India

Redmi Note 14 Pro

Redmi Note 14 Pro ಸ್ಮಾರ್ಟ್ಫೋನ್ 6.67 ಇಂಚಿನ AMOLED ಡಿಸ್ಪ್ಲೇಯನ್ನು 120Hz ವರೆಗೆ ರಿಫ್ರೆಶ್ ದರ ಮತ್ತು 3000 nits ನ ಗರಿಷ್ಠ ಹೊಳಪನ್ನು ಹೊಂದಿದೆ. ಇದು MediaTek Dimensity 7300 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಕ್ಯಾಮೆರಾ ಮುಂಭಾಗದಲ್ಲಿ ಸರಣಿಯ ಮೂಲ ರೂಪಾಂತರವು 50MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಮತ್ತು ಇನ್ನೊಂದು 8MP ಮೆಗಾಪಿಕ್ಸೆಲ್ ಮತ್ತು 2MP ಮ್ಯಾಕ್ರೋ ಲೆನ್ಸ್‌ನೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಪ್ಯಾಕ್ ಮಾಡುತ್ತದೆ.

Redmi Note 14 Pro ಸ್ಮಾರ್ಟ್ಫೋನ್ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 20MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಸಹ ಹೊಂದಿದೆ. ಕೊನೆಯದಾಗಿ ಇದು 45W ಚಾರ್ಜಿಂಗ್ ಬೆಂಬಲದೊಂದಿಗೆ 5510mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. Redmi Note 14 Pro ಸ್ಮಾರ್ಟ್ಫೋನ್ 6GB RAM ಮತ್ತು 128GB ಸ್ಟೋರೇಜ್ ಕೇವಲ 17,999 ರೂಗಳಿಂದ ಶುರುವಾಗುತ್ತದೆ.

Redmi Note 14 Pro+

Redmi Note 14 Pro+ ಸ್ಮಾರ್ಟ್ಫೋನ್ 6.67 ಇಂಚಿನ 3D Curved AMOLED ಡಿಸ್ಪ್ಲೇಯನ್ನು 120Hz ವರೆಗೆ ರಿಫ್ರೆಶ್ ದರ ಮತ್ತು 3000 nits ನ ಗರಿಷ್ಠ ಹೊಳಪನ್ನು ಹೊಂದಿದೆ. ಇದು Snapdragon 7s Gen 3 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಕ್ಯಾಮೆರಾ ಮುಂಭಾಗದಲ್ಲಿ ಸರಣಿಯ ಮೂಲ ರೂಪಾಂತರವು 50MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಮತ್ತು ಇನ್ನೊಂದು 50MP ಮೆಗಾಪಿಕ್ಸೆಲ್ ಮತ್ತು 8MP ಮ್ಯಾಕ್ರೋ ಲೆನ್ಸ್‌ನೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಪ್ಯಾಕ್ ಮಾಡುತ್ತದೆ.

Xiaomi Redmi Note 14 Series Launched in India

Redmi Note 14 Pro+ ಸ್ಮಾರ್ಟ್ಫೋನ್ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 20MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಸಹ ಹೊಂದಿದೆ. ಕೊನೆಯದಾಗಿ ಇದು 90W ಚಾರ್ಜಿಂಗ್ ಬೆಂಬಲದೊಂದಿಗೆ 6200mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. Redmi Note 14 Pro+ ಸ್ಮಾರ್ಟ್ಫೋನ್ 6GB RAM ಮತ್ತು 128GB ಸ್ಟೋರೇಜ್ ಕೇವಲ 29,999 ರೂಗಳಿಂದ ಶುರುವಾಗುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo