8GB RAM ಮತ್ತು Dimensity 7050 ಪ್ರೊಸೆಸರ್‌ನೊಂದಿಗೆ OPPO F27 Pro Plus 5G ಬಿಡುಗಡೆಯಾಗಿದೆ
ಭಾರತದಲ್ಲಿ ಒಪ್ಪೋ (OPPO) ತನ್ನ ಲೇಟೆಸ್ಟ್ 5G ಸ್ಮಾರ್ಟ್ಫೋನ್ ಅನ್ನು ಅಧಿಕೃತವಾಗಿ ಬಿಡುಗಡೆಯಾಗಿದೆ.
OPPO F27 Pro Plus 5G ಭಾರತದ ಮೊಟ್ಟ ಮೊದಲ IP69 ರೇಟೆಡ್ ಹೊಂದಿರುವ ಸ್ಮಾರ್ಟ್‌ಫೋನ್ ಆಗಿದೆ.
8GB RAM ಮತ್ತು Dimensity 7050 ಪ್ರೊಸೆಸರ್‌ನೊಂದಿಗೆ ಸುಮಾರು 27,999 ರೂಗಳ ಬೆಲೆಯಲ್ಲಿ ಅನಾವರಣಗೊಳಿಸಿದೆ.
ಭಾರತದಲ್ಲಿ ಚೀನಾದ ಸ್ಮಾರ್ಟ್ಫೋನ್ ತಯಾರಕರಾದ ಒಪ್ಪೋ (OPPO) ತನ್ನ ಲೇಟೆಸ್ಟ್ 5G ಸ್ಮಾರ್ಟ್ಫೋನ್ ಅನ್ನು ಅಧಿಕೃತವಾಗಿ ಬಿಡುಗಡೆಯಾಗಿದ್ದು ಇಂದು ಅಂದ್ರೆ 13ನೇ ಜೂನ್ 2024 ರಂದು ಭಾರತದ ಮೊಟ್ಟ ಮೊದಲ IP69 ರೇಟೆಡ್ ಹೊಂದಿರುವ ಸ್ಮಾರ್ಟ್‌ಫೋನ್ OPPO F27 Pro Plus 5G ಡ್ರಾಪ್ ರೆಸಿಸ್ಟೆನ್ಸ್‌ಗಾಗಿ ಸ್ವಿಸ್ SGS ಪಂಚತಾರಾ ರೇಟಿಂಗ್ ಮತ್ತು ಗುಣಮಟ್ಟಕ್ಕಾಗಿ ಅಮೇರಿಕ ಮಿಲಿಟರಿ ಪ್ರಮಾಣಿತ ಪ್ರಮಾಣೀಕರಣವನ್ನು ಹೊಂದಿದೆ. ಕಂಪನಿ 8GB RAM ಮತ್ತು Dimensity 7050 ಪ್ರೊಸೆಸರ್‌ನೊಂದಿಗೆ ಸುಮಾರು 27,999 ರೂಗಳ ಬೆಲೆಯಲ್ಲಿ ಅನಾವರಣಗೊಳಿಸಿದ್ದು ಡಸ್ಟ್ ಪಿಂಕ್ ಮತ್ತು ಮಿಡ್‌ನೈಟ್ ನೇವಿ ಬಣ್ಣಗಳಲ್ಲಿ ಬಿಡುಗಡೆಯಾಗಿದೆ.
SurveyAlso Read: Reliance Jio ಹೊಸದಾಗಿ UPI ಅಪ್ಲಿಕೇಶನ್ ಬಿಡುಗಡೆಗೊಳಿಸಿದ್ದು ಆನ್‌ಲೈನ್ ಪೇಮೆಂಟ್ ಸೇರಿ ಹಲವಾರು ಫೀಚರ್ ಲಭ್ಯ!
OPPO F27 Pro Plus 5G ಲಭ್ಯತೆ ಮತ್ತು ಪರಿಚಯಾತ್ಮಕ ಕೊಡುಗೆಗಳು
ಇಂದು ಬಿಡುಗಡೆಯಾದ ಈ OPPO F27 Pro Plus 5G ಸ್ಮಾರ್ಟ್‌ಫೋನ್ ಈಗ ಕಂಪನಿಯ ಅಧಿಕೃತ ವೆಬ್‌ಸೈಟ್, ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್ ಇಂಡಿಯಾ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಮತ್ತು ಆಯ್ದ ಚಿಲ್ಲರೆ ಮಳಿಗೆಗಳಲ್ಲಿ ಮುಂಗಡ-ಕೋರಿಕೆಗೆ ಲಭ್ಯವಿದೆ. ಈ ಸ್ಮಾರ್ಟ್ಫೋನ್ 20ನೇ ಜೂನ್ 2024 ರಿಂದ ಓಪನ್ ಸೇಲ್ ಪ್ರಾರಂಭವಾಗುತ್ತದೆ.

ಪರಿಚಯಾತ್ಮಕ ಕೊಡುಗೆಗಳಿಗೆ ಸಂಬಂಧಿಸಿದಂತೆ ಗ್ರಾಹಕರು HDFC ಬ್ಯಾಂಕ್, SBI ಮತ್ತು ICICI ಬ್ಯಾಂಕ್ ಸೇರಿದಂತೆ ಆಯ್ದ ಬ್ಯಾಂಕ್‌ಗಳಿಂದ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳೆರಡರಲ್ಲೂ 10% ಪ್ರತಿಶತದಷ್ಟು ಕ್ಯಾಶ್‌ಬ್ಯಾಕ್ ಪಡೆಯಬಹುದು. ಹೆಚ್ಚುವರಿಯಾಗಿ OPPO ಟ್ರೇಡ್-ಇನ್ ಡೀಲ್‌ಗಳಲ್ಲಿ 1,000 ರೂಪಾಯಿಗಳ ವಿನಿಮಯ ಬೋನಸ್ ಅನ್ನು ನೀಡುತ್ತಿದೆ. ಒಂಬತ್ತು ತಿಂಗಳವರೆಗೆ ಸಮಾನವಾದ ಮಾಸಿಕ EMI ಕಂತು ಯೋಜನೆಗೆ ಆಯ್ಕೆಯೂ ಇದೆ.
ಒಪ್ಪೋ F27 Pro Plus 5G ಫೀಚರ್ ಮತ್ತು ವಿಶೇಷಣಗಳು
ಭಾರತದಲ್ಲಿ OPPO F27 Pro Plus 5G ಬ್ಯಾಂಡ್‌ನ ಇತ್ತೀಚಿನ F ಸರಣಿಯ ಫೋನ್ ಆಗಿದ್ದು ಇದು 6.7 ಇಂಚಿನ FHD+ ಕರ್ವ್ AMOLED ಡಿಸ್ಸೇ ಜೊತೆಗೆ 950 nits ನ ಗರಿಷ್ಠ ಹೊಳಪು ಮತ್ತು 120Hz ರಿಫ್ರೆಶ್ ದರದೊಂದಿಗೆ ಬರುತ್ತದೆ. 64MP ಪ್ರೈಮರಿ ಸೆನ್ಸರ್ ಮತ್ತು 2MP ಸೆಕೆಂಡರಿ ಸೆನ್ಸರ್ ಅನ್ನು ಒಳಗೊಂಡಿರುವ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಇದೆ. OPPO F27 Pro Plus 5G ಸೆಲ್ಫಿಗಳಿಗಾಗಿ ಸ್ಮಾರ್ಟ್ಫೋನ್ ಡಿಸ್ಪ್ಲೇಯಲ್ಲಿ ಇದು 8MP ಕ್ಯಾಮೆರಾವನ್ನು ಹೊಂದಿದ್ದು ಇದರ ಮುಂಭಾಗದಲ್ಲಿ ಕ್ಯಾಮೆರಾಗಳು 30fps ನಲ್ಲಿ 4K ವೀಡಿಯೊ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತವೆ.
The wait is over! The new #OPPOF27ProPlus5G – India’s First IP69 Rated smartphone is here at an unbeatable price of ₹27,999
— OPPO India (@OPPOIndia) June 13, 2024
Also enjoy free 6 months of Accidental & Liquid Damage worth ₹1199. So, what are you thinking? Pre-order now: https://t.co/3NJAj3DL34 #DareToFlaunt pic.twitter.com/tdHxhtKdwi
OPPO F27 Pro Plus 5G ಸ್ಮಾರ್ಟ್ಫೋನ್ MediaTek ಡೈಮೆನ್ಸಿಟಿ 7050 ಪ್ರೊಸೆಸರ್ ಮೂಲಕ 8GB LPDDR4X RAM ಮತ್ತು 256GB ವರೆಗಿನ UFS 3.1 ಸ್ಟೋರೇಜ್ನೊಂದಿಗೆ ಜೋಡಿಸಲ್ಪಟ್ಟಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ 67W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5000 mAh ಬ್ಯಾಟರಿಯನ್ನು ಸಹ ಪ್ಯಾಕ್ ಮಾಡುತ್ತದೆ. ಸಾಫ್ಟ್‌ವೇರ್ ಮುಂಭಾಗದಲ್ಲಿ ಇದು ಬಾಕ್ಸ್‌ನ ಹೊರಗೆ ಆಂಡ್ರಾಯ್ಡ್ 14 ಆಧಾರಿತ ColorOS 14 ಅನ್ನು ರನ್ ಮಾಡುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile