Aadhaar Aap: ಆಧಾರ್ ಅಪ್ಲಿಕೇಶನ್‌ ಹೊಸದಾಗಿ ಮನೆಯಲ್ಲೇ ಕುಳಿತು ವಿಳಾಸವನ್ನು ಬದಲಾಯಿಸುವ ಫೀಚರ್ ಪರಿಚಯಿಸಿದೆ!

HIGHLIGHTS

UIDAI) ತನ್ನ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಆದ ಆಧಾರ್ನಲ್ಲಿ (Aadhaar Aap) ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ.

ವಿಳಾಸ ಬದಲಾವಣೆಗೆ ಆಧಾರ್ ಸೇವಾ ಕೇಂದ್ರಕ್ಕೆ ಹೋಗಬೇಕಿತ್ತು ಆದರೆ ಈಗ ಮನೆಯಿಂದಲೇ ಈ ಪ್ರಕ್ರಿಯೆ ಪೂರ್ಣಗೊಳಿಸಬಹುದು.

Aadhaar Aap: ಆಧಾರ್ ಅಪ್ಲಿಕೇಶನ್‌ ಹೊಸದಾಗಿ ಮನೆಯಲ್ಲೇ ಕುಳಿತು ವಿಳಾಸವನ್ನು ಬದಲಾಯಿಸುವ ಫೀಚರ್ ಪರಿಚಯಿಸಿದೆ!

ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ತನ್ನ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಆದ ಆಧಾರ್ನಲ್ಲಿ (Aadhaar Aap) ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಈ ಹೊಸ ವೈಶಿಷ್ಟ್ಯವು ಆಧಾರ್ ಕಾರ್ಡ್ ಬಳಕೆದಾರರಿಗೆ ತಮ್ಮ ಮನೆಯ ವಿಳಾಸವನ್ನು ಬದಲಾಯಿಸಲು ಅಥವಾ ನವೀಕರಿಸಲು ಒಂದು ಸುಲಭ ಮತ್ತು ಅನುಕೂಲಕರ ಮಾರ್ಗವನ್ನು ಒದಗಿಸುತ್ತದೆ. ಇದುವರೆಗೆ ವಿಳಾಸ ಬದಲಾವಣೆಗೆ ಆಧಾರ್ ಸೇವಾ ಕೇಂದ್ರಕ್ಕೆ ಅಥವಾ ಯಾವುದೇ ಅಧಿಕೃತ ನವೀಕರಣ ಕೇಂದ್ರಕ್ಕೆ ಹೋಗುವುದು ಅನಿವಾರ್ಯವಾಗಿತ್ತು ಆದರೆ ಈಗ ಬಳಕೆದಾರರು ಯಾವುದೇ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಅಗತ್ಯವಿಲ್ಲದೇ ತಮ್ಮ ಮನೆಯಿಂದಲೇ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಈ ಹೊಸ ವೈಶಿಷ್ಟ್ಯವು ಸಮಯ ಮತ್ತು ಶ್ರಮವನ್ನು ಉಳಿಸುತ್ತದೆ. ಇದು ಆಧಾರ್ ಸಂಬಂಧಿತ ಸೇವೆಗಳನ್ನು ಇನ್ನಷ್ಟು ಬಳಕೆದಾರ ಸ್ನೇಹಿ ಮಾಡಲಿದೆ.

Digit.in Survey
✅ Thank you for completing the survey!

Also Read: ಅಮೆಜಾನ್‌ನಲ್ಲಿ ಇಂದು GOVO Dolby Atmos Soundbar ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ

Aadhaar Aap ಸುಲಭವಾದ ಡಿಜಿಟಲ್ ಪರಿಶೀಲನೆ ಲಭ್ಯ:

ಈ ಹೊಸ ಸೌಲಭ್ಯದ ಪ್ರಮುಖ ಭಾಗವೆಂದರೆ ಎರಡು ಸುರಕ್ಷಿತ ಡಿಜಿಟಲ್ ಪರಿಶೀಲನೆ ಯಾವುದೇ ಮೋಸ ಆಗದಂತೆ ತಡೆಯಲು ಈ ಸಿಸ್ಟಮ್ OTP ಮತ್ತು ಕಡ್ಡಾಯವಾಗಿ ಮುಖ ಗುರುತಿಸುವಿಕೆ ಬಳಸಲ್ಪಡುತ್ತದೆ. ಮೊದಲು ನೀವು ನೋಂದಾಯಿಸಿದ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ನಂತರ ಆಯಪ್ ನಿಮ್ಮ ಮುಖವನ್ನು ಸ್ಕ್ಯಾನ್ ಮಾಡಲು ಕೇಳುತ್ತದೆ. ನಿಮ್ಮ ಮುಖವು ಆಧಾರ್ ದಾಖಲೆಯಲ್ಲಿರುವ ಚಿತ್ರದೊಂದಿಗೆ ಹೊಂದಿಕೆಯಾಗಬೇಕು. ಈ ಸುರಕ್ಷಿತ ವಿಧಾನದಿಂದಾಗಿ ನೀವು ವಿಳಾಸದ ಪುರಾವೆ ದಾಖಲೆಗಳನ್ನು ಕೊಡಬೇಕಾಗಿಲ್ಲ. ಆಧಾರ್ ಸೇವಾ ಕೇಂದ್ರಕ್ಕೆ ಹೋಗುವ ಅಗತ್ಯವೂ ಇರುವುದಿಲ್ಲ.

Aadhaar Aap

ಎಲ್ಲರಿಗೂ ಸುಲಭ ಲಭ್ಯತೆ ಮತ್ತು ಉತ್ತಮ ಅನುಭವ:

ಈ ಡಿಜಿಟಲ್ ಬದಲಾವಣೆಯಿಂದ ಬಳಕೆದಾರರ ಅನುಭವವು ತುಂಬಾ ಸುಧಾರಿಸಲಿದೆ. ವಿಳಾಸದಂತಹ ವಿವರಗಳನ್ನು ಯಾವಾಗ ಬೇಕಾದರೂ ಎಲ್ಲಿ ಬೇಕಾದರೂ ಬದಲಾಯಿಸುವ ಅವಕಾಶ ಸಿಗುತ್ತದೆ. ಇದು ದೊಡ್ಡ ಅನುಕೂಲ. ಮೊದಲು ಆನ್‌ಲೈನ್‌ನಲ್ಲಿ ವಿಳಾಸ ಬದಲಾಯಿಸಲು ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕಾಗಿತ್ತು. ಈಗ ಈ ಹೊಸ ಆಯಪ್ ಸೌಲಭ್ಯವು ಡಿಜಿಟಲ್ ಮತ್ತು ಬಯೋಮೆಟ್ರಿಕ್ ಪರಿಶೀಲನೆಗಳನ್ನು ಒಳಪಡಿಸುವ ಕೆಲಸವನ್ನು ಇನ್ನಷ್ಟು ಸುಲಭಗೊಳಿಸುತ್ತದೆ. ಇದು ಆಧಾರ್ ಹೊಂದಿರುವವರಿಗೆ ತಮ್ಮ ಗುರುತನ್ನು ತಾವೇ ಶಕ್ತಿ ತುಂಬಿದೆ. ಈ ಬದಲಾವಣೆಗೆ ಬೇಕಾಗುವ ಸಮಯ ಮತ್ತು ಶ್ರಮ ಎರಡೂ ಕಡಿಮೆಯಾಗುತ್ತವೆ.

ಸ್ವಯಂ ಸೇವೆಯ ಗುರುತಿನ ನಿರ್ವಹಣೆಯ ಭವಿಷ್ಯ

ವಿಳಾಸ ಬದಲಾವಣೆಯ ಸೌಲಭ್ಯವು “ಶೀಘ್ರದಲ್ಲೇ ಬರಲಿದೆ” ಎಂದು UIDAI ಹೇಳಿದೆ. ಇತ್ತೀಚೆಗೆ ಆಪ್‌ನಲ್ಲಿ ಮೊಬೈಲ್ ಸಂಖ್ಯೆ ಬದಲಾಯಿಸುವ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ. ಇದರಿಂದ ಸಂಪೂರ್ಣ ಸ್ವಯಂ-ಸೇವೆಯ ಡಿಜಿಟಲ್ ಗುರುತಿನ ನಿರ್ವಹಣೆ ವ್ಯವಸ್ಥೆ ಸ್ವಯಂ-ಸೇವಾ ಡಿಜಿಟಲ್ ಐಡೆಂಟಿಟಿ ಮ್ಯಾನೇಜ್‌ಮೆಂಟ್ ಪ್ಲಾಟ್‌ಫಾರ್ಮ್ ಕಡೆಗೆ UIDAI ಸಾಗುತ್ತಿದೆ ಎಂದು ತಿಳಿಯುತ್ತದೆ. ಹೆಸರು, ಇಮೇಲ್ ಐಡಿ ಮತ್ತು ವಿಳಾಸದಂತಹ ಪ್ರಮುಖ ಬದಲಾವಣೆಗಳನ್ನು ಆನ್‌ಲೈನ್‌ನಲ್ಲಿ ನೀಡುವ ಮೂಲಕ UIDAI ಒಂದು ಭದ್ರವಾದ ಡಿಜಿಟಲ್ ವ್ಯವಸ್ಥೆ ರೂಪಿಸುತ್ತಿದೆ. ಈ ಹೊಸ ಪ್ರಯತ್ನವು ಭಾರತದಲ್ಲಿ ನಾಗರಿಕರು ತಮ್ಮ ಡಿಜಿಟಲ್ ಗುರುತನ್ನು ಮತ್ತು ಬಳಸಲು ಆಧಾರ್ ಆಯಪ್ ಅನ್ನು ಮುಖ್ಯ ಸಾಧನವಾಗಿ ಮಾಡಲಾಗುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo