4K Video Recording ಮತ್ತು 32MP ಸೇಲ್ಫಿ ಕ್ಯಾಮೆರಾದ Moto G86 Power 5G ಭಾರಿ ಡಿಸ್ಕೌಂಟ್ಗಳೊಂದಿಗೆ ಲಭ್ಯ!
Moto G86 Power 5G ಫ್ಲಿಪ್ಕಾರ್ಟ್ ಮಾರಾಟದಲ್ಲಿ ಭಾರಿ ಡಿಸ್ಕೌಂಟ್ಗಳೊಂದಿಗೆ ಲಭ್ಯ.
Moto G86 Power 5G ಫೋನ್ 4K Video Recording ಫೀಚರ್ಗಳೊಂದಿಗೆ ಬರುತ್ತದೆ.
Moto G86 Power 5G ಸ್ಮಾರ್ಟ್ಫೋನ್ 8GB RAM ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಪಟ್ಟಿಯಾಗಿದೆ.
ಪ್ರಸ್ತುತ ನಿಮಗೊಂದು ಅತ್ಯುತ್ತಮ ಮತ್ತು ಫುಲ್ ಫೀಚರ್ ಲೋಡೆಡ್ Moto G86 Power 5G ಸ್ಮಾರ್ಟ್ಫೋನ್ ನಿಮ್ಮ ಬಜೆಟ್ ಒಳಗೆ ಅಂದ್ರೆ ಸುಮಾರು 15,000 ರೂಗಳೊಂದಿಗೆ ಬೇಕಿದ್ದರೆ ಫ್ಲಿಪ್ಕಾರ್ಟ್ ನಿಮಗೆ ಅತ್ಯುತ್ತಮ ಡೀಲ್ಗಳೊಂದಿಗೆ ಪಟ್ಟಿಯಾಗಿ ಮಾರಾಟವಾಗುತ್ತಿದೆ. ಈ ಸ್ಮಾರ್ಟ್ಫೋನ್ ಬ್ಯಾಂಕ್ ಡಿಸ್ಕೌಂಟ್ ಮತ್ತು ವಿನಿಮಯ ಬೋನಸ್ ಜೊತೆಗೆ ಆಕರ್ಷಕ ಮತ್ತು ಬೆಸ್ಟ್ ಡೀಲ್ ಅನ್ನು ಮೊಟೊರೊಲಾ ನೀಡುತ್ತಿದೆ. ಇದರಲ್ಲಿ ವಿಶೇಷವಾಗಿ 4K Video Recording ಮತ್ತು 32MP ಸೇಲ್ಫಿ ಕ್ಯಾಮೆರಾದೊಂದಿಗೆ 8GB RAM ಅನ್ನು ಸಪೋರ್ಟ್ ಮಾಡುತ್ತದೆ. ಹಾಗಾದ್ರೆ ಇದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.
SurveyAlso Read: BSNL Freedom Plan: ಬಿಎಸ್ಎನ್ಎಲ್ ಕೇವಲ 1 ರೂಗಳ ಫ್ರೀಡಂ ರಿಚಾರ್ಜ್ ಪ್ಲಾನ್ ಆಫರ್ ಈಗ ಮತ್ತಷ್ಟು ದಿನ ವಿಸ್ತರಣೆ!
Moto G86 Power 5G ಸ್ಮಾರ್ಟ್ಫೋನ್ ಬೆಲೆ ಮತ್ತು ಆಫರ್ಗಳು:
ಪ್ರಸ್ತುತ ಫ್ಲಿಪ್ಕಾರ್ಟ್ ಮೂಲಕ ಈ ಸ್ಮಾರ್ಟ್ಫೋನ್ ಮಾರಾಟಕ್ಕೆ ಪಟ್ಟಿಯಾಗಿದ್ದು ಕೇವಲ ಒಂದೇ ಒಂದು ರೂಪಾಂತರದಲ್ಲಿ ಮಾತ್ರ ಲಭ್ಯವಿದ್ದು 8GB RAM ಮತ್ತು 128GB ಸ್ಟೋರೇಜ್ ಅನ್ನು ಕೇವಲ ₹16,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಅಲ್ಲದೆ Moto G86 Power 5G ಸ್ಮಾರ್ಟ್ಫೋನ್ ಮೇಲೆ ಫ್ಲಿಪ್ಕಾರ್ಟ್ ನಿಮಗೆ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ ಸ್ಮಾರ್ಟ್ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 16,450 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.

Moto G86 Power 5G ಫೀಚರ್ಗಳೇನು?
ಮೋಟೊರೋಲದ ಈ ಸ್ಮಾರ್ಟ್ಫೋನ್ ಅದ್ಭುತವಾದ 6.67 ಇಂಚಿನ ಸೂಪರ್ HD (1220×2712 ಪಿಕ್ಸೆಲ್ಗಳು) pOLED ಡಿಸ್ಪ್ಲೇಯನ್ನು ಹೊಂದಿದ್ದು ಫ್ಲೂಯಿಡ್ 120Hz ರಿಫ್ರೆಶ್ ದರ ಮತ್ತು ಪ್ರಭಾವಶಾಲಿ 4500 nits ಪೀಕ್ ಬ್ರೈಟ್ನೆಸ್ ಅನ್ನು ಹೊಂದಿದೆ. ಇದನ್ನು ಗೊರಿಲ್ಲಾ ಗ್ಲಾಸ್ 7i ನಿಂದ ರಕ್ಷಿಸಲಾಗಿದೆ. ಫೋಟೋಗ್ರಾಫಿ ಇದು OIS ನೊಂದಿಗೆ 50MP ಸೋನಿ LYT-600 ಪ್ರೈಮರಿ ಸೆನ್ಸರ್, ಮ್ಯಾಕ್ರೋ ಮೋಡ್ನೊಂದಿಗೆ 8MP ಅಲ್ಟ್ರಾವೈಡ್ ಲೆನ್ಸ್ ಮತ್ತು 3-ಇನ್-1 ಫ್ಲಿಕರ್ ಸೆನ್ಸರ್ಗಳನ್ನು ಹೊಂದಿದೆ. ಸೆಲ್ಫಿಗಳನ್ನು ಹೆಚ್ಚಿನ ರೆಸಲ್ಯೂಶನ್ ಹೊಂದಿರುವ 32MP ಮುಂಭಾಗದ ಕ್ಯಾಮೆರಾದಿಂದ ನಿರ್ವಹಿಸಲಾಗುತ್ತದೆ.
ಮೊಟೋ G86 Power 5G ಹಾರ್ಡ್ವೇರ್ ಮತ್ತು ಬ್ಯಾಟರಿ:
ಹುಡ್ ಅಡಿಯಲ್ಲಿ Moto G86 ಪವರ್ 5G 8GB LPDDR4X RAM ಮತ್ತು 256GB ವರೆಗೆ ವಿಸ್ತರಿಸಬಹುದಾದ ಸ್ಟೋರೇಜ್ ಜೋಡಿಸಲಾದ MediaTek Dimensity 7400 ಪ್ರೊಸೆಸರ್ನೊಂದಿಗೆ ನಡೆಸಲ್ಪಡುತ್ತದೆ. Moto G86 Power 5G ಇದರ ಪ್ರಮುಖ ಹೈಲೈಟ್ ಬೃಹತ್ 6,720mAh ಬ್ಯಾಟರಿಯಾಗಿದ್ದು ವಿಸ್ತೃತ ಬಳಕೆಗಾಗಿ 33W ಟರ್ಬೋಪವರ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಸ್ಮಾರ್ಟ್ಫೋನ್ ಆಂಡ್ರಾಯ್ಡ್ 15 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು IP68/IP69 ಧೂಳು ಮತ್ತು ನೀರಿನ ಪ್ರತಿರೋಧವನ್ನು ಹೊಂದಿದೆ. ಜೊತೆಗೆ MIL-STD-810H ಬಾಳಿಕೆಯನ್ನು ಹೊಂದಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile