Vivo X300 Series ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯನ್ನು ಕಂಫಾರ್ಮ್! ನಿರೀಕ್ಷಿತ ಫೀಚರ್ ಮತ್ತು ಬೆಲೆ ಎಷ್ಟು?
ಭಾರತದಲ್ಲಿ Vivo X300 Series ಬಿಡುಗಡೆಯನ್ನು ಕಂಫಾರ್ಮ್ ಮಾಡಿದೆ.
ವಿವೊ ಇದರಲ್ಲಿ Vivo X300 ಮತ್ತು Vivo X300 Pro ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಲಿದೆ.
Vivo X300 Series ಫೋನ್ಗಳು 100x Digital Zoom ಜೊತೆಗೆ ಬರುವುದಾಗಿ ನಿರೀಕ್ಷಿಸಲಾಗಿದೆ.
ಚೀನಾದ ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ತನ್ನ ಮುಂಬರಲಿರುವ Vivo X300 Series ಸ್ಮಾರ್ಟ್ಫೋನ್ಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಿದ್ಧವಾಗಿವೆ. ಈಗಾಗಲೇ ಚೀನಾದಲ್ಲಿ ಬಿಡುಗಡೆಯಾಗಿರುವ ಈ ಸ್ಮಾರ್ಟ್ಫೋನ್ ಭಾರತದಲ್ಲಿ Vivo X300 ಮತ್ತು Vivo X300 Pro ಎಂಬ ಎರಡು ಸ್ಮಾರ್ಟ್ಫೋನ್ಗಳು ಪವರ್ಫುಲ್ ಫೀಚರ್ ಮತ್ತು ಪ್ರೀಮಿಯಂ ಕ್ಯಾಮೆರಾ ಸೆನ್ಸರ್ ಜೊತೆಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲು ಸಜ್ಜಾಗಿವೆ. ಈ ಸ್ಮಾರ್ಟ್ ಫೋನ್ಗಳನ್ನು ಮುಖ್ಯವಾಗಿ ಕ್ಯಾಮೆರಾ ಪ್ರಿಯರನ್ನು ಗಮನದಲ್ಲಿಟ್ಟುಕೊಂಡು ತರಲಿದ್ದು ನಿಮಗೆ ಪ್ರೊಫೆಷನಲ್ ಫೋಟೋಗ್ರಾಫಿ ಮತ್ತು ವಿಡಿಯೋಗಳನ್ನು ಸೆರೆ ಹಿಡಿಯಲು ಬಯಸಿದರೆ ಈ ಫೋನ್ಗಳು ನಿಮಗೆ ಅತ್ಯುತ್ತಮ ಆಯ್ಕೆಯಾಗಳಲಿವೆ. ಯಾಕೆಂದರೆ ಇದರಲ್ಲಿ ಕಂಪನಿ 100x Digital Zoom ಜೊತೆಗೆ ZEISS ಸೆನ್ಸರ್ ನೀಡಿರುವುದಾಗಿ ನಿರೀಕ್ಷಿಸಲಾಗಿದೆ.
SurveyVivo X300 Series Launch in India
ಭಾರತದಲ್ಲಿ ವಿವೊ ತನ್ನ ಮುಂದಿನ Vivo X300 Series ಅಡಿಯಲ್ಲಿ ಎರಡು ಪವರ್ಫುಲ್ ಮತ್ತು ಪ್ರೀಮಿಯಂ 5G ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಲಿದ್ದು ಪ್ರಸ್ತುತ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಸಣ್ಣ ಟೀಸರ್ ಅನ್ನು ಸಹ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಕಂಪನಿ The #vivoX300Series Coming soon ಎಂದು ಬರೆಯಲಾಗಿದೆ. ಆದರೆ ಕಂಪನಿ ಇದರ ಬಿಡುಗಡೆಯ ಡೇಟ್ ಅನ್ನು ಇನ್ನು ಅಧಿಕೃತವಾಗಿ ಕಂಫಾರ್ಮ್ ಮಾಡಿಲ್ಲ ಇದಕ್ಕಾಗಿ ಇನ್ನೂ ಕೊಂಚ ಸಮಯ ಕಾಯಬೇಕಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮೂಲಕ ಬಿಡುಗಡೆಯಾಗಿ ಮಾರಾಟಕ್ಕೆ ಬರಲಿದ್ದು ಈಗಾಗಲೇ ಫ್ಲಿಪ್ಕಾರ್ಟ್ ಇದಕ್ಕಾಗಿ ಮೈಕ್ರೋಸೈಟ್ ಪೇಜ್ ಸಹ ಲೈವ್ ಮಾಡಿದೆ.
Vivo X300 ಮತ್ತು Vivo X300 Pro ನಿರೀಕ್ಷಿತ ಫೀಚರ್ ಮತ್ತು ಬೆಲೆಗಳು:
ಮೊದಲಿಗೆ ಈ Vivo X300 ಸ್ಮಾರ್ಟ್ಫೋನ್ ಬಗ್ಗೆ ಮಾತನಾಡುವುದಾದರೆ ಇದರ ಆರಂಭಿಕ ಬೆಲೆ 8GB RAM ಮತ್ತು 256GB ಸ್ಟೋರೇಜ್ ಸುಮಾರು 40,000 ರೂಗಳ ಸುತ್ತಮುತ್ತ ನಿರೀಕ್ಷಿಸಲಾಗಿದೆ. ಇದರ ಕ್ರಮವಾಗಿ Vivo X300 Pro ಸ್ಮಾರ್ಟ್ಫೋನ್ ಬಗ್ಗೆ ಮಾತನಾಡುವುದಾದರೆ ಇದರ ಆರಂಭಿಕ ಬೆಲೆ 8GB RAM ಮತ್ತು 256GB ಸ್ಟೋರೇಜ್ ಸುಮಾರು 45,000 ರೂಗಳ ಸುತ್ತಮುತ್ತ ನಿರೀಕ್ಷಿಸಲಾಗಿದೆ. ಇವುಗಳ ಫೀಚರ್ ಬಗ್ಗೆ ಮಾತನಾಡುವುದದರೆ ಪ್ರಸ್ತುತ ಇವನ್ನು ಚೀನಾದ ಸ್ಮಾರ್ಟ್ಫೋನ್ ಮಾದರಿಯ ಫೀಚರ್ ಅನ್ನೆ ಭಾರತದಲ್ಲಿ ತರುವ ನಿರೀಕ್ಷೆಗಳಿವೆ.
Also Read: ಅಮೆಜಾನ್ನಲ್ಲಿ ಇಂದು boAt Dolby Atmos Soundbar ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ
ಪ್ರಸ್ತುತ Vivo X300 ಮತ್ತು Vivo X300 Pro ಈ ಸ್ಮಾರ್ಟ್ಫೋನ್ 6.78 ಇಂಚಿನ 1.5K ಫ್ಲಾಟ್ BOE Q10+ LTPO OLED ಡಿಸ್ಪ್ಲೇಯನ್ನು 120Hz ರಿಫ್ರೆಶ್ ದರ ಹೊಂದಿದೆ. ಸ್ಮಾರ್ಟ್ಫೋನ್ MediaTek Dimensity 9500 ಚಿಪ್ಸೆಟ್ ಆಗಿದೆ. ಕ್ಯಾಮೆರಾದಲ್ಲಿ ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಹೊಂದಿರುವ 50MP ಮೆಗಾಪಿಕ್ಸೆಲ್ ಪ್ರೈಮರಿ ಶೂಟರ್ 50MP ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಮತ್ತು OIS ಜೊತೆಗೆ 200MP ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾದೊಂದಿಗೆ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಘಟಕವನ್ನು ಹೊಂದಿದೆ. ಅಲ್ಲದೆ ಸೆಲ್ಫಿಗಾಗಿ 32MP ಮೆಗಾಪಿಕ್ಸೆಲ್ ಸೆನ್ಸರ್ ಅನ್ನು ನೀಡುವ ನಿರೀಕ್ಷೆಗಳಿವೆ. ಅಲ್ಲದೆ ಸ್ಮಾರ್ಟ್ಫೋನ್ಗಳು ಸುಮಾರು 5000mAh ಬ್ಯಾಟರಿಯೊಂದಿಗೆ ಸುಮಾರು 90W ಫಾಸ್ಟ್ ಚಾರ್ಜರ್ ಬರುವ ನಿರೀಕ್ಷೆಗಳಿವೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile