ಭಾರ್ತಿ ಏರ್ಟೆಲ್ (Airtel) ತಮ್ಮ ಗ್ರಾಹಕರಿಗೆ ಹತ್ತಾರು ಯೋಜನೆಗಳನ್ನು ನೀಡುತ್ತಿದೆ.
ಹೆಚ್ಚುವರಿಯಾಗಿ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ AI ಮತ್ತು OTT ಪ್ರಯೋಜನಗಳನ್ನು ಸಹ ನೀಡುತ್ತಿದೆ.
Airtel Xstream Play, OTT Apps ಮತ್ತು Perplexity Pro AI ಫೀಚರ್ಗಳನ್ನು ಉಚಿತವಾಗಿ ನೀಡುತ್ತಿದೆ.
ಭಾರತದ ಎರಡನೇ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ಭಾರ್ತಿ ಏರ್ಟೆಲ್ (Airtel) ತಮ್ಮ ಗ್ರಾಹಕರಿಗೆ ಹತ್ತಾರು ಯೋಜನೆಗಳನ್ನು ನೀಡುತ್ತಿದೆ. ಅವುಗಳಲ್ಲಿ ಕರೆ, ಡೇಟಾದೊಂದಿಗೆ ಹೆಚ್ಚುವರಿಯಾಗಿ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ AI ಮತ್ತು OTT ಪ್ರಯೋಜನಗಳನ್ನು ಸಹ ನೀಡುತ್ತಿದೆ. ಯಾಕೆಂದರೆ ಇಂದಿನ ಆಧುನಿಕ ದುನಿಯಾದಲ್ಲಿ ಕೇವಲ ಕರೆ ಮತ್ತು ಡೇಟಾ ಮಾತ್ರ ಸಾಕಾಗೋಲ್ಲ ಅದರೊಂದಿಗೆ ಒಂದಿಷ್ಟು ಉತ್ತಮ ಅಡ್ವಾನ್ಸ್ ಫೀಚರ್ ಸಹ ಬೇಕಾಗಿದೆ. ಹಾಗಾದ್ರೆ ಏರ್ಟೆಲ್ ಮೂಲ ಸೌಲಭ್ಯಗಳೊಂದಿಗೆ Airtel Xstream Play, OTT Apps ಮತ್ತು Perplexity Pro AI ಫೀಚರ್ ನೀಡುತ್ತಿರುವ ಯೋಜನೆಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ಪಡೆಯಬಹುದು.
SurveyAlso Read: Upcoming Phones: ಇವೇ ನೋಡಿ ಈ ತಿಂಗಳು ಬಿಡುಗಡೆಗೆ ಕಂಫಾರ್ಮ್ ಆಗಿರುವ ಲೇಟೆಸ್ಟ್ 5G ಸ್ಮಾರ್ಟ್ಫೋನ್ಗಳು!
ಏರ್ಟೆಲ್ (Airtel) ₹279 ಪ್ಲಾನ್:
ಏರ್ಟೆಲ್ನ ₹279 ಯೋಜನೆಯು ಮನರಂಜನೆಗೆ ಹೆಚ್ಚು ಒತ್ತು ನೀಡುತ್ತದೆ. ಇದು ಒಂದು ತಿಂಗಳ ವ್ಯಾಲಿಡಿಟಿ ಹೊಂದಿದೆ ಮತ್ತು ರೀಚಾರ್ಜ್ ಮಾಡಿದ ಸಂಪೂರ್ಣ ತಿಂಗಳಿಗೆ 1GB ಡೇಟಾ, ಜೊತೆಗೆ ಪ್ರತಿದಿನ ಅನಿಯಮಿತ ಕರೆಗಳು ಮತ್ತು 100 SMS ಗಳನ್ನು ನೀಡುತ್ತದೆ. ಈ ಯೋಜನೆಯ ಪ್ರಮುಖ ಆಕರ್ಷಣೆ ಎಂದರೆ ಇದರಲ್ಲಿ Netflix Basic (1 ತಿಂಗಳು), JioHotstar Super (1 ತಿಂಗಳು), Zee5 Premium, ಮತ್ತು SonyLIV, Lionsgate Play, Hoichoi ಸೇರಿದಂತೆ 25ಕ್ಕೂ ಹೆಚ್ಚು OTT ಚಾನೆಲ್ಗಳನ್ನು ಒಳಗೊಂಡಿರುವ Airtel Xstream Play Premium ಸಂಪೂರ್ಣ ಪ್ರವೇಶ ದೊರೆಯುತ್ತದೆ. ಕಡಿಮೆ ಬೆಲೆಯಲ್ಲಿ ಅನೇಕ ಪ್ರೀಮಿಯಂ ಸ್ಟ್ರೀಮಿಂಗ್ ಚಂದಾದಾರಿಕೆಗಳನ್ನು ಪಡೆಯಲು ಬಯಸುವವರಿಗೆ ಈ ಪ್ಲಾನ್ ಅತ್ಯುತ್ತಮವಾಗಿದೆ.

ಏರ್ಟೆಲ್ ₹449 ಪ್ಲಾನ್:
ಏರ್ಟೆಲ್ ಬಳಕೆದಾರರಿಗೆ ಹೆಚ್ಚು ಡೇಟಾ ಬಳಸುವವರಿಗೆ ಮತ್ತು ನಿರಂತರ ಸ್ಟ್ರೀಮಿಂಗ್ ಮಾಡುವವರಿಗೆ ಈ ₹449 ಯೋಜನೆಯು ಉತ್ತಮವಾಗಿದೆ. ಇದು 28 ದಿನಗಳ ವ್ಯಾಲಿಡಿಟಿ ಹೊಂದಿದ್ದು ಪ್ರತಿದಿನ 4GB ಹೈ-ಸ್ಪೀಡ್ ಡೇಟಾ, ಜೊತೆಗೆ ಅನಿಯಮಿತ ಕರೆಗಳು ಮತ್ತು 100 SMS ನೀಡುತ್ತದೆ. 5G ಸೇವೆ ಇರುವ ಪ್ರದೇಶಗಳಲ್ಲಿ ಈ ಯೋಜನೆಯಲ್ಲಿ ಅನಿಯಮಿತ 5G ಡೇಟಾ ಸಹ ಲಭ್ಯವಿದೆ. ಮನರಂಜನೆಗಾಗಿ ಇದರಲ್ಲಿ JioHotstar Mobile, Airtel Xstream Play Premium ಮತ್ತು 6 ತಿಂಗಳವರೆಗೆ Apple Music ಚಂದಾದಾರಿಕೆ ಸಿಗುತ್ತದೆ.
Also Read: AI ಮತ್ತು OTT ಪ್ರಯೋಜನಗಳನ್ನು ನೀಡುವ Reliance Jio ಅತ್ಯುತ್ತಮ ಯೋಜನೆಗಳು ಇಲ್ಲಿವೆ
ಏರ್ಟೆಲ್ನ ಈ ಪ್ಲಾನ್ AI ಮತ್ತು ಇತರ ಸೌಲಭ್ಯಗಳು ಸಹ ಇದರಲ್ಲಿ ಸೇರಿವೆ. ಒಂದು ವರ್ಷದವರೆಗೆ (12 ತಿಂಗಳು) Perplexity Pro AI ಚಂದಾದಾರಿಕೆಯೊಂದಿಗೆ 30 GB Google One ಕ್ಲೌಡ್ ಸ್ಟೋರೇಜ್ ಮತ್ತು 12 ತಿಂಗಳವರೆಗೆ ಕರೆ ಸ್ಕ್ಯಾಮ್/ಸ್ಪ್ಯಾಮ್ ರಕ್ಷಣೆ ದೊರೆಯುತ್ತದೆ. ಇದು ಎಲ್ಲವನ್ನೂ ಒಳಗೊಂಡಿರುವ ಒಂದು ಅತ್ಯಾಧುನಿಕ ಡಿಜಿಟಲ್ ಪ್ಯಾಕೇಜ್ ಆಗಿದೆ.
ಏರ್ಟೆಲ್ ₹349 ಪ್ಲಾನ್:
ಏರ್ಟೆಲ್ನ ₹349 ಪ್ಲಾನ್ ಉತ್ತಮ ಡೇಟಾ ಮತ್ತು ಪ್ರೀಮಿಯಂ ಸೌಲಭ್ಯಗಳ ನಡುವೆ ಸಮತೋಲನ ಕಾಯ್ದುಕೊಂಡಿದೆ. ಇದು 28 ದಿನಗಳ ವ್ಯಾಲಿಡಿಟಿ ಹೊಂದಿದ್ದು ಪ್ರತಿದಿನ 2GB ಹೈ-ಸ್ಪೀಡ್ ಡೇಟಾ, ಅನಿಯಮಿತ ಕರೆಗಳು ಮತ್ತು 100 SMS ನೀಡುತ್ತದೆ. 5G ಪ್ರದೇಶಗಳಲ್ಲಿ ಅನಿಯಮಿತ 5G ಡೇಟಾ ಕೂಡ ಲಭ್ಯವಿದೆ. ಇದರಲ್ಲಿ Airtel Xstream Play Premium (SonyLIV ಸೇರಿದಂತೆ 22ಕ್ಕೂ ಹೆಚ್ಚು OTT ಚಾನೆಲ್ಗಳು ಮತ್ತು 6 ತಿಂಗಳವರೆಗೆ Apple Music ಚಂದಾದಾರಿಕೆ ಸಿಗುತ್ತದೆ.
ಇದರ ಜೊತೆಗೆ ಇದು ಡಿಜಿಟಲ್ ಉಪಯುಕ್ತತೆಗಳನ್ನು ಹೊಂದಿದೆ. ಇದು 12 ತಿಂಗಳವರೆಗೆ ಉಚಿತ Perplexity Pro AI ಚಂದಾದಾರಿಕೆ ಮತ್ತು 12 ತಿಂಗಳ ಕರೆ ಸ್ಕ್ಯಾಮ್/ಸ್ಪ್ಯಾಮ್ ರಕ್ಷಣೆ. ಪ್ರತಿದಿನ ಸಾಕಷ್ಟು ಡೇಟಾ ಮತ್ತು ಮ್ಯೂಸಿಕ್, ಸ್ಟ್ರೀಮಿಂಗ್, ಹಾಗೂ AI ಸಾಧನಗಳನ್ನು ಬಯಸುವ ಗ್ರಾಹಕರಿಗೆ ಈ ₹349 ಪ್ಲಾನ್ ಅತ್ಯುತ್ತಮ ಆಯ್ಕೆಯಾಗಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile