Upcoming Phones: ಇವೇ ನೋಡಿ ಈ ತಿಂಗಳು ಬಿಡುಗಡೆಗೆ ಕಂಫಾರ್ಮ್ ಆಗಿರುವ ಲೇಟೆಸ್ಟ್ 5G ಸ್ಮಾರ್ಟ್‌ಫೋನ್‌ಗಳು!
ಸ್ಮಾರ್ಟ್‌ಫೋನ್ ಪ್ರಿಯರಿಗೆ ಈ ಬಾರಿ ಇದೆ ತಿಂಗಳು ಅಂದರೆ ನವೆಂಬರ್ ತಿಂಗಳಿನಲ್ಲಿ ಒಂದು ಹಬ್ಬವಿದ್ದಂತೆ.
ಈ ತಿಂಗಳು ಖಚಿತವಾಗಿ ಬಿಡುಗಡೆಯಾಗಿರುವ ಪ್ರಮುಖ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಮತ್ತು ಅವುಗಳ ದಿನಾಂಕ ಇಲ್ಲಿದೆ.
ಈ ತಿಂಗಳು OnePlus 15, Oppo Find x9 Pro, Realme GT 8 Pro, Lava Agni 4 ಮತ್ತು iQOO 15 ಫೋನ್‌ಗಳು.
Upcoming Phones: ನಿಮಗೆ ಸ್ಮಾರ್ಟ್‌ಫೋನ್ ಪ್ರಿಯರಿಗೆ ಈ ಬಾರಿ ಇದೆ ತಿಂಗಳು ಅಂದರೆ ನವೆಂಬರ್ ತಿಂಗಳಿನಲ್ಲಿ ಒಂದು ಹಬ್ಬವಿದ್ದಂತೆ ಯಾಕೆಂದರೆ ಈ ತಿಂಗಳು ಹಲವು ದೊಡ್ಡ ಕಂಪನಿಗಳು ಹೊಸ ಮತ್ತು ಅತ್ಯುತ್ತಮ ಫೋನ್‌ಗಳು ಮಾರುಕಟ್ಟೆಗೆ ಬರಲು ಸಿದ್ಧವಾಗಿವೆ. ಅಂದ್ರೆ ಇವೇ ನೋಡಿ ಈ ತಿಂಗಳು ಬಿಡುಗಡೆಗೆ ಕಂಫಾರ್ಮ್ ಆಗಿರುವ ಲೇಟೆಸ್ಟ್ 5G ಸ್ಮಾರ್ಟ್‌ಫೋನ್‌ಗಳು ಇವುಗಳಲ್ಲಿ OnePlus 15, Oppo Find x9 Pro, Realme GT 8 Pro, Lava Agni 4 ಮತ್ತು iQOO 15 ಫಾಸ್ಟ್ ಪ್ರೊಸೆಸರ್, ಹೊಸ ಕ್ಯಾಮೆರಾ ತಂತ್ರಜ್ಞಾನ ಮತ್ತು ಆಕರ್ಷಕ ಬೆಲೆಯ ಫೋನ್‌ಗಳು ಬಿಡುಗಡೆಯಾಗುತ್ತಿವೆ ಫೋನ್‌ಗಳ ಪೈಪೋಟಿ ಜೋರಾಗಿದೆ. ಈ ತಿಂಗಳು ಬಿಡುಗಡೆಯಾಗಿರುವ ಪ್ರಮುಖ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಮತ್ತು ಅವುಗಳ ದಿನಾಂಕ ಇಲ್ಲಿದೆ.
SurveyAlso Read: PF Accounts: ಒಂದು ವೇಳೆ ನೀವು ಕೆಲಸ ಬಿಟ್ರೆ ನಿಮ್ಮ ಪಿಎಫ್ ಅಕೌಂಟ್ ಏನಾಗುತ್ತೆ ನಿಮಗೊತ್ತಾ?
Upcoming Phones: OnePlus 15
ತಿಂಗಳ ಆರಂಭದಲ್ಲಿ ಎಲ್ಲರೂ ಎದುರುನೋಡುತ್ತಿರುವ ಒನ್ಪ್ಲಾಸ್ 15 ಫೋನ್ ನವೆಂಬರ್ 13 ರಂದು ಬಿಡುಗಡೆಯಾಗಲಿದೆ. ಈ ಹೊಸ ಫ್ಲಾಗ್‌ಶಿಪ್ ಫೋನ್ ಹೊಸದಾಗಿ ಬಂದಿರುವ ಶಕ್ತಿಶಾಲಿ ‘ಸ್ನಾಪ್‌ಡ್ರಾಗನ್ 8 ಎಲೈಟ್ Gen 5’ ಎಂಬ ಪ್ರೊಸೆಸರ್‌ನೊಂದಿಗೆ ಬರುತ್ತಿದೆ. ಇದು ವೇಗ ಮತ್ತು ಪರ್ಫಾರ್ಮೆನ್ಸ್ ಬಹಳ ಮುಂದಿದೆ ಎಂದು ಹೇಳಲಾಗಿದೆ. ಒನ್‌ಪ್ಲಸ್ ಕಂಪನಿಯು ಈ ಬಾರಿ ಬ್ಯಾಟರಿ ಮತ್ತು ಡಿಸ್ಪ್ಲೇ ಮೇಲೆ ಹೆಚ್ಚಿನ ಗಮನ ನೀಡಿದೆ. ಇದು 7,300mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಮತ್ತು 165Hz ನ ವೇಗದ ರಿಫ್ರೆಶ್ ರೇಟ್ ಇರುವ 6.78-ಇಂಚಿನ ಪರದೆಯನ್ನು ಹೊಂದಿರಲಿದೆ.

Oppo Find x9 Pro
ಒನ್‌ಪ್ಲಸ್ ನಂತರ ಒಪ್ಪೋ ಕಂಪನಿಯು ತನ್ನ ಪ್ರೀಮಿಯಂ ಫೋನ್ ಆದ Oppo Find X9 Pro ಸ್ಮಾರ್ಟ್ಫೋನ್ 18ನೇ ನವೆಂಬರ್ 2025 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಫೋನ್ ಮುಖ್ಯವಾಗಿ ಕ್ಯಾಮೆರಾಗಾಗಿ ಪ್ರಸಿದ್ಧವಾದ ಸಂಯೋಜನೆ ಹೆಸರಾಂತ ‘ಹ್ಯಾಸೆಲ್‌ಬ್ಲಾಡ್’ (ಹ್ಯಾಸೆಲ್‌ಬ್ಲಾಡ್) ಕಂಪನಿಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಫೋಟೋಗಳನ್ನು ತೆಗೆಯಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಇದು ವೇಗದ ‘ಮೀಡಿಯಾಟೆಕ್ ಡೈಮೆನ್ಸಿಟಿ 9500’ ಚಿಪ್, ದೊಡ್ಡ 7,500mAh ಬ್ಯಾಟರಿ ಮತ್ತು 120Hz ನ ಉತ್ತಮ ಗುಣಮಟ್ಟದ AMOLED ಡಿಸ್ಪ್ಲೇಯನ್ನು ಹೊಂದಿದೆ. ಇದರ ಕ್ಯಾಮೆರಾವು 200MP ಸಾಮರ್ಥ್ಯದ ಪೆರಿಸ್ಕೋಪ್ ಲೆನ್ಸ್ ಅನ್ನು ಹೊಂದಿರಬಹುದು ಎಂದು ವರದಿಯಾಗಿದೆ.

Realme GT 8 Pro
ನವೆಂಬರ್ 20 ರಂದು ಒಂದಲ್ಲ ಎರಡು ಫೋನ್‌ಗಳು ಬಿಡುಗಡೆಯಾಗುತ್ತಿವೆ. ಮೊದಲು ರಿಯಲ್‌ಮಿ ಜಿಟಿ 8 ಪ್ರೊ ಇದು ಕೂಡ ‘ಸ್ನಾಪ್‌ಡ್ರಾಗನ್ 8 ಎಲೈಟ್ Gen 5’ ಪ್ರೊಸೆಸರ್‌ನೊಂದಿಗೆ ಬರುವ ಗೇಮಿಂಗ್‌ಗೆ ಮತ್ತು ವೇಗಕ್ಕೆ ಹೆಚ್ಚು ಗಮನ ನೀಡುವ ಫೋನ್. ಈ ಫೋನ್ ಕ್ಯಾಮೆರಾ ‘ರಿಕೋ ಇಮೇಜಿಂಗ್’ ಜೊತೆ ಕೈಜೋಡಿಸಿದ್ದು ಅತ್ಯಾಧುನಿಕ ಕ್ಯಾಮೆರಾ ಅನುಭವವನ್ನು ನೀಡಲಿದೆ. ಇದು 7,000mAh ಬ್ಯಾಟರಿ ಮತ್ತು 120W ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ.

Lava Agni 4
ಅದೇ ದಿನ ನವೆಂಬರ್ 20 ರಂದು ಭಾರತದ ಕಂಪನಿ ಲಾವಾ ತನ್ನ ಹೊಸ ಫೋನ್ ಲಾವಾ ಅಗ್ನಿ 4 ಅನ್ನು ಬಿಡುಗಡೆ ಮಾಡಲಿದೆ. ಇದು ಮಧ್ಯಮ ಶ್ರೇಣಿಯ ಮೌಲ್ಯದ ಫೋನ್ ಆಗಿದ್ದು ‘ಮೀಡಿಯಾಟೆಕ್ ಡೈಮೆನ್ಸಿಟಿ 8350’ ಪ್ರೊಸೆಸರ್‌ನೊಂದಿಗೆ ಬರಲಿದೆ. ಇದರ ಮುಖ್ಯ ಆಕರ್ಷಣೆ ಎಂದರೆ 7,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಮತ್ತು 120Hz ವೇಗದ ಡಿಸ್ಪ್ಲೇ. ಇದು ಸುಮಾರು ₹30,000 ದರದಲ್ಲಿ ಸಿಗುವ ನಿರೀಕ್ಷೆ ಇದೆ.

iQOO 15
ತಿಂಗಳ ಕೊನೆಯಲ್ಲಿ ನವೆಂಬರ್ 26 ರಂದು iQOO 15 ಫೋನ್ ಬಿಡುಗಡೆಯಾಗಿದೆ. ಈ ಫೋನ್ ಕೂಡ ಒನ್‌ಪ್ಲಸ್ 15ಗೆ ಪೈಪೋಟಿ ನೀಡಲು ‘ಸ್ನಾಪ್‌ಡ್ರಾಗನ್ 8 ಎಲೈಟ್ ಜನ್ 5’ ಪ್ರೊಸೆಸರ್‌ನೊಂದಿಗೆ ಬರುತ್ತಿದೆ. ಗೇಮಿಂಗ್‌ಗಾಗಿ ಇದು ವಿಶೇಷವಾದ ‘Q3 ಗೇಮಿಂಗ್ ಚಿಪ್’ ಅನ್ನು ಹೊಂದಿರಬಹುದು. ಜೊತೆಗೆ ಇದು ಸುಂದರವಾದ 2K ರೆಸಲ್ಯೂಶನ್ ಮತ್ತು 144Hz ರಿಫ್ರೆಶ್ ರೇಟ್ ಇರುವ ಸ್ಯಾಮ್‌ಸಂಗ್ OLED ಪರದೆಯನ್ನು ಹೊಂದಿದೆ. ಕಂಪನಿಯು ಈ ಫೋನ್‌ಗೆ ದೀರ್ಘಾವಧಿಯ 5 ವರ್ಷಗಳ ಸಾಫ್ಟ್‌ವೇರ್ ಅಪ್‌ಡೇಟ್‌ಗಳನ್ನು ನೀಡಲಾಗಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile