ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಈ ಅರಟೈ (Arattai) ಎಂಬ ಹೊಸ ಮೇಸಜಿಂಗ್ ಅಪ್ಲಿಕೇಶನ್.
Arattai ಅಪ್ಲಿಕೇಶನ್ ಬಗ್ಗೆ ನಿಮಗೆಷ್ಟು ಗೊತ್ತು? ಇದರ ಬಗ್ಗೆ ನಿಮಗಿರುವ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ.
Arattai App ಸರಳ, ಸುರಕ್ಷಿತ ಮತ್ತು ಬಳಸಲು ಸುಲಭವಾದ ತ್ವರಿತ ಸಂದೇಶ ಕಳುಹಿಸುವ ಅಪ್ಲಿಕೇಶನ್ ಆಗಿದೆ.
ಭಾರತದಲ್ಲಿ ಪ್ರಸ್ತುತ ತುಂಬ ಸಡ್ಡು ಮಾಡುತ್ತಿರುವ ಈ ಸರಳ, ಸುರಕ್ಷಿತ ಮತ್ತು ಸುಲಭವಾದ ಇನ್ಸ್ಟಂಟ್ ಮೆಸೇಜಿಂಗ್ ಅಪ್ಲಿಕೇಶನ್ ಅರಟೈ (Arattai App) ಬಗ್ಗೆ ಒಂದಿಷ್ಟು ವಿವರಣೆ ಇಲ್ಲಿದೆ. ಇದನ್ನು ಭಾರತದಲ್ಲೆ ಅಭಿವೃದ್ಧಿಪಡಿಸಿ ನವೀಕರಿಸಲಾಗಿದ್ದು ಬಳಕೆದಾರರು ಒಬ್ಬರಿಗೊಬ್ಬರು ಸಂಪರ್ಕದಲ್ಲಿಡಲು ಬಳಸಬಹುದು. ಇನ್ನೂ ಸರಳ ಭಾಷೆಯಲ್ಲಿ ಹೇಳುವುದಾದರೆ ಇಂದಿನ ಜನಪ್ರಿಯ ವಾಟ್ಸಾಪ್ ಅಪ್ಲಿಕೇಶನ್ಗೆ ಇದೊಂದು ಪರ್ಯಾಯ ಅಪ್ಲಿಕೇಶನ್ ಅಂದ್ರೆ ತಪ್ಪಿಲ್ಲ. ಈ ಅಪ್ಲಿಕೇಶನ್ ಮೂಲಕ ಬಳಕೆದಾರರು ಪಠ್ಯ, ವಾಯ್ಸ್ ನೋಟ್, ಆಡಿಯೋ ಕರೆ ಮತ್ತು ವೀಡಿಯೋ ಕರೆಯೊಂದಿಗೆ ಫೋಟೋ, ಫೈಲ್ ಮತ್ತು ವಿಡಿಯೋಗಳನ್ನು ಸಹ ಹಂಚಿಕೊಳ್ಳಬಹುದು. ಈ ಸೇವೆಯನ್ನು ಬಳಸಲು ಬಳಕೆದಾರರು ತಮ್ಮ ಮೊಬೈಲ್ ನಂಬರ್ ನೀಡುವ ಮೂಲಕ ಆರಂಭಿಸಬಹುದು.
Surveyಏನಿದು ಹೊಸ Arattai ಅಪ್ಲಿಕೇಶನ್?
ಸುಲಭ ಮತ್ತು ಸರಳವಾಗಿ ತ್ವರಿತ ಮೆಸೇಜ್ ಕಳುಹಿಸುವ ಅಪ್ಲಿಕೇಶನ್ ಆಗಿದ್ದು ಇದು ನಿಮ್ಮ ಪ್ರೀತಿ ಪಾತ್ರರೊಂದಿಗೆ ಸದಾ ಸಂಪರ್ಕದಲ್ಲಿರಲು ಸಹಾಯ ಮಾಡುತ್ತದೆ. ಇದು ಸರಳ, ಸುರಕ್ಷಿತ ಮತ್ತು ಭಾರತೀಯ ನಿರ್ಮಿತವಾಗಿದ್ದು ZOHO ಕಾರ್ಪೊರೇಷನ್ ಅಭಿವೃದ್ಧಿಪಡಿಸಿದ ಭಾರತೀಯ ಫ್ರೀವೇರ್, ಕ್ರಾಸ್-ಪ್ಲಾಟ್ಫಾರ್ಮ್ ಇನ್ಸ್ಟೆಂಟ್ ಮೆಸೇಜಿಂಗ್ (IM) ಮತ್ತು ವಾಯ್ಸ್ ಓವರ್ ಐಪಿ (VoIP) ಅಪ್ಲಿಕೇಶನ್ ಆಗಿದೆ.

ಡೇಟಾದ ವಿಚಾರದಲ್ಲಿ ಅರಟೈ ಅಪ್ಲಿಕೇಶನ್ (Arattai App) ನಂಬಬಹುದೇ?
ಈ ಅರಟೈ ಅಪ್ಲಿಕೇಶನ್ ಅನ್ನು ಝೋಹೋ (ZOHO) ಎಂಬ ಸಾಫ್ಟ್ವೇರ್ ಸಂಸ್ಥೆ ನಿರ್ಮಿಸಿದ್ದು ಇದು ಇಂತಹ ಎಂಟರ್ಪ್ರೈಸ್ ಅಪ್ಲಿಕೇಶನ್ಗಳನ್ನು ನಿರ್ಮಿಸಿದ ಅವರ ದೀರ್ಘಕಾಲದ ಅನುಭವವನ್ನು ಭರವಸೆಗೆ ಬಳಸಲಾಗಿದೆ. ಅದರ ಜೊತೆಗೆ ಬಳಕೆದಾರರ ಗೌಪ್ಯತೆ ಬಗ್ಗೆ ಝೋಹೋ ಸಂಸ್ಥೆಯ ಬಲವಾದ ನಂಬಿಕೆ ಮತ್ತು ಬದ್ಧತೆಯನ್ನು ಸಹ ನೀಡುತ್ತದೆ. ನಿಮ್ಮ ವೈಯಕ್ತಿಕ ಮಾಹಿತಿ, ಡೇಟಾವನ್ನು ಸುರಕ್ಷಿತ ಮತ್ತು ಭದ್ರವಾಗಿ ಇರಿಸಿಕೊಳ್ಳಲು ಇದು ವಿಶ್ವಾಸಾರ್ಹವಾಗಿದೆ. ಅಲ್ಲದೆ ಇದರಲ್ಲಿ ಬಳಸಲಾಗುವ ಎಲ್ಲ ಚಟುವಟಿಕೆ ಎಂಡ್-ಟು-ಎಂಡ್ ಸುರಕ್ಷಿತವಾಗಿದೆ.
Also Read: Dolby Audio Soundbar ಇಂದು ಅಮೆಜಾನ್ ಫೆಸ್ಟಿವಲ್ ಸೇಲ್ನಲ್ಲಿ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಲಭ್ಯ!
ಅರಟೈ ಅಪ್ಲಿಕೇಶನ್ನಲ್ಲಿ ಕರೆ ಮತ್ತು ಮೆಸೇಜ್ ಎಷ್ಟು ಸುರಕ್ಷಿತ?
ಈ ಅಪ್ಲಿಕೇಷನ್ ಮೂಲಕ ಬಳಸುವ ನಿಮ್ಮ ಕರೆ ಮತ್ತು ಸಂದೇಶಗಳು ಬಲವಾದ ಸುರಕ್ಷತೆ ಮತ್ತು ಭದ್ರತೆಯನ್ನು ಎತ್ತಿ ಹಿಡುತ್ತದೆ. ಇದರ ಎಲ್ಲಾ ಮಾಹಿತಿ, ಡೇಟಾ ಮತ್ತು ಚಾಟ್ ಹಿಸ್ಟರಿಗಳು ಎನ್ಕ್ರಿಪ್ಶನ್ (End-to-End Encryption) ಮಾಡಲಾಗುತ್ತದೆ. ಅಂದ್ರೆ ನಿಮ್ಮ ಡೇಟಾ ಮತ್ತು ಮಾಹಿತಿ ಯಾರಿನಿಂದಲೂ ಪುನಃ ಪಡೆಯಲು ಸಾಧ್ಯವಾಗೋದಿಲ್ಲ. ಹೆಚ್ಚುವರಿ ಗೌಪ್ಯತೆಗಾಗಿ ಅಪ್ಲಿಕೇಶನ್ ಸೀಕ್ರೆಟ್ ಚಾಟ್’ ಫೀಚರ್ ಸಹ ಹೊಂದಿದ್ದು ಇದೂ ಸಹ ಎಂಡ್-ಟು-ಎಂಡ್ ಎನ್ಕ್ರಿಪ್ಶನ್ ಆಗಿದೆ. ಅತ್ಯಂತ ಮುಖ್ಯವಾಗಿ ಈ ಅಪ್ಲಿಕೇಶನ್ ಮೂಲಕ ಮಾಡುವ ಎಲ್ಲಾ ಮೆಸೇಜ್, ಆಡಿಯೋ ಅಥವಾ ವಿಡಿಯೋ ಕರೆಗಳು ಸಹ ಸಂಪೂರ್ಣವಾಗಿ ಎಂಡ್-ಟು-ಎಂಡ್ ಸುರಕ್ಷಿತವಾಗಿರುತ್ತದೆ ಅನ್ನೋದು ಕಂಪನಿಯ ಹೇಳಿಕೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile