ಮುಂಬರಲಿರುವ Nothing Ear (3) ಟ್ರೂ ವೈರ್‌ಲೆಸ್ ಇಯರ್‌ಬಡ್‌ ಹೊಸ ‘ಟಾಕ್’ ಬಟನ್‌ನೊಂದಿಗೆ ಬಿಡುಗಡೆಯಾಗಲಿದೆ

HIGHLIGHTS

ನಥಿಂಗ್ ಟ್ರೂ ವೈರ್‌ಲೆಸ್ ಇಯರ್‌ಬಡ್‌ಗಳಾದ ನಥಿಂಗ್ ಇಯರ್ (Nothing Ear (3) ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.

ಕಂಪನಿ Nothing ಸ್ಮಾರ್ಟ್ಫೋನ್ ಮತ್ತು ಇಯರ್‌ಬಡ್‌ಗಳನ್ನು ಇದೆ 18ನೇ ಸೆಪ್ಟೆಂಬರ್ 2025 ರಂದು ಪರಿಚಾಯಿಸಲು ಸಜ್ಜಾಗಿದೆ.

ನಥಿಂಗ್ ಈ ಬಾರಿ ಆಡಿಯೋ ಕಂಪನಿ KEF ಜೊತೆಗಿನ ಹೊಸ ಪಾಲುದಾರಿಕೆ ಹೊಂದಿದ್ದು ಹೊಸ "ಟಾಕ್ ಬಟನ್‌' ಪರಿಚಯಿಸಲಿದೆ.

ಮುಂಬರಲಿರುವ Nothing Ear (3) ಟ್ರೂ ವೈರ್‌ಲೆಸ್ ಇಯರ್‌ಬಡ್‌ ಹೊಸ ‘ಟಾಕ್’ ಬಟನ್‌ನೊಂದಿಗೆ ಬಿಡುಗಡೆಯಾಗಲಿದೆ

ಲಂಡನ್ ಮೂಲದ ಟೆಕ್ ಕಂಪನಿಯಾದ ನಥಿಂಗ್ ತನ್ನ ಪಾರದರ್ಶಕ ವಿನ್ಯಾಸಕ್ಕೆ ಹೆಸರುವಾಸಿಯಾಗಿದ್ದು ಇದು 18ನೇ ಸೆಪ್ಟೆಂಬರ್ 2025 ರಂದು ತನ್ನ ಇತ್ತೀಚಿನ ನಿಜವಾದ ವೈರ್‌ಲೆಸ್ ಇಯರ್‌ಬಡ್‌ಗಳಾದ ನಥಿಂಗ್ ಇಯರ್ (Nothing Ear (3) ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಹೊಸ ಇಯರ್‌ಬಡ್‌ಗಳು ನಥಿಂಗ್ ಇಯರ್ (2) ಯಶಸ್ಸಿನ ನಂತರ ಬಂದಿವೆ. ಆದರೆ ಆಡಿಯೊ ಗುಣಮಟ್ಟ, ಬ್ಯಾಟರಿ ಬಾಳಿಕೆ ಮತ್ತು ಒಟ್ಟಾರೆ ವಿನ್ಯಾಸದಲ್ಲಿ ಗಮನಾರ್ಹ ಸುಧಾರಣೆಗಳನ್ನು ತರುವ ನಿರೀಕ್ಷೆಯಿದೆ. ಆಡಿಯೋ ಕಂಪನಿ KEF ಜೊತೆಗಿನ ಹೊಸ ಪಾಲುದಾರಿಕೆ ಮತ್ತು ನಿಗೂಢವಾದ ಹೊಸ “ಟಾಕ್” ಬಟನ್‌ನೊಂದಿಗೆ ಇಯರ್ (3) ಮಾರುಕಟ್ಟೆಯಲ್ಲಿ ಉನ್ನತ ಶ್ರೇಣಿಯ ಇಯರ್‌ಬಡ್‌ಗಳೊಂದಿಗೆ ಸ್ಪರ್ಧಿಸಲು ಸಜ್ಜಾಗಿದೆ.

Digit.in Survey
✅ Thank you for completing the survey!

Nothing Ear (3) ನಲ್ಲಿ ಹೊಸ ವಿನ್ಯಾಸ ಮತ್ತು “ಸೂಪರ್ ಮೈಕ್”

ನಥಿಂಗ್ ಕಂಪನಿಯು Ear (3) ಇಯರ್‌ಬಡ್ಸ್‌ನಲ್ಲಿ ತನ್ನ ಹಳೆಯ ಪಾರದರ್ಶಕ ವಿನ್ಯಾಸವನ್ನೇ ಉಳಿಸಿಕೊಂಡಿದೆ. ಆದರೆ ಕೆಲವು ಸಣ್ಣ ಆದರೆ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಇದರ ಚಾರ್ಜಿಂಗ್ ಕೇಸ್ ಈಗ ಭಾಗಶಃ ಮರುಬಳಕೆಯ ಅಲ್ಯೂಮಿನಿಯಂನಿಂದ ಮಾಡಲ್ಪಟ್ಟಿದೆ. ಇದರಿಂದ ಅದು ಹೆಚ್ಚು ಪ್ರೀಮಿಯಂ ಆಗಿ ಕಾಣುತ್ತದೆ ಮತ್ತು ಬಾಳಿಕೆ ಬರುತ್ತದೆ. ಇಯರ್‌ಬಡ್ಸ್‌ಗಳನ್ನು ಕೂಡ ತೆಳುವಾಗಿ ವಿನ್ಯಾಸಗೊಳಿಸಲಾಗಿದೆ. ಇದಕ್ಕಾಗಿ ಅದರ ಮೆಟಲ್ ಆಂಟೆನಾವನ್ನು ಕೇವಲ 0.35 mm ದಪ್ಪಕ್ಕೆ ಇಳಿಸಲಾಗಿದೆ.

ಈ ಹೊಸ ಇಯರ್‌ಬಡ್ಸ್‌ನಲ್ಲಿ ಅತ್ಯಂತ ಕುತೂಹಲ ಕೆರಳಿಸುವ ವಿಷಯವೆಂದರೆ “ಸೂಪರ್ ಮೈಕ್” ಪಕ್ಕದಲ್ಲಿರುವ “Talk” ಬಟನ್. ಕಂಪನಿಯು ಇದರ ಕಾರ್ಯವನ್ನು ಇನ್ನೂ ಸ್ಪಷ್ಟವಾಗಿ ತಿಳಿಸಿಲ್ಲ ಆದರೆ ಇದು ಹೊಸ ವಾಯ್ಸ್ ಅಸಿಸ್ಟೆಂಟ್ ಅಥವಾ ಗದ್ದಲವಿರುವ ಸ್ಥಳಗಳಲ್ಲಿ ಸ್ಪಷ್ಟವಾಗಿ ಮಾತನಾಡಲು ಸಹಾಯ ಮಾಡುವ ವಾಕಿ-ಟಾಕಿ ರೀತಿಯ ಫೀಚರ್ ಆಗಿರಬಹುದು ಎಂದು ಹೇಳಲಾಗುತ್ತಿದೆ. ಇದು ನಥಿಂಗ್‌ನ ChatGPT ಇಂಟಿಗ್ರೇಷನ್ ಜೊತೆಗೂ ಸಂಪರ್ಕ ಹೊಂದಿರಬಹುದು.

Also Read: ಬರೋಬ್ಬರಿ 32 ಇಂಚಿನ ಜಬರ್ದಸ್ತ್ QLED Smart TV ಫ್ಲಿಪ್‌ಕಾರ್ಟ್‌ನಲ್ಲಿ ₹7,799 ರೂಗಳಿಗೆ ಲಭ್ಯ!

Nothing Ear (3) ಉತ್ತಮ ಸೌಂಡ್ ಮತ್ತು ANC

ಬ್ರಿಟಿಷ್ ಆಡಿಯೊ ಬ್ರ್ಯಾಂಡ್ KEF ಜೊತೆಗಿನ ಸಹಭಾಗಿತ್ವದಿಂದಾಗಿ Nothing Ear (3) ಅತ್ಯುತ್ತಮ ಆಡಿಯೋ ಅನುಭವ ನೀಡುವ ನಿರೀಕ್ಷೆಯಿದೆ. ಈ ಹಿಂದೆ Nothing Headphone (1) ನಲ್ಲಿ “Sound by KEF” ಎಂಬ ಬ್ರ್ಯಾಂಡಿಂಗ್ ಇತ್ತು. ಈ Ear (3) ಟೀಸರ್‌ಗಳಲ್ಲಿ ಇದು ಇಲ್ಲವಾದರೂ KEF ನ ಟ್ಯೂನಿಂಗ್‌ನಿಂದ ಸೌಂಡ್ ಕ್ವಾಲಿಟಿ ಖಂಡಿತ ಸುಧಾರಿಸುತ್ತದೆ ಎಂದು ನಂಬಲಾಗಿದೆ. ಈ ಇಯರ್‌ಬಡ್ಸ್ ದೊಡ್ಡ ಡಯಾಫ್ರಮ್ ಮತ್ತು ಸ್ಪೇಷಿಯಲ್ ಆಡಿಯೋ ಫೀಚರ್‌ಗಳನ್ನು ಒಳಗೊಂಡಿರಲಿದೆ ಎಂದು ಹೇಳಲಾಗಿದೆ.

Nothing Ear (3)

ಜೊತೆಗೆ ನಥಿಂಗ್ ಕಂಪನಿಯು ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ (ANC) ಅನ್ನು ಗಮನಾರ್ಹವಾಗಿ ಸುಧಾರಿಸಿದೆ. Ear (3) ಸುಮಾರು 50dB ನಾಯ್ಸ್ ಅನ್ನು ಕಡಿಮೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದು Ear (2) ನ 40dB ಗಿಂತ ಹೆಚ್ಚು ಸುಧಾರಣೆಯಾಗಿದೆ. ಮತ್ತು ಇದು ನಿಜವಾದರೆ Ear (3) ಅತ್ಯುತ್ತಮ ANC ಇಯರ್‌ಬಡ್ಸ್‌ಗಳಲ್ಲಿ ಒಂದಾಗಲಿದೆ. ಇದರಲ್ಲಿ ಟ್ರಾನ್ಸ್‌ಪರೆನ್ಸಿ ಮೋಡ್ ಮತ್ತು Nothing X ಆ್ಯಪ್ ಮೂಲಕ ಸೌಂಡ್ ಪ್ರೊಫೈಲ್‌ಗಳನ್ನು ಕಸ್ಟಮೈಸ್ ಮಾಡುವ ಫೀಚರ್‌ಗಳು ಸಹ ಇರುತ್ತವೆ.

Nothing Ear (3) ನಿರೀಕ್ಷಿತ ಬೆಲೆ ಮತ್ತು ಲಭ್ಯತೆ

Nothing Ear (3) ನ ಬೆಲೆಯನ್ನು ಕಂಪನಿ ಅಧಿಕೃತವಾಗಿ ಘೋಷಿಸಿಲ್ಲ. ಆದರೆ ಇದು ಅದರ ಹಿಂದಿನ ಮಾದರಿಯ ಬೆಲೆಗೆ ಸಮನಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಮೊದಲು Nothing Ear (2) ಲಾಂಚ್ ಆದಾಗ 13,000 ರೂಗಳ ಬೆಲೆಯನ್ನು ಹೊಂದಿತ್ತು Ear (3) ಕೂಡ ಅದೇ ಬೆಲೆಯ ಆಸುಪಾಸಿನಲ್ಲಿ ಇರಲಿದೆ ಎಂದು ವರದಿಗಳು ಸೂಚಿಸುತ್ತಿವೆ. ಇದು ಸೆಪ್ಟೆಂಬರ್ 18 ರಂದು ಜಾಗತಿಕವಾಗಿ ಬಿಡುಗಡೆಯಾಗಲಿದೆ ಮತ್ತು ನಂತರ ಪ್ರಮುಖ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಲಭ್ಯವಾಗಲಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo