BSNL ಆಫರ್ ಕೇವಲ ₹1 ರೂಪಾಯಿಯ ಬಿಎಸ್ಎನ್ಎಲ್ ಫ್ರೀಡಂ ಪ್ಲಾನ್ ಇಂದು ಕೊನೆಗೊಳ್ಳಲಿದೆ.
BSNL ಗ್ರಾಹಕರಿಗೆ ಈ ಆಫರ್ ಪಡೆಯಲು ಇಂದು ಅಂದರೆ 31ನೇ ಆಗಸ್ಟ್ 2025 ಕೊನೆ ದಿನವಾಗಿದೆ.
ಕಡಿಮೆ ವೆಚ್ಚದಲ್ಲಿ ಹೆಚ್ಚು ಪ್ರಯೋಜನ ನೀಡುವ ಈ ಆಫರ್ ಈಗಾಗಲೇ ಹಲವಾರು ಗ್ರಾಹಕರ ಗಮನ ಸೆಳೆದಿದೆ.
ಬಿಎಸ್ಎನ್ಎಲ್ (BSNL) ತನ್ನ ಗ್ರಾಹಕರಿಗಾಗಿ ಈ ತಿಂಗಳು ಸ್ವಾತಂತ್ರ್ಯ ದಿನಾಚರಣೆಯ (Independence Day) ಅಂಗವಾಗಿ ಕೇವಲ ₹1 ರೂಪಾಯಿ ಯೋಜನೆಗಳ ಜಬರ್ದಸ್ತ್ ಡೀಲ್ ವಿಶೇಷ ಕೊಡುಗೆಯನ್ನು ನೀಡುತ್ತಿದೆ. ಗ್ರಾಹಕರಿಗೆ ಈ ಆಫರ್ ಪಡೆಯಲು ಇಂದು ಅಂದರೆ 31ನೇ ಆಗಸ್ಟ್ 2025 ಕೊನೆ ದಿನವಾಗಿದ್ದು ಇಂದೇ ಪಡೆಯಿರಿ. ಈ ಬೆಲೆಗೆ ಬಳಕೆದಾರರಿಗೆ ಅನ್ಲಿಮಿಟೆಡ್ ಕರೆಗಳು ಮತ್ತು ದಿನಕ್ಕೆ 2GB ಡೇಟಾ ಮತ್ತು ಅನೇಕ ಪ್ರಯೋಜನಗಳನ್ನು ಬಳಸಬಹುದು. ಈ ಮೂಲಕ ಒಂದು ತಿಂಗಳಿಗೆ ಒಂದು ರೂಪಾಯಿಯಲ್ಲಿ ಬಳಕೆಯೊಂದಿಗೆ ವಿಶೇಷ ಕೊಡುಗೆಯನ್ನು ನೀವು ತಕ್ಷಣ ರೀಚಾರ್ಜ್ ಮಾಡಿ ಬಳಸಬಹುದು.
SurveyBSNL ರೂ.1 ರೂಪಾಯಿಯ ಜಬರ್ದಸ್ತ್ ಯೋಜನೆಯಲ್ಲಿ ಏನೇನು ಸಿಗುತ್ತೆ?
ಮೊದಲಿಗೆ ಈ ಫ್ರೀಡಂ ಪ್ಲಾನ್‌ನಲ್ಲಿದೆ ಎಂದು ಕೇಳುವುದಾದರೆ BSNL ₹1 ಫ್ರೀಡಂ ಪ್ಲಾನ್ ಅತಿ ಕಡಿಮೆ ಬೆಲೆಗೆ ಗ್ರಾಹಕರು ಒಂದು ತಿಂಗಳ ಕಾಲ ಅನ್ಲಿಮಿಟೆಡ್ ಕರೆಗಳನ್ನು ಮಾಡಬಹುದು. ಜೊತೆಗೆ ಪ್ರತಿದಿನ 2GB ಹೈ-ಸ್ಪೀಡ್ ಇಂಟರ್ನೆಟ್ ಡೇಟಾ ಲಭ್ಯವಿದೆ. ಡೇಟಾ ಮುಗಿದ ಬಳಿಕ ವೇಗ ಕಡಿಮೆಯಾಗಬಹುದು. ಆದರೆ ಇಂಟರ್ನೆಟ್ ಸಂಪೂರ್ಣವಾಗಿ ನಿಲ್ಲುವುದಿಲ್ಲ. ಇದಲ್ಲದೇ ಉಚಿತ SMS ಹಾಗೂ ಕೆಲವು ಡಿಜಿಟಲ್ ಸೇವೆಗಳೂ ಸೇರಿಕೊಂಡಿವೆ. ಈ ಆಫರ್ ಕಡಿಮೆ ದರದಲ್ಲಿ ಹೆಚ್ಚು ಉಪಯೋಗ ನೀಡುವುದರಿಂದ ವಿದ್ಯಾರ್ಥಿಗಳು, ತಾತ್ಕಾಲಿಕ ಬಳಕೆದಾರರು ಮತ್ತು ಪ್ರಯಾಣಿಕರಿಗೆ ಇದು ತುಂಬಾ ಉಪಯುಕ್ತ.
ಬಿಎಸ್ಎನ್ಎಲ್ ಉಚಿತ ಸಿಮ್ ಕಾರ್ಡ್ (BSNL Free SIM Card)
ಈ ಕೊಡುಗೆಯ ಪ್ರಮುಖ ಭಾಗವೆಂದರೆ ಹೊಸ ಬಳಕೆದಾರರಿಗೆ ಉಚಿತ BSNL 4G ಸಿಮ್ ಕಾರ್ಡ್ ಸಹ ಪಡೆಯಬಹುದು. ಅಲ್ಲದೆ ಗ್ರಾಹಕರು ಯಾವುದೇ BSNL ಗ್ರಾಹಕ ಸೇವಾ ಕೇಂದ್ರ ಅಥವಾ ಅಧಿಕೃತ ಚಿಲ್ಲರೆ ವ್ಯಾಪಾರಿಗೆ ಹೋಗಿ ₹1 ಶುಲ್ಕವನ್ನು ಪಾವತಿಸಿ ಎಲ್ಲಾ “ಆಜಾದಿ ಕಾ ಪ್ಲಾನ್” ಪ್ರಯೋಜನಗಳನ್ನು ಸ್ವಯಂಚಾಲಿತವಾಗಿ ಸಕ್ರಿಯಗೊಳಿಸುವ ಹೊಸ ಸಿಮ್ ಅನ್ನು ಪಡೆಯಬಹುದು. ಇದು ಹೊಸ ಸಂಪರ್ಕವನ್ನು ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ ಮತ್ತು ಬಳಕೆದಾರರು ತಕ್ಷಣವೇ ಪ್ರಯೋಜನಗಳನ್ನು ಆನಂದಿಸಲು ಪ್ರಾರಂಭಿಸಲು ಅನುವು ಮಾಡಿಕೊಡುತ್ತದೆ.
BSNL ಫ್ರೀಡಂ ಪ್ಲಾನ್ ಹೇಗೆ ಪಡೆಯಬಹುದು? ಇಂದು ಕೊನೆಯ ದಿನ!
ಈ ವಿಶೇಷ ಯೋಜನೆಯನ್ನು ಪಡೆಯಲು ಗ್ರಾಹಕರು ಬಿಎಸ್ಎನ್ಎಲ್ ಅಧಿಕೃತ ಮೊಬೈಲ್ ಆಪ್, ವೆಬ್‌ಸೈಟ್ ಅಥವಾ ಹತ್ತಿರದ ರೀಚಾರ್ಜ್ ಕೇಂದ್ರವನ್ನು ಬಳಸಬಹುದು. ಆಫರ್ ಇಂದು ಅಂತ್ಯಗೊಳ್ಳುತ್ತಿರುವುದರಿಂದ (31 ಆಗಸ್ಟ್ 2025) ಕೊನೆಯ ಕ್ಷಣದವರೆಗೂ ಕಾಯದೆ ತಕ್ಷಣವೇ ರೀಚಾರ್ಜ್ ಮಾಡುವುದು ಉತ್ತಮ. ಈ ಆಫರ್ ಮುಗಿದ ಬಳಿಕ ಈ ದರದಲ್ಲಿ ಈ ಪ್ಲಾನ್ ಲಭ್ಯವಾಗುವುದಿಲ್ಲ ಆದರೆ ಇದೆ ಪ್ಲಾನ್ ಹೆಚ್ಚುವರಿ ಬೆಲೆಗೆ ಲಭ್ಯವಿರುತ್ತದೆ. BSNL ₹1 ಫ್ರೀಡಂ ಪ್ಲಾನ್ ಕಡಿಮೆ ವೆಚ್ಚದಲ್ಲಿ ಹೆಚ್ಚು ಪ್ರಯೋಜನ ನೀಡುವ ಈ ಆಫರ್ ಈಗಾಗಲೇ ಹಲವಾರು ಗ್ರಾಹಕರ ಗಮನ ಸೆಳೆದಿದೆ.
Also Read: boAt Dolby Audio ಸೌಂಡ್ ಬಾರ್ ಅಮೆಜಾನ್‌ನಲ್ಲಿ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ!
ಈ BSNL ಪ್ಲಾನ್ ಪಡೆಯಲು ಯಾರ್ಯಾರು ಅರ್ಹರು?
ಈ ಫ್ರೀಡಂ ಪ್ಲಾನ್ ಬಿಎಸ್ಎನ್ಎಲ್‌ನ ಎಲ್ಲಾ ಹೊಸ ಪ್ರಿಪೇಯ್ಡ್ ಗ್ರಾಹಕರಿಗೆ ಲಭ್ಯವಿದೆ. ವಿಶೇಷವಾಗಿ ಕಡಿಮೆ ವೆಚ್ಚದಲ್ಲಿ ಇಂಟರ್ನೆಟ್ ಮತ್ತು ಕರೆ ಸೇವೆಯನ್ನು ಬಳಸಬೇಕೆಂದಿರುವವರಿಗೆ ಇದು ಉತ್ತಮ ಆಯ್ಕೆ. ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳು ಅಥವಾ ಪರೀಕ್ಷಾ ಸಿದ್ಧತೆಯಲ್ಲಿ ಉಪಯೋಗಿಸಬಹುದು. ಗ್ರಾಮೀಣ ಪ್ರದೇಶದ ಬಳಕೆದಾರರು ಹಾಗೂ ತಾತ್ಕಾಲಿಕವಾಗಿ ಡೇಟಾ ಬೇಕಿರುವವರಿಗೆ ಇದು ಬಹಳ ಸಹಕಾರಿ. ಬಿಎಸ್ಎನ್ಎಲ್ ಈ ಮೂಲಕ ಹೊಸ ಗ್ರಾಹಕರನ್ನು ಸೆಳೆಯಲು ಮತ್ತು ಹಳೆಯ ಗ್ರಾಹಕರನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile