Realme P4 5G ಇಂಟ್ರೆಸ್ಟಿಂಗ್ ಫೀಚರ್ಗಳೊಂದಿಗೆ ಕೈಗೆಟಕುವ ಬೆಲೆಗೆ ರಿಯಲ್‌ಮಿ ಸ್ಮಾರ್ಟ್ ಫೋನ್ ಬಿಡುಗಡೆ!

HIGHLIGHTS

Realme P4 5G Series ಸ್ಮಾರ್ಟ್ ಫೋನ್ಗಳನ್ನು ಬಿಡುಗಡೆಗೊಳಿಸಲಾಗಿದೆ.

6GB RAM ಕೇವಲ ಬ್ಯಾಂಕ್ ಮತ್ತು ವಿನಿಮಯ ಆಫರ್ಗಳೊಂದಿಗೆ 14,999 ರೂಗಳಿಗೆ ಪರಿಚಯಿಸಿದೆ.

Realme P4 5G ಸ್ಮಾರ್ಟ್ ಫೋನ್ 50MP ಪ್ರೈಮರಿ ಕ್ಯಾಮೆರಾ ಮತ್ತು 7000 mAh ಬ್ಯಾಟರಿಯೊಂದಿಗೆ ಬರುತ್ತದೆ.

Realme P4 5G ಇಂಟ್ರೆಸ್ಟಿಂಗ್ ಫೀಚರ್ಗಳೊಂದಿಗೆ ಕೈಗೆಟಕುವ ಬೆಲೆಗೆ ರಿಯಲ್‌ಮಿ ಸ್ಮಾರ್ಟ್ ಫೋನ್ ಬಿಡುಗಡೆ!

ಭಾರತದಲ್ಲಿ ಇಂದು ರಿಯಲ್‌ಮಿ ಸ್ಮಾರ್ಟ್ಫೋನ್ ಬ್ರಾಂಡ್ ಹೊಸ Realme P4 5G Series ಸ್ಮಾರ್ಟ್ಫೋನ್ಗಳನ್ನು ಬಿಡುಗಡೆಗೊಳಿಸಲಾಗಿದೆ. ಈ ಸ್ಮಾರ್ಟ್ಫೋನ್ ಕೈಗೆಟಕುವ ಬೆಲೆಗೆ ಅತ್ಯುತ್ತಮ ಫೀಚರ್ಗಳೊಂದಿಗೆ ಪ್ಯಾಕ್ ಆಗಿದೆ. ಈ ಸ್ಮಾರ್ಟ್ಫೋನ್ ವಿಶೇಷತೆಗಳ ಬಗ್ಗೆ ಮಾತಾನಾಡುವುದಾದರೆ 50MP ಪ್ರೈಮರಿ ಕ್ಯಾಮೆರಾ ಮತ್ತು 7000 mAh ಬ್ಯಾಟರಿಯೊಂದಿಗೆ ಬರುತ್ತದೆ. ಈ ಆಫರ್ ಈವರೆಗೆ ಯಾರೂ ನೀಡದ ಜಬರದಸ್ತ್ ಆಫರ್ ನೀಡುವ ಮೂಲಕ ಸ್ಮಾರ್ಟ್ಫೋನ್ ಆರಂಭಿಕ 6GB RAM ಕೇವಲ ಬ್ಯಾಂಕ್ ಆಫರ್ಗಳೊಂದಿಗೆ ಸುಮಾರು 14,999 ರೂಗಳಿಗೆ ಪರಿಚಯಿಸಿದೆ. ಆದರೆ ಈ ಲಿಮಿಟೆಡ್ ಆಫರ್ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ಎಲ್ಲವನ್ನು ಈ ಕೆಳಗೆ ತಿಳಿಯಬಹುದು.

Digit.in Survey
✅ Thank you for completing the survey!

ಭಾರತದಲ್ಲಿ Realme P4 5G ಸ್ಮಾರ್ಟ್ ಫೋನ್ ಆಫರ್ ಬೆಲೆ:

Realme P4 5G ಸ್ಮಾರ್ಟ್ಫೋನ್‌ ಫ್ಲಿಪ್ಕಾರ್ಟ್ ಮೂಲಕ ಲಭ್ಯವಾಗಲಿದ್ದು ಇದರ ಆರಂಭಿಕ 6GB RAM ಮತ್ತು 128GB ಸ್ಟೋರೇಜ್ ₹18,499 ರೂಗಳಿಗೆ ಮತ್ತು ಇದರ ಮತ್ತೊಂದು 8GB RAM ಮತ್ತು 128GB ಸ್ಟೋರೇಜ್ ₹15,999 ರೂಗಳಿಗೆ ಮತ್ತು ಕೊನೆಯದಾಗಿ ಇದರ 8GB RAM ಮತ್ತು 256GB ಸ್ಟೋರೇಜ್ ₹21,499 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಆಸಕ್ತ ಬಳಕೆದಾರರು ಈ ಎಲ್ಲ ವೇರಿಯೆಂಟ್ಗಳು ಆಯ್ದ ಬ್ಯಾಂಕ್ ಕಾರ್ಡ್ ಬಳಸಿಕೊಂಡು ಸುಮಾರು 2500 ರೂಗಳ ಡಿಸ್ಕೌಂಟ್ ಮತ್ತು ವಿನಿಮಯ ಆಫರ್ ಪಡೆಯುವ ಮೂಲಕ Realme P4 5G ಸ್ಮಾರ್ಟ್ಫೋನ್‌ ಆರಂಭಿಕ ಮಾದರಿಯನ್ನು ಸುಮಾರು 14,999 ರೂಗಳ ವರೆಗೆ ಕಡಿಮೆ ಬೆಲೆಗೆ ಖರೀದಿಸಬಹುದು.

Realme P4 5G Launched

Realme P4 5G ಸ್ಮಾರ್ಟ್ಫೋನ್‌ ಇಂದು ಸಂಜೆ 6:00 ಗಂಟೆಯಿಂದ 10:00 ಗಂಟೆಗೆ ಈ ಆಫರ್ ಲಭ್ಯವಿದ್ದು ಇದರ 25ನೇ ಆಗಸ್ಟ್ 2025 ರಂದು ಫ್ಲಿಪ್ಕಾರ್ಟ್ ಮತ್ತು ರಿಯಲ್ಮಿ ಸೈಟ್ ಮೂಲಕ ಮೊದಲ ಮಾರಾಟಕ್ಕೆ ಲಭ್ಯವಾಗಲಿದೆ. ಅಲ್ಲದೆ Realme P4 5Gಸ್ಮಾರ್ಟ್ಫೋನ್‌ ಮೇಲೆ ಅಮೆಜಾನ್ ನಿಮಗೆ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ Realme P4 5G ಸ್ಮಾರ್ಟ್‌ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 1000 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು.

Also Read: ವಾಹ್! ಅಮೆಜಾನ್ ಸೇಲ್‌ನಲ್ಲಿ 55 ಇಂಚಿನ 4K Smart TV ಈಗ ₹25 ಸಾವಿರಕ್ಕಿಂತ ಕಡಿಮೆ ಬೆಲೆಗೆ ಲಭ್ಯ!

ರಿಯಲ್‌ಮಿ P4 5G ಸ್ಮಾರ್ಟ್ ಫೋನ್ ಫೀಚರ್ಗಳೇನು?

ಭಾರತದಲ್ಲಿ ಇಂದು ಬಿಡುಗಡೆಯಾದ Realme P4 5G ಸ್ಮಾರ್ಟ್ ಫೋನ್ ಬಜೆಟ್ ವಿಭಾಗದಲ್ಲಿ ಉತ್ತಮ ವೈಶಿಷ್ಟ್ಯಗಳನ್ನು ನೀಡುತ್ತಿದೆ. ಇದು 6.77 ಇಂಚಿನ ದೊಡ್ಡ AMOLED ಡಿಸ್‌ಪ್ಲೇಯನ್ನು ಹೊಂದಿದ್ದು 144Hz ರಿಫ್ರೆಶ್ ರೇಟ್ ಮತ್ತು 4500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 7400 ಅಲ್ಟ್ರಾ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುತ್ತದೆ. ಇದು ದೈನಂದಿನ ಕಾರ್ಯಗಳು ಮತ್ತು ಗೇಮಿಂಗ್‌ಗೆ ಉತ್ತಮ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ.

Realme P4 5G Launched

Realme P4 5G ಸ್ಮಾರ್ಟ್ ಫೋನ್ ಕ್ಯಾಮೆರಾ ವಿಭಾಗದಲ್ಲಿ ಇದು 50MP ಪ್ರೈಮರಿ ಸೆನ್ಸರ್ ಜೊತೆಗೆ 8MP ಅಲ್ಟ್ರಾ-ವೈಡ್ ಲೆನ್ಸ್ ಅನ್ನು ಒಳಗೊಂಡಿದೆ. ಇದರ ಅತ್ಯಂತ ಪ್ರಮುಖ ವೈಶಿಷ್ಟ್ಯವೆಂದರೆ ಅದರ ಬೃಹತ್ 7000mAh ಬ್ಯಾಟರಿಯೊಂದಿಗೆ ಇದು 80W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸುತ್ತದೆ. ಇದು ದೀರ್ಘಕಾಲದ ಬಳಕೆಗೆ ಮತ್ತು ವೇಗವಾಗಿ ಚಾರ್ಜ್ ಮಾಡಲು ಸಹಾಯ ಮಾಡುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo