ಇದೆ 1ನೇ ಆಗಸ್ಟ್ 2025 ರಿಂದ (UPI) ವ್ಯವಸ್ಥೆಗೆ ಹೊಸ ನಿಮಯಗಳು ಜಾರಿಯಾಗಲಿವೆ!
ಆಟೋಪೇ ಮತ್ತು ಖಾತೆಯ ಬ್ಯಾಲೆನ್ಸ್ ಪರಿಶೀಲಿಸುವುದು ಎಲ್ಲಕ್ಕೂ ಮಿತಿಯನ್ನು ನೀಡಲಾಗಿದೆ.
ಹೆಚ್ಚು ವಿಶ್ವಾಸಾರ್ಹ, ತಡೆರಹಿತ ಮತ್ತು ಗರಿಷ್ಠ ಸಮಯದಲ್ಲಿ ವೇಗದ ಮತ್ತು ಸುರಕ್ಷತೆಯನ್ನು ನೀಡುವ ಉದ್ದೇಶ ಹೊಂದಿದೆ.
UPI New Rules 2025: ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ಪಿಸಿಐ) ಮುಂದಿನ ತಿಂಗಳು ಅಂದ್ರೆ ಇದೆ 1ನೇ ಆಗಸ್ಟ್ 2025 ರಿಂದ ಜಾರಿಗೆ ಬರುವಂತೆ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (UPI) ವ್ಯವಸ್ಥೆಗೆ ಹೊಸ ನಿಯಮಗಳನ್ನು ಘೋಷಿಸಿದೆ. ಈ ಬದಲಾವಣೆಗಳಲ್ಲಿ ಮುಖ್ಯವಾಗಿ ಆಟೋಪೇ ಮತ್ತು ಖಾತೆಯ ಬ್ಯಾಲೆನ್ಸ್ ಪರಿಶೀಲಿಸುವುದು ಸೇರಿದಂತೆ ಎಲ್ಲಾ ಬ್ಯಾಂಕುಗಳು ಮತ್ತು ಪಾವತಿ ಅಪ್ಲಿಕೇಶನ್ಗಳಿಗೆ ಹೊಸ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ (API) ಬಳಕೆಯ ನಿಯಮಗಳು ಸೇರಿವೆ. ಯುಪಿಐ ಅನ್ನು ಹೆಚ್ಚು ವಿಶ್ವಾಸಾರ್ಹ, ತಡೆರಹಿತ ಮತ್ತು ಗರಿಷ್ಠ ಸಮಯದಲ್ಲಿ ಅಡೆತಡೆಗಳಿಗೆ ಕಡಿಮೆ ಗುರಿಯಾಗಿಸುವುದು ಇದರ ಉದ್ದೇಶವಾಗಿದೆ.
SurveyUPI New Rules 2025 ಅಡಿಯಲ್ಲಿ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲನೆಗೆ ಲಿಮಿಟ್ ಬಂತು:
ಈ ಹೊಸ ನಿಯಮಗಳ ಭಾಗವಾಗಿ ಯುಪಿಐ ಬಳಕೆದಾರರು ತಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ದಿನಕ್ಕೆ ಗರಿಷ್ಠ 50 ಬಾರಿ ಪರಿಶೀಲಿಸಲು ನಿರ್ಬಂಧಿಸಲಾಗಿದೆ. ತಮ್ಮ ಫೋನ್ ಸಂಖ್ಯೆಗೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಗಳನ್ನು ದಿನಕ್ಕೆ 25 ಬಾರಿ ಪರಿಶೀಲಿಸಬಹುದಾದ ಸಂಖ್ಯೆಯನ್ನು ಸಹ ದಿನಕ್ಕೆ 25 ಬಾರಿ ಸೀಮಿತಗೊಳಿಸಲಾಗುವುದು. ಈ ನಿರ್ಬಂಧಗಳು ವ್ಯವಸ್ಥೆಯಲ್ಲಿ ಅನಗತ್ಯ ದಟ್ಟಣೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿವೆ. ಇದು ಗರಿಷ್ಠ ಬಳಕೆಯ ಸಮಯದಲ್ಲಿ ಮಂದಗತಿ ಮತ್ತು ಸ್ಥಗಿತಕ್ಕೆ ಕಾರಣವಾಗುತ್ತದೆ ಎಂದು ಎನ್ಪಿಸಿಐ ಹೇಳುತ್ತದೆ.
ಇದನ್ನೂ ಓದಿ: Redmi Note 14 SE 5G ಇಂದು ಫ್ಲಿಪ್ಕಾರ್ಟ್ನಲ್ಲಿ ಬಿಡುಗಡೆ! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ!
ಆಟೋಪೇ ವಹಿವಾಟುಗಳಿಗೆ ನಿಗದಿತ ಸಮಯದ ಸ್ಲಾಟ್ಗಳು:
ಪ್ರಸ್ತುತ ನೀವು UPI ಮೂಲಕ ಮಾಡುವ ಯಾವುದೇ ರೀತಿಯ ಆಟೋಪೇ ವಹಿವಾಟುಗಳಿಗೆ ಇನ್ಮೇಲೆ ನಿಗದಿತ ಸಮಯ ಸ್ಲಾಟ್ಗಳನ್ನು ಪರಿಚಯಿಸಲಾಗುತ್ತದೆ. ಇದರರ್ಥ ಆಟೋ ಪಾವತಿಗಳು, ಚಂದಾದಾರಿಕೆಗಳು, ವಿದ್ಯುತ್ ಬಿಲ್ಗಳು ಅಥವಾ EMI ಸೌಕರ್ಯಗಳಂತಹ ಸೇವೆಗಳಿಗೆ ನಿಗದಿತ ಪಾವತಿಗಳನ್ನು ದಿನವಿಡೀ ಇಷ್ಟ ಬಂದ ಸಮಯದಿಂದ ಒಂದು ನಿರ್ದಿಷ್ಟ ವಿಂಡೋಗಳಲ್ಲಿ ಮಾತ್ರ ಪ್ರಕ್ರಿಯೆಗೊಳಿಸುವಂತೆ ಹೊಸ ನಿಯಮ ಬರಲಿದೆ. ಇದು ತೆರೆಮರೆಯ ಬದಲಾವಣೆಯಾಗಿದ್ದರೂ ಇದು ಪ್ಲಾಟ್ಫಾರ್ಮ್ನಲ್ಲಿ ದಟ್ಟಣೆಯನ್ನು ಕಡಿಮೆ ಮಾಡಲು ಈ ನಿಮಯ ಪರಿಚಯಿಸಲಾಗುತ್ತದೆ.
ಬಳಕೆದಾರರು ಏನು ಮಾಡಬೇಕು? ಎನ್ನುವುದು ಅನೇಕರ ಪ್ರಶ್ನೆಯಾಗಿದೆ!
ಈ UPI ಹೊಸ ನಿಯಮಗಳನ್ನು ನಿಮ್ಮ ಯುಪಿಐ ಅಪ್ಲಿಕೇಶನ್ಗಳ ಮೂಲಕ ಸ್ವಯಂಚಾಲಿತವಾಗಿ ಜಾರಿಗೆ ತರಲಾಗುತ್ತದೆ. ಆದ್ದರಿಂದ ನಿಮ್ಮ ಕಡೆಯಿಂದ ಯಾವುದೇ ತಕ್ಷಣದ ಕ್ರಮದ ಅಗತ್ಯವಿಲ್ಲ. ಆದಾಗ್ಯೂ ಹಗಲಿನಲ್ಲಿ ಅನಗತ್ಯ ವಹಿವಾಟು ತಡೆಗಳನ್ನು ತಪ್ಪಿಸಲು ಹೊಸ ಮಿತಿಗಳ ಬಗ್ಗೆ ತಿಳಿದಿರುವುದು ಮುಖ್ಯವಾಗಿದೆ ಅಷ್ಟೇ. ಸ್ವಯಂಚಾಲಿತ ಯುಪಿಐ ಸಂಗ್ರಹಗಳನ್ನು ಅವಲಂಬಿಸಿರುವ ವ್ಯವಹಾರಗಳು ಈ ಬದಲಾವಣೆಗಳಿಗೆ ಅನುಗುಣವಾಗಿ ತಮ್ಮ ವೇಳಾಪಟ್ಟಿಯನ್ನು ಸರಿಹೊಂದಿಸಬೇಕಾಗಬಹುದು ಆದರೆ ಹೆಚ್ಚಿನ ಬಳಕೆದಾರರಿಗೆ ಎಲ್ಲವೂ ಸಾಮಾನ್ಯವಾಗಿ ಎಂದಿನಂತೆ ಕಾರ್ಯನಿರ್ವಹಿಸುತ್ತಲೇ ಇರುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile