ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಈ ಸುದ್ದಿಯನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ.
ತತ್ಕಾಲ್ ಟಿಕೆಟ್ ಬುಕಿಂಗ್ನಲ್ಲಿ ಬದಲಾವಣೆಯನ್ನು ಜಾರಿಗೆ ತಂದಿದ್ದು ಇದು ಈಗ ದೇಶದದ್ಯಾಂತ ಅನ್ವಯಿಸಲಿದೆ.
ತತ್ಕಾಲ್ ಟಿಕೆಟ್ಗಳನ್ನು ಬುಕ್ ಮಾಡಲು ನಿಮ್ಮ IRCTC ಖಾತೆಯನ್ನು ಆಧಾರ್ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯ.
Tatkal Train Tickets: ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಈ ಸುದ್ದಿಯನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ಭಾರತೀಯ ರೈಲ್ವೆ 15ನೇ ಜುಲೈ 2025 ರಿಂದ ತತ್ಕಾಲ್ ಟಿಕೆಟ್ ಬುಕಿಂಗ್ನಲ್ಲಿ ಬದಲಾವಣೆಯನ್ನು ಜಾರಿಗೆ ತಂದಿದ್ದು ಇದು ಈಗ ದೇಶದದ್ಯಾಂತ ಅನ್ವಯಿಸಲಿದೆ. ನಿಮ್ಮ ತಕ್ಕಲ್ ಟಿಕೆಟ್ ಬುಕಿಂಗ್ ಅನ್ನು ಹೆಚ್ಚು ಪಾರದರ್ಶಕವಾಗಿಸುವುದು ಮತ್ತು ಟಿಕೆಟ್ ಬೋಕರ್ಗಳ ಚಟುವಟಿಕೆಗಳನ್ನು ನಿಯಂತ್ರಿಸುವುದು ಈ ಕ್ರಮದ ಉದ್ದೇಶವಾಗಿದೆ. ಹೊಸ ವ್ಯವಸ್ಥೆಯಡಿಯಲ್ಲಿ ತತ್ಕಾಲ್ ಟಿಕೆಟ್ಗಳನ್ನು ಬುಕ್ ಮಾಡಲು ನಿಮ್ಮ IRCTC ಖಾತೆಯನ್ನು ಆಧಾರ್ನೊಂದಿಗೆ ಪರಿಶೀಲಿಸುವುದು ಈಗ ಕಡ್ಡಾಯವಾಗಿರುತ್ತದೆ.
Surveyಹೊಸ ನಿಯಮದಲ್ಲಿ ಆಧಾರ್ ಪರಿಶೀಲನೆ ಕಡ್ಡಾಯ:
ನೆನ್ನೆಯಿಂದ ಅಂದ್ರೆ 15ನೇ ಜುಲೈ 2025 ರಿಂದ ತತ್ಕಾಲ್ ಟಿಕೆಟ್ ಬುಕಿಂಗ್ಗೆ ರೈಲ್ವೆ ಇಂದು ಪ್ರಮುಖ ಬದಲಾವಣೆಯನ್ನು ಪರಿಚಯಿಸಿದೆ. ಇಲ್ಲಿಯವರೆಗೆ ಆಧಾರ್ ಲಿಂಕ್ ಮಾಡದೆಯೂ ಬಳಕೆದಾರರು ಟಿಕೆಟ್ಗಳನ್ನು ಬುಕ್ ಮಾಡಬಹುದಿತ್ತು ಆದರೆ ಈಗ ಅದು ಆಗುವುದಿಲ್ಲ. 1ನೇ ಜುಲೈ 2025 ರಿಂದ ಪರಿಚಯಿಸಲಾದ ಒಟಿಪಿ ಆಧಾರಿತ ವ್ಯವಸ್ಥೆಯು ಪ್ರಯಾಣಿಕರ ಮೊಬೈಲ್ ಸಂಖ್ಯೆಗೆ ಒಂದು ಬಾರಿ ಪಾಸ್ವರ್ಡ್ ಕಳುಹಿಸಲು ಬಳಸಲಾಗುತ್ತಿತ್ತು ಈಗ ಅದು ಕಡ್ಡಾಯವಾಗಿದೆ. ಇದರರ್ಥ ಐಆರ್ಸಿಟಿಸಿ ಖಾತೆಯಲ್ಲಿ ಆಧಾರ್ ಪರಿಶೀಲನೆ ಮಾಡಲಾದ ಪ್ರಯಾಣಿಕರು ಮಾತ್ರ ತತ್ಕಾಲ್ ಟಿಕೆಟ್ಗಳನ್ನು ಬುಕ್ ಮಾಡಲು ಸಾಧ್ಯವಾಗುತ್ತದೆ.

IRCTC ಖಾತೆಯನ್ನು ಆಧಾರ್ನೊಂದಿಗೆ ಲಿಂಕ್ ಮಾಡಲು ಸುಲಭವಾದ ಪ್ರಕ್ರಿಯೆ
ಹಂತ 1: ಇದಕ್ಕಾಗಿ ಮೊದಲು ನಿಮ್ಮ IRCTC ಖಾತೆಗೆ ಬಳಕೆದಾರಹೆಸರು ಮತ್ತು ಪಾಸ್ವರ್ಡ್ನೊಂದಿಗೆ ಲಾಗಿನ್ ಮಾಡಿ. ಲಾಗಿನ್ ಆದ ನಂತರ ಪ್ರೊಫೈಲ್ ಅಥವಾ ನನ್ನ ಖಾತೆ ವಿಭಾಗಕ್ಕೆ ಹೋಗಿ. ಇಲ್ಲಿ ನೀವು ಆಧಾರ್ ಲಿಂಕ್ ಮಾಡುವ ಆಯ್ಕೆಯನ್ನು ನೋಡುತ್ತೀರಿ ಅಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: 5G Smartphones: ಸುಮಾರು ₹10 ಸಾವಿರಕ್ಕೆ ಬರುವ ಲೇಟೆಸ್ಟ್ 5G ಫೋನ್ಗಳ ಪಟ್ಟಿ ಇಲ್ಲಿದೆ – July 2025
ಹಂತ 2: ಇಲ್ಲಿ ನೀವು “ಆಧಾರ್ ಸೇರಿಸಿ” ಅಥವಾ “ಲಿಂಕ್ ಆಧಾರ್” ಆಯ್ಕೆಯನ್ನು ನೋಡುತ್ತೀರಿ ಅದರ ಮೇಲೆ ಕ್ಲಿಕ್ ಮಾಡಿ. ಈಗ ನಿಮ್ಮ 12 ಅಂಕೆಗಳ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ಸಲ್ಲಿಸಿ. ನೀವು ಆಧಾರ್ ಸಂಖ್ಯೆಯನ್ನು ಸಲ್ಲಿಸಿದ ತಕ್ಷಣ ಆಧಾರ್ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ ನಿಮಗೆ OTP ಕಳುಹಿಸಲಾಗುತ್ತದೆ.
ಹಂತ 3: OTP ಸ್ವೀಕರಿಸಿದ ನಂತರ ಅದನ್ನು ನಮೂದಿಸಿ ಮತ್ತು ಪರಿಶೀಲನೆಯನ್ನು ಪೂರ್ಣಗೊಳಿಸಿ. ನಿಮ್ಮ ಆಧಾರ್ ಸಂಖ್ಯೆ ಮತ್ತು OTP ಸರಿಯಾಗಿದ್ದರೆ ನಿಮ್ಮ KYC ಪ್ರಕ್ರಿಯೆಯು ಯಶಸ್ವಿಯಾಗುತ್ತದೆ ಮತ್ತು ಆಧಾರ್ ಅನ್ನು IRCTC ಖಾತೆಗೆ ಲಿಂಕ್ ಮಾಡಲಾಗುತ್ತದೆ. ‘ನನ್ನ ಪ್ರೊಫೈಲ್ ವಿಭಾಗಕ್ಕೆ ಹೋಗುವ ಮೂಲಕ ನೀವು ನಿಮ್ಮ KYC ಸ್ಥಿತಿಯನ್ನು ಪರಿಶೀಲಿಸಬಹುದು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile