ಜಿಯೋ ಗ್ರಾಹಕರಿಗೆ ಲಕ್ಷಾಂತರ ರೂಪಾಯಿ ಗೆಲ್ಲುವಂತಹ ಸುವರ್ಣಾವಕಾಶ ಇಲ್ಲಿದೆ

HIGHLIGHTS

ಒಟ್ಟಾರೆಯಾಗಿ ಮನೆಯಲ್ಲಿಯೇ ಕುಳಿತು ಲಕ್ಷಾಂತರ ರೂಪಾಯಿ ಗಳಿಸುವ ಅವಕಾಶ ಸಿಗ್ತಿದೆ.

ಭಾರತದಲ್ಲಿ ಚೀನಾದ ಬುಲೆಟ್ ಟ್ರೈನಂತೆ ವೇಗವಾಗಿ ಬೆಳೆಯುತ್ತಿರುವ ರಿಲಯನ್ಸ್ ಜಿಯೋ ತಮ್ಮ ಗ್ರಾಹಕರಿಗೆ ಕಳೆದ ವರ್ಷದಂತೆ ಈ ವರ್ಷ ಸಹ ಜಿಯೋ ಗ್ರಾಹಕರಿಗೆ ಲಕ್ಷಾಂತರ ರೂಪಾಯಿ ಗೆಲ್ಲುವಂತಹ ಸುವರ್ಣಾವಕಾಶ ಇಲ್ಲಿದೆ. ಹಾಗಾಗಿ ಇಂದು ಇಂದು ನೀವು ರಿಲಯನ್ಸ್ ಜಿಯೋ ಗ್ರಾಹಕರಾಗಿದ್ದಾರೆ ಇದರ ಅವಕಾಶ ಪಡೆಯಬವುದು. ಒಂದು ವೇಳೆ ನೀವು ರಿಲಯನ್ಸ್ ಜಿಯೋ ಗ್ರಾಹಕರಾಗದಿದ್ದರೆ ಜಲ್ದಿ ತ್ವರೆ ಮಾಡಿರಿ. ಒಟ್ಟಾರೆಯಾಗಿ ಮನೆಯಲ್ಲಿಯೇ ಕುಳಿತು ಲಕ್ಷಾಂತರ ರೂಪಾಯಿ ಗಳಿಸುವ ಅವಕಾಶ ಸಿಗ್ತಿದೆ. 

ಜಿಯೋ ನಂಬರ್ ಬಳಸಿಕೊಂಡು ನೀವು ಹಣ ಗಳಿಸೋದು ಹೇಗೆ ಅಂತಾ ನಾವು ಹೇಳ್ತೇವೆ. ಸದ್ಯ ಸೋನಿ ಚಾನೆಲ್ ನಲ್ಲಿ ಕೌನ್ ಬನೇಗಾ ಕರೋಡ್ಪತಿ ಸರಣಿ -10 ಶುರುವಾಗಿದೆ. ಇದು ಜಿಯೋ ಗ್ರಾಹಕರಿಗೆ ಮನೆಯಲ್ಲೇ ಕುಳಿತು ಹಣ ಗಳಿಸಲು ಅವಕಾಶ ನೀಡ್ತಿದೆ. ಜಿಯೋ ಗ್ರಾಹಕರು ಬಹುಮಾನ ಗೆಲ್ಲಲು Jio KBC Pay Along ಆಡಬೇಕು. KBC ಸರಣಿ 9 ರಂತೆ ಈ ಬಾರಿ ಕೂಡ ಜಿಯೋ ಚಾಟ್ ಆಯಪ್ ಮೂಲಕ ಪ್ರಶ್ನೆಗೆ ಉತ್ತರ ನೀಡಲು ಅವಕಾಶವಿದೆ. ಪ್ರಶ್ನೆಗೆ ಉತ್ತರ ನೀಡುವ ಮೂಲಕ ಹಾಟ್ ಸೀಟ್ ತಲುಪುವ ಅವಕಾಶ ಕೂಡ ನಿಮಗೆ ಲಭಿಸಲಿದೆ. 

ಇದಕ್ಕೂ ಮೊದಲು ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ ಜಿಯೋ ಚಾಟ್ ಆಯಪ್ ಡೌನ್ಲೋಡ್ ಮಾಡಿಕೊಳ್ಳಿ. ಇದಾದ ನಂತ್ರ ಹೆಸರು, ಜನ್ಮ ದಿನ, ಫೋಟೋ ಸೇರಿದಂತೆ ದಾಖಲಾತಿ ನೀಡಬೇಕು. ಇದಾದ ನಂತ್ರ ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಅಲ್ಲಿ ನೀಡಿರುವ ಸಮಯದೊಳಗೆ ಉತ್ತರ ನೀಡಬೇಕು. ಉತ್ತರದ ಆಧಾರದ ಮೇಲೆ ಮಾರ್ಕ್ಸ್ ನೀಡಲಾಗುತ್ತದೆ. ಮಾರ್ಕ್ಸ್ ಆಧಾರದ ಮೇಲೆ ಹಾಟ್ ಸೀಟ್ ಗೆ ಕರೆಯಲಾಗುತ್ತದೆ.

You May Also Like
Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :