ಭಾರತದಲ್ಲಿ Huawei Band 11 ಸ್ಮಾರ್ಟ್‌ ಬ್ಯಾಂಡ್‌ ಸರಣಿ ಬಿಡುಗಡೆ; ಬೆಲೆ ಹಾಗೂ ಫೀಚರ್ಸ್

HIGHLIGHTS

ಭಾರತದಲ್ಲಿ ಹುವಾವೇ ಬ್ಯಾಂಡ್‌ 11 ಸ್ಮಾರ್ಟ್‌ ಬ್ಯಾಂಡ್‌ ಸರಣಿ ಲಾಂಚ್‌

ಹುವಾವೇ ಬ್ಯಾಂಡ್‌ 11 ಡಿವೈಸ್‌ ಏಳು ಆಕರ್ಷಕ ಕಲರ್ ಆಯ್ಕೆ ಪಡೆದಿದೆ

ಹುವಾವೇ ಬ್ಯಾಂಡ್‌ 11 ಪ್ರೊ ಡಿವೈಸ್‌ ಮೂರು ಆಕರ್ಷಕ ಕಲರ್ ಆಯ್ಕೆಯಲ್ಲಿ ಲಭ್ಯ

ಹುವಾವೇ ಕಂಪನಿಯು ಹೊಸದಾಗಿ ಹುವಾವೇ ಬ್ಯಾಂಡ್ 11 ಸರಣಿಯನ್ನು ಇದೀಗ ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ಈ ಸರಣಿಯಲ್ಲಿ Huawei Band 11 ಮತ್ತು Huawei Band 11 Pro ಎಂಬ ಎರಡು ಮಾಡೆಲ್‌ಗಳನ್ನು ಒಳಗೊಂಡಿದೆ. ಈ ಸ್ಮಾರ್ಟ್ ಬ್ಯಾಂಡ್‌ಗಳು Android ಹಾಗೂ iOS ಡಿವೈಸ್‌ಗಳೊಂದಿಗೆ ಹೊಂದಾಣಿಕೆಯನ್ನು ಬೆಂಬಲಿಸುತ್ತವೆ. ಹುವಾವೇ ಬ್ಯಾಂಡ್‌ 11 ಡಿವೈಸ್‌ ಏಳು ಆಕರ್ಷಕ ಕಲರ್‌ ಆಯ್ಕೆಗಳನ್ನು ಹೊಂದಿದ್ದು, ಹುವಾವೇ ಬ್ಯಾಂಡ್‌ 11 ಪ್ರೊ ಡಿವೈಸ್‌ ಮೂರು ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಹಾಗಾದರೆ ಹುವಾವೇ ಬ್ಯಾಂಡ್‌ 11 ಹಾಗೂ ಹುವಾವೇ ಬ್ಯಾಂಡ್‌ 11 ಪ್ರೊ ಡಿವೈಸ್‌ಗಳ ಬೆಲೆ, ಫೀಚರ್ಸ್‌ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : RCB Edition ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲು ಸಜ್ಜಾಗಿರುವ Nothing ಮೊಬೈಲ್ ಬ್ರಾಂಡ್‌!

Huawei Band 11 ಸರಣಿ ಬೆಲೆ ಹಾಗೂ ಲಭ್ಯತೆ

ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಹುವಾವೇ ಬ್ಯಾಂಡ್‌ 11 ಹಾಗೂ ಹುವಾವೇ ಬ್ಯಾಂಡ್‌ 11 ಪ್ರೊ ಡಿವೈಸ್‌ಗಳು ಸ್ಟೈಲಿಶ್‌ ಲುಕ್‌ನೊಂದಿಗೆ ಗಮನ ಸೆಳೆದಿವೆ. ಅವುಗಳ ಪೈಕಿ ಹುವಾವೇ ಬ್ಯಾಂಡ್‌ 11 ಡಿವೈಸ್‌ ಬೆಲೆ 6,499 ರೂ.ಗಳು ಆಗಿದೆ. ಹುವಾವೇ ಬ್ಯಾಂಡ್‌ 11 ಮೆಟಲ್‌ ಡಿವೈಸ್‌ ಬೆಲೆ 7,999 ರೂ.ಗಳ ಆಗಿದೆ. ಹಾಗೆಯೇ ಟಾಪ್‌ ಎಂಡ್‌ ಹುವಾವೇ ಬ್ಯಾಂಡ್‌ 11 ಪ್ರೊ ಡಿವೈಸ್‌ ದರವು 8,999 ರೂ.ಗಳು ಆಗಿದೆ. ಹುವಾವೇ ಬ್ಯಾಂಡ್‌ 11 ಡಿವೈಸ್‌ ಬೀಜ್, ಬ್ಲ್ಯಾಕ್‌, ಕಪ್ಪು (ಪಾಲಿಮರ್), ಗ್ರೀನ್‌, ಪರ್ಪಲ್‌, ಪರ್ಪಲ್‌ (ಪಾಲಿಮರ್) ಮತ್ತು ವೈಟ್‌ ಕಲರ್‌ ಆಯ್ಕೆಗಳಲ್ಲಿ ಲಭ್ಯ. ಹಾಗೆಯೇ ಹುವಾವೇ ಬ್ಯಾಂಡ್ 11 ಪ್ರೊ ಡಿವೈಸ್‌ ಬ್ಲ್ಯಾಕ್‌, ಬ್ಲೂ ಮತ್ತು ಗ್ರೀನ್‌ ಬಣ್ಣಗಳ ಆಯ್ಕೆಯಲ್ಲಿ ಸಿಗಲಿದೆ. ಈ ಬ್ಯಾಂಡ್‌ಗಳು Amazon ಹಾಗೂ Flipkart ತಾಣಗಳಲ್ಲಿ ಖರೀದಿಗೆ ಲಭ್ಯ.

ಹುವಾವೇ ಬ್ಯಾಂಡ್‌ 11 ಸರಣಿಯ ಫೀಚರ್ಸ್‌ ಮಾಹಿತಿ

ಹುವಾವೇ ಬ್ಯಾಂಡ್‌ 11 ಹಾಗೂ ಹುವಾವೇ ಬ್ಯಾಂಡ್‌ 11 ಪ್ರೊ ಸ್ಮಾರ್ಟ್ ಬ್ಯಾಂಡ್‌ಗಳು ಆಂಡ್ರಾಯ್ಡ್‌ 9 ಅಥವಾ ಅದಕ್ಕಿಂತ ಹೊಸ ಆವೃತ್ತಿ ಹಾಗೂ iOS 13 ಅಥವಾ ನಂತರದ ಆವೃತ್ತಿ ಹೊಂದಿರುವ ಸ್ಮಾರ್ಟ್‌ಫೋನ್‌ಗಳೊಂದಿಗೆ ಹೊಂದಾಣಿಕೆಯನ್ನು ಬೆಂಬಲಿಸುತ್ತವೆ. ಈ ಮೂರು ಮಾದರಿಗಳಲ್ಲೂ 1.62 ಇಂಚಿನ AMOLED ಟಚ್‌ಸ್ಕ್ರೀನ್ ಡಿಸ್ಪ್ಲೇ ಪಡೆದಿದೆ. ಇದು 286 × 482 ಪಿಕ್ಸೆಲ್‌ ರೆಸಲ್ಯೂಶನ್‌ ಹಾಗೂ 347ppi ಪಿಕ್ಸೆಲ್ ಸಾಂದ್ರತೆ ಜೊತೆಗೆ Always On Display ಬೆಂಬಲವನ್ನು ಹೊಂದಿವೆ. ಹುವಾವೇ ಬ್ಯಾಂಡ್‌ 11 ಪ್ರೊ ಗರಿಷ್ಠ 2,000 ನಿಟ್ಸ್ ಬ್ರೈಟ್ನೆಸ್‌ ಹೊಂದಿದೆ. ಇನ್ನು ಹುವಾವೇ ಬ್ಯಾಂಡ್‌ 11 ಡಿವೈಸ್‌ 1,500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಒದಗಿಸುತ್ತವೆ.

ಆರೋಗ್ಯ ಮೇಲ್ವಿಚಾರಣೆಗಾಗಿ ಈ ಸ್ಮಾರ್ಟ್ ಬ್ಯಾಂಡ್‌ಗಳಲ್ಲಿ ಆಪ್ಟಿಕಲ್ ಹೃದಯ ಬಡಿತ ಸೆನ್ಸರ್ ಮತ್ತು SpO2 ಸೆನ್ಸರ್ ಅಳವಡಿಸಲಾಗಿದೆ. ಇದರೊಂದಿಗೆ ನಿದ್ರೆ ಟ್ರ್ಯಾಕಿಂಗ್, ಹೃದಯ ಬಡಿತ ವ್ಯತ್ಯಾಸ ಮಾನಿಟರಿಂಗ್, ಒತ್ತಡ ಟ್ರ್ಯಾಕಿಂಗ್, ನಿದ್ರೆಯ ವೇಳೆ ಉಸಿರಾಟದ ಮೇಲ್ವಿಚಾರಣೆ ಸೇರಿದಂತೆ ಹಲವು ಆರೋಗ್ಯ ಸಂಬಂಧಿತ ಫೀಚರ್ಸ್‌ಗಳನ್ನು ಇದು ಒದಗಿಸುತ್ತದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :