ಭಾರತದಲ್ಲಿ Google Pixel Watch 5 ಲಾಂಚ್; ಸ್ಟೈಲಿಶ್‌ ಲುಕ್‌ ಜೊತೆಗೆ ಆಕರ್ಷಕ ಫೀಚರ್ಸ್‌

HIGHLIGHTS

ಗೂಗಲ್‌ ಪಿಕ್ಸೆಲ್ ವಾಚ್‌ 5 ವಾಚ್‌ ಎರಡು ಮಾಡೆಲ್‌ಗಳ ಆಯ್ಕೆಯಲ್ಲಿ ಲಭ್ಯ

ಈ ಸ್ಮಾರ್ಟ್‌ವಾಚ್‌ ಆಕ್ಟುವಾ 360 AMOLED LTPO ಡಿಸ್‌ಪ್ಲೇ ಅನ್ನು ಹೊಂದಿದೆ

ಈ ವಾಚ್‌ ಸ್ನಾಪ್‌ಡ್ರಾಗನ್ W5 Gen 2 ಆಕ್ಸಿಲರೇಟೆಡ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ

ಭಾರತದಲ್ಲಿ Google Pixel Watch 5 ಲಾಂಚ್; ಸ್ಟೈಲಿಶ್‌ ಲುಕ್‌ ಜೊತೆಗೆ ಆಕರ್ಷಕ ಫೀಚರ್ಸ್‌

ಗೂಗಲ್‌ ಸಂಸ್ಥೆಯು ತನ್ನ ಗೂಗಲ್‌ ಪಿಕ್ಸಲ್‌ 11 ಸ್ಮಾರ್ಟ್‌ಫೋನ್‌ ಸರಣಿಯ ಜೊತೆಗೆ Google Pixel Watch 5 ಸ್ಮಾರ್ಟ್‌ವಾಚ್‌ ಅನ್ನು ಭಾರತದಲ್ಲಿ ಅಧಿಕೃತವಾಗಿ ಲಾಂಚ್ ಮಾಡಿದೆ. ಈ ಹೊಸ ಸ್ಮಾರ್ಟ್‌ವಾಚ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ W5 Gen 2 ಆಕ್ಸಿಲರೇಟೆಡ್ ಪ್ರೊಸೆಸರ್‌ ಪಡೆದುಕೊಂಡಿರುವ ಜೊತೆಗೆ ಆಕರ್ಷಕ ಹೆಲ್ತ್ ಫೀಚರ್ಸ್‌ಗಳನ್ನು ಒಳಗೊಂಡಿದೆ. ಹಾಗೆಯೇ ಈ ನೂತನ ವಾಚ್‌ ಆಲ್ವೇಸ್‌ ಆನ್‌ ಡಿಸ್‌ಪ್ಲೇಯು ಸಪೋರ್ಟ್‌ ಪಡೆದಿದ್ದು, 60Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಒಂದೇ ಚಾರ್ಜ್‌ನಲ್ಲಿ 40 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ಒದಗಿಸಲಿದೆ. ಹಾಗಾದರೇ ಗೂಗಲ್‌ ಪಿಕ್ಸೆಲ್ ವಾಚ್‌ 5 ಡಿವೈಸ್‌ನ ಬೆಲೆ ಹಾಗೂ ಫೀಚರ್ಸ್‌ ಕುರಿತ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : Google Pixel 11 Pro Fold ಬಿಡುಗಡೆ; ಮಡಚಬಹುದಾದ ಈ ಫೋನ್‌ನಲ್ಲಿ ಟ್ರಿಪಲ್‌ ಕ್ಯಾಮೆರಾ ಸೌಲಭ್ಯ!

Google Pixel Watch 5 ಬೆಲೆ ಹಾಗೂ ಲಭ್ಯತೆ

ಭಾರತದಲ್ಲಿ ಹೊಸದಾಗಿ ಲಗ್ಗೆ ಇಟ್ಟಿರುವ ಗೂಗಲ್‌ ಪಿಕ್ಸೆಲ್ ವಾಚ್‌ 5 ಡಿವೈಸ್‌ ಆಕರ್ಷಕ ಡಿಸೈನ್‌ ಜೊತೆಗೆ ಉಪಯುಕ್ತ ಫೀಚರ್ಸ್‌ಗಳ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಈ ವಾಚ್‌ನ 41mm ವೇರಿಯಂಟ್‌ ಬೆಲೆ 42,999 ರೂ.ಗಳು ಆಗಿದೆ. ಇನ್ನು ಇದರ 45mm ವೇರಿಯಂಟ್‌ ಬೆಲೆ 45,999 ರೂ.ಗಳು ಆಗಿದೆ. 41mm ವೇರಿಯಂಟ್‌ ಅನ್ನು ಫಾಗ್ ಆಕ್ಟಿವ್ ಬ್ಯಾಂಡ್‌ನೊಂದಿಗೆ ಪಾಲಿಶ್ಡ್ ಸಿಲ್ವರ್ ಅಲ್ಯೂಮಿನಿಯಂ ಕೇಸ್ ಮತ್ತು ಕ್ಯಾನ್ಯನ್ ಆಕ್ಟಿವ್ ಬ್ಯಾಂಡ್‌ನೊಂದಿಗೆ ಷಾಂಪೇನ್ ಗೋಲ್ಡ್ ಅಲ್ಯೂಮಿನಿಯಂ ಕೇಸ್‌ನಲ್ಲಿ ಖರೀದಿ ಮಾಡಬಹುದು. ಆದರೆ 45mm ವೇರಿಯಂಟ್‌ ಅನ್ನು ಆಲಿವ್ ಆಕ್ಟಿವ್ ಬ್ಯಾಂಡ್‌ನೊಂದಿಗೆ ಸ್ಯಾಟಿನ್ ಪೈರೈಟ್ ಅಲ್ಯೂಮಿನಿಯಂ ಕೇಸ್ ಮತ್ತು ಅಬ್ಸಿಡಿಯನ್ ಆಕ್ಟಿವ್ ಬ್ಯಾಂಡ್‌ನೊಂದಿಗೆ ಮ್ಯಾಟ್ ಬ್ಲ್ಯಾಕ್ ಅಲ್ಯೂಮಿನಿಯಂ ಕೇಸ್‌ನಲ್ಲಿ ಲಭ್ಯ.

Google Pixel Watch 5 Launched With Snapdragon W5 Gen 2 Processor Check India Price

ಗೂಗಲ್‌ ಪಿಕ್ಸೆಲ್ ವಾಚ್‌ 5 ಫೀಚರ್ಸ್‌

ಗೂಗಲ್‌ ಪಿಕ್ಸೆಲ್ ವಾಚ್‌ 5 ಸ್ಮಾರ್ಟ್‌ವಾಚ್‌ ಗುಮ್ಮಟಾಕಾರದ ಆಕ್ಟುವಾ 360 AMOLED LTPO ಡಿಸ್‌ಪ್ಲೇ ಅನ್ನು ಹೊಂದಿದೆ. ಇದರ ಡಿಸ್‌ಪ್ಲೇಯು 3,000 nits ಗರಿಷ್ಠ ಬ್ರೈಟ್ನೆಸ್‌ ಜೊತೆಗೆ 60Hz ವರೆಗಿನ ರಿಫ್ರೆಶ್ ರೇಟ್‌ ಸೌಲಭ್ಯ ಒಳಗೊಂಡಿದೆ. ಇದರ ಸ್ಕ್ರೀನ್‌ ಕಸ್ಟಮ್ scratch-resistant ಕಾರ್ನಿಂಗ್ ಗೊರಿಲ್ಲಾ ಗ್ಲಾಸ್‌ನಿಂದ ರಕ್ಷಿಸಲಾಗಿದೆ. ಈ ವಾಚ್‌ Qualcomm Snapdragon W5 Gen 2 Accelerated ಪ್ಲಾಟ್‌ಫಾರ್ಮ್ ಮತ್ತು Cortex-M55 ಕೋ-ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡಲಿದೆ.

ಈ ವಾಚ್‌ ಆರೋಗ್ಯ ಟ್ರ್ಯಾಕಿಂಗ್ ಆಯ್ಕೆಗಳಲ್ಲಿ ಪಿಕ್ಸೆಲ್ ವಾಚ್ AFib ಪತ್ತೆ, ಹೆಚ್ಚಿನ ಮತ್ತು ಕಡಿಮೆ ಹೃದಯ ಬಡಿತ ಎಚ್ಚರಿಕೆಗಳು, ವಿಶ್ರಾಂತಿ ಹೃದಯ ಬಡಿತ ಮೇಲ್ವಿಚಾರಣೆ, ರಕ್ತದ ಆಮ್ಲಜನಕದ ಶುದ್ಧತ್ವ (SpO2), ಹೃದಯ ಬಡಿತ ವ್ಯತ್ಯಾಸ (HRV), ಉಸಿರಾಟದ ದರ, ಚರ್ಮದ ತಾಪಮಾನ ವ್ಯತ್ಯಾಸ ಮತ್ತು ನೈಜ-ಸಮಯದ ಒತ್ತಡ ಟ್ರ್ಯಾಕಿಂಗ್‌ನೊಂದಿಗೆ ECG ಅನ್ನು ಸಪೋರ್ಟ್ ಮಾಡುತ್ತದೆ. ಇನ್ನು 41mm ಪಿಕ್ಸೆಲ್ ವಾಚ್ 5 ಡಿವೈಸ್‌ 30 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ಹಾಗೂ 45mm ವೇರಿಯಂಟ್‌ ಒಂದೇ ಚಾರ್ಜ್‌ನಲ್ಲಿ 40 ಗಂಟೆಗಳ ಬ್ಯಾಕ್‌ಅಪ್‌ ನೀಡಬಲ್ಲದು ಎನ್ನಲಾಗಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile