ಆಪಲ್ ಕಂಪನಿಯು ನೂತನ ಐಫೋನ್‌ಗಳ ಜೊತೆಗೆ ತನ್ನ ಹೊಸ ಸ್ಮಾರ್ಟ್‌ವಾಚ್‌ಗಳನ್ನೂ ಸಹ ಪರಿಚಯಿಸಿದೆ. ಕಂಪನಿಯು Apple Watch Series 12 ಮತ್ತು Apple Watch Ultra 4 ಅನ್ನು ಲಾಂಚ್ ಮಾಡಿದೆ. ಈ ಹೊಸ ವಾಚ್‌ಗಳು ಆರೋಗ್ಯ ಸೆನ್ಸರ್‌ಗಳು, ಅಪ್‌ಗ್ರೇಡ್ ಫಿಟ್‌ನೆಸ್ ಟ್ರ್ಯಾಕಿಂಗ್ ಹಾಗೂ ಆಪಲ್ Intelligence ಆಧಾರಿತ ಹಲವು ಫೀಚರ್ಸ್‌ಗಳನ್ನು ಒಳಗೊಂಡಿವೆ. ಈ ಎರಡೂ ಮಾದರಿಗಳಲ್ಲಿ ಆಪಲ್‌ನ ಹೊಸ S11 ಚಿಪ್ ಪವರ್ ಕೆಲಸ ಮಾಡಲಿದೆ. ಇದರೊಂದಿಗೆ ಹೃದಯ ಬಡಿತ ಮತ್ತು ಹೃದಯ ಬಡಿತದ ವ್ಯತ್ಯಾಸ (HRV) ಅನ್ನು ಅಳೆಯುವ ಸಾಮರ್ಥ್ಯವನ್ನು ನೀಡಲಾಗಿದೆ. ಅಲ್ಲದೆ ಹೊಸದಾಗಿ Readiness Score ಫೀಚರ್ ಕೂಡ ಲಭ್ಯವಿದೆ. ಹಾಗಾದರೆ ಆಪಲ್ ವಾಚ್ ಸರಣಿಯ ಫೀಚರ್ಸ್ ಹಾಗೂ ಬೆಲೆಯ ಬಗ್ಗೆ ಮುಂದೆ ತಿಳಿಯೋಣ.
Also Read : ಭಾರತದಲ್ಲಿ Apple AirPods 5 ಬಿಡುಗಡೆ: ಬೆಲೆ ಹಾಗೂ ಫೀಚರ್ಸ್ ವಿವರ ಇಲ್ಲಿದೆ
ಭಾರತದಲ್ಲಿ ಆಪಲ್ ವಾಚ್ ಅಲ್ಟ್ರಾ 4 ಡಿವೈಸ್ ಬೆಲೆ 1,09,900 ರೂ.ಗಳಿಂದ ಪ್ರಾರಂಭವಾಗುತ್ತದೆ. ಆಪಲ್ ವಾಚ್ ಸಿರೀಸ್ 12 ಡಿವೈಸ್ ಅಲ್ಯೂಮಿನಿಯಂ, ಟೈಟಾನಿಯಂ ಮತ್ತು ಸೆರಾಮಿಕ್ ಫಿನಿಶ್‌ಗಳಲ್ಲಿ ಲಭ್ಯ. ಇನ್ನು ಆಪಲ್ ವಾಚ್ ಅಲ್ಟ್ರಾ 4 ಮಾದರಿಯು ನ್ಯಾಚುರಲ್ ಮತ್ತು ಬ್ಲ್ಯಾಕ್ ಟೈಟಾನಿಯಂ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಈ ಎರಡೂ ಸ್ಮಾರ್ಟ್‌ವಾಚ್‌ಗಳಿಗೆ ಪ್ರೀ-ಆರ್ಡರ್ ಆರಂಭವಾಗಿದ್ದು, ಸೆಪ್ಟೆಂಬರ್ 18 ರಿಂದ ಮಾರಾಟ ಪ್ರಾರಂಭವಾಗಲಿದೆ.
ಆಪಲ್ ವಾಚ್ ಸಿರೀಸ್ 12 ಅನ್ನು 42mm ಮತ್ತು 46mm ಗಾತ್ರಗಳಲ್ಲಿ ಪರಿಚಯಿಸಲಾಗಿದೆ. ಮತ್ತೊಂದೆಡೆ ಆಪಲ್ ವಾಚ್ ಅಲ್ಟ್ರಾ 4 ಡಿವೈಸ್ 49mm ಟೈಟಾನಿಯಂ ಕೇಸ್‌ನೊಂದಿಗೆ ಲಭ್ಯವಾಗಲಿದೆ. ಈ ಎರಡೂ ವಾಚ್‌ಗಳು ಆಪಲ್‌ನ ಹೊಸ ಆರೋಗ್ಯ ಸೆನ್ಸಿಂಗ್ ಸಿಸ್ಟಮ್ ಅನ್ನು ಹೊಂದಿದ್ದು, ಪ್ರತಿ 5 ಸೆಕೆಂಡ್‌ಗಳಿಗೊಮ್ಮೆ ಹೃದಯ ಬಡಿತವನ್ನು ಅಳೆಯುವ ಸಾಮರ್ಥ್ಯ ಹೊಂದಿವೆ. HRV ರೀಡಿಂಗ್‌ಗಳನ್ನು ಕೂಡ ಹಿಂದಿನದಕ್ಕಿಂತ ಸುಮಾರು 24 ಪಟ್ಟು ಹೆಚ್ಚು ಬಾರಿ ದಾಖಲಿಸಲಾಗುತ್ತದೆ.
ಹಾಗೆಯೇ ಎರಡೂ ಮಾದರಿಗಳು watchOS 27 ಆಧಾರಿತವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು Siri AI ಬೆಂಬಲವನ್ನು ಹೊಂದಿವೆ. ಇದರ ಜೊತೆಗೆ Sound Recognition, Live Rewind ಮತ್ತು Siri Recap ಸೇರಿದಂತೆ ಹೊಸ ಆಡಿಯೊ ಇಂಟೆಲಿಜೆನ್ಸ್ ಆಯ್ಕೆಗಳನ್ನು ಪರಿಚಯಿಸಲಾಗಿದೆ. ಹೊಸ Readiness ಫೀಚರ್ ಬಳಕೆದಾರರ ಚಟುವಟಿಕೆ, ತರಬೇತಿ ಪ್ರಮಾಣ, ನಿದ್ರೆ ಸೇರಿದಂತೆ ಹಲವು ಅಂಶಗಳನ್ನು ವಿಶ್ಲೇಷಿಸಿ 0 ರಿಂದ 10ರವರೆಗಿನ ಸ್ಕೋರ್ ನೀಡುತ್ತದೆ. ಇದರ ಆಧಾರದ ಮೇಲೆ Recover, Ready ಅಥವಾ Go for It ನಂತಹ ಸಲಹೆಗಳನ್ನು ನೀಡುತ್ತದೆ.
ವಾಚ್ ಸಿರೀಸ್ 12 ಸಾಮಾನ್ಯ ಬಳಕೆಯಲ್ಲಿ 24 ಗಂಟೆಗಳ ವರೆಗೆ ಬ್ಯಾಟರಿ ಬ್ಯಾಕಪ್ ನೀಡುತ್ತದೆ. ಹೊರಾಂಗಣ ವ್ಯಾಯಾಮವನ್ನು ನಿರಂತರವಾಗಿ ಟ್ರ್ಯಾಕ್ ಮಾಡಿದಾಗ ಸುಮಾರು 10 ಗಂಟೆಗಳವರೆಗೆ ಬಳಕೆ ಮಾಡಬಹುದು. ಕೇವಲ 15 ನಿಮಿಷಗಳ ಚಾರ್ಜಿಂಗ್‌ನಿಂದ 12 ಗಂಟೆಗಳವರೆಗೆ ಬ್ಯಾಟರಿ ಬಳಕೆಯನ್ನು ಪಡೆಯಬಹುದು. ವಾಚ್ ಅಲ್ಟ್ರಾ 4 ನಲ್ಲಿ ಬ್ಯಾಟರಿ ಸಾಮರ್ಥ್ಯ ಮತ್ತಷ್ಟು ಅಧಿಕವಿದೆ. ಸಾಮಾನ್ಯ ಬಳಕೆಯಲ್ಲಿ 50 ಗಂಟೆಗಳ ವರೆಗೆ, ಕಡಿಮೆ ಪವರ್ ಮೋಡ್‌ನಲ್ಲಿ 84 ಗಂಟೆಗಳವರೆಗೆ ಬ್ಯಾಟರಿ ಬ್ಯಾಕಪ್ ಸಿಗಲಿದೆ.