ಭಾರತದಲ್ಲಿ Apple AirPods 5 ಬಿಡುಗಡೆ: ಬೆಲೆ ಹಾಗೂ ಫೀಚರ್ಸ್ ವಿವರ ಇಲ್ಲಿದೆ
ಆಪಲ್ ತನ್ನ Surprise and Shine ಕಾರ್ಯಕ್ರಮದಲ್ಲಿ ಐಫೋನ್ 18 ಪ್ರೊ, ಪ್ರೊ ಮ್ಯಾಕ್ಸ್ ಹಾಗೂ ಐಫೋನ್ ಡ್ಯುಯೊ ಫೋನ್‌ಗಳ ಜೊತೆಗೆ Apple AirPods 5 ಸ್ಟ್ಯಾಂಡರ್ಡ್ ಏರ್‌ಪಾಡ್ಸ್ ಶ್ರೇಣಿಯನ್ನು ಬಿಡುಗಡೆ ಮಾಡಿದೆ. ಹೊಸ ಮಾದರಿಯಲ್ಲಿ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ (ANC) ಸೇರಿದಂತೆ ಹಲವು ಫೀಚರ್ಸ್‌ಗಳನ್ನು ನೀಡಲಾಗಿದೆ. ಇದರೊಂದಿಗೆ ವೈರ್‌ಲೆಸ್ ಚಾರ್ಜಿಂಗ್ ಕೇಸ್ ಹೊಂದಿರುವ ಮತ್ತೊಂದು ಮಾಡೆಲ್‌ನ್ನು ಕಂಪನಿ ಪರಿಚಯಿಸಿದೆ. ಹಾಗಾದರೆ ಆಪಲ್ ಕಂಪನಿಯ ಏರ್‌ಪಾಡ್ಸ್ 5 ಬೆಲೆ ಎಷ್ಟು? ಫೀಚರ್ಸ್‌ಗಳೇನು? ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : Apple ಕಂಪನಿಯ ಮೊದಲ ಫೋಲ್ಡಬಲ್ ಐಫೋನ್ ‘iPhone Duo’ ಲಾಂಚ್: ಬೆಲೆ, ಫೀಚರ್ಸ್ ನೋಡಿ
Apple AirPods 5 ಬೆಲೆ ಹಾಗೂ ಲಭ್ಯತೆ ಮಾಹಿತಿ
ಆಪಲ್ ಕಂಪನಿಯ ಏರ್‌ಪಾಡ್ಸ್ 5 ಡಿವೈಸ್ ಭಾರತದಲ್ಲಿ 14,900 ರೂ.ಗಳ ಬೆಲೆಯಲ್ಲಿ ಮುಂಗಡವಾಗಿ ಆರ್ಡರ್ ಮಾಡಬಹುದು. ಈ ವೇರಿಯಂಟ್ ಇದೇ ಸೆಪ್ಟೆಂಬರ್ 18 ರಿಂದ ದೇಶದ ಆಪಲ್ ಸ್ಟೋರ್‌ಗಳಲ್ಲಿ ಲಭ್ಯವಾಗಲಿದೆ. ಇನ್ನು ವೈರ್‌ಲೆಸ್ ಚಾರ್ಜಿಂಗ್ ಕೇಸ್ ಹೊಂದಿರುವ ಏರ್‌ಪಾಡ್ಸ್ 5 ವೇರಿಯಂಟ್ 17,900 ರೂ.ಗಳ ಬೆಲೆಯನ್ನು ಹೊಂದಿದೆ. ಈ ವೇರಿಯಂಟ್ ಸಹ ಸೆಪ್ಟೆಂಬರ್ 18 ರಿಂದ ಮಾರಾಟಕ್ಕೆ ಬರಲಿದೆ.

ಆಪಲ್ ಏರ್‌ಪಾಡ್ಸ್ 5 ಫೀಚರ್ಸ್
ಆಪಲ್‌ನ ಈ ಹೊಸ ಏರ್‌ಪಾಡ್ ಡಿವೈಸ್ ಹಾಫ್ ಇನ್-ಇಯರ್ ವಿನ್ಯಾಸವನ್ನೇ ಮುಂದುವರಿಸಿದೆ. ವಿಶೇಷವಾಗಿ ಆಪಲ್ ಡಿವೈಸ್‌ಗಳೊಂದಿಗೆ ಸುಲಭವಾಗಿ ಕನೆಕ್ಟ್ ಆಗಿ ಕಾರ್ಯನಿರ್ವಹಿಸುವ ವೈರ್‌ಲೆಸ್ ಇಯರ್‌ಬಡ್ಸ್ ಬಯಸುವ ಬಳಕೆದಾರರನ್ನು ಇದು ಆಕರ್ಷಿಸಲಿದೆ. ಈ ಡಿವೈಸ್ ಅತ್ಯುತ್ತಮ ವಾಯ್ಸ್ ಅನುಭವವನ್ನು ನೀಡುತ್ತದೆ ಎಂದು ಆಪಲ್ ಹೇಳಿದೆ. ಈ ಹಿಂದಿನ ಸರಣಿಗೆ ಹೋಲಿಸಿದರೆ ಹೊಸ ಮಾದರಿಯಲ್ಲಿ 50%ರಷ್ಟು ಹೆಚ್ಚಿನ ಶಬ್ದ ಕಡಿತ ಸಾಮರ್ಥ್ಯ ಹೊಂದಿರುವ ಸುಧಾರಿತ ANC ನೀಡಲಾಗಿದೆ.
ವೈರ್‌ಲೆಸ್ ಚಾರ್ಜಿಂಗ್ ಕೇಸ್ ಹೊಂದಿರುವ ಹೈ ಎಂಡ್ ಮಾದರಿಯಲ್ಲಿ ANC ಆನ್ ಮಾಡಿದಾಗ 5 ಗಂಟೆಗಳವರೆಗೆ ಬ್ಯಾಟರಿ ಬ್ಯಾಕಪ್ ಸಿಗಲಿದೆ. ಇದರೊಂದಿಗೆ ಈ ಎರಡೂ ಮಾದರಿಗಳು USB-C ಚಾರ್ಜಿಂಗ್ ಅನ್ನು ಬೆಂಬಲಿಸುತ್ತವೆ. ಹಾಗೆಯೇ Live Translation, Transparency Mode, Conversation Awareness ಹಾಗೂ Siri AI ಸೇರಿದಂತೆ ಹಲವು ಫೀಚರ್ಸ್‌ಗಳನ್ನು ಏರ್‌ಪಾಡ್ 5 ಹೊಂದಿದೆ. ಅಲ್ಲದೆ IP57 ರೇಟಿಂಗ್ ಸೌಲಭ್ಯ ಪಡೆದಿದ್ದು, ಧೂಳು ಮತ್ತು ನೀರಿನ ವಿರುದ್ಧವೂ ಉತ್ತಮ ರಕ್ಷಣೆ ನೀಡಲಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile
