ದೇಶೀಯ ಮಾರುಕಟ್ಟೆಯಲ್ಲಿ ಹೊಸ Xiaomi ಸ್ಮಾರ್ಟ್‌ಟಿವಿಗಳ ಗ್ರ್ಯಾಂಡ್‌ ಎಂಟ್ರಿ; ಬೆಲೆ ನೋಡಿ

HIGHLIGHTS

ಈ ನೂತನ ಟಿವಿ ಸರಣಿಯು ನಾಲ್ಕು ವೇರಿಯಂಟ್‌ಗಳ ಆಯ್ಕೆ ಪಡೆದಿದೆ

ಶಿಯೋಮಿಯ ಈ ಸ್ಮಾರ್ಟ್‌ಟಿವಿಗಳು Cortex-A55 ಪ್ರೊಸೆಸರ್‌ ಬಲ ಹೊಂದಿವೆ

ಜೂನ್ 11 ರಂದು ಶಿಯೋಮಿ ವೆಬ್‌ಸೈಟ್‌ ಹಾಗೂ ಕಾಮರ್ಸ್ ವೆಬ್‌ಸೈಟ್‌ಗಳ ಮೂಲಕ ಸೇಲ್ ಪ್ರಾರಂಭ

ಶಿಯೋಮಿ ಸಂಸ್ಥೆಯು ಭಾರತದಲ್ಲಿ ಇದೀಗ ತನ್ನ Xiaomi TV FX Mini LED Series ಸ್ಮಾರ್ಟ್‌ಟಿವಿ ಸರಣಿಯನ್ನು ಬಿಡುಗಡೆ ಮಾಡಿದೆ. ಈ ನೂತನ ಟಿವಿ ಸರಣಿಯು ನಾಲ್ಕು ವೇರಿಯಂಟ್‌ಗಳಲ್ಲಿ ಲಗ್ಗೆ ಇಟ್ಟಿದ್ದು, ಅವುಗಳು ಕ್ರಮವಾಗಿ 43 ಇಂಚು, 55 ಇಂಚು, 65 ಇಂಚು ಮತ್ತು 75 ಇಂಚು ಆಗಿವೆ. ಅಂದಹಾಗೆ ಈ ನಾಲ್ಕು ವೇರಿಯಂಟ್‌ ಟಿವಿಗಳು QD ಮಿನಿ LED ಡಿಸ್‌ಪ್ಲೇ ತಂತ್ರಜ್ಞಾನ, ಫೈರ್ ಟಿವಿ ಇಂಟಿಗ್ರೇಷನ್, HDR10+ ಸಪೋರ್ಟ್‌ ಮತ್ತು ಡಾಲ್ಬಿ ಆಡಿಯೊ ಬೆಂಬಲಿತ ಸ್ಪೀಕರ್‌ಗಳನ್ನು ಒಳಗೊಂಡಿದೆ. ಹಾಗಾದರೆ ಶಿಯೋಮಿ ಕಂಪನಿಯ ಈ ನೂತನ ಟಿವಿಗಳ ಬೆಲೆ ಹಾಗೂ ಫೀಚರ್ಸ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : ಲಾಂಚ್‌ ಆಗಿಯೇ ಬಿಡ್ತು Motorola Edge 70 Pro+ ಸ್ಮಾರ್ಟ್‌ಫೋನ್‌! ಟ್ರಿಪಲ್‌ ಕ್ಯಾಮೆರಾ

Xiaomi TV FX Mini LED Series: ಬೆಲೆ ಹಾಗೂ ಲಭ್ಯತೆ

ಶಿಯೋಮಿ ಕಂಪನಿಯ ಈ ನೂತನ ಟಿವಿ ಸರಣಿಯನ್ನು ನಾಲ್ಕು ವೇರಿಯಂಟ್‌ ಆಯ್ಕೆಯಲ್ಲಿ ಪರಿಚಯಿಸಿದೆ. ಈ ಸರಣಿಯ 43 ಇಂಚಿನ ಟಿವಿ ಬೆಲೆಯು 32,999 ರೂ.ಗಳು ಆಗಿದೆ. ಹಾಗೆಯೇ 55 ಇಂಚಿನ ಟಿವಿ ಬೆಲೆಯು 44,999 ರೂ.ಗಳು ಆಗಿದೆ. ಹಾಗೆಯೇ 65 ಇಂಚಿನ ಟಿವಿ ಬೆಲೆಯು 64,999 ರೂ.ಗಳು ಆಗಿದೆ. ಅದೇ ರೀತಿ 75 ಇಂಚಿನ ಟಿವಿ ಬೆಲೆಯು 84,999 ರೂ.ಗಳು ಆಗಿದೆ. ಅಂದಹಾಗೆ ಈ ಹೊಸ ಟಿವಿ ಸರಣಿಯು ಇದೇ ಜೂನ್ 11 ರಂದು ಶಿಯೋಮಿ ಆನ್‌ಲೈನ್‌ ಸ್ಟೋರ್‌, ಇ ಕಾಮರ್ಸ್ ವೆಬ್‌ಸೈಟ್‌ಗಳು ಮತ್ತು ಶಿಯೋಮಿ ರೀಟೇಲ್‌ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಾಗಲಿವೆ.

ಶಿಯೋಮಿಯ ಹೊಸ ಸ್ಮಾರ್ಟ್‌ಟಿವಿಗಳ ಫೀಚರ್ಸ್‌

ಶಿಯೋಮಿಯ ನೂತನ ಸ್ಮಾರ್ಟ್‌ಟಿವಿಗಳು ಆಕರ್ಷಕ ಎನಿಸಿವೆ. ಇವು 43 ಇಂಚಿನ, 55 ಇಂಚಿನ, 65 ಇಂಚಿನ ಮತ್ತು 75 ಇಂಚಿನ ಡಿಸ್‌ಪ್ಲೇ ಆಯ್ಕೆ ಪಡೆದಿವೆ. ಹಾಗೆಯೇ ಈ ಟಿವಿಗಳು 4K ಜೊತೆಗೆ 3,840×2,160 ಪಿಕ್ಸೆಲ್‌ ರೆಸಲ್ಯೂಶನ್ ಸೌಲಭ್ಯ ಪಡೆದಿವೆ. ಹಾಗೆಯೇ 178 ಡಿಗ್ರಿ ವೀಕ್ಷಣಾ ಕೋನ ಹೊಂದಿದ್ದು, ಫಿಲ್ಮ್‌ಮೇಕರ್ ಮೋಡ್ ಮತ್ತು Xiaomi ಯ ವಿವಿಡ್ ಪಿಕ್ಚರ್ ಎಂಜಿನ್ 2 ಅನ್ನು ಬೆಂಬಲಿಸುತ್ತವೆ. ಇನ್ನು ಈ ಟಿವಿಗಳು Mali-G52 2EE MC1 GPU ಜೊತೆಗೆ ಜೋಡಿಸಲಾದ ಕ್ವಾಡ್-ಕೋರ್ Cortex-A55 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿವೆ. ಅಲ್ಲದೇ 2GB RAM + 32GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಯನ್ನು ಹೊಂದಿದೆ.

ಇನ್ನು ಶಿಯೋಮಿ ಟಿವಿ FX ಮಿನಿ LED ಸರಣಿಯಲ್ಲಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಬ್ಯಾಂಡ್ ವೈ ಫೈ ಮತ್ತು ಬ್ಲೂಟೂತ್ ಸೇರಿವೆ. ಅಲ್ಲದೇ ಎರಡು USB 2.0 ಪೋರ್ಟ್‌ಗಳು, ಈಥರ್ನೆಟ್ ಪೋರ್ಟ್, AV ಇನ್‌ಪುಟ್, ಆಪ್ಟಿಕಲ್ ಆಡಿಯೊ ಪೋರ್ಟ್, ಹೆಡ್‌ಫೋನ್ ಜ್ಯಾಕ್ ಮತ್ತು ಆಂಟೆನಾ ಕನೆಕ್ಟರ್‌ಗಳನ್ನು ಒಳಗೊಂಡಂತೆ ಮೂರು HDMI ಪೋರ್ಟ್‌ಗಳನ್ನು ಪಡೆದುಕೊಂಡಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :