Xiaomi ಯಿಂದ ಭಾರತದಲ್ಲಿ ಹೊಸ ಸ್ಮಾರ್ಟ್‌ಟಿವಿ ಲಾಂಚ್‌; 75 ಇಂಚಿನ ಈ ಟಿವಿಯ ಬೆಲೆ ಹಾಗೂ ಫೀಚರ್ಸ್‌

Updated on 19-Feb-2026
HIGHLIGHTS

Xiaomi QLED TV X Pro 75 ಟಿವಿಯ ಬೆಲೆ 69,999 ರೂಗಳು ಆಗಿದೆ

Xiaomiಯ ಈ ಸ್ಮಾರ್ಟ್‌ಟಿವಿಯು 34W ಬಾಕ್ಸ್‌ ಸ್ಪೀಕರ್‌ ಸಿಸ್ಟಮ್‌ ಪಡೆದುಕೊಂಡಿದೆ

ಈ ಹೊಸ ಸ್ಮಾರ್ಟ್‌ಟಿವಿಯು ಇದೇ ಫೆಬ್ರವರಿ 27 ರಿಂದ ಮಾರಾಟ ಪ್ರಾರಂಭಿಸಲಿದೆ

ಲೀಡಿಂಗ್‌ ಬ್ರಾಂಡ್‌ಗಳ ಪೈಕಿ ಒಂದಾದ Xiaomi ಸಂಸ್ಥೆಯು ಭಾರತದಲ್ಲಿ ಹೊಸದಾಗಿ Xiaomi QLED TV X Pro 75 ಸ್ಮಾರ್ಟ್‌ಟಿವಿ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಸ್ಮಾರ್ಟ್‌ಟಿವಿ ಕಂಪನಿಯ ಈವರೆಗಿನ ಅತಿದೊಡ್ಡ QLED ಟಿವಿ ಎನ್ನಲಾಗಿದ್ದು ಇದು 75 ಇಂಚಿನ 4K ಡಿಸ್‌ಪ್ಲೇ ಅನ್ನು ಪಡೆದುಕೊಂಡಿದೆ. ಇದು Filmmaker ಮೋಡ್‌ ಜೊತೆಗೆ 34W ಬಾಕ್ಸ್‌ ಸ್ಪೀಕರ್‌ ಸಿಸ್ಟಮ್‌ ವ್ಯವಸ್ಥೆಯನ್ನು ಪಡೆದುಕೊಂಡಿದೆ. ಇದರೊಂದಿಗೆ ಈ ಟಿವಿಯು ಡಾಲ್ಬಿ ಆಡಿಯೋ, DTS X ಮತ್ತು DTS ವರ್ಚುವಲ್ X ಅನ್ನು ಸಪೋರ್ಟ್‌ ಮಾಡುತ್ತದೆ. ಹಾಗಾದರೆ Xiaomi QLED TV X Pro 75 ಸ್ಮಾರ್ಟ್‌ಟಿವಿಯ ಬೆಲೆ ಹಾಗೂ ಫೀಚರ್ಸ್‌ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : ಭಾರತದಲ್ಲಿ Vivo V70 Elite ಮೊಬೈಲ್‌ ಬಿಡುಗಡೆ! ಫೀಚರ್ಸ್‌ ಹಾಗೂ ಬೆಲೆ ತಿಳಿಯಿರಿ

Xiaomi QLED TV X Pro 75 ಬೆಲೆ ಹಾಗೂ ಲಭ್ಯತೆ

ಶಿಯೋಮಿ ಕಂಪನಿಯು ಭಾರತದಲ್ಲಿ Xiaomi QLED TV X Pro 75 ಸ್ಮಾರ್ಟ್‌ಟಿವಿ ಅನ್ನು ಪರಿಚಯಿಸಿದೆ. ಈ ಟಿವಿಯ ಬೆಲೆ 69,999 ರೂಗಳು ಆಗಿದೆ. ಇನ್ನು ಪರಿಚಯಾತ್ಮಕ ಕೊಡುಗೆಯಾಗಿ ಖರೀದಿದಾರರು 5,000 ರೂಗಳ ಬ್ಯಾಂಕ್ ರಿಯಾಯಿತಿಯನ್ನು ಪಡೆಯಬಹುದು. ಈ ಕೊಡುಗೆ ಪಡೆದುಕೊಂಡು ಖರೀದಿಸಿದರೆ ಈ ಸ್ಮಾರ್ಟ್‌ಟಿವಿ 64,999 ರೂಗಳಿಗೆ ಲಭ್ಯವಾಗುತ್ತದೆ. ಈ ಸ್ಮಾರ್ಟ್‌ಟಿವಿ ಫೆಬ್ರವರಿ 27 ರಿಂದ Xiaomi ಯ ಅಧಿಕೃತ ವೆಬ್‌ಸೈಟ್ ಮೂಲಕ ಮಾರಾಟಕ್ಕೆ ಲಭ್ಯವಾಗಲಿದೆ.

Xiaomi QLED TV X Pro 75 ಫೀಚರ್ಸ್‌ ಹೀಗಿವೆ

Xiaomi QLED TV X Pro 75 4K ಅಲ್ಟ್ರಾ ಟಿವಿಯು 75 ಇಂಚಿನ QLED ಪ್ಯಾನೆಲ್ ಅನ್ನು ಹೊಂದಿದ್ದು ಇದರ ಸ್ಕ್ರೀನ್‌ 3,840 × 2,160 ಪಿಕ್ಸೆಲ್‌ಗಳು ರೆಸಲ್ಯೂಶನ್ ಪಡೆದಿದೆ. ಹಾಗೆಯೇ ಈ ಟಿವಿಯು ಡಾಲ್ಬಿ ವಿಷನ್ ಮತ್ತು HDR10+ ಅನ್ನು ಬೆಂಬಲಿಸುತ್ತದೆ. ಇದು ಬೆಜೆಲ್ ಕಡಿಮೆ ವಿನ್ಯಾಸ ಹೊಂದಿರುವ ಜೊತೆಗೆ 97.76% ಸ್ಕ್ರೀನ್ ಟು ಬಾಡಿ ಅನುಪಾತವನ್ನು ಹೊಂದಿದೆ. ಅಲ್ಲದೇ ಗೇಮಿಂಗ್ ಕನ್ಸೋಲ್‌ಗಳಿಗಾಗಿ ಟಿವಿ ಆಟೋ ಲೋ ಲ್ಯಾಟೆನ್ಸಿ ಮೋಡ್ (ALLM) ಅನ್ನು ಸಹ ಸಪೋರ್ಟ್ ಮಾಡುತ್ತದೆ. ಇನ್ನು ಈ ಟಿವಿಯು ಕ್ವಾಡ್ ಕೋರ್ core A55 ಪ್ರೊಸೆಸರ್ ಸಾಮರ್ಥ್ಯ ಪಡೆದಿರುವ ಜೊತೆಗೆ 32GB ಆಂತರಿಕ ಸ್ಟೋರೇಜ್‌ ಅನ್ನು ಒಳಗೊಂಡಿದೆ.

ಹಾಗೆಯೇ Xiaomi QLED TV X Pro 75 4K ಅಲ್ಟ್ರಾ ಟಿವಿಯು eARC ಬೆಂಬಲಿತ ಮೂರು HDMI ಪೋರ್ಟ್‌ಗಳನ್ನು ಪಡೆದುಕೊಂಡಿದೆ. ಹಾಗೆಯೇ ಎರಡು USB 2.0 ಪೋರ್ಟ್‌ಗಳು, Ethernet, AV, ಆಪ್ಟಿಕಲ್, ಆಂಟೆನಾ ಮತ್ತು ಇಯರ್‌ಫೋನ್ ಪೋರ್ಟ್ ಅನ್ನು ಸಹ ಒಳಗೊಂಡಿದೆ. ಇನ್ನು ವೈರ್‌ಲೆಸ್ ಕ್ಯಾಸ್ಟಿಂಗ್‌ಗಾಗಿ ಈ ಟಿವಿಯು AirPlay 2, ಗೂಗಲ್ ಕ್ಯಾಸ್ಟ್ ಮತ್ತು ಮಿರಾಕಾಸ್ಟ್ ಜೊತೆಗೆ ಡ್ಯುಯಲ್ ಬ್ಯಾಂಡ್ Wi-Fi ಮತ್ತು ಬ್ಲೂಟೂತ್ ಆಯ್ಕೆಗಳನ್ನು ಸಹ ಪಡೆದುಕೊಂಡಿದೆ. ಅಲ್ಲದೇ ಈ ಟಿವಿಯು ಇದು ಡಾಲ್ಬಿ ಆಡಿಯೋ ಜೊತೆಗೆ 34W ಬಾಕ್ಸ್ ಸ್ಪೀಕರ್ ಸಿಸ್ಟಮ್ ಅನ್ನು ಸಹ ಒಳಗೊಂಡಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :