ಇಂಡ್ಕಲ್ ಟೆಕ್ನಾಲಜೀಸ್ ಮಾಲೀಕತ್ವದ ಟೆಲಿವಿಷನ್ ಬ್ರ್ಯಾಂಡ್ ಆಗಿರುವ Wobble ಸಂಸ್ಥೆಯು ಇದೀಗ ಹೊಸ smart TV ಸರಣಿಗಳನ್ನು ಭಾರತದಲ್ಲಿ ಪರಿಚಯಿಸಿದೆ. ಕಂಪನಿಯು ತನ್ನ X ಸರಣಿಯಲ್ಲಿ 4K QLED ಸ್ಮಾರ್ಟ್ ಟಿವಿಗಳು ಮತ್ತು K ಸರಣಿಯಲ್ಲಿ 4K ಸ್ಮಾರ್ಟ್ ಟಿವಿಗಳನ್ನು ದೇಶಿಯ ಮಾರುಕಟ್ಟೆಗೆ ಲಾಂಚ್ ಮಾಡಿದೆ. ಈ ನೂತನ ಟಿವಿಗಳು ಬಜೆಟ್ ಪ್ರೈಸ್‌ಟ್ಯಾಗ್‌ನಲ್ಲಿ ಲಗ್ಗೆ ಇಟ್ಟಿವೆ. ಹಾಗೆಯೇ ಅತ್ಯುತ್ತಮ ಡಿಸ್‌ಪ್ಲೇ ಮತ್ತು ಆಡಿಯೊ ತಂತ್ರಜ್ಞಾನಗಳೊಂದಿಗೆ ಗೂಗಲ್ ಟಿವಿ ಸಾಫ್ಟ್‌ವೇರ್ ಸಪೋರ್ಟ್ ಸಹ ಪಡೆದಿವೆ. ಹಾಗಾದರೇ Wobble ಸಂಸ್ಥೆಯು ಬಿಡುಗಡೆ ಮಾಡಿರುವ ಹೊಸ smart TV ಸರಣಿಗಳ ಫೀಚರ್ಸ್ ಹಾಗೂ ಬೆಲೆ ಬಗ್ಗೆ ಮುಂದೆ ತಿಳಿಯೋಣ.
Also Read : Samsung Galaxy S26 Ultra ಫೋನಿನ ಬೆಲೆ ಲೀಕ್! ಭಾರತದಲ್ಲಿ ಈ ಮೊಬೈಲ್‌ನ ನಿರೀಕ್ಷಿತ ದರ ಎಷ್ಟು?
Wobble ಕಂಪನಿಯ K ಸರಣಿ ಮತ್ತು Wobble X ಸರಣಿ ನೂತನ ಸ್ಮಾರ್ಟ್ ಟಿವಿಗಳು ಭಾರತದಲ್ಲಿ Flipkart ಇ ಕಾಮರ್ಸ್ ತಾಣದಲ್ಲಿ ಖರೀದಿಗೆ ಲಭ್ಯವಿದೆ.
32 ಇಂಚಿನ (HD) ಟಿವಿ ಬೆಲೆ 10,999 ರೂಗಳು ಆಗಿದೆ
40 ಇಂಚಿನ (FHD) ಟಿವಿ ಬೆಲೆ 14,499 ರೂಗಳು ಆಗಿದೆ
43 ಇಂಚಿನ (FHD) ಟಿವಿ ಬೆಲೆ 17,499 ರೂಗಳು ಆಗಿದೆ
43 ಇಂಚಿನ (4K) ಟಿವಿ ಬೆಲೆ 20,499 ರೂಗಳು ಆಗಿದೆ
55 ಇಂಚಿನ (4K) ಟಿವಿ ಬೆಲೆ 29,499 ರೂಗಳು ಆಗಿದೆ
65 ಇಂಚಿನ (4K) ಟಿವಿ ಬೆಲೆ 39,499 ರೂಗಳು ಆಗಿದೆ
43 ಇಂಚಿನ (QLED 4K) ಟಿವಿ ಬೆಲೆ 23,999 ರೂಗಳು ಆಗಿದೆ
50 ಇಂಚಿನ (QLED 4K) ಟಿವಿ ಬೆಲೆ 30,499 ರೂಗಳು ಆಗಿದೆ
55 ಇಂಚಿನ (QLED 4K) ಟಿವಿ ಬೆಲೆ 34,999 ರೂಗಳು ಆಗಿದೆ
Wobble ಸಂಸ್ಥೆಯ X ಸರಣಿಯು 43 ಇಂಚಿನ, 50 ಇಂಚಿನ ಮತ್ತು 55 ಇಂಚಿನ ಗಾತ್ರಗಳಲ್ಲಿ ಲಭ್ಯವಿರುವ 4K QLED smart TV ಶ್ರೇಣಿ ಆಗಿವೆ. ಈ ಟಿವಿಗಳು 3840 × 2160 ಪಿಕ್ಸೆಲ್ ರೆಸಲ್ಯೂಶನ್ ಸಪೋರ್ಟ್ ಪಡೆದಿವೆ. ಅಲ್ಲದೇ ಇವುಗಳ ಡಿಸ್‌ಪ್ಲೇ ವೈಶಿಷ್ಟ್ಯಗಳಲ್ಲಿ ಡಾಲ್ಬಿ ವಿಷನ್, HDR10, ಮತ್ತು HLG ಗೆ ಸಪೋರ್ಟ್ ಹೊಂದಿವೆ. ಹಾಗೆಯೇ 178 ಡಿಗ್ರಿ ವೀಕ್ಷಣಾ ನೋಟ ಮತ್ತು 1.07 ಬಿಲಿಯನ್ ಶೇಡ್‌ಗಳ ವರೆಗಿನ ಬಣ್ಣ ಔಟ್‌ಪುಟ್ ಸೇರಿವೆ. ಇದರೊಂದಿಗೆ ಡ್ಯುಯಲ್ ವೂಫರ್ ಸ್ಪೀಕರ್ ತಂತ್ರಜ್ಞಾನವನ್ನು ಬಳಸಿಕೊಂಡು ಡಾಲ್ಬಿ ಅಟ್ಮೋಸ್ ಬೆಂಬಲದ ಜೊತೆಗೆ 80W ಆಡಿಯೊ ಔಟ್‌ಪುಟ್ ಪಡೆದಿವೆ. ಈ ಸ್ಮಾರ್ಟ್ ಟಿವಿಗಳು A55 + A75 ಡ್ಯುಯಲ್-ಕೋರ್ ಪ್ರೊಸೆಸರ್‌ನಿಂದ ಪವರ್ ಹೊಂದಿದ್ದು 16GB ಆಂತರಿಕ ಸ್ಟೋರೇಜ್ ಅನ್ನು ಒಳಗೊಂಡಿವೆ.
Wobble ಈ ಸರಣಿಯು 32 ಇಂಚಿನ HD, 40 ಇಂಚಿನ FHD, 43 ಇಂಚಿನ FHD ಮಾಡೆಲ್ ಹೊಂದಿದೆ. ಅಲ್ಲದೇ 55 ಇಂಚಿನ 4K ಮತ್ತು 65 ಇಂಚಿನ 4K ಮಾಡೆಲ್‌ಗಳನ್ನು ಹೊಂದಿದೆ. ಅದೇ ರೀತಿ 43 ಇಂಚಿನ ಶ್ರೇಣಿಯನ್ನು FHD ಮತ್ತು 4K ಆಯ್ಕೆಗಳಲ್ಲಿ ನೀಡಲಾಗಿದೆ. 32 ಇಂಚಿನ ಮತ್ತು 40 ಇಂಚಿನ ಮಾಡೆಲ್‌ಗಳು ಝೀರೋ-ಫ್ರೇಮ್ ವಿನ್ಯಾಸವನ್ನು ಹೊಂದಿರುವ ಜೊತೆಗೆ HDR10 ಅನ್ನು ಬೆಂಬಲಿಸುತ್ತವೆ. ಈ ಮಾಡೆಲ್‌ಗಳು 30W ಸೂಪರ್ ಫಿಡೆಲಿಟಿ ಆಡಿಯೊ ಸಪೋರ್ಟ್ ಜೊತೆಗೆ 8GB ಆಂತರಿಕ ಸ್ಟೋರೇಜ್ ಆಯ್ಕೆ ಹೊಂದಿವೆ. ಇನ್ನು A55 ಕ್ವಾಡ್-ಕೋರ್ ಪ್ರೊಸೆಸರ್ ಬಲದಲ್ಲಿ ಕೆಲಸ ಮಾಡಲಿವೆ. 55 ಇಂಚಿನ ಮತ್ತು 65 ಇಂಚಿನ ಮಾಡೆಲ್‌ಗಳು 16GB ಆಂತರಿಕ ಸ್ಟೋರೇಜ್ ಅನ್ನು ಒಳಗೊಂಡಿವೆ. ಅಲ್ಲದೇ 55 ಇಂಚಿನ ಮಾಡೆಲ್ ಆಡಿಯೊ ಔಟ್‌ಪುಟ್ ಅನ್ನು 36W ಮತ್ತು 65 ಇಂಚಿನ ಮಾಡೆಲ್ 40W ಗೆ ಹೆಚ್ಚಿಸುತ್ತವೆ. ಇವುಗಳು ಡ್ಯುಯಲ್-ಕೋರ್ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿವೆ ಹಾಗೂ Google ಅಸಿಸ್ಟಂಟ್ ಬೆಂಬಲದ ರಿಮೋಟ್‌ನೊಂದಿಗೆ ಲಭ್ಯ.