Samsung ಕಂಪನಿಯ 75 ಇಂಚಿನ ಈ ಸ್ಮಾರ್ಟ್‌ಟಿವಿ ಬೆಲೆಯಲ್ಲಿ ಜಬರ್ದಸ್ತ್‌ ಇಳಿಕೆ!

Updated on 10-Feb-2026
HIGHLIGHTS

Samsung ಸಂಸ್ಥೆಯ ಈ ಸ್ಮಾರ್ಟ್‌ಟಿವಿ ಅಮೆಜಾನ್‌ನಲ್ಲಿ ಬಿಗ್ ಡಿಸ್ಕೌಂಟ್‌ ಪಡೆದಿದೆ

ಈ ಸ್ಮಾರ್ಟ್‌ಟಿವಿ ಮೂರು HDMI ಪೋರ್ಟ್‌ ಆಯ್ಕೆಗಳನ್ನು ಒಳಗೊಂಡಿದೆ

Samsung ಸಂಸ್ಥೆಯ ಈ ಸ್ಮಾರ್ಟ್‌ಟಿವಿ 20 W ವಾಯ್ಸ್‌ ಔಟ್‌ಪುಟ್ ಸೌಲಭ್ಯ ಪಡೆದುಕೊಂಡಿದೆ

Samsung ಕಂಪನಿಯ ಸ್ಮಾರ್ಟ್‌ ಟಿವಿಗಳು ಮಾರುಕಟ್ಟೆಯಲ್ಲಿ ಸದ್ದು ಮಾಡಿವೆ. ನೀವೇನಾದರೂ ಡಿಸ್ಕೌಂಟ್‌ ಬೆಲೆಯಲ್ಲಿ Samsung ಕಂಪನಿಯ ಸ್ಮಾರ್ಟ್‌ ಟಿವಿಯೊಂದನ್ನು ಖರೀದಿಸಲು ಬಯಸಿದರೆ ನಿಮಗೆ ಇಲ್ಲಿದೆ ಗುಡ್‌ನ್ಯೂಸ್‌. ಹೌದು, ಜನಪ್ರಿಯ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ Amazon ತಾಣದಲ್ಲಿ Samsung ಸಂಸ್ಥೆಯ 75 ಇಂಚಿನ 4K Ultra HD Smart LED ಸ್ಮಾರ್ಟ್ ಟಿವಿ ಭಾರೀ ರಿಯಾಯಿತಿ ದರದಲ್ಲಿ ಲಭ್ಯ ಇದೆ. ಖರೀದಿದಾರರು ಬ್ಯಾಂಕ್‌ ಆಫರ್‌ಗಳ ಮೂಲಕ ಹೆಚ್ಚುವರಿ ಡಿಸ್ಕೌಂಟ್‌ ಸಹ ಪಡೆಯಬಹುದಾಗಿದೆ. ಇನ್ನು ಈ ಸ್ಮಾರ್ಟ್‌ ಟಿವಿಯು Samsung Tizen ಓಎಸ್‌ ಸೌಲಭ್ಯ ಒಳಗೊಂಡಿರುವ ಜೊತೆಗೆ ಬಿಲ್ಟ್‌ ಇನ್‌ ವಾಯ್ಸ್‌ ಅಸಿಸ್ಟೆನ್ಸ್‌ ಆಯ್ಕೆಯನ್ನು ಪಡೆದಿದೆ. ಇನ್ನುಳಿದಂತೆ Samsung ನ ಈ ಟಿವಿಗೆ ಅಮೆಜಾನ್‌ ತಾಣದಲ್ಲಿ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : Google Pixel 10 ಮೊಬೈಲ್‌ ಖರೀದಿಗೆ ಇದುವೇ ಅತ್ಯುತ್ತಮ ಸಮಯ! ಈ ಚಾನ್ಸ್‌ ಕಳ್ಕೋಬೇಡಿ

Samsung ಕಂಪನಿಯ 75 ಇಂಚಿನ ಸ್ಮಾರ್ಟ್‌ಟಿವಿ ಬೆಲೆಯಲ್ಲಿ ಇಳಿಕೆ

Samsung ಸಂಸ್ಥೆಯ UA75UE85AFULXL (Black) 75 ಇಂಚಿನ ಸ್ಮಾರ್ಟ್ ಟಿವಿ ಆಕರ್ಷಕ ಬೆಲೆ ಇಳಿಕೆ ಪಡೆದಿದೆ. Amazon ತಾಣದಲ್ಲಿ ಈ ಸ್ಮಾರ್ಟ್‌ ಟಿವಿಯ ಮೂಲ ಬೆಲೆ 1,28,900 ರೂಗಳು ಆಗಿದ್ದು ಸದ್ಯ 79,990 ರೂಗಳ ಆಫರ್‌ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇದಲ್ಲದೇ ಆಸಕ್ತ ಗ್ರಾಹಕರು ಆಯ್ದ ಬ್ಯಾಂಕ್‌ಗಳ ಮೂಲಕ ಖರೀದಿಸಿದರೆ ಹೆಚ್ಚುವರಿ ರಿಯಾಯಿತಿ ಪಡೆಯಬಹುದಾಗಿದೆ.

ಈ ಸ್ಮಾರ್ಟ್‌ಟಿವಿಯ ಪ್ರಮುಖ ಫೀಚರ್ಸ್‌

Samsung ಸಂಸ್ಥೆಯ ಈ ಸ್ಮಾರ್ಟ್‌ಟಿವಿಯು 75 ಇಂಚಿನ (189 cm) ಕ್ರಿಸ್ಟಲ್ 4K ಅಲ್ಟ್ರಾ HD ಸ್ಕ್ರೀನ್‌ ಅನ್ನು ಪಡೆದಿದೆ. ಈ ಟಿವಿ ಸ್ಕ್ರೀನ್‌ 3840 x 2160 ಪಿಕ್ಸಲ್‌ ರೆಸಲ್ಯೂಶನ್‌ ಜೊತೆಗೆ 4K Ultra HD ಸಪೋರ್ಟ್‌ ಹೊಂದಿದೆ. ಹಾಗೆಯೇ ಇದು HDR10+ ಸಪೋರ್ಟ್‌, 4K ಅಪ್‌ಸ್ಕೇಲಿಂಗ್, ಫಿಲ್ಮ್‌ಮೇಕರ್ ಮೋಡ್ ಗಳಂತಹ ಆಯ್ಕೆಗಳನ್ನು ಒಳಗೊಂಡಿದೆ. ಈ ಸ್ಮಾರ್ಟ್‌ ಟಿವಿಯು Samsung Tizen ಓಎಸ್‌ ಪ್ರೊಸೆಸರ್‌ ಸೌಲಭ್ಯ ಒಳಗೊಂಡಿದೆ ಹಾಗೂ IoT ಸೆನ್ಸರ್ ಬೆಂಬಲ, ಮೊಬೈಲ್‌ ಟು ಟಿವಿ ಮಿರರಿಂಗ್, ಸೌಂಡ್ ಮಿರರಿಂಗ್, ಸ್ಮಾರ್ಟ್‌ಥಿಂಗ್ಸ್ ಹಬ್ಸ್‌ ಸೌಲಭ್ಯಗಳನ್ನು ಪಡೆದುಕೊಂಡಿದೆ. ಸ್ಥಿರ ವೈರ್ಡ್ ಇಂಟರ್ನೆಟ್‌ಗಾಗಿ ಈಥರ್ನೆಟ್ LAN ಪೋರ್ಟ್ ಜೊತೆಗೆ Wi-Fi 5, ಬ್ಲೂಟೂತ್ 5.2, ಮತ್ತು HDMI eARC ಆಯ್ಕೆಗಳನ್ನು ಪಡೆದಿದೆ.

ಈ ಸ್ಮಾರ್ಟ್‌ ಟಿವಿಯು ಅಮೆಜಾನ್‌ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಯೂಟ್ಯೂಬ್, ಜಿಯೋಹಾಟ್‌ಸ್ಟಾರ್, ಸನ್‌ನೆಕ್ಸ್ಟ್‌, Zee5 ಸೇರಿದಂತೆ ಮ್ಯೂಸಿಕ್‌ ಚಾನೆಲ್‌ಗಳ ಸಪೋರ್ಟ್‌ ಸಹ ಹೊಂದಿದೆ. ಇನ್ನು ಈ ಟಿವಿಯ ಸೌಂಡ್‌ ಸಹ ಅತ್ಯುತ್ತಮವಾಗಿದ್ದು ಇದು 20 W ವಾಯ್ಸ್‌ ಔಟ್‌ಪುಟ್ ಒಳಗೊಂಡಿದೆ. ಹಾಗೆಯೇ ಆಬ್ಜೆಕ್ಟ್ ಟ್ರ್ಯಾಕಿಂಗ್ ಸೌಂಡ್ ಲೈಟ್, Q-ಸಿಂಫನಿ ಹಾಗೂ ಅಡಾಪ್ಟಿವ್ ಸೌಂಡ್ ವ್ಯವಸ್ಥೆ ಹೊಂದಿದೆ. ಸೆಟ್-ಟಾಪ್ ಬಾಕ್ಸ್, ಸೌಂಡ್‌ಬಾರ್, ಹೋಮ್ ಥಿಯೇಟರ್, ಗೇಮಿಂಗ್ ಕನ್ಸೋಲ್ ಸೇರಿದಂತೆ ಅತ್ಯುತ್ತಮ ಕನೆಕ್ಷನ್‌ಗಾಗಿ 3 HDMI ಪೋರ್ಟ್‌ ಸೌಲಭ್ಯ ಪಡೆದುಕೊಂಡಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :