ಪ್ರಸ್ತುತ ಸ್ಮಾರ್ಟ್ ಟಿವಿಗಳ ಅಬ್ಬರ ಜೋರಾಗಿದ್ದು ಅನೇಕರು ದೊಡ್ಡ ಸ್ಕ್ರೀನ್ ಇರುವ ಸ್ಮಾರ್ಟ್ ಟಿವಿ ಖರೀದಿಸಲು ಬಯಸುತ್ತಾರೆ. ಆಫರ್‌ನಲ್ಲಿ ದೊಡ್ಡ ಸ್ಕ್ರೀನ್ ಇರುವ ಸ್ಮಾರ್ಟ್ ಟಿವಿ ಖರೀದಿಸಲು ಫ್ಲಿಪ್‌ಕಾರ್ಟ್‌ನಲ್ಲಿ ಇದೀಗ ಅತ್ಯುತ್ತಮ ಸಮಯ ಕೂಡಿಬಂದಿದೆ. ಹೌದು, ಲೀಡಿಂಗ್ ಇ ಕಾಮರ್ಸ್ ಎನಿಸಿರುವ ಫ್ಲಿಪ್‌ಕಾರ್ಟ್ ತಾಣದಲ್ಲಿ Motorola 65 inch QLED Ultra HD 4K ಸ್ಮಾರ್ಟ್ ಟಿವಿಯು ಶೇ 50% ರಷ್ಟು ನೇರ ಡಿಸ್ಕೌಂಟ್ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇನ್ನು ಈ ಟಿವಿಯು 120Hz ರಿಫ್ರೆಶ್ ರೇಟ್ ಜೊತೆಗೆ 50w ಸ್ಪೀಕರ್ ಸೌಲಭ್ಯ ಪಡೆದುಕೊಂಡಿದೆ. ಹಾಗೆಯೇ ಈ ಟಿವಿಯು ಡಾಲ್ಬಿ ಅಟ್ಮೋಸ್ ಸಪೋರ್ಟ್ ಸಹ ಒಳಗೊಂಡಿದೆ. ಹಾಗಾದರೆ ಮೊಟೊರೊಲಾ ಕಂಪನಿಯ 65 ಇಂಚಿನ QLED Ultra HD 4K ಸ್ಮಾರ್ಟ್ ಟಿವಿ ಬೆಲೆ ಹಾಗೂ ಫೀಚರ್ಸ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.
Also Read : ಇಂದು Oppo K14 5G ಫಸ್ಟ್ ಸೇಲ್ ಪ್ರಾರಂಭ! ಬೆಲೆ ಹಾಗೂ ಫೀಚರ್ಸ್ ಮಾಹಿತಿ
ಜನಪ್ರಿಯ ಮೊಟೊರೊಲಾ ಕಂಪನಿಯ ಮೊಟೊರೊಲಾ 65 ಇಂಚಿನ QLED Ultra HD 4K ಸ್ಮಾರ್ಟ್ ಟಿವಿ ಆಕರ್ಷಕ ಡಿಸೈನ್ ಹಾಗೂ ಫೀಚರ್ಸ್ ಒಳಗೊಂಡಿದೆ. ಈ ಸ್ಮಾರ್ಟ್ ಟಿವಿ (ಮಾಡೆಲ್ ನಂಬರ್ 65UHDGQMWSDQ) ಫ್ಲಿಪ್‌ಕಾರ್ಟ್ ವೆಬ್‌ಸೈಟ್‌ನಲ್ಲಿ 88,399 ರೂಗಳ ಬೆಲೆಯನ್ನು ಹೊಂದಿದೆ. ಆದರೆ ಇದೀಗ ಫ್ಲಿಪ್‌ಕಾರ್ಟ್ ತಾಣದಲ್ಲಿ 40,999 ರೂಗಳ ಆಫರ್ ಬೆಲೆಗೆ ಖರೀದಿಗೆ ಲಭ್ಯ ಇದೆ. ಅಲ್ಲದೇ ಆಸಕ್ತ ಗ್ರಾಹಕರು ಲಭ್ಯ ಇರುವ ಆಯ್ದ ಬ್ಯಾಂಕ್‌ಗಳ ಕೊಡುಗೆ ಪಡೆದುಕೊಂಡರೆ ಇನ್ನಷ್ಟು ರಿಯಾಯಿತಿ ಪಡೆಯಬಹುದು. ಇದಲ್ಲದೇ ಆಕರ್ಷಕ EMI ಆಯ್ಕೆಗಳು ಸಹ ಲಭ್ಯ ಇವೆ.
ಮೊಟೊರೊಲಾ 65 ಇಂಚಿನ QLED Ultra HD 4K ಸ್ಮಾರ್ಟ್ ಟಿವಿಯು 65 ಇಂಚಿನ QLED Ultra HD 4K ಡಿಸ್‌ಪ್ಲೇ ಹೊಂದಿದ್ದು, ಇದರ ಸ್ಕ್ರೀನ್ 120Hz ರಿಫ್ರೆಶ್ ರೇಟ್ ಬೆಂಬಲ ಪಡೆದುಕೊಂಡಿದೆ. ಹಾಗೆಯೇ ಇದು 3840 x 2160 ಪಿಕ್ಸೆಲ್ ರೆಸಲ್ಯೂಶನ್ ಜೊತೆಗೆ 380 nits ಬ್ರೈಟ್ನೆಸ್ ಸಪೋರ್ಟ್ ಅನ್ನು ಒಳಗೊಂಡಿದೆ. ಇದರೊಂದಿಗೆ ಈ ಟಿವಿಯು 2 GB RAM ಹಾಗೂ 32 GB ಆಂತರೀಕ ಸ್ಟೋರೇಜ್ ಆಯ್ಕೆಯನ್ನು ಪಡೆದುಕೊಂಡಿದೆ. ಇನ್ನು ಈ ಸ್ಮಾರ್ಟ್ ಟಿವಿಯು ಗೂಗಲ್ ಟಿವಿ ಆಪರೇಟಿಂಗ್ ಸಿಸ್ಟಮ್ ನಲ್ಲಿ ಕಾರ್ಯನಿರ್ವಹಿಸಲಿದೆ.
ಹಾಗೆಯೇ ಮೊಟೊರೊಲಾ ಕಂಪನಿಯ ಈ ಸ್ಮಾರ್ಟ್ ಟಿವಿಯು ಎರಡು ಸ್ಪೀಕರ್‌ಗಳ ಆಯ್ಕೆ ಪಡೆದುಕೊಂಡಿದ್ದು ಅವುಗಳು 50W ಸೌಂಡ್ ಔಟ್‌ಪುಟ್ ಸೌಲಭ್ಯ ಪಡೆದುಕೊಂಡಿವೆ. ಹಾಗೆಯೇ ಇದು ಬಿಲ್ಟ್ ಇನ್ ವೈ-ಫೈ ಹೊಂದಿರುವ ಜೊತೆಗೆ ಅಮೆಜಾನ್ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಜಿಯೋ ಹಾಟ್‌ಸ್ಟಾರ್ ಹಾಗೂ ಯೂಟ್ಯೂಬ್ ನಂತಹ ಆಪ್‌ಗಳ ಬೆಂಬಲ ಹೊಂದಿದೆ. ಅಲ್ಲದೇ ಮೂರು HDMI ಪೋರ್ಟ್ ಆಯ್ಕೆಗಳ ಜೊತೆಗೆ ಎರಡು USB ಪೋರ್ಟ್‌ಗಳ ಆಯ್ಕೆ ಪಡೆದುಕೊಂಡಿದೆ.