Vi ಟೆಲಿಕಾಂನ ಈ ಕಡಿಮೆ ಬೆಲೆಯ ಪೋಸ್ಟ್‌ಪೇಯ್ಡ್‌ ಪ್ಲಾನ್‌ನಲ್ಲಿ ಆಕರ್ಷಕ ಪ್ರಯೋಜನ!

HIGHLIGHTS

ವಿ ಟೆಲಿಕಾಂನ 451 ರೂ.ಗಳ ಯೋಜನೆಯಲ್ಲಿ ಆಕರ್ಷಕ ಸೌಲಭ್ಯಗಳು

ವಿ ಟೆಲಿಕಾಂನ ಈ ಯೋಜನೆಯಲ್ಲಿ 50GB ಡೇಟಾ ಪ್ರಯೋಜನ ಸಿಗುತ್ತೆ

ಈ ಪ್ಲಾನ್‌ನಲ್ಲಿ ಜಿಯೋ ಹಾಟ್‌ಸ್ಟಾರ್‌ ಅಥವಾ ಸೋನಿ ಲೈವ್‌ ಓಟಿಟಿ ಆಯ್ಕೆ ಇದೆ

ಟೆಲಿಕಾಂ ವಲಯದಲ್ಲಿ ತೃತೀಯ ಸ್ಥಾನದಲ್ಲಿ ಕಾಣಿಸಿಕೊಂಡಿರುವ Vi ಭಿನ್ನ ಯೋಜನೆಗಳ ಮೂಲಕ ಮಾರುಕಟ್ಟೆಯಲ್ಲಿ ಗಮನ ಸೆಳೆದಿದೆ. ಈ ಟೆಲಿಕಾಂ ತನ್ನ ಗ್ರಾಹಕರ ಅಗತ್ಯತೆಗೆ ಪೂರಕವಾಗಿ ಹಲವು ಪ್ರೀಪೇಡ್ ಹಾಗೂ ಪೋಸ್ಟ್‌ಪೇಯ್ಡ್‌ ಯೋಜನೆಗಳನ್ನು ಸಹ ಪರಿಚಯಿಸಿದೆ. ಆ ಪೈಕಿ ವಿ ಟೆಲಿಕಾಂ 451 ರೂ.ಗಳ ಪೋಸ್ಟ್‌ಪೇಯ್ಡ್‌ ಪ್ಲಾನ್ ಕಡಿಮೆ ದರದಲ್ಲಿ ಬಹಳ ಜನಪ್ರಿಯವಾಗಿದ್ದು, ಕುಟುಂಬ ಬಳಕೆದಾರರು ಮತ್ತು ಹೆಚ್ಚಿನ ಡೇಟಾ ಬಳಸುವವರಿಗೆ ಆಕರ್ಷಕ ಎನಿಸಿದೆ. ಈ ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ಆಕರ್ಷಕ ಡೇಟಾ ಪ್ರಯೋಜನ ಹಾಗೂ ಇತರೆ ಹೆಚ್ಚುವರಿ ಪ್ರಯೋಜನಗಳು ಸಹ ದೊರೆಯುತ್ತದೆ. ಹಾಗಾದರೆ ಜಿಯೋ ಟೆಲಿಕಾಂನ 451 ರೂ.ಗಳ ಪೋಸ್ಟ್‌ಪೇಯ್ಡ್‌ ಯೋಜನೆಯ ಹಾಗೂ ಇತರೆ ಜನಪ್ರಿಯ ಪ್ಲಾನ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : ನಾಳೆ ಮಾರುಕಟ್ಟೆಗೆ ಗ್ರ್ಯಾಂಡ್‌ ಎಂಟ್ರಿ ಕೊಡಲಿದೆ Samsung Galaxy M47 5G ಸ್ಮಾರ್ಟ್‌ಫೋನ್‌!

Vi 451 ರೂ.ಗಳ ಪೋಸ್ಟ್‌ಪೇಯ್ಡ್‌ ಯೋಜನೆ

ವಿ ಟೆಲಿಕಾಂನ 451 ರೂ.ಗಳ ಪೋಸ್ಟ್‌ಪೇಡ್ ಯೋಜನೆಯಲ್ಲಿ ಒಂದು ರೆಗ್ಯುಲರ್ ಸಿಮ್‌ ಆಯ್ಕೆ ಸಿಗುತ್ತದೆ. ಅಲ್ಲದೇ ಈ ಯೋಜನೆಯಲ್ಲಿ 50GB ಡೇಟಾ ಸೌಲಭ್ಯ ಸಹ ದೊರೆಯುತ್ತದೆ. ಇದರೊಂದಿಗೆ ಅನಿಯಮಿತ ಲೋಕಲ್, ನ್ಯಾಷನಲ್ ರೋಮಿಂಗ್ ವಾಯ್ಸ್‌ ಕರೆಗಳ ಪ್ರಯೋಜನ ಕೂಡಾ ಗ್ರಾಹಕರಿಗೆ ಲಭ್ಯವಿರುತ್ತದೆ. ಜೊತೆಗೆ ತಿಂಗಳಿಗೆ ಒಟ್ಟು 3000 ಎಸ್‌ಎಮ್‌ಎಸ್‌ ಸೌಲಭ್ಯ ಸಿಗುತ್ತದೆ. ಇದರಲ್ಲಿ ಹೆಚ್ಚುವರಿಯಾಗಿ ಜಿಯೋ ಹಾಟ್‌ಸ್ಟಾರ್‌ ಅಥವಾ ಸೋನಿ ಲೈವ್‌ ಓಟಿಟಿ ಚಂದಾದಾರಿಕೆಯ ಆಯ್ಕೆ ಸಿಗಲಿದೆ. ಜಿಯೋ ಹಾಟ್‌ಸ್ಟಾರ್‌ ಅಥವಾ ಸೋನಿ ಲೈವ್‌ ಓಟಿಟಿ ಆಯ್ಕೆ ಇದೆ ರೋಲ್‌ಓವರ್‌ ಡೇಟಾ ಸೌಲಭ್ಯ ಸಹ ಸಿಗಲಿದೆ.

ಇತರೆ ಜನಪ್ರಿಯ ಪೋಸ್ಟ್‌ಪೇಯ್ಡ್‌ ಯೋಜನೆಗಳ ಮಾಹಿತಿ

ವಿ ಟೆಲಿಕಾಂನ 551 ರೂ.ಗಳ ಪೋಸ್ಟ್‌ಪೇಡ್ ಯೋಜನೆಯಲ್ಲಿ ಒಂದು ರೆಗ್ಯುಲರ್ ಸಿಮ್‌ ಆಯ್ಕೆ ಸಿಗುತ್ತದೆ. ಅಲ್ಲದೇ ಈ ಯೋಜನೆಯಲ್ಲಿ 90GB ಡೇಟಾ ಸೌಲಭ್ಯ ಸಹ ದೊರೆಯುತ್ತದೆ. ಇದರೊಂದಿಗೆ ಅನಿಯಮಿತ ಲೋಕಲ್, ನ್ಯಾಷನಲ್ ರೋಮಿಂಗ್ ವಾಯ್ಸ್‌ ಕರೆಗಳ ಪ್ರಯೋಜನ ಕೂಡಾ ಗ್ರಾಹಕರಿಗೆ ಲಭ್ಯವಿರುತ್ತದೆ. ಜೊತೆಗೆ ತಿಂಗಳಿಗೆ ಒಟ್ಟು 3000 ಎಸ್‌ಎಮ್‌ಎಸ್‌ ಸೌಲಭ್ಯ ಸಿಗುತ್ತದೆ. ಇದರಲ್ಲಿ ಹೆಚ್ಚುವರಿಯಾಗಿ ಅಮೆಜಾನ್‌ ಪ್ರೈಮ್, ಜಿಯೋ ಹಾಟ್‌ಸ್ಟಾರ್‌ ಅಥವಾ ಸೋನಿ ಲೈವ್‌ ಓಟಿಟಿ ಚಂದಾದಾರಿಕೆಯ ಆಯ್ಕೆ ಸಿಗಲಿದೆ. ಜಿಯೋ ಹಾಟ್‌ಸ್ಟಾರ್‌ ಅಥವಾ ಸೋನಿ ಲೈವ್‌ ಓಟಿಟಿ ಆಯ್ಕೆ ಇದ್ದು, ಇವುಗಳಲ್ಲಿ ಗ್ರಾಹಕರು ಎರಡನ್ನು ಆಯ್ಕೆ ಮಾಡುವ ಅವಕಾಶ ಇದೆ.

ವಿ ಟೆಲಿಕಾಂನ 751 ರೂ.ಗಳ ಪೋಸ್ಟ್‌ಪೇಡ್ ಯೋಜನೆಯಲ್ಲಿ ಒಂದು ರೆಗ್ಯುಲರ್ ಸಿಮ್‌ ಆಯ್ಕೆ ಸಿಗುತ್ತದೆ. ಅಲ್ಲದೇ ಈ ಯೋಜನೆಯಲ್ಲಿ 90GB ಡೇಟಾ ಸೌಲಭ್ಯ ಸಹ ದೊರೆಯುತ್ತದೆ. ಇದರೊಂದಿಗೆ ಅನಿಯಮಿತ ಲೋಕಲ್, ನ್ಯಾಷನಲ್ ರೋಮಿಂಗ್ ವಾಯ್ಸ್‌ ಕರೆಗಳ ಪ್ರಯೋಜನ ಕೂಡಾ ಗ್ರಾಹಕರಿಗೆ ಲಭ್ಯವಿರುತ್ತದೆ. ಜೊತೆಗೆ ತಿಂಗಳಿಗೆ ಒಟ್ಟು 3000 ಎಸ್‌ಎಮ್‌ಎಸ್‌ ಸೌಲಭ್ಯ ಸಿಗುತ್ತದೆ. ಇದರಲ್ಲಿ ಹೆಚ್ಚುವರಿಯಾಗಿ ಅಮೆಜಾನ್‌ ಪ್ರೈಮ್, ಜಿಯೋ ಹಾಟ್‌ಸ್ಟಾರ್‌ ಅಥವಾ ಸೋನಿ ಲೈವ್‌ ಓಟಿಟಿ ಚಂದಾದಾರಿಕೆಯ ಆಯ್ಕೆ ಸಿಗಲಿದೆ. ಅಮೆಜಾನ್‌ ಪ್ರೈಮ್‌, ಜಿಯೋ ಹಾಟ್‌ಸ್ಟಾರ್‌, ಸ್ವಿಗ್ಗಿ, ಈಜಿಡಿನ್ನರ್ ಅಥವಾ ಸೋನಿ ಲೈವ್‌ ಓಟಿಟಿ ಆಯ್ಕೆ ಇದ್ದು, ಇವುಗಳಲ್ಲಿ ಗ್ರಾಹಕರು ಯಾವುದಾದರೂ ಮೂರು ಆಯ್ಕೆ ಮಾಡುವ ಅವಕಾಶ ಇದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :