Vodafone Idea recharge plan Rs 509 Now Costly Rs 548 Check Revised Benefits
Tariff Hike 2025: ಭಾರತದಲ್ಲಿ ವೊಡಾಫೋನ್ ಐಡಿಯಾ (Vodafone idea) ಇಂದು ಸದ್ದಿಲ್ಲದೇ 509 ರೂಗಳ ರಿಚಾರ್ಜ್ ಯೋಜನೆ 548 ರೂಗಳಿಗೆ ಏರಿಸಿದೆ. ಏಕೆಂದರೆ ಟೆಲ್ಕೊ ತನ್ನ ಕೈಗೆಟುಕುವ ಪ್ರಿಪೇಯ್ಡ್ ಯೋಜನೆಗಳಲ್ಲಿ ಒಂದಾದ ವಾಯ್ಸ್, ಡೇಟಾ ಮತ್ತು SMS ಪ್ರಯೋಜನಗಳನ್ನು 84 ದಿನಗಳ ಮಾನ್ಯತೆಯೊಂದಿಗೆ ನೀಡುವ ಬೆಲೆಯನ್ನು ಹೆಚ್ಚಿಸಿದೆ. ಪ್ರಸ್ತುತ ಈ 509 ರೂಗಳ ರಿಚಾರ್ಜ್ ಪ್ರಿಪೇಯ್ಡ್ ಯೋಜನೆಯನ್ನು ಹೆಚ್ಚುವರಿ ಪ್ರಯೋಜನಗಳೊಂದಿಗೆ 548 ರೂಗಳಿಗೆ ಅಂದ್ರೆ ಪೂರ್ತಿ 39 ರೂಗಳ ಹೆಕಹಕುವರಿ ಬೆಲೆಯೊಂದಿಗೆ ಪರಿಷ್ಕರಿಸಲಾಗಿದೆ. ಅಲ್ಲದೆ 1999 ರೂಗಳ ರಿಚಾರ್ಜ್ ಪ್ಲಾನ್ ಈಗ 2249 ರೂಗಳಿಗೆ ಏರಿಸಿದ್ದು ಡೇಟಾದಲ್ಲೂ ಸಹ 6GB ಡೇಟಾ ಸಹ ಹೆಚ್ಚಿಸಿದೆ.
Also Read: 7000mAh ಬ್ಯಾಟರಿಯೊಂದಿಗೆ iQOO 15 ಇಂದು ಬಿಡುಗಡೆಯಾಗಿದೆ! ಆಫರ್ ಬೆಲೆ ಮತ್ತು ಫೀಚರ್ಗಳೇನು?
ವೊಡಾಫೋನ್ ಐಡಿಯಾ ತನ್ನ ಹಳೆಯ 509 ರೂಗಳ ರಿಚಾರ್ಜ್ ಯೋಜನೆಯಲ್ಲಿ ಅನಿಯಮಿತ ವಾಯ್ಸ್ ಕರೆಗಳೊಂದಿಗೆ 1000 SMS ಮತ್ತು 6GB ಡೇಟಾವನ್ನು ಪೂರ್ತಿ 84 ದಿನಗಳ ಮಾನ್ಯತೆಯೊಂದಿಗೆ ನೀಡುತ್ತಿತ್ತು ಆದರೆ ಇದರ ಕೋಟಾ ನಂತರದ ಡೇಟಾ ಬಳಕೆಗೆ ಪ್ರತಿ MB ಗೆ 50 ಪೈಸೆ ವಿಧಿಸಲಾಗುತ್ತಿತ್ತು ಈ ಯೋಜನೆಯ ಪರಿಣಾಮಕಾರಿ ವೆಚ್ಚ ದಿನಕ್ಕೆ ಸುಮಾರು ರೂ. 6.05 ಆಗಿತ್ತು.ಆದರೆ ಈ ಯೋಜನೆಯನ್ನು ಈಗ ಅದೇ ಮಾನ್ಯತೆಯನ್ನು ಉಳಿಸಿಕೊಂಡಿದೆ. ಆದರೆ ಪ್ರಸ್ತುತ ಈ ಯೋಜನೆಯನ್ನು ಕಂಪನಿ ಸದ್ದಿಲ್ಲದೆ ತಮ್ಮ ವೆಬ್‌ಸೈಟ್‌ನಿಂದ ತೆಗೆದುಹಾಕಿದೆ.
ವೊಡಾಫೋನ್ ಐಡಿಯಾ ಬೆಲೆಯನ್ನು ಏರಿಕೆ ಮಾಡಿದ ನಂತರ ಈ ಹೊಸ ರೂ. 548 ಯೋಜನೆಯು ಅನಿಯಮಿತ ವಾಯ್ಸ್ ಕರೆಗಳೊಂದಿಗೆ ಉಚಿತವಾಗಿ ಬರೋಬ್ಬರಿ 1000 SMS ಜೊತೆಗೆ 7GB ಅಂದ್ರೆ ಹೆಚ್ಚುವರಿಯಾಗಿ 1GB ಸೇರಿಸಿ ನೀಡುತ್ತಿದೆ. ಅಲ್ಲದೆ ಇದರ ವ್ಯಾಲಿಡಿಟಿಯಲ್ಲಿ ಯಾವುದೇ ಬದಲಾವಣೆಗಳಿಲ್ಲದೆ ಅದೇ 84 ದಿನಗಳವರೆಗೆ ಉಳಿದಿದೆ. ಈ ಡೇಟಾ ಮುಗಿದ ನಂತರ ಅಂದ್ರೆ ಪ್ಲಾನ್ ಕೋಟಾ ನಂತರದ ಡೇಟಾ ಬಳಕೆಗೆ ಪ್ರತಿ MB ಬಳಕೆಗೆ 50 ಪೈಸೆ ಶುಲ್ಕ ವಿಧಿಸುವುದನ್ನು ಮುಂದುವರಿಸಲಾಗಿದೆ. ಪರಿಷ್ಕರಣೆಯ ನಂತರ ಯೋಜನೆಯ ಪರಿಣಾಮಕಾರಿ ವೆಚ್ಚವು ಈಗ ದಿನಕ್ಕೆ ಸುಮಾರು 6.52 ರೂಗಳಿಗೆ ಹೆಚ್ಚಾಗಿದೆ.
ವೂಡಾಫೋನ್ ಐಡಿಯಾ ಬೆಲೆ ಏರಿಕೆ ಮಾಡಿರುವುದು ಇದು ಮೋದಲೆನಲ್ಲ ಆದರೆ ಮೊದಲ ಬಾರಿಗೆ ಈ ರೀತಿ ಸುಮಾರು 40 ರೂಪಾಯಿಗಳ ಬೆಲೆ ಹೆಚ್ಚಿಸಿರುವುದು ಬಳಕೆದಾರರಿಗೆ ನಿಜಕ್ಕೂ ಮುನಿಸನ್ನು ಹುಟ್ಟಿಸಲು ಕಾರಣವಾಗಿದೆ. ಈಗ ಟೆಲಿಕಾಂ ಮಾರುಕಟ್ಟೆಯಲ್ಲಿ ಇದನ್ನು ಗ್ರಾಹಕರು ಒಪ್ಪುತ್ತಾರೋ ಇಲ್ಲವೋ ಎನ್ನುವುದನ್ನು ಕಾದು ನೋಡಬೇಕಿದೆ. ಆದರೆ ನನ್ನ ಅಭಿಪ್ರಾಯವನ್ನು ಕೇಳುವುದದಾದರೆ ಗ್ರಾಹಕರು ಬೇರೆ ನೆಟ್ವರ್ಕ್ ಸೇರಿಕೊಳ್ಳಲು ಯೋಚಿಸಬಹುದು. ಯಾಕೆಂದರೆ Vi ಸೇರಿ Jio ಮತ್ತು Airtel ಸಹ ಕೆಲವೇ ದಿನಗಳಲ್ಲಿ ಹೆಚ್ಚಿಸುವ ನಿರೀಕ್ಷೆಗಳಿವೆ. ಇಂತಹ ಸನ್ನಿವೇಶದಲ್ಲಿ BSNL ಏಕಮಾತ್ರ ಟೆಲಿಕಾಂ ಕಂಪನಿ ಯಾವುದೇ ಬೆಲೆಯನ್ನು ಏರಿಸದೆ ಉತ್ತಮ ಪ್ರಯೋಜನಗಳನ್ನು ನೀಡುತ್ತಿರುವುದು ಗಮನಿಸಬಹುದು.